ರಾಜ್ಯಕ್ಕೆ  AIIMS ಆಸ್ಪತ್ರೆ ಸಿಗುತ್ತಾ? ಕೇಂದ್ರ ಆರೋಗ್ಯ ಸಚಿವರ ಜೊತೆ ಸುಧಾಕರ್ ಚರ್ಚೆ

ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರ ಸಾಕಷ್ಟು ಬೆಳೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲು ಏಮ್ಸ್ ಸಂಸ್ಥೆ ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಮನವಿ ಮಾಡಿದ್ದಾರೆ.

ಸುಧಾಕರ್​, ಮನ್‍ ಸುಖ್ ಮಾಂಡವೀಯ

ಸುಧಾಕರ್​, ಮನ್‍ ಸುಖ್ ಮಾಂಡವೀಯ

  • Share this:
ನವದೆಹಲಿ, ಮೇ 18: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (All India Institute of Medical Sciences) ಅನ್ನು ಕರ್ನಾಟಕದಲ್ಲೂ ಸ್ಥಾಪನೆ ಮಾಡಬೇಕೆಂದು ಬಹಳ ವರ್ಷಗಳಿಂದ ಪ್ರಯತ್ನವಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Health Minister Dr. K. Sudhakar) ಅವರು ಬುಧವಾರ ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ (Munsuk Mandovia) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು ಏಮ್ಸ್ ಸ್ಥಾಪನೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ವೈದ್ಯರಾಗುವ ಕನಸು ಹೊತ್ತವರಿಗೆ ಸಿಹಿ ಸುದ್ದಿ
ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಏಮ್ಸ್ ಸಂಸ್ಥೆಯೊಂದನ್ನು ಆರಂಭಿಸಬೇಕೆಂದು ಸಚಿವ ಡಾ. ಕೆ. ಸುಧಾಕರ್, ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರ ಸಾಕಷ್ಟು ಬೆಳೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲು ಏಮ್ಸ್ ಸಂಸ್ಥೆ ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Rajiv Gandhi Assassination: 19ನೇ ವರ್ಷಕ್ಕೆ ಜೈಲು ಸೇರಿ 50ನೇ ವರ್ಷಕ್ಕೆ ಬಿಡುಗಡೆಯಾದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ!

ಉತ್ತರ ತಾಲೂಕಿನಲ್ಲಿ ನಿಮ್ಹಾನ್ಸ್ ಕ್ಯಾಂಪಸ್
ಕೇಂದ್ರ ಸಚಿವರ ಭೇಟಿಯಾದ ವೇಳೆ ನಿಮ್ಹಾನ್ಸ್ ಸಂಸ್ಥೆಯ ಹೊಸ ಕ್ಯಾಂಪಸ್ ನಿರ್ಮಾಣ ಕುರಿತು ಕೂಡ ಸಚಿವ ಡಾ. ಕೆ. ಸುಧಾಕರ್ ಚರ್ಚೆ ನಡೆಸಿದ್ದಾರೆ. 2021ರಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಇದರ ಬದಲು, ನಿಮ್ಹಾನ್ಸ್ ಪಿಜಿ ಸಂಸ್ಥೆ ಆರಂಭಿಸುವಂತೆ ಆರ್ಥಿಕ ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಅದರಂತೆ 2,100 ಕೋಟಿ ರೂ. ವೆಚ್ಚದಲ್ಲಿ 2,344 ಹಾಸಿಗೆಯ ಕಟ್ಟಡ ಹಾಗೂ ಪಿಜಿ ಕೇಂದ್ರವನ್ನು 8 ವರ್ಷಗಳಲ್ಲಿ ನಿರ್ಮಿಸುವ ಪ್ರಸ್ತಾವವನ್ನು 2022ರ ಫೆಬ್ರವರಿಯಲ್ಲಿ ಸಲ್ಲಿಸಲಾಗಿತ್ತು. ಇದನ್ನು ಪರಿಷ್ಕರಿಸುವಂತೆ ಸಮಿತಿಯು ಸಲಹೆ ನೀಡಿತ್ತು. ಆದ್ದರಿಂದ 538 ಹಾಸಿಗೆಗಳ ಪಾಲಿ ಟ್ರಾಮಾ ಕೇಂದ್ರ ಹಾಗೂ ಪಿಜಿ ಸೆಂಟರ್ ನಿರ್ಮಿಸುವ ಡಿಪಿಆರ್ ಸಿದ್ಧಪಡಿಸಿ ನೀಡಲಾಗಿದೆ. ಈ ಯೋಜನೆಯಲ್ಲಿ ಕಟ್ಟಡ ನಿರ್ಮಾಣಕ್ಕೆ 489 ಕೋಟಿ ರೂ. ಖರ್ಚಾಗಲಿದ್ದು, 260.76 ಕೋಟಿ ರೂ. ವೈದ್ಯಕೀಯ ಉಪಕರಣಗಳಿಗೆ ಹಾಗೂ ವಾರ್ಷಿಕ 159 ಕೋಟಿ ರೂ. ಮಾನವ ಸಂಪನ್ಮೂಲಕ್ಕೆ ಖರ್ಚಾಗಲಿದೆ.

ಸಚಿವರು ಸಲ್ಲಿಸಿದ ಇತರೆ ಮನವಿಗಳು
* ನರ್ಸಿಂಗ್ ಹಾಗೂ ಅಲೈಡ್ ಆರೋಗ್ಯ ವಿಜ್ಞಾನಗಳು, ಆರೋಗ್ಯ ಸೇವೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವುದು ಈಗಿನ ಅಗತ್ಯವಾಗಿದೆ.
* ಆಸ್ಪತ್ರೆಗಳ ಆಡಳಿತ ನಿರ್ವಹಣೆಯ ಬಗ್ಗೆ ವೈದ್ಯರಿಗೆ ತರಬೇತಿ ನೀಡುವುದು ಅವಶ್ಯಕ. ವೈದ್ಯರ ತರಬೇತಿ ಕಾರ್ಯಕ್ರಮದಲ್ಲಿ, ಆಸ್ಪತ್ರೆಯ ಆಡಳಿತದ ಪಠ್ಯವನ್ನು ಕೂಡ ಸೇರಿಸಬೇಕಿದೆ. ಇದರಲ್ಲಿ ಪಿಪಿಪಿ ಮಾದರಿಯನ್ನು ಅನುಸರಿಸಬಹುದು.
*ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ನೀಡುವ ಅನುದಾನವು ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಹೊಂದಿರದ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ ನಿಯಮವನ್ನು ಸಡಿಲಿಸಿದರೆ ಒಳ್ಳೆಯದು.
* ಸೀಟು ಹಂಚಿಕೆ ವೇಳೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಇರುವುದಿಲ್ಲ. ಈ ನಿಯಮವನ್ನು ಬದಲಿಸಿ ಸ್ಥಳೀಯ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ನೀಡಲು ಕ್ರಮ ವಹಿಸಬೇಕಿದೆ.
* ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಹಾಗೂ ಫಾರ್ಮಸಿ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮ ರೂಪಿಸುವ ಅಗತ್ಯವಿದೆ.
* ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರೂಪಿಸಿವ ಯೋಜನೆಗಳಲ್ಲಿ ಸ್ಥಳೀಯ ಹಾಗೂ ಪ್ರಾದೇಶಿಕ ಆರೋಗ್ಯ ಸಮಸ್ಯೆಗಳಿಗೆ ಒತ್ತು ನೀಡಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕು.
Published by:Kavya V
First published: