ಜನರು ಓಲಾ, ಊಬರ್​ ಬಳಸುತ್ತಿರುವುದರಿಂದ ಆಟೋಮೊಬೈಲ್​ ಉದ್ಯಮ ಕುಸಿದಿದೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವ್ಯಾಖ್ಯಾನ

ಕಾರು ಮಾರಾಟ ಉದ್ಯಮ ಪ್ರಪಾತಕ್ಕೆ ಕುಸಿದಿದೆ. ಈ ವರ್ಷ ಪ್ರಯಾಣಿಕರ ವಾಹನ ಮಾರಾಟ ಪ್ರಮಾಣ ಶೇ.30.9ರಷ್ಟು ಕುಸಿತ ಕಂಡಿದೆ. ಕಳೆದ ಆಗಸ್ಟ್​ ತಿಂಗಳಿನಲ್ಲಿ 1,95,558 ಯೂನಿಟ್​ಗಳ ಉತ್ಪಾದನೆಯಾಗಿದ್ದರೆ, ಕಳೆದ ವರ್ಷದ ಇದೇ ಸಮಯದಲ್ಲಿ 2,82,809 ಯೂನಿಟ್​ಗಳು ಉತ್ಪಾದನೆಯಾಗಿದ್ದವು.

HR Ramesh | news18-kannada
Updated:September 10, 2019, 10:02 PM IST
ಜನರು ಓಲಾ, ಊಬರ್​ ಬಳಸುತ್ತಿರುವುದರಿಂದ ಆಟೋಮೊಬೈಲ್​ ಉದ್ಯಮ ಕುಸಿದಿದೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವ್ಯಾಖ್ಯಾನ
ನಿರ್ಮಲಾ ಸೀತಾರಾಮನ್
HR Ramesh | news18-kannada
Updated: September 10, 2019, 10:02 PM IST
ಆಟೋಮೊಬೈಲ್ ವಲಯ ಕಳೆದ ಎರಡು ದಶಕಗಳ ಹಿಂದಿನ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಜೊತೆಗೆ ವಹಿವಾಟು ತೀವ್ರ ಪ್ರಮಾಣದಲ್ಲಿ ಕುಸಿದಿರುವುದರಿಂದ ಕಂಪನಿಗಳಲ್ಲಿ ಕೆಲಸಗಾರರನ್ನು ತೆಗೆದುಹಾಕಲಾಗುತ್ತಿದೆ. ಕಾರು ಖರೀದಿದಾರರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದರು ಕೊಳ್ಳುವವರ ಸಂಖ್ಯೆ ಮಾತ್ರ ಗಣನೀಯವಾಗಿ ಕುಸಿದಿದ್ದು, ಆಟೋಮೊಬೈಲ್ ಉದ್ಯಮ ನೆಲಕಚ್ಚುವಂತೆ ಆಗಿದೆ.

ಆಟೋಮೊಬೈಲ್​ ಉದ್ಯಮ ಕುಸಿತಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕಾರಣವನ್ನು ಹುಡುಕಿದ್ದಾರೆ. ಯಾಕೆ ಈ ಉದ್ಯಮ ಈ ಪರಿಯಾಗಿ ನೆಲಕಚ್ಚಿದೆ ಎಂಬುದನ್ನು ಅವರು ಹೀಗೆ ವಿವರಿಸಿದ್ದಾರೆ.

ಇಂದಿನ ಪೀಳಿಗೆ  ಸ್ವಂತ ವಾಹನ ಖರೀದಿಸಿ, ಇಎಂಐ ಗೆ ಸಿಲುಕಿಕೊಳ್ಳಲು ಇಚ್ಛಿಸದೆ, ಓಲಾ, ಊಬರ್​ ಅಂತಹ ಟ್ಯಾಕ್ಸಿ ಸರ್ವಿಸ್​ಗಳನ್ನು ಹಾಗೂ ಮೆಟ್ರೋ ಓಡಾಟವನ್ನು ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಅವರು ಕಾರುಗಳನ್ನು ಖರೀದಿಸುತ್ತಿಲ್ಲ. ಇದರಿಂದ ಆಟೋಮೊಬೈಲ್​ ಉದ್ಯಮ ಕುಸಿದಿದೆ ಎಂದು ನಿರ್ಮಲಾ ಸೀತಾರಾಮನ್​ ವಿವರಿಸಿದ್ದಾರೆ.

ಇದನ್ನು ಓದಿ: ಭಾರತ-ನೇಪಾಳ ನಡುವಿನ ದಕ್ಷಿಣ ಏಷ್ಯಾದ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಪೈಪ್​ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ

ಆಟೋ ಮೊಬೈಲ್​ ಉದ್ಯಮ ಕುಸಿಯಲು ಇದು ಒಂದು ಅಂಶ ಕಾರಣವಾಗಿದೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್​ ಅವರು, ನೋಂದಣಿ ಶುಲ್ಕ ಹೆಚ್ಚಳ ಪ್ರಸ್ತಾವನೆ ಅಂಶ ಕೂಡ ಇದಕ್ಕೆ ಕಾರಣವಾಗಿದೆ. ಉದ್ಯಮದ ಉತ್ತೇಜನಕ್ಕೆ ಸರ್ಕಾರ ಶೀಘ್ರದಲ್ಲಿಒ ಅತಿದೊಡ್ಡ ಘೋಷಣೆ ಹೊರಡಿಸಲಿದೆ ಎಂದು ಇದೇ ವೇಳೆ ಸಚಿವರ ಭರವಸೆ ನೀಡಿದರು.ಕಾರು ಮಾರಾಟ ಉದ್ಯಮ ಪ್ರಪಾತಕ್ಕೆ ಕುಸಿದಿದೆ. ಈ ವರ್ಷ ಪ್ರಯಾಣಿಕರ ವಾಹನ ಮಾರಾಟ ಪ್ರಮಾಣ ಶೇ.30.9ರಷ್ಟು ಕುಸಿತ ಕಂಡಿದೆ. ಕಳೆದ ಆಗಸ್ಟ್​ ತಿಂಗಳಿನಲ್ಲಿ 1,95,558 ಯೂನಿಟ್​ಗಳ ಉತ್ಪಾದನೆಯಾಗಿದ್ದರೆ, ಕಳೆದ ವರ್ಷದ ಇದೇ ಸಮಯದಲ್ಲಿ 2,82,809 ಯೂನಿಟ್​ಗಳು ಉತ್ಪಾದನೆಯಾಗಿದ್ದವು.

First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...