ಫಿಲಿಪ್ಪೈನ್ಸ್​ನಲ್ಲಿ ವಿಮಾನ ದುರಂತ; 85 ಮಂದಿ ಇದ್ದ ಮಿಲಿಟರಿ ವಿಮಾನ ಅಪಘಾತ

ಫಿಲಿಪ್ಪೈನ್ಸ್​ನ ಸುಲು ಪ್ರಾಂತ್ಯದಲ್ಲಿರುವ ಜೋಲೋ ದ್ವೀಪದಲ್ಲಿ ಸೈನಿಕರನ್ನು ಸಾಗಿಸುತ್ತಿದ್ದಾಗ ವಿಮಾನವೊಂದು ರನ್ ವೇ ತಪ್ಪಿ ಅಪಘಾತಗೊಂಡಿದೆ. ಅದರಲ್ಲಿ 85 ಜನರಿದ್ದುದು ತಿಳಿದುಬಂದಿದೆ.

ಫಿಲಿಪ್ಪೈನ್ಸ್ ವಿಮಾನ ದುರಂತ

ಫಿಲಿಪ್ಪೈನ್ಸ್ ವಿಮಾನ ದುರಂತ

  • News18
  • Last Updated :
  • Share this:
ಮನಿಲಾ, ಫಿಲಿಪ್ಪೈನ್ಸ್ (ಜುಲೈ 04): ಫಿಲಿಪ್ಪೈನ್ಸ್ ದೇಶದ ದಕ್ಷಿಣ ಭಾಗದಲ್ಲಿರುವ ಸುಲು ಪ್ರಾಂತ್ಯದ ದ್ವೀಪವೊಂದರಲ್ಲಿ ಮಿಲಿಟರಿ ವಿಮಾನವೊಂದು ಲ್ಯಾಂಡಿಂಗ್ ಮಾಡುವಾಗ ಅಪಘಾತವಾದ ಘಟನೆ ಸಂಭವಿಸಿದೆ. ಅಪಘಾತಕ್ಕೊಳಗಾದ ವಿಮಾನವು ಫಿಲಿಪ್ಪೈನ್ಸ್​ನ ಮಿಲಿಟರಿಗೆ ಸೇರಿದ C-130 ಸಾಗಣೆ ವಿಮಾನವಾಗಿದೆ. ಜೋಲೋ ದ್ವೀಪದ ಬಳಿ ಬೆಳಗ್ಗೆ 11:30ರ ಸುಮಾರಿಗೆ ಈ ದುರಂತ ಸಂಭವಿಸಿದಾಗ ವಿಮಾನದಲ್ಲಿ 85 ಮಂದಿ ಇದ್ದರೆಂಬ ಮಾಹಿತಿ ಇದೆ. ಆದರೆ, ಸಾವನ್ನಪ್ಪಿದವರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈ ವರದಿ ಬರೆಯುವ ವೇಳೆಗೆ 40 ಮಂದಿಯನ್ನು ರಕ್ಷಿಸಿರುವ ಮಾಹಿತಿ ಅಲ್ಲಿನ ಅಧಿಕಾರಿಗಳಿಂದ ತಿಳಿದುಬಂದಿದೆ.

ವಿಮಾನ ಇಳಿಯುವಾಗ ರನ್ ವೇ ತಪ್ಪಿ ಹೋಗಿದ್ದು ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. “ಮಿಂದನಾವೋ ದ್ವೀಪದಿಂದ ಸೈನಿಕ ತುಕಡಿಗಳನ್ನ ಹೊತ್ತು ಹೋದ ಈ ವಿಮಾನ ರನ್ ವೇ ಅನ್ನು ತಪ್ಪಿದೆ. ಈ ಘಟನೆ ಬಹಳ ವಿಷಾದಕರ. ರಕ್ಷಣಾ ಕಾರ್ಯಕರ್ತರು ಸ್ಥಳದಲ್ಲಿದ್ದು ಕಾರ್ಯಾಚರಣೆ ನ ಡೆಸಿದ್ದಾರೆ. ಸದ್ಯ 40 ಮಂದಿಯನ್ನ ರಕ್ಷಿಇಸಿ ಸಮೀಪದ 11ನೇ ಇನ್​ಫ್ಯಾಂಟ್ರಿ ಡಿವಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಇನ್ನೂ ಹೆಚ್ಚು ಜನರನ್ನ ರಕ್ಷಿಸಲು ಸಾಧ್ಯವಾಗುವಂತೆ ಪ್ರಾರ್ಥಿಸುತ್ತಿದ್ದೇವೆ” ಎಂದು ಸೇನಾಧಿಕಾರಿ ಜನರಲ್ ಸಿರಿಲಿಟೊ ಸೇಬೆಜನ ಹೇಳಿದರೆಂದು ಎಎಫ್​ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಮಾನದಲ್ಲಿದ್ದವರಲ್ಲಿ ಅನೇಕರು ಇತ್ತೀಚೆಗಷ್ಟೇ ಮಿಲಿಟರಿ ತರಬೇತಿ ಪಡೆದು ಬಂದವರಾಗಿದ್ದರು. ಭಯೋತ್ಪಾದಕ ಚಟುವಟಿಕೆ ಹೆಚ್ಚು ಇರುವ ದಕ್ಷಿಣ ಭಾಗದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಜಂಟಿ ಕಾರ್ಯ ಪಡೆಗೆ ಇವರನ್ನ ನಿಯೋಜಿಸಲಾಗಿತ್ತೆನ್ನಲಾಗಿದೆ.

ಇದನ್ನೂ ಓದಿ: Drone Attack| ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಡ್ರೋನ್ ಪತ್ತೆ; ಗಡಿಯಲ್ಲಿ ಕಟ್ಟೆಚ್ಚರ, ಹೆಚ್ಚುವರಿ ಸೇನೆ ನಿಯೋಜನೆ!

ಫಿಲಿಪ್ಪೈನ್ಸ್​ನ ದಕ್ಷಿಣ ಭಾಗದಲ್ಲಿ ಬಹಳಷ್ಟು ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಇವುಗಳಲ್ಲಿ ಕುಖ್ಯಾತವಾದ ಅಬು ಸಯ್ಯಾಫ್ ಎಂಬ ಸಂಘಟನೆಯೂ ಒಂದು. ಭಯೋತ್ಪಾದನೆ ಹೆಚ್ಚಿರುವ ಕಾರಣ ಇಲ್ಲಿ ಫಿಲಿಪ್ಪೈನ್ಸ್ ಸೇನಾ ಉಪಸ್ಥಿತಿ ಹೆಚ್ಚಿದೆ.

ಇನ್ನು, ಕಳೆದ ತಿಂಗಳಷ್ಟೇ ಫಿಲಿಪ್ಪೈನ್ಸ್ ಹೆಲಿಕಾಪ್ಟರ್ ಅಪಘಾತ ಘಟನೆಯನ್ನ ಕಂಡಿತ್ತು. ರಾತ್ರಿ ಹೊತ್ತು ತರಬೇತಿ ನೀಡುತ್ತಿದ್ದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಎಲ್ಲಾ ಆರು ಮಂದಿ ಅಸುನೀಗಿದ್ದರು. ಇದು ಮನೀಲಾದ ಉತ್ತರ ಭಾಗದಲ್ಲಿರುವ ಕಣಿವೆಯೊಂದರಲ್ಲಿ ಸಂಭವಿಸಿದ ದುರಂತ. ಮೂವರು ಪೈಲಟ್​ಗಳು ಹಾಗೂ ಮೂವರು ಸೈನಿಕರು ಆ ಹೆಲಿಕಾಪ್ಟರ್​ನಲ್ಲಿದ್ದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: