ಛಾಯಾಗ್ರಾಹಕ ದಾನಿಶ್​ ಸಿದ್ದಿಕಿಯನ್ನು ಹುಡುಕಿ ಹೀನಾಯವಾಗಿ ಕೊಂದ ತಾಲಿಬಾನ್​ ಉಗ್ರರು?

ರೊಹಿಂಗ್ಯಾ ಬಿಕ್ಕಟ್ಟನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ರಾಯಿಟರ್ಸ್ ತಂಡದ ಭಾಗವಾಗಿದ್ದ ಸಿದ್ದಿಕಿ ಅವರು 2018 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಅಫ್ಘಾನಿಸ್ತಾನ ಸಂಘರ್ಷ, ಹಾಂಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನ ಇತರ ಪ್ರಮುಖ ಘಟನೆಗಳನ್ನು ವ್ಯಾಪಕವಾಗಿ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದರು.

ಫೋಟೋ ಜರ್ನಲಿಸ್ಟ್ ದಾನಿಶ್​ ಸಿದ್ದಿಕಿ

ಫೋಟೋ ಜರ್ನಲಿಸ್ಟ್ ದಾನಿಶ್​ ಸಿದ್ದಿಕಿ

 • Share this:
  ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ  ಕೊಲ್ಲಲ್ಪಟ್ಟಿಲ್ಲ, ಅಥವಾ ಗುಂಡಿನ ಚಕಮಕಿ ವೇಳೆ ಯಾವುದೇ ಗಾಯಗಳಾಗಿ ಅವರು ಸತ್ತುಲ್ಲ, ಬದಲಾಗಿ ಅವರನ್ನು ಉದ್ದೇಶ ಪೂರ್ವಕವಾಗಿ ಕೊಲ್ಲಾಗಿದೆ,  ಅವರ ಗುರುತನ್ನು ಪರಿಶೀಲಿಸಿದ ನಂತರವು ತಾಲಿಬಾನ್‌ ಉಗ್ರರಿಂದ "ಕ್ರೂರವಾಗಿ ಕೊಲ್ಲಲ್ಪಟ್ಟನು" ಎಂದು ಯುಎಸ್ ಮೂಲದ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

  ಕಳೆದ ಜೂನ್​ 16 ಗುರುವಾರದಂದು 38 ವರ್ಷದ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ಅವರು ನಿಧನರಾದರು. ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಪ್ರಾಂತ್ಯದಲ್ಲಿ ನಡೆದ ಅಫಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಘರ್ಷಣೆಯನ್ನು ವರದಿ ಮಾಡಲು ಹೋಗಿದ್ದಂತಹ ಸಿದ್ದಿಕಿ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು, ಆದರೆ ಈ ನಿಯತಕಾಲಿಕೆ ಇದನ್ನು ತಳ್ಳಿಹಾಕಿದೆ.

  ವಾಷಿಂಗ್ಟನ್ ಎಕ್ಸಾಮಿನರ್ ವರದಿಯ ಪ್ರಕಾರ, ಸಿದ್ದಿಕಿ ಅಫ್ಘಾನ್ ರಾಷ್ಟ್ರೀಯ ಸೇನಾ ತಂಡದೊಂದಿಗೆ ಸ್ಪಿನ್ ಬೋಲ್ಡಾಕ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದರು. ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ  ಗಡಿ ದಾಟುವಿಕೆಯನ್ನು ನಿಯಂತ್ರಿಸಲು ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಹೋರಾಟವನ್ನು ಇದೇ ವೇಳೆ ಸಿದ್ದಿಕಿ ಸೆರೆ ಹಿಡಿಯಲು ಜಾಗಕ್ಕೆ ತೆರಳಿದ್ದರು. ಗಡಿ ಪ್ರದೇಶ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವಾಗ ದಾಳಿ ನಡೆಸಿದ್ದ ತಾಲಿಬಾನ್​ ಉಗ್ರರು ಮಿಲಿಟರಿ ಪಡೆಯನ್ನು ವಿಭಜಿಸಿತು, ಕಮಾಂಡರ್ ಮತ್ತು ಕೆಲವು ಇತರ ವ್ಯಕ್ತಿಗಳು ಸಿದ್ದಿಕಿಯಿಂದ ಬೇರ್ಪಟ್ಟರು, ತದ ನಂತರ ಅವರು ಇತರ ಮೂರು ಅಫ್ಘಾನ್ ಪಡೆಗಳೊಂದಿಗೆ ಉಳಿದುಕೊಂಡರು.

  ಈ ದಾಳಿಯ ಸಮಯದಲ್ಲಿ, ಗುಂಡುಗಳು ಸಿದ್ದಿಕಿ ಅವರಿಗೆ ತಗುಲಿದವು, ಇದರಿಂದ ಗಾಯಗೊಂಡ ಅವರು ಮತ್ತು ಅವರ ತಂಡವು ಸ್ಥಳೀಯ ಮಸೀದಿಗೆ ಹೊಕ್ಕರು, ಅಲ್ಲಿ ಅವರು ಪ್ರಥಮ ಚಿಕಿತ್ಸೆ ಪಡೆದರು. ಆದರೆ ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನ್ ದಾಳಿ ಅಲ್ಲಿಗೂ ಮಾಡಿತು. ಸ್ಥಳೀಯ ಪತ್ರಿಕೆ ವರದಿ ಪ್ರಕಾರ ತಾಲಿಬಾನ್ ಮಸೀದಿಯ ಮೇಲೆ ದಾಳಿ ಮಾಡಿದ್ದಲ್ಲದೆ, ಅಲ್ಲಿ ಸಿದ್ದಿಕಿ ಇರುವ ಕಾರಣ ಮಾತ್ರ ದಾಳಿ ನಡೆಸಿತು ಎಂದು ವರದಿ ತಿಳಿಸಿದೆ. ತಾಲಿಬಾನ್ ಅವರನ್ನು ವಶಪಡಿಸಿಕೊಂಡಾಗ ಸಿದ್ದಿಕಿ ಜೀವಂತವಾಗಿದ್ದರು. ತಾಲಿಬಾನ್ ಸಿದ್ದಿಕಿ ಅವರ ಗುರುತನ್ನು ಪರಿಶೀಲಿಸಿತು ಮತ್ತು ನಂತರ ಆತನನ್ನು ಮತ್ತು ಆತನ ಜೊತೆಗಿದ್ದವರನ್ನು ಸಾಯಿಸಿತು. ಕಮಾಂಡರ್ ಮತ್ತು ಅವರ ತಂಡದ ಉಳಿದವರು ಆತನನ್ನು ರಕ್ಷಿಸಲು ಪ್ರಯತ್ನಿಸಿದರು ಆದರೆ ಅವರು ಸಹ ಈ ಹೋರಾಟದಲ್ಲಿ ಮೃತಪಟ್ಟರು ಎಂದು ವರದಿ ಹೇಳಿದೆ.

  ವ್ಯಾಪಕವಾಗಿ ಹರಿದಾಡಿದ ಫೋಟೋವು ಸಿದ್ದಿಕಿ ಅವರ ಮುಖವನ್ನು ಹೋಲುತ್ತಿತ್ತು, ಆ ಫೋಟೊವನ್ನು ನಾನು ಇತರ ಛಾಯಾಚಿತ್ರಗಳ ಜೊತೆ ಹೋಲಿಕೆ ಮಾಡಿ ಪರಿಶೀಲಿಸಿದೆ. ಮತ್ತು ಸಿದ್ದಿಕಿ ಅವರ ದೇಹದ ವೀಡಿಯೊವನ್ನು ಭಾರತ ಸರ್ಕಾರದ ಮೂಲವೊಂದು ನನಗೆ ಒದಗಿಸಿತ್ತು, ಅದರಲ್ಲಿ ತಾಲಿಬಾನ್ ಸಿದ್ದಿಕಿ ಅವರ ತಲೆಯ ಸುತ್ತಲೂ ಮೊದಲು ಹೊಡೆದು ನಂತರ ಅವರ ದೇಹಕ್ಕೆ ಮನಬಂದಂತೆ ಗುಂಡುಗಳನ್ನು ಹೊಡೆಯಲಾಯಿತು ಎಂದು ಬರಹಗಾರ, ಅಮೇರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಹಿರಿಯ ಸಹವರ್ತಿ ಮೈಕೆಲ್ ರೂಬಿನ್ ಅವರು ಹೆಳಿದ್ದಾರೆ . ತಾಲಿಬಾನಿಗಳು ಸಿದ್ದಿಕಿಯನ್ನು ಬೇಟೆಯಾಡಿ, ನಂತರ ಅವರ ಶವವನ್ನು ಛಿದ್ರಗೊಳಿಸುವ ನಿರ್ಧಾರವು ಜಾಗತಿಕ ಯುದ್ಧದ ನಿಯಮಗಳನ್ನು ಅಥವಾ ಸಂಪ್ರದಾಯಗಳನ್ನು ಗೌರವಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ರೊಹಿಂಗ್ಯಾ ಬಿಕ್ಕಟ್ಟನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ರಾಯಿಟರ್ಸ್ ತಂಡದ ಭಾಗವಾಗಿದ್ದ ಸಿದ್ದಿಕಿ ಅವರು 2018 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಅಫ್ಘಾನಿಸ್ತಾನ ಸಂಘರ್ಷ, ಹಾಂಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನ ಇತರ ಪ್ರಮುಖ ಘಟನೆಗಳನ್ನು ವ್ಯಾಪಕವಾಗಿ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಸಿದ್ದಿಕಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

  ಇದನ್ನೂ ಓದಿ: ’’ಜೆಡಿಎಸ್​ ಈಗಲೂ ಪ್ರಬಲ ರಾಜಕೀಯ ಶಕ್ತಿ’’ ಎಂದು ಟ್ವೀಟ್​ ಮಾಡಿದ ಅನಂತಕುಮಾರ್​ ಪುತ್ರಿ ವಿಜೇತ

  ಜುಲೈ 18 ರ ಸಂಜೆ ಅವರ ಶವವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ತರಲಾಯಿತು ಮತ್ತು ನಂತರ ಅವರನ್ನು ಜಾಮಿಯಾ ನಗರದಲ್ಲಿರುವ ಅವರ ನಿವಾಸಕ್ಕೆ ಕರೆತರಲಾಯಿತು, ಅಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ಭಾರಿ ಜನಸಮೂಹ ಜಮಾಯಿಸಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: