Coronavirus: ಶೀಘ್ರದಲ್ಲಿಯೇ ದೇಶದ ಎಲ್ಲರಿಗೂ ಕೊರೋನಾ ಲಸಿಕೆ ; ಸಚಿವ ಹರ್ಷವರ್ಧನ್​

ಕೊರೋನಾ ವೈರಸ್​ ವಿರುದ್ಧ ಕಡಿಮೆ ಸಮಯದಲ್ಲಿಯೇ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಭಾತದ ಉತ್ತಮ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಲಸಿಕೆ ದೇಶದ ಪ್ರತಿಯೊಬ್ಬರಿಗೂ ಲಭ್ಯವಾಗಲಿದೆ

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​

 • Share this:
  ಚೆನ್ನೈ (ಜ. 8): ಮುಂದಿನ ಕೆಲವೇ ದಿನಗಳಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಕೋವಿಡ್​ ಲಸಿಕೆ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ. ಎರಡನೇ ಹಂತದ ಕೊರೋನಾ ಲಸಿಕೆ ವಿತರತಣೆ ತಾಲೀಮಿನ ಹಿನ್ನಲೆ ಮಾತನಾಡಿದ ಅವರು, ರಾಷ್ಟ್ರಮಟ್ಟದಿಂದ ತಳಮಟ್ಟದವರೆಗೆ ಈ ಲಸಿಕೆ ಕಾರ್ಯಕ್ರಮದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಸರ್ಕಾರ ನೀಡಲಿದೆ ಎಂದು ಅವರು ತಿಳಿಸಿದರು. ಈ ಲಸಿಕೆ ವಿತರಣೆಯಲ್ಲಿ ಆರೋಗ್ಯ ಸೇವೆ ಕಾರ್ಯಕರ್ತರು ಹಾಗೂ ಫ್ರಂಟ್​ಲೈನ್​ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಎರಡನೇ ಸುತ್ತಿನ ಲಸಿಕೆ ತಾಲೀಮು ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ಚೆನ್ನೈನ ಸರ್ಕಾರಿ ಜನರಲ್​ ಆಸ್ಪತ್ರೆಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಕೊರೋನಾ ವೈರಸ್​ ವಿರುದ್ಧ ಕಡಿಮೆ ಸಮಯದಲ್ಲಿಯೇ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಭಾತದ ಉತ್ತಮ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಲಸಿಕೆಯನ್ನು ದೇಶದ ಪ್ರತಿಯೊಬ್ಬರಿಗೂ ನೀಡಲಾಗುವುದು. ಅದಕ್ಕೆ ಮೊದಲು ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ಲಭ್ಯವಾಗಲಿದೆ. ಈ ಲಸಿಕೆ ವಿತರಣೆ ತಾಲೀಮಿನ ತರಬೇತಿಗೆ ಲಕ್ಷಾಂತ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ, ಇನ್ನು ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.  ತಮಿಳುನಾಡಿನಲ್ಲಿರುವ ಸಚಿವರು, ಚೆನ್ನೈನ ಒಮಾಂಡುರಾರ್​ ಆಸ್ಪತ್ರೆ, ಅಪೊಲೋ, ಚೆಂಗಲ್​ಪಟ್ಟು ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ವಿತರಣಾ ತಾಲೀಮು ವೀಕ್ಷಿಸಲಿದ್ದಾರೆ. ಎರಡನೇ ಹಂತದ ಲಸಿಕೆ ತಾಲೀಮನ್ನು 763 ಜಿಲ್ಲೆಗಳಲ್ಲಿ ನಡೆಯುತ್ತಿದೆ.

  ಇದೇ ವೇಳೆ ತಮಿಳುನಾಡು ಸರ್ಕಾರ ಮತ್ತು ಅದರ ಆರೋಗ್ಯ ಇಲಾಖೆ ಕೊವೀಡ್​ ವಿರುದ್ಧ ಅನುಸರಿಸುತ್ತಿರುವ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
  Published by:Seema R
  First published: