News18 India World Cup 2019

Nagpur Lok Sabha Exit Poll: ನಾಗಪುರದಲ್ಲಿ ಬಿಜೆಪಿಗೆ ಕಂಟಕ; ಇಲ್ಲಿ ಸಚಿವ ನಿತಿನ್ ಗಡ್ಕರಿ ಗೆಲುವು ಅಷ್ಟು ಸುಲಭವಲ್ಲ ಎನ್ನುತ್ತಿವೆ ಸಮೀಕ್ಷೆಗಳು

ನಾಗಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಜೆಪಿ ಪಕ್ಷದ ಹಿರಿಯ ನಾಯಕ ಸಚಿವ ನಿತಿನ್ ಗಡ್ಕರಿ. ಈ ಕ್ಷೇತ್ರವನ್ನು ನಿತಿನ್ ಗಡ್ಕರಿ ಪ್ರತಿನಿಧಿಸುತ್ತಿರುವುದು ಇದೇ ಮೊದಲು. ಈ ಹಿಂದೆ ನಾಗಪುರವನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನ್ನಲಾಗುತ್ತಿತ್ತು. 1952 ರಿಂದ 2014ರ ವರೆಗೆ ನಡೆದ 16 ಲೋಕಸಭಾ ಚುನಾವಣೆಗಳ ಪೈಕಿ 12 ಬಾರಿ ಕಾಂಗ್ರೆಸ್​ ಗೆಲುವು ಸಾಧಿಸಿ ಈ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದೇ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕೇವಲ 2 ಬಾರಿ ಮಾತ್ರ.

MAshok Kumar | news18
Updated:May 19, 2019, 9:45 PM IST
Nagpur Lok Sabha Exit Poll: ನಾಗಪುರದಲ್ಲಿ ಬಿಜೆಪಿಗೆ ಕಂಟಕ; ಇಲ್ಲಿ ಸಚಿವ ನಿತಿನ್ ಗಡ್ಕರಿ ಗೆಲುವು ಅಷ್ಟು ಸುಲಭವಲ್ಲ ಎನ್ನುತ್ತಿವೆ ಸಮೀಕ್ಷೆಗಳು
ನಿತಿನ್ ಗಡ್ಕರಿ.
MAshok Kumar | news18
Updated: May 19, 2019, 9:45 PM IST
ಹತ್ತಾರು ಕಾರಣಗಳಿಗಾಗಿ ಇಂದು ಇಡೀ ದೇಶದ ಗಮನ ಸೆಳೆಯುತ್ತಿರುವ ಪ್ರಮುಖ ಲೋಕಸಭಾ ಕ್ಷೇತ್ರಗಳ ಪೈಕಿ ಮಹಾರಾಷ್ಟ್ರದ ನಾಗಪುರ ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿಯ ಸೈದ್ಧಾಂತಿಕ ಮುಖವಾಣಿ ಆರ್​ಎಸ್​ಎಸ್​ ಕೇಂದ್ರ ಕಚೇರಿ ಇರುವುದು ಇದೇ ನಾಗಪುರದಲ್ಲಿ. ಆರ್​ಎಸ್​ಎಸ್​ ತನ್ನ ಸಿದ್ಧಾಂತವನ್ನು ಇಡೀ ದೇಶದಾದ್ಯಂತ ಪ್ರಚುರಪಡಿಸುತ್ತಿರುವುದು ಇದೇ ನಾಗಪುರದಿಂದ. ಆದರೆ, ತನ್ನ ಕೇಂದ್ರ ಕಚೇರಿ ಇರುವ ಕ್ಷೇತ್ರದಲ್ಲೇ ಗೆಲುವು ಸಾಧಿಸಲು ಬಿಜೆಪಿ ಸರಿಸುಮಾರು 6 ದಶಕಗಳ ಕಾಲ ಕಾಯಬೇಕಾದದ್ದು ವಿಪರ್ಯಾಸ. ಈಗಲೂ ಇಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಅಷ್ಟು ಸುಲಭದ ವಿಚಾರವೇನಲ್ಲ.

ನಾಗಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಜೆಪಿ ಪಕ್ಷದ ಹಿರಿಯ ನಾಯಕ ಸಚಿವ ನಿತಿನ್ ಗಡ್ಕರಿ. ಈ ಕ್ಷೇತ್ರವನ್ನು ನಿತಿನ್ ಗಡ್ಕರಿ ಪ್ರತಿನಿಧಿಸುತ್ತಿರುವುದು ಇದೇ ಮೊದಲು. ಈ ಹಿಂದೆ ನಾಗಪುರವನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನ್ನಲಾಗುತ್ತಿತ್ತು. 1952 ರಿಂದ 2014ರ ವರೆಗೆ ನಡೆದ 16 ಲೋಕಸಭಾ ಚುನಾವಣೆಗಳ ಪೈಕಿ 12 ಬಾರಿ ಕಾಂಗ್ರೆಸ್​ ಗೆಲುವು ಸಾಧಿಸಿ ಈ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದೇ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಕೇವಲ 2 ಬಾರಿ ಮಾತ್ರ.

1998ರಿಂದ 2009ರ ವರೆಗೆ ಸತತ ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ವಿಲಾಸ್ ಮುಟ್ಟೇಮ್ವರ್ ಗೆಲುವು ದಾಖಲಿಸಿದ್ದಾರೆ. ಆದರೆ, 2014ರಲ್ಲಿ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ವಿರುದ್ಧ ಸುಮಾರು 2.8 ಲಕ್ಷ ಮತಗಳ ಅಂತರದಲ್ಲಿ ಸೋಲನುಭವಿಸಿ ನಿರಾಸೆ ಮೂಡಿಸಿದ್ದರು. ಪರಿಣಾಮ ಆರ್​ಎಸ್​ಎಸ್​ ಕೇಂದ್ರ ಕಚೇರಿ ಇರುವ ನಾಗಪುರದಲ್ಲಿ ಮೊದಲ ಬಾರಿಗೆ 5 ವರ್ಷಗಳ ಸಂಪೂರ್ಣ ಅವಧಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವಂತಾಗಿತ್ತು. ಈ ಚುನಾವಣೆಯಲ್ಲಿಯೂ ನಿತಿನ್ ಗಡ್ಕರಿಯೇ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದರೆ, ಅವರ ಗೆಲುವು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಅದಕ್ಕೆ ಕಾರಣಗಳೂ ಸಾಕಷ್ಟಿವೆ.

ಇದನ್ನೂ ಓದಿ : Varanasi Lok Sabha Exit Poll 2019: ವಾರಣಾಸಿಯಲ್ಲಿ ಮತ್ತೆ ಹಾರಾಡಲಿದೆ ಬಿಜೆಪಿ ಝಂಡಾ; 'ನಮಾಮಿ ಗಂಗೆ' ಯೋಜನೆ ಸೋತರೂ ಮೋದಿಗಿಲ್ಲ ಭಯ

ಮೋದಿ ಅಲೆಯಲ್ಲಿ ತೇಲಿದ್ದ ಗಡ್ಕರಿ : ಕಳೆದ ಚುನಾವಣೆಯಲ್ಲಿ ದೇಶದಾದ್ಯಂತ ಮೋದಿ ಅಲೆ ವ್ಯಾಪಕವಾಗಿತ್ತು. ಅಲ್ಲದೆ ಆಡಳಿತ ವಿರೋಧಿ ಅಲೆ ಹಾಗೂ ಭ್ರಷ್ಟಾಚಾರ ಆರೋಪಗಳು ಕಾಂಗ್ರೆಸ್ ಪಕ್ಷವನ್ನು ಹೈರಾಣು ಮಾಡಿತ್ತು. ನಾಗಪುರದಲ್ಲೂ ಈ ಎರಡೂ ಅಲೆಗಳು ತುಸು ಜೋರಾಗಿಯೇ ಇತ್ತು. ಪರಿಣಾಮ 60 ವರ್ಷ ಕಾಂಗ್ರೆಸ್ ಬೆನ್ನಿಗಿದ್ದ ಸಾಂಪ್ರದಾಯಿಕ ಮತಗಳು ಬಿಜೆಪಿ ಪಾಲಾಗಿದ್ದವು. ಎರಡು ದಶಕಗಳ ನಂತರ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದರೆ, ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಗೆಲುವಿನ ನಗೆ ಬೀರಿದ್ದರು.

2014ರ ಚುನಾವಣೆಯಲ್ಲಿ ನಾಗಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಮೋದಿ ಅಲೆಯ ವ್ಯಾಪಕತೆಯೇ ಕಾರಣ ಎನ್ನಲಡ್ಡಿಯಿಲ್ಲ. ಆದರೆ, ಕ್ಷೇತ್ರದಲ್ಲಿ ಪ್ರಸ್ತುತ ಈ ಅಲೆ ಇಲ್ಲ ಎಂಬುದೇ ಸತ್ಯ. ಅಲ್ಲದೆ ವ್ಯಾಪಕವಾಗಿರುವ ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್​ ಭಿನ್ನ ತಂತ್ರ ಈ ಬಾರಿ ನಿತಿನ್ ಗಡ್ಕರಿಗೆ ಖಚಿತವಾಗಿ ಸೋಲುಣಿಸಲಿದೆ ಎನ್ನುತ್ತಿವೆ ಮತಗಟ್ಟೆ ಸಮೀಕ್ಷೆಗಳು.
Loading...

ಬಿಜೆಪಿಗೆ ಬಿಜೆಪಿಯೇ ಎದುರಾಳಿ : ನಾಗಪುರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಆದರೆ, ಅವರ ವಿರೋಧಿ ಅಭ್ಯರ್ಥಿಯೂ ಬಿಜೆಪಿ ಪಕ್ಷದ ಮಾಜಿ ಸಂಸದ ಎಂಬುದು ಗಮನಾರ್ಹ. ನಾಗಪುರ ಲೋಕಸಭಾ ಕ್ಷೇತ್ರದಲ್ಲಿ ಭೂತ್ ಮಟ್ಟದಿಂದ ಗಟ್ಟಿ ನೆಲೆ ಹೊಂದಿರುವ ಕಾಂಗ್ರೆಸ್​ ಪಕ್ಷಕ್ಕೆ ಅಭ್ಯರ್ಥಿಯ ಕೊರತೆ ಇಲ್ಲ. ಆದರೂ ಬಿಜೆಪಿಯ ಮತ್ತೊಬ್ಬ ಸಂಸದನನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿರುವುದರ ಹಿಂದೆ ಸಾಕಷ್ಟು ತಂತ್ರಗಳಿವೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರದ ಭಂದಾರ-ಗೋಂಡಿಯಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಾನಾಭಾವ್ ಪಟೋಲ್. 2014ರಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಪಟೋಲ್ ನಾನಾ ಕಾರಣಗಳಿಂದಾಗಿ ಬಿಜೆಪಿ ತೊರೆದು ಕಾಂಗ್ರೆಸ್​ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಅಲ್ಲದೆ ಮಹಾರಾಷ್ಟ್ರದ ಎರಡನೇ ರಾಜಧಾನಿ ಎಂದೇ ಕರೆಯಲಾಗುವ ನಾಗಪುರದಿಂದ ಕೇಂದ್ರ ಸಚಿವ ನಿತಿನ್​ ಗಡ್ಕರಿ ವಿರುದ್ಧ ಸ್ಪರ್ಥಿಸುವ ಮೂಲಕ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ : ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣದಲ್ಲಿ ಹಾರಲಿದೆಯಾ ಕಾಂಗ್ರೆಸ್​ ಬಾವುಟ?; ನಿರೀಕ್ಷೆ ಮೂಡಿಸುತ್ತಿರುವ ಸಮೀಕ್ಷೆಗಳು!

ಕಾಂಗ್ರೆಸ್​ಗೆ ಹೆಚ್ಚಿದೆ ಗೆಲ್ಲುವ ಅವಕಾಶ : ಸಚಿವ ನಿತಿನ್​ ಗಡ್ಕರಿಗೆ ಈ ಬಾರಿ ಗೆಲುವು ಅಷ್ಟು ಸುಲಭವಾಗಿಲ್ಲ ಎನ್ನಲಾಗುತ್ತಿದೆ. ಕಾರಣ ಗಡ್ಕರಿ ಸೋಲಿಗೆ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯ ಒಳಗೂ ಕೆಲವರು ಕೆಲಸ ಮಾಡುತ್ತಿರುವುದೇ ಇದಕ್ಕೆ ಕಾರಣ.

ನಾಗಪುರದಲ್ಲಿರುವ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಕಳೆದ ವರ್ಷ ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್​ ಪಕ್ಷಕ್ಕೆ ಬೆನ್ನು ತೋರಿಸಿದ್ದವು. ಆದರೆ, ಕಳೆದ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವ ಭರವಸೆಗಳು ಈಡೇರಿಸದ ಕಾರಣ ಭ್ರಮನಿರಸನಗೊಂಡ ಈ ಎಲ್ಲಾ ಮತಗಳು ಮತ್ತೆ ಕಾಂಗ್ರೆಸ್​ ಕಡೆಗೆ ವಾಲಿವೆ ಎಂಬುದನ್ನು ಮತಗಟ್ಟೆಗಳು ಈಗಾಗಲೇ ಸ್ಪಷ್ಟಪಡಿಸಿವೆ.

ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಯೂ ಬಿಜೆಪಿಯ ಮಾಜಿ ಸಂಸದರೇ ಆಗಿರುವುದು ಕ್ಷೇತ್ರದ ಕೆಲ ಬಂಡಾಯ ಬಿಜೆಪಿ ಮತಗಳನ್ನೂ ಸೆಳೆಯುವಲ್ಲಿ ಸಫಲವಾಗಿದೆ. ಇದರ ನಡುವೆ ಸಚಿವ ನಿತಿನ್​ ಗಡ್ಕರಿ ಈ ಬಾರಿ ಪ್ರಧಾನಿ ಹುದ್ದೆಗೆ ಪ್ರಬಲ ಪ್ರತಿಸ್ಪರ್ಥಿಯಾಗಿ ಬದಲಾಗಿದ್ದಾರೆ. ಹೀಗಾಗಿ ಅವರನ್ನು ಸೋಲಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಇಶಾರೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಈ ಎಲ್ಲಾ ವ್ಯಾಖ್ಯಾನಗಳ ಕಡೆಗೆ ಒಮ್ಮೆ ಗಮನವಹಿಸಿದರೆ, ಈ ಬಾರಿ ನಾಗಪುರದಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸುವುದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಕಳೆದ ಚುನಾವಣೆಯಲ್ಲಿ ಕಳೆದುಕೊಂಡ ಕ್ಷೇತ್ರವನ್ನು ಕಾಂಗ್ರೆಸ್ ಮತ್ತೆ ಹಿಂಪಡೆಯುವುದರಲ್ಲಿ ಅಚ್ಚರಿ ಏನಿಲ್ಲ.

First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...