Union Budget 2019: ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್; ಮುಂದಿದೆ ಸಾಲು ಸಾಲು ಸವಾಲುಗಳು!

ಮುಂದಿನ ತಿಂಗಳು ಜುಲೈ.5 ರಂದು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಮೊದಲ  ಪೂರ್ಣಾವಧಿ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ. ಆ ಮೂಲಕ ಭಾರತದ ಸಂಸತ್​ ಇತಿಹಾಸದಲ್ಲಿ ಹಣಕಾಸು ಖಾತೆ ಪಡೆದ ಹಾಗೂ ಬಜೆಟ್​ ಮಂಡಿಸಿದ ಮೊದಲ ಮಹಿಳೆ ಎಂಬ ಪ್ರಶಂಶೆಗೂ ಅವರು ಪಾತ್ರರಾಗಲಿದ್ದಾರೆ. ನಿಜಕ್ಕೂ ಇದು ಐತಿಹಾಸಿಕ ಘಟನೆ ಎಂಬುದೇನೋ ನಿಜ. ಆದರೆ, ಅವರ ಮುಂದಿನ ಸವಾಲುಗಳೇನು ಕಡಿಮೆಯದ್ದಲ್ಲ.

MAshok Kumar | news18
Updated:July 4, 2019, 5:05 PM IST
Union Budget 2019: ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್; ಮುಂದಿದೆ ಸಾಲು ಸಾಲು ಸವಾಲುಗಳು!
ನಿರ್ಮಲಾ ಸೀತಾರಾಮನ್
  • News18
  • Last Updated: July 4, 2019, 5:05 PM IST
  • Share this:
ಲೋಕಸಭಾ ಚುನಾವಣೆಯ ನಂತರ ಭಾರತ ಮತ್ತೊಂದು ಬಜೆಟ್​ಗೆ ಅಣಿಯಾಗಿದೆ. ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಕಳೆದ ಫೆಬ್ರವರಿ 1 ರಂದು ರೈಲ್ವೆಖಾತೆ ಸಚಿವ ಪಿಯೂಷ್​ ಗೋಯಲ್​ ಮಧ್ಯಂತರ ಬಜೆಟ್​ ಮಂಡಿಸಿದ್ದರು. ಈ ಬಜೆಟ್​ನಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವಾರ್ಷಿಕ 6,000 ರೂಪಾಯಿ ಜಮೆ, ಮಧ್ಯಮ ವರ್ಗ ಹಾಗೂ ತೆರಿಗೆ ಪಾವತಿದಾರರನ್ನು ಸಂತೃಪ್ತಿಗೊಳಿಸಲು ಆದಾಯ ತೆರಿಗೆ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ ಸೇರಿದಂತೆ ಅನೇಕ ಜನಪ್ರಿಯ ಘೋಷಣೆಗಳನ್ನು ನೀಡಲಾಗಿತ್ತು. ಇದೀಗ ಚುನಾವಣೆಯ ನಂತರ ಕೇಂದ್ರ ಸರ್ಕಾರ ಮತ್ತೊಂದು ಬಜೆಟ್​ಗೆ ಸಿದ್ಧತೆ ನಡೆಸಿದೆ.

ಏಪ್ರಿಲ್​ ನಿಂದು ಸರಿಯಾಗಿ ಮಾರ್ಚ್ ವರೆಗೆ ಒಂದು ವರ್ಷದ ಅವಧಿಗೆ ಮಂಡಿಸಲಾಗುವ ಬಜೆಟ್​ ಅನ್ನು ಮೊದಲು ಮಂಡಿಸಿದವರು ಷಣ್ಮುಖಂ ಚೆಟ್ಟಿ. ಆದರೆ, ಅತಿಹೆಚ್ಚು ಬಾರಿ ಬಜೆಟ್​ ಮಂಡಿಸಿದ ಕೀರ್ತಿ ದಿವಂಗತ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಗೆ ಸಲ್ಲುತ್ತದೆ. ಮೊರಾರ್ಜಿ ದೇಸಾಯಿ ಒಟ್ಟು 8 ಬಾರಿ ಪೂರ್ಣ ಬಜೆಟ್ ಹಾಗೂ 2 ಬಾರಿ ಮಧ್ಯಂತರ ಬಜೆಟ್​ ಮಂಡಿಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಏಳಕ್ಕೂ ಹೆಚ್ಚು ಬಾರಿ ಬಜೆಟ್​ ಮಂಡಿಸಿರುವ ಪ್ರಣಬ್ ಮುಖರ್ಜಿ, ಯಶ್ವಂತ್​ ಸಿಂಗ್, ವೈ.ಬಿ. ಚೌಹ್ಹಾನ್​ ಹಾಗೂ ಸಿ.ಡಿ. ದೇಶ್​ಮುಖ್ ಇದ್ದಾರೆ.

minister nirmala Sitaraman to present first budget and might be she face so many challenges.
ನಿರ್ಮಲಾ ಸೀತಾರಾಮನ್


ಹೀಗೆ ಕಳೆದ 7 ದಶಕಗಳಿಂದ ಭಾರತದ ವಾರ್ಷಿಕ ಬಜೆಟ್ ಅನೇಕ ವಿಶೇಷತೆಗಳಿಂದ ಕೂಡಿದ್ದಿದೆ. ​ಆದರೆ, ಈ ವರ್ಷದ ಬಜೆಟ್ ಈವರೆಗಿನ ಎಲ್ಲಾ ಬಜೆಟ್​ಗಿಂತ​ ಬೇರೆಯದೇ ಕಾರಣಕ್ಕೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಭಾರತದಲ್ಲಿ ಹಣಕಾಸು ಸಚಿವರಾದ ಹಾಗೂ ಬಜೆಟ್​ ಮಂಡಿಸುತ್ತಿರುವ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್.

ಇದನ್ನೂ ಓದಿ : ಜುಲೈ 5ಕ್ಕೆ ನೂತನ ಸರ್ಕಾರದ ಮೊದಲ ಬಜೆಟ್; ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೂ ಮೊದಲ ಬಜೆಟ್

ನಿರ್ಮಲಾ ಸೀತಾರಾಮನ್​ ಮುಂದಿರುವ ಸವಾಲುಗಳು!

ಲೋಕಸಭಾ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಕಳೆದ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವೆಯಾಗಿ ಪ್ರಧಾನಿ ರಕ್ಷಣೆಗೆ ಬೆನ್ನಿಗೆ ನಿಂತಿದ್ದ ಕರ್ನಾಟಕ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಹಣಕಾಸು ಖಾತೆ ಲಭಿಸಿದೆ.ಮುಂದಿನ ತಿಂಗಳು ಜುಲೈ.5 ರಂದು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಮೊದಲ  ಪೂರ್ಣಾವಧಿ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ. ಆ ಮೂಲಕ ಭಾರತದ ಸಂಸತ್​ ಇತಿಹಾಸದಲ್ಲಿ ಹಣಕಾಸು ಖಾತೆ ಪಡೆದ ಹಾಗೂ ಬಜೆಟ್​ ಮಂಡಿಸಿದ ಮೊದಲ ಮಹಿಳೆ ಎಂಬ ಪ್ರಶಂಶೆಗೂ ಅವರು ಪಾತ್ರರಾಗಲಿದ್ದಾರೆ. ನಿಜಕ್ಕೂ ಇದು ಐತಿಹಾಸಿಕ ಘಟನೆ ಎಂಬುದೇನೋ ನಿಜ. ಆದರೆ, ಅವರ ಮುಂದಿನ ಸವಾಲುಗಳೇನು ಕಡಿಮೆಯದ್ದಲ್ಲ.

ನಿರ್ಮಲಾ ಸೀತಾರಾಮನ್ ಮುಂದಿರುವ ಸವಾಲುಗಳೇನು?

ಕಳೆದ ಫೆಬ್ರವರಿ.1 ರಂದೇ ಸಚಿವ ಪಿಯೂಷ್ ಗೋಯಲ್ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದರು. ಆದರೆ, ಇದೀಗ ಹೊಸ ಸರ್ಕಾರ ರಚನೆಯಾಗಿರುವ ಕಾರಣ ಮತ್ತೊಂದು ಪೂರ್ಣಾವಧಿ ಬಜೆಟ್ ಮಂಡಿಸಲೇಬೇಕಾಗ ಪರಿಸ್ಥಿತಿ ಎದುರಾಗಿದೆ. ಆದರೆ, ಕಳೆದ ಬಜೆಟ್​ನಲ್ಲಿ ಘೋಷಣೆ ಮಾಡಲಾದ ಪ್ರಮುಖ ಯೋಜನೆಗಳು ಹಾಗೂ ಘೋಷಣೆಗಳಿಗೆ ಈ ಬಜೆಟ್​ನಲ್ಲಿಯೂ ಹಣ ಮೀಸಲಿಡಬೇಕು. ಕಳೆದ ಬಜೆಟ್​ನಲ್ಲಿ ರೈತರ ಖಾತೆಗೆ ವಾರ್ಷಿಕ 6,000 ಹಣ ಸಹಾಯ ಧನ ನೀಡುವ ಉದ್ದೇಶಕ್ಕಾಗಿಯೆ ಸುಮಾರು 75 ಸಾವಿರ ಕೋಟಿ ಹಣ ಮೀಸಲಿಡಲಾಗಿತ್ತು. ಇದನ್ನು ಪ್ರಸ್ತುತ ಬಜೆಟ್​ನಲ್ಲಿ ಹೇಗೆ ನಿಭಾಯಿಸಲಾಗುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ರ ನೆಟ್ಟಿದೆ.

ಕಳೆದ 40 ವರ್ಷಗಳಲ್ಲಿ ಭಾರತ ಹಿಂದೆಂದೂ ಕಾಣದಂತಹ ಆರ್ಥಿಕ ಹಿಂಜರಿತ ಹಾಗೂ ಹಣದುಬ್ಬರ ಸಮಸ್ಯೆಗೆ ಒಳಗಾಗಿದೆ. ಭಾರತದ ಬಹುತೇಕ ಬ್ಯಾಂಕ್​ಗಳು ಆರ್ಧಿಕ ಮುಗ್ಗಟ್ಟಿಗೆ ಸಿಲುಕಿದ್ದು ದಿವಾಳಿಯ ಅಂಚಿನಲ್ಲಿವೆ. ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಹೀಗಾಗಿ ದೇಶದ ಆರ್ಥಿಕತೆ ಸುಧಾರಿಸುವ, ಹಣದುಬ್ಬರವನ್ನು ನಿಯಂತ್ರಿಸಲು ಅನುವಾಗುವ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಹಾಗೂ ಹೊಸ ಉದ್ಯೋಗ ಸೃಷ್ಟಿಗೆ ನಾಂದಿ ಹಾಡುವ ಬಜೆಟ್​ ತುರ್ತು ಅವಶ್ಯಕತೆ ಇದೆ.

ಇದನ್ನೂ ಓದಿ : Union Budget 2019 | ಮೋದಿ ನೇತೃತ್ವದ 2.0 ಸರ್ಕಾರದ ಮೊದಲ ಬಜೆಟ್​ನಲ್ಲಿ ಸ್ಟಾರ್ಟ್​ಅಪ್​ಗಳ ನಿರೀಕ್ಷೆಗಳೇನು?

ಅಲ್ಲದೆ ದಿನನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ತೆರಿಗೆ ವಿಭಾಗದಲ್ಲಿ ಮಹತ್ವಪೂರ್ಣ ಬದಲಾವಣೆಗೆ ಮುಂದಾಗಬೇಕಾದ ಅವಶ್ಯಕತೆಯೂ ಇದೆ. ಹೀಗಾಗಿ ಬಿಜೆಪಿಯ ಎರಡನೇ ಅವಧಿಯ ಬಜೆಟ್​ ಅನ್ನು ಇಡೀ ದೇಶ ಆಶಾದಾಯಕ ದೃಷ್ಟಿಯಿಂದ ಎದುರು ನೋಡುತ್ತಿದೆ.

ಈ ವರ್ಷ ರಾಷ್ಟ್ರದೆಲ್ಲೆಡೆ ಮಳೆ ಕೊರತೆಯಿಂದಾಗಿ ರೈತಾಪಿ ವರ್ಗ ಸಾಕಷ್ಟು ಸಂಕಷ್ಟಕ್ಕೆ ಎದುರಾಗಿದೆ. ಕೃಷಿ ಕ್ಷೇತ್ರದಲ್ಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹೀಗಾಗಿ ರೈತರಿಗೆ ವಾರ್ಷಿಕ 6,000 ಸಹಾಯ ಧನ ನೀಡುವುದರ ಜೊತೆಗೆ, ರೈತರ ಬೆಳೆಗಳಿಗೆ ವಿಮೆ ನೀಡಬೇಕು ಎಂಬ ಕುರಿತು ಹಲವು ವರ್ಷಗಳಿಂದ ರೈತರಿಂದ ಒತ್ತಾಯ ಕೇಳಿಬರುತ್ತದೆ. ಆದರೆ, ಯಾವ ಕೇಂದ್ರ ಸರ್ಕಾರಗಳು ಈವರೆಗೆ ಇದರ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಿಲ್ಲ. ಹೀಗಾಗಿ ಪ್ರಸ್ತುತ ಬಜೆಟ್​ನಲ್ಲಾದರೂ ಕೇಂದ್ರ ಸರ್ಕಾರ ಬೆಳೆಗೆ ವಿಮೆಗೆ ಮುಂದಾಗಲಿದೆಯೇ? ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಇದಲ್ಲದೆ, ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿನ ಸವಾಲುಗಳು, ಕೊರತೆ ಮತ್ತು ಹಣದುಬ್ಬರ, ಆಡಳಿತಾತ್ಮಕ ಉಪಕ್ರಮಗಳು. ಆರ್ಥಿಕ ಯೋಜನೆಗಳನ್ನು ಮತ್ತೆ ಅಭಿವೃದ್ಧಿಯ ಹಳಿಗೆ ಮರಳಿಸುವ ಹಾಗೂ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ನಗರಾಭಿವೃದ್ಧಿ, ವಸತಿ, ಅಲ್ಪಸಂಖ್ಯಾತರ ಏಳಿಗೆ, ಮೂಲಭೂತ ಸೌಕರ್ಯ ಹಾಗೂ ಸಾರ್ವಜನಿಕ ಆರ್ಥಿಕ ವಲಯದ ಅಭಿವೃದ್ಧಿಗೆ ಅವಶ್ಯಕವಾದ ಹಣಕಾಸನ್ನು ಕಾಯ್ದಿರಿಸಬೇಕಾದ ಜವಾಬ್ದಾರಿಯೂ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿದೆ.

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading