ಕಾಶ್ಮೀರದಲ್ಲಿ ಬಿಜೆಪಿ ಯುವ ಮುಖಂಡ ಫಿದಾ ಹುಸೇನ್ ಸೇರಿ ಮೂವರ ಹತ್ಯೆ

ಕಾಶ್ಮೀರದ ಕುಲಗಾಮ್ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಫಿದಾ ಹುಸೇನ್ ಸೇರಿದಂತೆ ಮೂವರು ಬಿಜೆಪಿ ಕಾರ್ಯಕರ್ತರನ್ನು ಉಗ್ರಗಾಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.

news18
Updated:October 29, 2020, 10:26 PM IST
ಕಾಶ್ಮೀರದಲ್ಲಿ ಬಿಜೆಪಿ ಯುವ ಮುಖಂಡ ಫಿದಾ ಹುಸೇನ್ ಸೇರಿ ಮೂವರ ಹತ್ಯೆ
ಸಾಂದರ್ಭಿಕ ಚಿತ್ರ
  • News18
  • Last Updated: October 29, 2020, 10:26 PM IST
  • Share this:
ಶ್ರೀನಗರ(ಅ. 29): ಜಮ್ಮು-ಕಾಶ್ಮೀರದಲ್ಲಿ ರಕ್ತಪಾತ ಮುಂದುವರಿದಿದೆ. ಬಿಜೆಪಿ ಯುವ ಮುಖಂಡ ಸೇರಿ ಮೂವರು ವ್ಯಕ್ತಿಗಳನ್ನು ಉಗ್ರರು ಬಲಿಪಡೆದಿರುವ ಘಟನೆ ಕುಲಗಾಮ್ ಪಟ್ಟಣದಲ್ಲಿ ನಡೆದಿದೆ. ಈ ಮೂವರನ್ನು ಉಗ್ರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಕುಲಗಾಮ್​ನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಫಿದಾ ಹುಸೇನ್ ಹಾಗೂ ಬಿಜೆಪಿಯ ಮತ್ತೊಬ್ಬ ಕಾರ್ಯಕರ್ತ ಉಮರ್ ಹಜಮ್ ಮತ್ತು ಒಬ್ಬ ನಾಗರಿಕ ಹತ್ಯೆಯಾದವರು ಎಂದು ಹೇಳಲಾಗಿದೆ. ಬಲಿಯಾದ ಎಲ್ಲಾ ಮೂವರು ವ್ಯಕ್ತಿಗಳು ಬಿಜೆಪಿ ಕಾರ್ಯಕರ್ತರೇ ಎಂದು ಕೆಲ ವರದಿಗಳು ಹೇಳುತ್ತಿವೆ.

ಮೂವರ ಹತ್ಯೆ ಘಟನೆ ಬಗ್ಗೆ ಮಾಜಿ ಸಿಎಂ ಮೆಹಬೂಬ ಮುಫ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. “ಕುಲಗಾಮ್​ನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಕೊಲೆ ಸುದ್ದಿ ಕೇಳಿ ಬೇಸರವಾಯಿತು. ಅವರ ಕುಟುಂಬಕ್ಕೆ ನಮ್ಮ ಸಂತಾಪ ಇದೆ. ಅಂತಿಮವಾಗಿ, ಕೇಂದ್ರ ಸರ್ಕಾರದ ಅರ್ಥಹೀನ ನೀತಿಗಳಿಂದಾಗಿ ಬೆಲೆ ತೆರಬೇಕಾಗಿರುವುದು ಜಮ್ಮು-ಕಾಶ್ಮೀರದ ಜನರೇ” ಎಂದು ಮುಫ್ತಿ ವಿಷಾದಿಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೊತೆ ಸೇರಿದರೂ ಸರಿಯೇ, ಎಸ್​ಪಿ ಸೋಲಿಸುವುದೇ ನಮ್ಮ ಗುರಿ: ಮಾಯಾವತಿ

ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ಬಿಜೆಪಿಯ ಅನೇಕ ಮುಖಂಡರು ಮತ್ತು ಕಾರ್ಯಕರ್ತರನ್ನು ಕೊಲ್ಲಲಾಗಿದೆ. ಜುಲೈ ತಿಂಗಳಲ್ಲಿ ಕಾಶ್ಮೀರದ ಬಿಜೆಪಿ ಮುಖಂಡ ಶೇಖ್ ವಾಸಿಂ ಬಾರಿ ಮತ್ತವರ ಕುಟುಂಬದ ಇಬ್ಬರು ಸದಸ್ಯರನ್ನು ಉಗ್ರರು ಬಲಿಪಡೆದಿದ್ದರು. ಬಂಡೀಪೂರಾ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿದ್ದ ವಾಸೀಂ ಬಾರಿ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದರು.
Published by: Vijayasarthy SN
First published: October 29, 2020, 10:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading