ಆರ್ಥಿಕ ಕುಸಿತದ ಬಗ್ಗೆ ವಿತ್ತ ಸಚಿವೆ ಮಾತನಾಡುವಾಗ ಕೌಶಲಾಭಿವೃದ್ಧಿ ಸಚಿವ ನಿದ್ದೆಗೆ ಜಾರಿದ ವಿಡಿಯೋ ವೈರಲ್

ನಿರ್ಮಲಾ ಸೀತಾರಾಮನ್ ಅವರ ಹಿಂಬದಿಯ ಸಾಲಿನಲ್ಲಿ ಕುಳಿತ ಸಚಿವ ಪಾಂಡೆ ಅವರು, ಮಹತ್ವದ ವಿಷಯದ ಮೇಲೆ ಚರ್ಚೆ, ವಾಗ್ವಾದ ನಡೆಯುತ್ತಿರುವುದರ ನಡುವೆಯೂ ನಿದ್ದೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರು ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದ್ದಾರೆ.

ನಿರ್ಮಲಾ ಸೀತಾರಾಮನ್ ಭಾಷಣದ ನಡುವೆ ನಿದ್ದೆಗೆ ಜಾರಿರುವ ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ.

ನಿರ್ಮಲಾ ಸೀತಾರಾಮನ್ ಭಾಷಣದ ನಡುವೆ ನಿದ್ದೆಗೆ ಜಾರಿರುವ ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ.

  • Share this:
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಬೆಳವಣಿಗೆ ಕುಂಠಿತದ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಕೌಶಲ ಅಭಿವೃದ್ಧಿ ಸಚಿವ ಮಹೇಂದ್ರ ನಾಥ್ ಪಾಂಡೆ ನಿದ್ದೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. 

ಜಿಡಿಪಿ ಕಳೆದ ಏಳು ವರ್ಷಗಳಲ್ಲಿ ಕಳಪೆ ಮಟ್ಟಕ್ಕೆ ಕುಸಿದಿದೆ. ಮತ್ತು ದೇಶದಲ್ಲಿ ಉದ್ಯೋಗಾವಕಾಶ ಶೋಚನೀಯವಾಗಿದೆ ಎಂದು ವಿರೋಧ ಪಕ್ಷಗಳ ವಾದಕ್ಕೆ ಪ್ರತಿವಾದ ಮಾಡುತ್ತಾ, ನಿರ್ಮಲಾ ಸೀತಾರಾಮನ್ ಅವರು, ದೇಶದಲ್ಲಿ ಆರ್ಥಿಕ ಬೆಳವಣಿಗೆ ಮಂದಗತಿಯಾಗಿಯೇ ಹೊರತು, ದಿವಾಳಿಯಾಗಿಲ್ಲ ಎಂದು ಹೇಳಿದ್ದರು.

ನಿರ್ಮಲಾ ಸೀತಾರಾಮನ್ ಅವರ ಹಿಂಬದಿಯ ಸಾಲಿನಲ್ಲಿ ಕುಳಿತ ಸಚಿವ ಪಾಂಡೆ ಅವರು, ಮಹತ್ವದ ವಿಷಯದ ಮೇಲೆ ಚರ್ಚೆ, ವಾಗ್ವಾದ ನಡೆಯುತ್ತಿರುವುದರ ನಡುವೆಯೂ ನಿದ್ದೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರು ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದ್ದಾರೆ.

First published: