ಹೈದರಾಬಾದ್: ಜನಸೇನಾ ಪಕ್ಷದ (Janasena Party) ಅಧ್ಯಕ್ಷ ಪವನ್ ಕಲ್ಯಾಣ್ (Pawan kalyan) ವಿರುದ್ಧ ವೈಸಿಪಿ (Yuvajana Sramika Rythu Congress Party) ಪಕ್ಷದ ನಾಯಕರು ಮಾತನಾಡುವುದು ಹೊಸ ವಿಚಾರವೇನಲ್ಲ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan mohan reddy) ನೇತೃತ್ವದಲ್ಲಿ ಸಚಿವೆಯಾಗಿರುವ ರೋಜಾ (Roja) ಕೂಡ ಹಲವಾರು ಬಾರಿ ಪವನ್ ಕಲ್ಯಾಣ್ ವಿರುದ್ಧ ಟೀಕಿಸಿದ್ದಾರೆ. ಆದರೆ ಇತ್ತೀಚೆಗಷ್ಟೇ ಮೆಗಾ ಫ್ಯಾಮಿಲಿಯ ಚಿರಂಜೀವಿ (Chiranjeevi) , ನಾಗಬಾಬು (Nagababu) ಮತ್ತು ಪವನ್ ಕಲ್ಯಾಣ್ ಮೂವರನ್ನು ಟಾರ್ಗೆಟ್ ಮಾಡಿ ಮಾತನಾಡಿರುವುದು ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ಮೂವರನ್ನು ಜನ ಅವರ ತವರು ಜಿಲ್ಲೆಯಲ್ಲೇ ಸೋಲಿಸಿದ್ದಾರೆ ಅಂದರೆ ಅವರಿಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ ಎಂದರ್ಥ ಎಂದು ಲೇವಡಿ ಮಾಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ಕಲಾವಿದರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಮತ್ತು ಎಲ್ಲರಿಗೂ ಸಹಾಯ ಮಾಡುತ್ತಾರೆ ಆದರೆ ಅವರಲ್ಲಿಯೂ ವಿಭಿನ್ನರಾಗಿರುತ್ತಾರೆ. ಹಾಗಾಗಿ ರಾಜಕೀಯದಲ್ಲಿ ಕಲಾವಿದರಿಗೆ ಜನರು ಬೆಂಬಲ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಚಂದ್ರಬಾಬುಗೆ ಪವನ್ ನಿಷ್ಠೆ ತೋರುತ್ತಿದ್ದಾರೆ
ಚಂದ್ರಬಾಬು ತಪ್ಪು ಮಾಡಿದಾಗ ಪವನ್ ಕಲ್ಯಾಣ್ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುತ್ತಾರೆ, ಪವನ್ ಕಲ್ಯಾಣ್ ತಪ್ಪು ಮಾಡಿದಾಗ ಚಂದ್ರಬಾಬು ನಾಯ್ಡು ಸರ್ಕಾರವನ್ನು ಟೀಕಿಸುತ್ತಾರೆ. ಚಂದ್ರಬಾಬುಗೆ ಪವನ್ ಕಲ್ಯಾಣ್ ಎಷ್ಟು ನಿಷ್ಠೆ ತೋರಿಸುತ್ತಿದ್ದಾರೆ ಎಂಬುವುದು ಇದರಿಂದಲೇ ತಿಳಿಯುತ್ತದೆ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಕಂದುಕೂರಿನಲ್ಲಿ ಸತ್ತವರಿಗೆ ಪವನ್ ಕಲ್ಯಾಣ್ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಆದರೆ ಜೀವದ ವಿಚಾರ ಬಂದಾಗ ಪವನ್ ಕಲ್ಯಾಣ್ ಕತ್ತು ಹಿಸುಕುವುದರಲ್ಲಿ ನಂಬರ್ 1 ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿರಂಜೀವಿ, ನಾಗಬಾಬು ಜೊತೆಗೆ ಸ್ನೇಹ ಹೊಂದಿರೋ ರೋಜಾ
ರೋಜಾ ಅವರು ಪವನ್ ಕಲ್ಯಾಣ್ ಅವರನ್ನು ಟೀಕಿಸುವುದು ಹೊಸದಲ್ಲ. ಹೀಗಿದ್ದರೂ ಈ ಬಾರಿ ಒಗ್ಗಟ್ಟಾಗಿರುವ ಚಿರಂಜೀವಿ, ನಾಗಬಾಬು ಅವರನ್ನು ಸೇರಿಸಿಕೊಂಡು ಮಾತನಾಡಿರುವುದು ಬಹಳ ಮುಖ್ಯಾಂಶವಾಗಿದೆ. ಪವನ್ ಕಲ್ಯಾಣ್ ಜೊತೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ರೋಜಾ ಚಿರಂಜೀವಿ ಮತ್ತು ನಾಗಬಾಬು ಅವರೊಂದಿಗೆ ಸ್ನೇಹದಿಂದ ಇದ್ದಾರೆ.
ನಾಗಬಾಬು ಜೊತೆಗೆ ಜಬರ್ದಸ್ತ್ ಶೋನಲ್ಲಿ ಜಡ್ಜ್ ಆಗಿದ್ದ ರೋಜಾ
ಜಬರ್ದಸ್ತ್ ನಂತಹ ಹಾಸ್ಯ ಕಾರ್ಯಕ್ರಮಗಳಲ್ಲಿ ನಾಗಬಾಬು ಜೊತೆಗೆ ರೋಜಾ ಅವರು ನೂರಾರು ಸಂಚಿಕೆಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಹಾಗಾಗಿಯೇ ರೋಜಾ ಅವರು ಪವನ್ ಕಲ್ಯಾಣ್ ಅವರನ್ನು ಟೀಕಿಸಿದರೂ ಚಿರಂಜೀವಿ ಅಥವಾ ನಾಗಬಾಬು ಅವರನ್ನು ಎಂದಿಗೂ ಟೀಕಿಸುತ್ತಿರಲಿಲ್ಲ. ಆದರೆ ಇತ್ತೀಚಿಗೆ ರೋಜಾ ಅವರು, ಮೂವರು ಮೆಗಾ ಬ್ರದರ್ಸ್ ಅನ್ನು ಒಟ್ಟಿಗೆ ಟಾರ್ಗೆಟ್ ಮಾಡಿ ಮಾತನಾಡಿರುವುದು ಸಖತ್ ಇಂಟ್ರಸ್ಟಿಂಗ್ ವಿಚಾರವಾಗಿದೆ.
ಭ್ರಷ್ಟ ಅಂದ್ರೆ ಚಪ್ಪಲಿಯಲ್ಲಿ ಹೊಡಿತೀನಿ ಅಂದಿದ್ದ ಪವನ್
ಕೆಲವು ದಿನಗಳ ಹಿಂದೆ ಸಭೆಯೊಂದರಲ್ಲಿ ಆಡಳಿತ ಪಕ್ಷ ನನ್ನನ್ನು ಭ್ರಷ್ಟ ಅಂತಿದ್ದಾರೆ, ಇನ್ನೊಮ್ಮೆ ಹಾಗೆಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಪವನ್ ಕಲ್ಯಾಣ್ ಕೈಯಲ್ಲಿ ಚಪ್ಪಲಿ ಎತ್ತಿಕೊಂಡು ಹೇಳಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ಇದನ್ನೂ ಓದಿ: Ashu Reddy: ಇರಬಾರದ ಜಾಗದಲ್ಲಿ ಪವನ್ ಕಲ್ಯಾಣ್ ಹೆಸರು! ಸ್ವಲ್ಪವೂ ಹಿಂಜರಿಯದೇ ಟ್ಯಾಟೂ ತೋರಿಸಿದ ಖ್ಯಾತ ನಟಿ
ಪವನ್ ರೌಡಿಗಳಂತೆ ಹೇರ್ ಸ್ಟೈಲ್, ಡ್ರೆಸ್ ಮಾಡ್ಕೊತಾರೆ
ಇದಾದ ಬಳಿಕ ರೋಜಾ ಅವರು, ಪವನ್ಗೆ ನಾವು ಅವಮಾನ ಮಾಡುತ್ತಿಲ್ಲ. ಅವರು ಮಾಡಿರುವ ತಪ್ಪುಗಳನ್ನು ತೋರಿಸುತ್ತಿದ್ದೇವೆ ಎಂದಿದ್ದರು. ಅಲ್ಲದೇ ಚಂಚದ್ರಬಾಬು ನಾಯ್ಡು ಜೊತೆ ಸೇರಿಕೊಂಡು ರೌಡಿಗಳಂತೆ ಹೇರ್ ಸ್ಟೈಲ್, ಡ್ರೆಸ್ ಹಾಕಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕನ ರೀತಿ ವರ್ತಿಸಿರುವುದನ್ನು ನಾವು ಎಂದಾದರೂ ಕಂಡಿದ್ದೇವಾ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ