ನ್ಯೂಸ್ 18 ನೆಟ್‍ವರ್ಕ್ (News 18 Network) ಪೂನಾವಾಲಾ ಫಿನ್‍ಕಾರ್ಪ್ ಲಿಮಿಟೆಡ್ ಸಹಭಾಗಿತ್ವದಲ್ಲಿ ತನ್ನ ಪ್ರಸಿದ್ಧ ಎರಡು ದಿನಗಳ ಮಾಕ್ರ್ಯೂ ನಾಯಕತ್ವದ ಸಮಾವೇಶ 'ರೈಸಿಂಗ್ ಇಂಡಿಯಾ ಸಮ್ಮಿಟ್ 2023' (Rising India Summit 2023) ಅನ್ನು ಆಯೋಜಿಸಲಿದೆ. ಇನ್ನು ಸಭೆಯಲ್ಲಿ ಭಾರತೀಯರ ಅಸಾಧಾರಣ ಸಾಧನೆಗಳ ಬಗ್ಗೆ ಗುರುತಿಸಲಾಗುತ್ತದೆ. ಈ ಕಾರ್ಯಕ್ರಮವು ಮಾರ್ಚ್ 29-30 ರಂದು ನವದೆಹಲಿಯ ತಾಜ್ ಪ್ಯಾಲೇಸ್‍ನಲ್ಲಿ ನಡೆಯಲಿದೆ. ಭಾರತದ ಗೌರವಾನ್ವಿತ ಉಪಾಧ್ಯಕ್ಷ ಜಗದೀಪ್ ಧಂಖರ್ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ (Amit Shah), ರಾಜನಾಥ್ ಸಿಂಗ್(Rajnath Singh), ಎಸ್. ಜೈಶಂಕರ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಮತ್ತು ಇತರರು ಸೇರಿದಂತೆ ಗಣ್ಯ ವ್ಯಕ್ತಿಗಳು ಮತ್ತು ನಿರೂಪಕರು ಭಾಗವಹಿಸಲಿದ್ದಾರೆ.
ಇನ್ನು ಈ 'ರೈಸಿಂಗ್ ಇಂಡಿಯಾ ಸಮ್ಮಿಟ್ 2023' ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಮೋದಿ ಅವರ ಉಪನಾಮದ ಕುರಿತು ಹೇಳಿಕೆಯ ಬಗ್ಗೆಯೂ ಮಾತನಾಡಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಏನ್ ಹೇಳಿದ್ರು?
ಈ ಬಾರಿಯ ನೆಟ್‌ವರ್ಕ್ 18 ರ ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಬುಧವಾರದಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರ ಬಳಿ ಲೋಕಸಭೆಯಿಂದ ಕಾಂಗ್ರೆಸ್ ನಾಯಕರ ಅನರ್ಹತೆಯ ಬಗ್ಗೆ ಮತ್ತು ಮಾನನಷ್ಟ ಮೊಕದ್ದಮೆಯ ಬಗ್ಗೆ ಕೇಳಿದಾಗ, ರಾಹುಲ್ ಗಾಂಧಿಯವರು ತಮ್ಮ “ಮೋದಿ ಉಪನಾಮ” ಹೇಳಿಕೆಯ ಮೂಲಕ ಇಡೀ ಸಮುದಾಯವನ್ನು ಅವಮಾನಿಸಿದ್ದಾರೆ ಮತ್ತು ಅವಕಾಶ ಸಿಕ್ಕಾಗ ಕ್ಷಮೆಯಾಚಿಸಲು ಸಹ ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ರಿಯಲ್ ಲೈಫ್' ಹೀರೋಗಳಿಗೆ ನ್ಯೂಸ್ 18 ನೆಟ್‍ವರ್ಕ್ ಪೂನಾವಾಲಾ ಫಿನ್ಕಾರ್ಪ್ನಿಂದ ಗೌರವ
“ರಾಹುಲ್ ಗಾಂಧಿ ಒಂದು ಸಮುದಾಯವನ್ನೇ ಅವಮಾನಿಸಿದ್ದಾರೆ. ಅದನ್ನು ಸರಿಪಡಿಸಲು ಅವರಿಗೆ ಅವಕಾಶವಿತ್ತು, ಆದರೆ ಅವರು ಅದನ್ನು ಸರಿಪಡಿಸಲಿಲ್ಲ. ಭಾರತದ ಕಾನೂನು ಎಲ್ಲರಿಗೂ ಸಮಾನವಾಗಿದೆ. ಕಾನೂನು ಎಲ್ಲರಿಗೂ ಕಾನೂನೇ ಎಂದಿದ್ದಾರೆ.
"The law is the law": Union Minister S Jaishankar (@DrSJaishankar) on Rahul Gandhi's disqualification as an MP.
"Rahul Gandhi had an opportunity of rectifying the situation, of expressing regret. He chose not to do so," he adds
Watch #News18RisingIndia LIVE | @Zakka_Jacob pic.twitter.com/ODh4GEiVKf
— News18 (@CNNnews18) March 29, 2023
2019ರಲ್ಲಿ ರಾಹುಲ್ ಗಾಂಧಿ "ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ?" ಎಂಬ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ದೂರು ನೀಡಿ, ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ತೀರ್ಪು ಗುರುವಾರ ಹೊರಬಿದ್ದಿದ್ದು, ರಾಹುಲ್ ಗಾಂಧಿಗೆ ಸೂರತ್‌ನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದೀಗ ಶುಕ್ರವಾರ ಅವರ ಸಂಸದ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.
ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿ ಅವರಿಗೆ ನೋಟಿಸ್
ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 22 ರೊಳಗೆ ತಮಗೆ ಮಂಜೂರಾಗಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕೂಡ ನೀಡಲಾಗಿದೆ. ಈ ಬೆಳವಣಿಗೆಯು ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ಈ ವಿಷಯದ ಬಗ್ಗೆ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಅದರ ಮಿತ್ರಪಕ್ಷಗಳ ನಡುವಿನ ರಾಜಕೀಯ ಹೋರಾಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ