Covid Vaccine: ವಾರದೊಳಗೆ 2 ಕೋಟಿ ಲಸಿಕೆ; ಯುವಜನತೆ ಉತ್ಸಾಹಕ್ಕೆ ಮೆಚ್ಚುಗೆ

  ಮಕ್ಕಳಿಗಾಗಿ  ಲಸಿಕೆ ವಿತರಣೆಯನ್ನು ಪ್ರಾರಂಭಿಸಿ ಒಂದು ವಾರದೊಳಗೆ 2 ಕೋಟಿ ಯುವಜನತೆ ಪಡೆದು ಮೈಲಿಗಲ್ಲು ಸೃಷ್ಟಿಸಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ನವದೆಹಲಿ (ಜ. 8):  15-18 ವರ್ಷ ವಯಸ್ಸಿನ 2 ಕೋಟಿಗೂ (Covid Vaccine For Teenagers) ಹೆಚ್ಚು ಹದಿಹರೆಯದವರು ತಮ್ಮ ಮೊದಲ ಡೋಸ್ COVID-19 ಲಸಿಕೆಯನ್ನು ಪಡೆದಿದ್ದಾರೆ.  ಮಕ್ಕಳಿಗಾಗಿ  ಲಸಿಕೆ ವಿತರಣೆಯನ್ನು ಪ್ರಾರಂಭಿಸಿ ಒಂದು ವಾರದೊಳಗೆ 2 ಕೋಟಿ ಯುವಜನತೆ ಪಡೆದು ಮೈಲಿಗಲ್ಲು ಸೃಷ್ಟಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಇಂದು ಹೇಳಿದ್ದಾರೆ.

    ಯುವ ಜನತೆ ಆಸಕ್ತಿಗೆ ಮೆಚ್ಚುಗೆ

    ಹದಿಹರೆಯದ ಅಂದರೆ 15-18 ವಯೋಮಾನದವಿರಗೆ ಕಳೆದ ವಾರದಿಂದ ದೇಶದಲ್ಲಿ ಲಸಿಕೆ ವಿತರಣೆ ಆರಂಭವಾಗಿದೆ. ಒಂದು ವಾರದಲ್ಲಿಯೇ 2 ಕೋಟಿಗೂ ಹೆಚ್ಚು ಯುವಜನತೆ ಕೋವಿಡ್​ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ತಿಳಿಸಿದ್ದಾರೆ. ಲಸಿಕೆ ಪಡೆಯಲು ಯುವಜನತೆ ತೋರುತ್ತಿರುವ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಉತ್ತಮ ಮುನ್ನಡೆ ನನ್ನ ಯುವ ಸ್ನೇಹಿತರೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಯುವ ಭಾರತಕ್ಕೆ ಧನ್ಯವಾದಗಳು

    ಲಸಿಕೆ ಪಡೆಯುವಲ್ಲಿ ಯುವಜನತೆ ಉತ್ಸಾಹಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ, COVID-19 ವಿರುದ್ಧದ ಭಾರತದ ಹೋರಾಟವನ್ನು ಮತ್ತಷ್ಟು ಬಲಪಡಿಸಿದ್ದಕ್ಕಾಗಿ ಯುವ ಭಾರತಕ್ಕೆ ಧನ್ಯವಾದಗಳು ಎಂದಿದ್ದಾರೆ.

    ಕೋವಿಡ್ ನಿಯಮ ಪಾಲಿಸಿ ಎಂದ ಮೋದಿ
    ಭಾರತದಲ್ಲಿ ನೀಡಲಾದ ಸಂಚಿತ ಲಸಿಕೆ ಪ್ರಮಾಣಗಳು ಶುಕ್ರವಾರ 150 ಕೋಟಿ ಮೈಲಿಗಲ್ಲು ಅನ್ನು ಮೀರಿದ ಕಾರಣ ಭಾರತವು ತನ್ನ COVID-19 ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದ ನಂತರ ಇದು ಬಂದಿದೆ.
    ಈ ಮೈಲಿಗಲನ್ನು ದಾಟಿದ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿದ ಅವರು, ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಎಲ್ಲರಿಗೂ ದೇಶ ಕೃತಜ್ಞವಾಗಿದೆ ಎಂದು ಹೇಳಿದರು.

    ಇದನ್ನು ಓದಿ: ಒಂದೇ ಒಂದು ಮಿಸ್ಡ್​​​ ಕಾಲ್​ನಿಂದ 46 ಲಕ್ಷ ರೂ ಕಳೆದುಕೊಂಡ; ಇರಲಿ ಎಚ್ಚರ...

    ಲಸಿಕೆ ಪಡೆಯಲು ಪ್ರೇರೇಪಿಸಿ
    ಇತ್ತೀಚೆಗೆ 150 ಕೋಟಿ ಮೈಲಿಗಲ್ಲನ್ನು ದಾಟಿದ ಹಿನ್ನಲೆ ಮಾತನಾಡಿದ ಪ್ರಧಾನಿ, ನಮ್ಮ ಕೋವಿಡ್ ಲಸಿಕೆ ವಿತರಣೆ ಅನೇಕ ಜೀವಗಳನ್ನು ಉಳಿಸಲಾಗಿದೆ ಎಂದು ಖಚಿತಪಡಿಸಿದೆ. ಅದೇ ಸಮಯದಲ್ಲಿ, ನಾವು ಎಲ್ಲಾ COVID-19 ಸಂಬಂಧಿತ ಪ್ರೋಟೋಕಾಲ್‌ಗಳನ್ನು ಸಹ ಅನುಸರಿಸೋಣ. ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಎಲ್ಲರಿಗೂ ಭಾರತ ಕೃತಜ್ಞವಾಗಿದೆ. ಜನರಿಗೆ ಲಸಿಕೆ ಹಾಕುತ್ತಿರುವ ನಮ್ಮ ವೈದ್ಯರು, ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಎಲ್ಲಾ ಅರ್ಹರು ತಮ್ಮ ಲಸಿಕೆ ಪಡೆಯಬೇಕು ಎಂದುಒತ್ತಾಯಿಸುತ್ತೇನೆ. ಒಟ್ಟಾಗಿ, COVID-19 ವಿರುದ್ಧ ಹೋರಾಡೋಣ ಎಂದು ಕರೆ ನೀಡಿದ್ದಾರೆ.

    ಇದನ್ನು ಓದಿ: ಕೋವ್ಯಾಕ್ಸಿನ್ ಲಸಿಕೆ ಹಾಕ್ಸೊಂಡ ಮಕ್ಕಳು ಪ್ಯಾರಸಿಟಮಲ್ ತೆಗೆದುಕೊಳ್ಬೇಡಿ..! ಯಾಕೆ ಗೊತ್ತಾ?

    ಜನವರಿ 3 ರಿಂದ ಆರಂಭವಾದ ಲಸಿಕೆ ವಿತರಣೆ
    ಜನವರಿ 3ರಿಂದ 15 ರಿಂದ 17 ವಯೋಮಾನದ ಲಸಿಕೆ ಅಭಿಯಾನಕ್ಕೆ ದೇಶದಲ್ಲಿ ಚಾಲನೆ ನೀಡಲಾಗಿದ್ದು, ಮೊದಲ ದಿನವೇ 40 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆಯುವ ಮೂಲಕ ದಾಖಲೆ ನಿರ್ಮಿಸಲಾಗಿತ್ತು.

    ವಯಸ್ಕರ ಲಸಿಕೆ ಡ್ರೈವ್‌ನಂತೆಯೇ, ಅರ್ಹ ನಾಗರಿಕರು ಆರೋಗ್ಯ ಸೇತು ಅಪ್ಲಿಕೇಶನ್ ಮತ್ತು ಉಮಂಗ್ ಅಪ್ಲಿಕೇಶನ್‌ನಲ್ಲಿ ಸಂಯೋಜಿಸಲ್ಪಟ್ಟ ಕೋವಿನ್ ಪೋರ್ಟಲ್ ಮೂಲಕ ತಮ್ಮ ಲಸಿಕೆ ಸ್ಲಾಟ್‌ಗಳನ್ನು ಬುಕ್ ಮಾಡಬಹುದು. ಹದಿಹರೆಯದವರು ವೈಯಕ್ತಿಕವಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಬಹುದು, ಅಥವಾ ವಯಸ್ಕರು ಈಗಾಗಲೇ ಪ್ಲಾಟ್ ಫಾರ್ಮ್‌ನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಅವರನ್ನು ಫಲಾನುಭವಿಯಾಗಿ ಸೇರಿಸಬಹುದು. ಅವರು ಆಧಾರ್ ಕಾರ್ಡ್ ಹೊರತುಪಡಿಸಿ ನೋಂದಣಿಗಾಗಿ ತಮ್ಮ ವಿದ್ಯಾರ್ಥಿ ಐಡಿ ಕಾರ್ಡ್ ಅನ್ನೂ ಬಳಸಬಹುದು. ಆರೋಗ್ಯ ಸೇತು ಆ್ಯಪ್ ಮೂಲಕ ನೀವು ಕೋವಿಡ್-19 ಲಸಿಕೆಗೆ ನೋಂದಾಯಿಸಿಕೊಳ್ಳಬಹುದು.
    Published by:Seema R
    First published: