• Home
 • »
 • News
 • »
 • national-international
 • »
 • ರಾಹುಲ್​ ಗಾಂಧಿ ದಲಿತ ಯುವತಿಯನ್ನು ಮದುವೆಯಾಗಿ, ಜಾತಿ ಪದ್ಧತಿ ನಿರ್ಮೂಲನೆಗೊಳಿಸಬೇಕು; ಬಿಜೆಪಿ ಸಚಿವರಿಂದ ಸಲಹೆ

ರಾಹುಲ್​ ಗಾಂಧಿ ದಲಿತ ಯುವತಿಯನ್ನು ಮದುವೆಯಾಗಿ, ಜಾತಿ ಪದ್ಧತಿ ನಿರ್ಮೂಲನೆಗೊಳಿಸಬೇಕು; ಬಿಜೆಪಿ ಸಚಿವರಿಂದ ಸಲಹೆ

ಕೇಂದ್ರ ಸಚಿವ ರಾಮದಾಸ್​ ಅಥ್ವಾಲೆ

ಕೇಂದ್ರ ಸಚಿವ ರಾಮದಾಸ್​ ಅಥ್ವಾಲೆ

ಕಾಂಗ್ರೆಸ್​ ನಾಯಕ ದಲಿತ ಯುವತಿಯನ್ನು ಮದುವೆಯಾಗಬೇಕು ಎಂಬುದು ನನ್ನ ಸಲಹೆ. ಅವರು ಅಂತರ್ಜಾತಿ ವಿವಾಹವಾದರೆ ಅವರಿಗೆ 2.5 ಲಕ್ಷ ರೂ ಪ್ರೋತ್ಸಾಹ ಹಣವನ್ನು ನೀಡಲಾಗುವುದು

 • Share this:

  ಬಜೆಟ್​ ಅಧಿವೇಶನದಲ್ಲಿ ಹಮ್​ ದೋ ಹಮಾರೇ ದೋ ಘೋಷಣೆ ಉಲ್ಲೇಖಿಸಿ ಕೇಂದ್ರದ ಕೃಷಿ ಕಾನೂನಿನ ವಿರುದ್ಧ ಹರಿಹಾಯ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಕೇಂದ್ರ ಸಚಿವ ರಾಮ್​ದಾಸ್​ ಅಥ್ವಾಲೆ ವಾಗ್ದಾಳಿ ನಡೆಸಿದ್ದಾರೆ. ಕುಟುಂಬ ಕಲ್ಯಾಣ ಯೋಜನೆಯ ಘೋಷಣೆ ಪ್ರಸ್ತಾಪಿಸಿರುವ ರಾಹುಲ್​ ಗಾಂಧಿ ಮದುವೆಯಾಗುವ ಯೋಜನೆ ಹೊಂದಿದ್ದರೆ ದಲಿತ ಯುವತಿಯನ್ನು ಮದುವೆಯಾಗಬೇಕು. ಆ ಮೂಲಕ ಅಂತರ್ಜಾತಿ ವಿವಾಹ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದ್ದಾರೆ. ರಾಹುಲ್​ ಗಾಂಧಿ ನನ್ನ ಉತ್ತಮ ಸ್ನೇಹಿತ ಎಂದು ನಾನು ಭಾವಿಸಿದ್ದೇನೆ. ಅವರು ಹಮ್​ ದೋ ಹಮಾರೇ ದೋ ಕುರಿತು ಮಾತನಾಡಿದ್ದರು. ಈ ಮೂಲಕ ಕುಟುಂಬ ಕಲ್ಯಾಣ ಇಲಾಖೆ ಘೋಷಣೆ ಕುರಿತು ಪ್ರಸ್ತಾಪಿಸಿದ್ದಾರೆ. ಅವರು ನಾವಿಬ್ಬರು ನಮಗಿಬ್ಬರು (ಹಮ್​ ದೋ ಹಮಾರೇ ದೋ) ಎಂಬ ಚಿಂತನೆ ನಡೆಸಿದ್ದರೆ ಮದುವೆಯಾಗಬೇಕು. ಅವರು ಮದುವೆಯಾದರೆ ದಲಿತ ಯುವತಿಯನ್ನೇ ಮದುವೆಯಾಗಬೇಕು. ಆಗ ಮಾತ್ರ ಅವರು ಗಾಂಧಿಜೀ ಕನಸು ಸಾಕಾರಗೊಳಿಸಲು ಸಾಧ್ಯ. ಈ ಮೂಲಕ ಜಾತಿಯತೆ ಕೊನೆಗಣಿಸಬಹುದು. ಅಲ್ಲದೇ ಈ ಮೂಲಕ ಯುವಕರಿಗೆ ಆದರ್ಶವಾಗಬಹುದು ಎಂದಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.


  ಕಾಂಗ್ರೆಸ್​ ನಾಯಕ ದಲಿತ ಯುವತಿಯನ್ನು ಮದುವೆಯಾಗಬೇಕು ಎಂಬುದು ನನ್ನ ಸಲಹೆ. ಅವರು ಅಂತರ್ಜಾತಿ ವಿವಾಹವಾದರೆ ಅವರಿಗೆ 2.5 ಲಕ್ಷ ರೂ ಪ್ರೋತ್ಸಾಹ ಹಣವನ್ನು ನೀಡಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವರು ತಿಳಿಸಿದ್ದಾರೆ.


  ಇದನ್ನು ಓದಿ: ಲೆ. ಗವರ್ನರ್ ಸ್ಥಾನದಿಂದ ಪದಚ್ಯುತಗೊಂಡ ಬೆನ್ನಲ್ಲೇ ಡೈರಿ ಪದಗಳನ್ನ ಉಲ್ಲೇಖಿಸಿದ ಕಿರಣ್ ಬೇಡಿ


  ಸರ್ಕಾರದ ವಿವಾದಿತ ಕೃಷಿ ಕಾನೂನಿನ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಇದರಿಂದ ಮಂಡಿ ವ್ಯವಸ್ಥೆಯ ಅಂತ್ಯವಾಗಲಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಅವರು ಈ ಕಾನೂನಿಂದ ಹಮ್​ ದೋ ಹಮರೇ ದೋ ಎಂಬಂತೆ ನಾಲ್ವರಿಗೆ ಲಾಭಾವಾಗಲಿದೆ ಎಂದು ಟೀಕಿಸಿದರು.


  ಈ ಹಿಂದೆ ಕೋವಿಡ್​ ಪ್ರಕರಣ ಹೆಚ್ಚಾದ ಸಂದರ್ಭದಲ್ಲಿ ಗೋ ಕರೋನಾ ಗೋ ಎಂದು ಹೇಳಿದ ರಾಮ್​ದಾಸ್​ ಅಥ್ವಾಲೆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

  Published by:Seema R
  First published: