Milk Bath: ಚರಂಡಿಗಿಳಿದು ಕ್ಲೀನ್ ಮಾಡಿದ ಜನಪ್ರತಿನಿಧಿಗೆ ಹಾಲಿನ ಅಭಿಷೇಕ.. ವೈರಲ್ ಆದ ವಿಡಿಯೋ

ತುಂಬಿ ಹರಿಯುವ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು. ಎದೆಯೆತ್ತರಕ್ಕೆ ಚರಂಡಿ ನೀರು ಇದ್ದರೂ, ಕಸವನ್ನು ತೆಗೆದು ಹಾಕಿದ್ದಾರೆ. ಈ ರೀತಿ ಕ್ಲೀನ್​ ಮಾಡಿದ ಬಳಿಕ ಹಸೀಬ್ ಅವರ ಮೇಲೆ ಲೀಟರ್​ ಗಟ್ಟಲೆ ಹಾಲು ಸುರಿಯಲಾಗಿದೆ.

ಚರಂಡಿ ಕ್ಲೀನ್​ ಮಾಡಿದ್ದಕ್ಕೆ ಹಾಲಿನ ಅಭಿಷೇಕ

ಚರಂಡಿ ಕ್ಲೀನ್​ ಮಾಡಿದ್ದಕ್ಕೆ ಹಾಲಿನ ಅಭಿಷೇಕ

  • Share this:
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪಾಲಿಕೆ ಫೈಟ್​ ಜೋರಾಗಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆ (Delhi Municipal Elections) ಸಂಬಂಧ ಆಪ್​ (AAP) ಹಾಗೂ ಬಿಜೆಪಿ (BJP) ಮಧ್ಯೆ ಜಟಾಪಟಿ ಶುರುವಾಗಿದೆ. ಇದೇ ಸಮಯದಲ್ಲಿ ಆಮ್​ ಆದ್ಮಿ ಪಕ್ಷದ ಪಾಲಿಕೆ ಸದಸ್ಯ ನಾಟಕೀಯ ಘಟನೆಯಿಂದ ಸುದ್ದಿಯಾಗಿದ್ದಾರೆ. ತುಂಬಿ ಹರಿಯುತ್ತಿದ್ದ ಚರಂಡಿಗೆ (Overflowing Sewage) ಇಳಿದು ಸ್ವಚ್ಛತಾ ಕಾರ್ಯ ಕೈಗೊಂಡ ಕೌನ್ಸಿಲರ್​ಗೆ (AAP councillor) ನಂತರ ಹಾಲಿನ ಅಭಿಷೇಕ (Milk Bath) ಮಾಡಲಾಗಿದೆ. ಪೂರ್ವ ದೆಹಲಿಯ ಎಎಪಿ ಕೌನ್ಸಿಲರ್ ಹಸೀಬ್-ಉಲ್-ಹಸನ್(Haseeb-ul-Hasan), ಶಾಸ್ತ್ರಿ ಪಾರ್ಕ್‌ನಲ್ಲಿ ತುಂಬಿ ಹರಿಯುವ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು. ಎದೆಯೆತ್ತರಕ್ಕೆ ಚರಂಡಿ ನೀರು ಇದ್ದರೂ, ಕಸವನ್ನು ತೆಗೆದು ಹಾಕಿದ್ದಾರೆ. ಈ ರೀತಿ ಕ್ಲೀನ್​ ಮಾಡಿದ ಬಳಿಕ ಹಸೀಬ್ ಅವರ ಮೇಲೆ ಲೀಟರ್​ ಗಟ್ಟಲೆ ಹಾಲು ಸುರಿಯಲಾಗಿದೆ.

ಇದನ್ನೂ ಓದಿ: BJP ಗೆದ್ದರೆ ರಾಜಕೀಯವನ್ನೇ ತೊರೆಯುವೆ.. ದೆಹಲಿ ಸಿಎಂ ಕೇಜ್ರಿವಾಲ್ ಸವಾಲನ್ನು ಸ್ವೀಕರಿಸುತ್ತಾ ಕೇಸರಿ ಪಕ್ಷ?

ಸಿನಿಮೀಯ ಶೈಲಿಯಲ್ಲಿ ಹಾಲಿನ ಸ್ನಾನ..!

ಹಸೀಬ್ ಬೆಂಬಲಿಗರು ಅವರಿಗೆ ಹಾಲಿನಲ್ಲಿ ಸ್ನಾನ ಮಾಡಿಸಿರುವುದು ಹಿಂದಿ ಸಿನಿಮಾವನ್ನು ನೆನಪಿಸಿದೆ. ಬಾಲಿವುಡ್ ಚಲನಚಿತ್ರ "ನಾಯಕ್" ನಲ್ಲಿ ನಟ ಅನಿಲ್ ಕಪೂರ್ ಅವರ ಶೈಲಿಯಲ್ಲಿ ಹಾಲಿನ ಸ್ನಾನದ ವೀಡಿಯೊಗಳು ವೈರಲ್​​ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಎಪಿಯ ನಾಮನಿರ್ದೇಶಿತ ಕೌನ್ಸಿಲರ್ ಹಸೀಬ್, ಚರಂಡಿ ತುಂಬಿ ಹರಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ, ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹಾಯ ಮಾಡಿಲ್ಲ ಎಂದು ಸ್ಥಳೀಯರು ನನಗೆ ಹೇಳಿದರು. ಆದ್ದರಿಂದ ನಾನೇ ಚರಂಡಿಗೆ ಇಳಿದು ಕ್ಲೀನ್​ ಮಾಡಿದ್ದೇನೆ ಎಂದು ತಿಳಿಸಿದರು.

ದೆಹಲಿ ಕಾರ್ಪೊರೇಷನ್​ ಕಾದಾಟ

2015 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದ ಎಎಪಿ, ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ (ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್) ಚುನಾವಣೆಯನ್ನು ದೆಹಲಿ ರಾಜ್ಯ ಚುನಾವಣಾ ಆಯೋಗ ಮುಂದೂಡಿದ ನಂತರ ಬಿಜೆಪಿ ವಿರುದ್ಧ ಧ್ವನಿ ಎತ್ತಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಾಲೆಗಳನ್ನು ಮುಚ್ಚಿಸಿದ Taliban.. ಅಳುತ್ತ ಹೊರ ನಡೆದ ವಿದ್ಯಾರ್ಥಿನಿಯರು!

ಉತ್ತರ ಮತ್ತು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಗಳಲ್ಲಿ ತಲಾ 104 ವಾರ್ಡ್‌ಗಳಿವೆ. ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ 64 ವಾರ್ಡ್‌ಗಳನ್ನು ಹೊಂದಿದೆ. ಈ ಮೂರು ಪ್ರಸ್ತುತ ಬಿಜೆಪಿಯ ಆಡಳಿತದಲ್ಲಿದೆ.  ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ವಿಲೀನಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯು ದೇಶದ ರಾಜಧಾನಿಯಲ್ಲಿ ಉನ್ನತ ಮಟ್ಟದ ನಾಗರಿಕ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಎಎಪಿ ನಡುವೆ ನಡೆಯುತ್ತಿರುವ ರಾಜಕೀಯ ಜಟಾಪಟಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಬಿಜೆಪಿ ವಿರುದ್ಧ ಆಪ್​​ ಆಕ್ರೋಶ

ಎಎಪಿ ಮಸೂದೆ ಮಂಡನೆಯ ನಿರ್ಧಾರವನ್ನು ಪ್ರಶ್ನಿಸಿದೆ, ಇದು ನಾಗರಿಕ ಚುನಾವಣೆಯನ್ನು ಹಳಿತಪ್ಪಿಸುವ ಸಾಧ್ಯತೆಯಿದೆ. ಪೌರ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಬೇಡಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.  "ಪ್ರಧಾನಿ, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ನೀವು ಇರುವುದಿಲ್ಲ, ನಾನು ಕೂಡ ಇರುವುದಿಲ್ಲ. ಆದರೆ ದೇಶದ ಸಂಸ್ಥೆಗಳನ್ನು ದುರ್ಬಲಗೊಳಿಸಬೇಡಿ. ಎಂಸಿಡಿ ಚುನಾವಣೆಗಳನ್ನು ಮುಂದೂಡಬೇಡಿ" ಎಂದು ಕೇಜ್ರಿವಾಲ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಇದನ್ನು AAP ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ.
Published by:Kavya V
First published: