Rajendra Gudha: ಹೇಮಾ ಮಾಲಿನಿಗೆ ವಯಸ್ಸಾಗಿದೆ, ಕತ್ರಿನಾ ಕೈಫ್​ ಕೆನ್ನೆಯಂತಹ ರಸ್ತೆ ನಿರ್ಮಿಸಿ ಎಂದ ರಾಜಸ್ಥಾನ ಸಚಿವ

ಈ ಹಿಂದೆ ಲಾಲು ಪ್ರಸಾದ್​ ಯಾದವ್​, ಬಿಜೆಪಿ ನಾಯಕ ಪಿಸಿ ಶರ್ಮಾ ಕೂಡ ಹೇಮಾ ಮಾಲಿನಿ ಕೆನ್ನೆಯಂತಹ ನುಣುಪಾದ ರಸ್ತೆ ನಿರ್ಮಿಸಬೇಕು ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

ಹೇಮಾ ಮಾಲಿನಿ- ಕತ್ರಿನಾ ಕೈಫ್​​

ಹೇಮಾ ಮಾಲಿನಿ- ಕತ್ರಿನಾ ಕೈಫ್​​

 • Share this:
  ಜೈಪುರ (ನ. 25)  ರಾಜಕಾರಣಿಗಳು ತಮ್ಮ ಭಾಷಣದ ವೇಳೆ ಅನೇಕ ವೇಳೆ ನಟಿಯರ ಬಗ್ಗೆ ಅಹಿತಕರ ಹೇಳಿಕೆ ನೀಡುವುದು ಹೊಸದೇನಲ್ಲ. ಈ ಬಾರಿ ಕೂಡ ರಾಜಸ್ಥಾನ ರಾಜ್ಯ ಸಚಿವರು ಅದೇ ರೀತಿ ನಟಿಯೊಬ್ಬರ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಕಾರ್ಯಕ್ರಮವೊಂದಲ್ಲಿ ಮಾತನಾಡುತ್ತಿದ್ದ ರಾಜಸ್ಥಾನದ ರಾಜ್ಯ ಸಚಿವ ರಾಜೇಂದ್ರ ಗುಧಾ (Rajendra Gudha), ಅಧಿಕಾರಿಯೊಬ್ಬರಿಗೆ ತಮ್ಮೂರಿಗೆ ಉತ್ತಮ ರಸ್ತೆ ನಿರ್ಮಿಸುವಂತೆ ಹೇಳಿದ್ದಾರೆ. ಈ ವೇಳೆ ನಟಿಯಾರಾದ ಹೇಮಾ ಮಾಲಿನಿ (Hema malini) ಮತ್ತು ಕತ್ರಿನಾ ಕೈಫ್ (Katrina Kaif)​ ಅನ್ನು ಮಾತಿನ ಮಧ್ಯೆ ಎಳೆದು ತಂದಿರುವುದು ಟೀಕೆಗೆ ಗುರಿಯಾಗಿದೆ.

  ಜುಂಜುನುವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ,  ಪಂಚಾಯತ್​ ರಾಜ್​ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ರಾಜೇಂದ್ರ ಗುಧಾ,  ಹೇಮಾ ಮಾಲಿನಿ ಅವರ ಕೆನ್ನೆಯಂತೆ ಸುಗಮವಾದ ರಸ್ತೆಗಳನ್ನು ನಿರ್ಮಿಸಬೇಕು ಎಂದು ಅಧಿಕಾರಿಗೆ ಹೇಳಿದರು. ನಂತರ, ಅವರು ಹೇಮಾ ಮಾಲಿನಿಯಲ್ಲ, ರಸ್ತೆಗಳು ಕತ್ರಿನ್​ ಕೈಫ್‌ನ ಕೆನ್ನೆಯಂತೆ ಸರಾಗವಾಗಿ ಇರಬೇಕು. ಏಕೆಂದರೆ ಹೇಮಾ ಮಾಲಿನಿಗೆ ಈಗ ವಯಸ್ಸಾಗಿದೆ. ಅವರ ಕೆನ್ನೆ ನುಣುಪಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.  ಅಲ್ಲದೇ ಕತ್ರಿನಾ ಕೈಫ್ ಅವರ ಕೆನ್ನೆಯಂತೆಯೇ ತಮ್ಮ ಕ್ಷೇತ್ರದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸಚಿವರು ಸೂಚಿಸಿರುವ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

  ಇದನ್ನು ಓದಿ: ಪ್ರೇಯಸಿಯರಿಗಾಗಿ ಖರ್ಚು ಮಾಡಲು ದುಬಾರಿ ಬೈಕ್​ನಲ್ಲಿ ಕಳ್ಳತನ.. ಕೊನೆಗೂ ಸಿಕ್ಕಿಬಿದ್ದ ಖದೀಮ!

  ಹೇಮಾ ಮಾಲಿನಿ ಕೆನ್ನೆಯಂತಹ ರಸ್ತೆ ನಿರ್ಮಿಸುತ್ತೇವೆ ಎಂದಿದ್ದ  ಲಾಲು ಪ್ರಸಾದ್​ ಯಾದವ್​ 
  ಕಳೆದೊಂದು ದಶಕದ ಹಿಂದೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳ ನಿರ್ಮಾಣ ವಿಚಾರದಲ್ಲಿ ಹೇಮಾ ಮಾಲಿನಿ ಹೆಸರು ತಂದಿದ್ದರು. ಬಾಲಿವುಡ್​ನ ಕನಸಿನ ರಾಣಿಯಾಗಿದ್ದ ಹೇಮಾ ಮಾಲಿನಿ ಆಗ ಸಾಕಷ್ಟು ಪ್ರಖ್ಯಾತಿ ಪಡೆದ ಬೇಡಿಕೆ ನಟಿಯಾಗಿದ್ದರು. ಈ ವೇಳೆ ಮಾತಿನ ಬರದಲ್ಲಿ ಮಾತನಾಡಿದ್ದ ಅವರು, ಬಿಹಾರದ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯಂತೆ ನಯವಾಗಿರಬೇಕು. ಯಾವುದೇ ತಗ್ಗು- ಗುಂಡಿ, ಏರಿಳಿತ ಗಳಿರದೇ ನುಣುಪಾಗಿರಬೇಕು ಎಂದು ಹೋಲಿಕೆ ಮಾಡಿ ಸುದ್ದಿಯಾಗಿದ್ದರು.

  ಇದನ್ನು ಓದಿ: 1 ವರ್ಷದ ಬಳಿಕ ಹೆತ್ತ ತಾಯಿಯ ಮಡಿಲು ಸೇರಿದ ಕಂದಮ್ಮ: ಸುಖಾಂತ್ಯ ಕಂಡ ಕೇರಳದ ದತ್ತು ವಿವಾದ!

  ಪದೇ ಪದೇ ಸುದ್ದಿಯಾಗಿತ್ತು ಹೇಮಾ ಮಾಲಿನಿ ಕೆನ್ನೆ
  ಇನ್ನು ಈ ಹಿಂದೆ ಇದೇ ರೀತಿ ಹೇಮಾಮಾಲಿನಿ ಕೆನ್ನೆ ಬಗ್ಗೆ ಬಿಜೆಪಿ ನಾಯಕ ಪಿ.ಸಿ. ಶರ್ಮಾ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಹಿಂದೆ ಮಾತನಾಡಿದ್ದ ಅವರು, ಬಿಜೆಪಿ ನಾಯಕ ಕೈಲಾಶ್​ ವಿಜಯವರ್ಗಿಯ ಕೆನ್ನೆಯಂತಿರುವ ಮಧ್ಯಪ್ರದೇಶದ ರಸ್ತೆಗಳನ್ನು ಕಾಂಗ್ರೆಸ್​ ಸರ್ಕಾರ ಶೀಘ್ರದಲ್ಲೇ ಬಿಜೆಪಿ ಲೋಕಸಭಾ ಸಂಸದೆ ಹೇಮಾಮಾಲಿನಿ ಕೆನ್ನೆಯಂತೆ ಬದಲಾಯಿಸುತ್ತದೆ. ಹದಗೆಟ್ಟ ರಸ್ತೆಯನ್ನು 15 ದಿನದೊಳಗೆ ದುರಸ್ಥಿ ಮಾಡಲು ಮುಖ್ಯಮಂತ್ರಿ ಕಮಲ್​ನಾಥ್​ ಅವರು ಆದೇಶಿಸಿದ್ದಾರೆ. ಆದಷ್ಟು ಬೇಗನೆ ರಸ್ತೆಗಳನ್ನು ಸಂಸದೆ ಹೇಮಾಮಾಲಿನಿ ಅವರ ಕೆನ್ನೆಯಷ್ಟು ನಯವಾಗಿ ನಿರ್ಮಾಣ ಆಗುತ್ತವೆ ಎಂದು ತಮ್ಮ ಪಕ್ಷದ ಸಂಸದೆಯನ್ನು ಉಲ್ಲೇಖಿಸಿ ಕಳೆದೆರಡು ವರ್ಷಗಳ ಹಿಂದೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು.
  Published by:Seema R
  First published: