ಆಯಸ್ಸು (Age)ಗಟ್ಟಿಯಾಗಿದ್ದರೆ ಯಮನ ಕೈಯಿಂದಲೂ ಪಾರಾಗಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳು(Examples)ನಮ್ಮ ಮುಂದಿವೆ.. ಅದೃಷ್ಟದ(Luck) ಜೊತೆಗೆ ನಮ್ಮ ಆಯಸ್ಸು ಹೆಚ್ಚಾಗಿದ್ದರೂ ಸಾವಿನ(Death) ಸಮೀಪಕ್ಕೆ ಹೋದರು ಅದೃಷ್ಟದಿಂದ ಕೊನೆಕ್ಷಣದಲ್ಲಿ ಬದುಕುಳಿಯುವ ಸಾಧ್ಯತೆ ಹೆಚ್ಚು. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ ಮಡಗಾಸ್ಕರ್ ನ (Madagascar)ಸಚಿವರೊಬ್ಬರು ಸಮುದ್ರದ ಮಧ್ಯೆ ಹೆಲಿಕಾಪ್ಟರ್(Helicopter)ಪತನವಾದ್ರು ಸಹ ಬದುಕಿ ಉಳಿದಿದ್ದಾರೆ.. ಅಲ್ಲದೇ ಸಮುದ್ರದ ಮಧ್ಯದಿಂದ ಈಜಿ ದಡ ಸೇರುವ ಮೂಲಕ ತಮ್ಮ ಜೀವವನ್ನು ಉಳಿಸಿ ಕೊಂಡಿರುವ ಘಟನೆ ನಡೆದಿದೆ.
ಜೀವ ಉಳಿಸಿಕೊಳ್ಳಲು 12 ಗಂಟೆಗಳ ಕಾಲ ಈಜಿದ ಮಡಗಾಸ್ಕರ್ ನ ಸಚಿವ
ಸಮುದ್ರದ ಮಧ್ಯದಲ್ಲಿ ಪ್ರಯಾಣಿಸುವುದು ಅಂದರೆ ಅನೇಕರ ಪಾಲಿಗೆ ಜೀವ ಬಾಯಿಗೆ ಬಂದಂತೆ.. ಒಂದು ವೇಳೆ ಅಪಘಾತಗಳು ಸಂಭವಿಸಿದರೆ ಬದುಕುವ ಅವಕಾಶ ಇದ್ದರೂ ಕೂಡ ಬದುಕುವುದು ಅಷ್ಟು ಸುಲಭವಾದ ಮಾತಾಗಿರುವುದಿಲ್ಲ.. ವಿಶಾಲವಾದ ಸಾಗರದ ಮಧ್ಯೆ, ಅಲೆಗಳ ಒಡೆತ ತಾಳಿಕೊಂಡು ಹೆಚ್ಚು ಹೊತ್ತು ನಿಲ್ಲುವುದು ಎಂಥವರಿಗೂ ಕಷ್ಟಸಾಧ್ಯ.. ನುರಿತ ಈಜುಗಾರರು ಸಹ ಸಮುದ್ರದ ರಕ್ಕಸ ಅಲೆಗಳ ಅಬ್ಬರಕ್ಕೆ ಬೆದರಿ ಬೆಂಡಾಗುತ್ತಾರೆ. ಆದ್ರೆ ಬದುಕಿನ ಮೇಲೆ ತೀವ್ರ ಪ್ರೀತಿ ಹೊಂದಿರುವವರು, ಬದುಕಬೇಕು ಎಂದು ಆಸೆ ಇಟ್ಟುಕೊಂಡಿರುವವರು ಮಾತ್ರ ಸಮುದ್ರದಲ್ಲಿ ಸತತ ಹಲವಾರು ಗಂಟೆಗಳ ಕಾಲ ಈಜಿ ದಡ ಸೇರಲು ಸಾಧ್ಯ. ಇದಕ್ಕೆ ಸಾಕ್ಷಿ ಅಂದರೆ ಮಡಗಾಸ್ಕರ್ ನ ಸಚಿವರು.
ಇದನ್ನೂ ಓದಿ: ಇಲಿಗಳ ಕಾಟದಿಂದ ಬಚಾವ್ ಆಗಲು ಓರಿಯೋ ಬಿಸ್ಕೆಟ್ ಮೊರೆ ಹೋದ ಅಮೆರಿಕಾದ ಜನ.. ಏಕೆ?
ಸಮುದ್ರದ ಮಧ್ಯದಲ್ಲಿ ಪತನವಾದ ಹೆಲಿಕಾಪ್ಟರ್
ಸೋಮವಾರ ಬೆಳಗ್ಗೆ ಮಡಗಾಸ್ಕರ್ ಪೊಲೀಸ್ ಕಾರ್ಯದರ್ಶಿ ಸೆರ್ಗೆ ಗೆಲ್ಲೆ ಮತ್ತು ಸಹ ಪೊಲೀಸ್ ಅಧಿಕಾರಿ ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಈಶಾನ್ಯ ಕರಾವಳಿಯ ಮಧ್ಯಭಾಗದಲ್ಲಿ ಪತನಗೊಂಡಿತ್ತು.. ಹೆಲಿಕಾಫ್ಟರ್ ನಲ್ಲಿದ್ದ ಎಲ್ಲರೂ ಮೃತಪಟ್ಟರು ಎಂದು ಭಾವಿಸಲಾಗಿತ್ತು.. ಅಲ್ಲದೆ ಹೆಲಿಕಾಪ್ಟರ್ನಲ್ಲಿ ಇದ್ದವರಿಗೆ ಹುಡುಕಾಟ ನಡೆಸಲಾಗಿತ್ತು.. ಈ ದುರಂತದಲ್ಲಿ ಬದುಕುಳಿದ ಸೆರ್ಗೆ ಗೆಲ್ಲೆ ಬದುಕುವ ಹಂಬಲದಿಂದ ಸತತ 12 ಗಂಟೆಗಳ ಕಾಲ ಈಜಿ ಮಹಂಬೊದಲ್ಲಿನ ಭೂಭಾಗವನ್ನು ತಲುಪಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂದು ಮಡಗಾಸ್ಕರ್
ಬಂದರು ಪ್ರಾಧಿಕಾರದ ಮುಖ್ಯಸ್ಥ ಜೀನ್-ಎಡ್ಮಂಡ್ ರಾಂಡ್ರಿಯಾನಾಂಟೆನೈನಾ ಮಾಹಿತಿ ನೀಡಿದ್ದಾರೆ..ಒಂದೆರಡು ಗಂಟೆ ನದಿ, ತೊರೆಗಳಲ್ಲಿ ಸತತವಾಗಿ ಈಜಲು ಸಾಧ್ಯವಾಗದು. ಇನ್ನು ಸಮುದ್ರದಲ್ಲಿ 12 ಗಂಟೆಗಳ ಕಾಲ ಈಜುವ ಮೂಲಕ ಸಚಿವ ಗೆಲ್ಲೆ ಬದುಕಿ ಉಳಿದಿದ್ದಾರೆ..
♦️Le GDI Serge GELLE, un des passagers de l'hélicoptère accidenté hier a été retrouvé sain et sauf ce matin du côté de Mahambo.
☑️ Les sapeurs sauveteurs de la #4°UPC ont également retrouvé le carcasse de l'hélicoptère au fond de la mer. pic.twitter.com/sP2abwTMwB
— Ministère de la Défense Nationale Madagascar (@MDN_Madagascar) December 21, 2021
ಮೂರು ದಶಕಗಳ ಕಾಲ ಪೋಲಿಸ್‌ನಲ್ಲಿ ಸೇವೆ ಸಲ್ಲಿಸಿ ನಂತರ ಆಗಸ್ಟ್‌ನಲ್ಲಿ ಕ್ಯಾಬಿನೆಟ್ ಪುನಃ ರಚನೆಯಾದ ಬಳಿಕ ಮಡಗಾಸ್ಕರ್ ನ ಕಾನೂನು ಸಚಿವರಾಗಿ ಗಿಲ್ಲೆ ಅಧಿಕಾರ ವಹಿಸಿಕೊಂಡಿದ್ದರು.. ಸದ್ಯ ಸಮುದ್ರದ ಮಧ್ಯದಿಂದ ಈಜಿ ತಮ್ಮ ಪ್ರಾಣ ಉಳಿಸಿಕೊಂಡಿರುವ ಗಿಲ್ಲೆ ಅವರ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ನಾನು ಸಾಯುವ ಸಮಯ ಇನ್ನೂ ಬಂದಿಲ್ಲ. ಸ್ವಲ್ಪ ಗಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಉತ್ತಮ ಕ್ರೀಡಾಪಟುವಾಗಿದ್ದ ಗೆಲ್ಲೆ ಹೆಲಿಕಾಪ್ಟರ್‌ನ ಆಸನಗಳಲ್ಲಿ ಒಂದನ್ನು ತೇಲುವ ಸಾಧನವಾಗಿ ಬಳಸಿಕೊಂಡು, ಆಗಾಗ ಈಜುತ್ತಾ ತಮ್ಮ ಜೀವ ಉಳಿಸಿಕೊಂಡಿದ್ದಾರೆ..
ಇದನ್ನೂ ಓದಿ: ಆನೆ ಮನುಷ್ಯನನ್ನು ಅಟ್ಟಾಡಿಸಿಕೊಂಡು ಬಂದ್ರೆ ಹೇಗಿರುತ್ತೆ? ನಿಜವಾದ ಘಟನೆಯ ವಿಡಿಯೋ ನೋಡಿ...
ಇನ್ನು ಸತತ 12 ಗಂಟೆಗಳ ಕಾಲ ಸಮುದ್ರದ ಮಧ್ಯೆ ಮೀನುಗಾರರ ನೊಬ್ಬ ಈಜಿ ದಡ ಸೇರಿದ ಘಟನೆ ಕರ್ನಾಟಕದಲ್ಲಿ ಈ ಹಿಂದೆ ನಡೆದಿತ್ತು. ಕಳೆದ ವರ್ಷ ಮೀನುಗಾರಿಕೆಗಾಗಿ ಶೈನಾಲ್ ಏಂಜಲ್ ಮೀನುಗಾರಿಕಾ ಬೋಟಿನಲ್ಲಿ ಮಂಗಳೂರಿನಲ್ಲಿ ಸಮುದ್ರಕ್ಕೆ ಇಳಿದಿದ್ದ ಮೀನುಗಾರ ಒಡಿಶಾದ ಲೊಂಡಾ ಗೊರಯ್ಯ ಇದ್ದಕ್ಕಿದ್ದಂತೆ ಸಮುದ್ರಕ್ಕೆ ಬಿದ್ದಿದ್ದರು.. ದುರಂತ ಅಂದರೆ ಅಂದು ಚಂಡಮಾರುತದ ಅಬ್ಬರ ಇದ್ದರೂ ಸಹ ಲೊಂಡಾ ಗೊರಯ್ಯ ಸತತ 12 ಗಂಟೆಗಳ ಕಾಲ ಸಮುದ್ರದ ಮಧ್ಯದಲ್ಲಿ ಈಜಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಕೈಗೆ ಸಿಕ್ಕಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ