ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಕುಟುಂಬಗಳ ಐವರು ಸದಸ್ಯರನ್ನು ಅಪಹರಿಸಿದ ಭಯೋತ್ಪಾದಕರು

news18
Updated:August 31, 2018, 8:54 AM IST
ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಕುಟುಂಬಗಳ ಐವರು ಸದಸ್ಯರನ್ನು ಅಪಹರಿಸಿದ ಭಯೋತ್ಪಾದಕರು
news18
Updated: August 31, 2018, 8:54 AM IST
ನ್ಯೂಸ್ 18 ಕನ್ನಡ

ಶ್ರೀನಗರ (ಆ.31):  ದಕ್ಷಿಣ ಕಾಶ್ಮೀರದ ಹಲವು ಭಾಗಗಳಲ್ಲಿ ಗುರುವಾರ ರಾತ್ರಿ ಭಯೋತ್ಪಾದಕರು ಪೊಲೀಸ್ ಕುಟುಂಬಗಳ ಸದಸ್ಯರನ್ನು ಅಪಹರಿಸಿದ್ದಾರೆ.

ಅಪಹರಣ ಸಂಬಂಧ ಪೊಲೀಸರು ತಕ್ಷಣವೇ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಮತ್ತು ಅಪಹರಣಕ್ಕೆ ಯತ್ನಿಸಿದ್ದರು ಎಂದು ಹೇಳಿದ್ದರು.
ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುವ ಪೊಲೀಸರ ಕುಟುಂಬಗಳ ಐವರು ಸದಸ್ಯರನ್ನು ಉಗ್ರರು ಅಪಹರಿಸಿದ್ದಾರೆ. ಇವರನ್ನು ಶೋಪಿನ್, ಕುಲ್ಗಾಮ್, ಅನಂತ್​ನಾಗ್ ಮತ್ತು ಅವಂತಿಪೊರ್ ನಿಂದ ಅಪಹರಿಸಲಾಗಿದೆ. ಅಪಹರಣಕ್ಕೆ ಒಳಗಾದವರಲ್ಲಿ ಉಪಪೊಲೀಸ್ ವರಿಷ್ಠಾಧಿಕಾರಿಯ ಸಹೋದರನು ಸೇರಿದ್ದಾರೆ.ಬುಧವಾರ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಶೋಪಿನ್ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರಿಗೆ ಸೇರಿದ ಮನೆಗಳನ್ನು ಧ್ವಂಸ ಮಾಡಿದ್ದರು. ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ಪೊಲೀಸರು ಉಗ್ರರಿಂದ ಹತರಾದರು.


Loading...

ಇದೇ ವಿಚಾರವಾಗಿ ಉಗ್ರರು ಸೇಡು ತೀರಿಸಿಕೊಳ್ಳಲು ಬುಧವಾರ ಪೊಲೀಸರ ಸಿಬ್ಬಂದಿಯನ್ನು ಅಪಹರಿಸಿ ಅಮಾನವೀಯವಾಗಿ ದೈಹಿಕ ಹಲ್ಲೆ ನಡೆಸಿ ನಂತರ ಬಿಡುಗಡೆ ಮಾಡಿದ್ದರು.


ಕಳೆದ ಕೆಲ ತಿಂಗಳುಗಳಿಂದ ಜಮ್ಮು-ಕಾಶ್ಮೀರದ ಭದ್ರತಾ ಸಿಬ್ಬಂದಿಯ

ಭದ್ರತಾ ಸಿಬ್ಬಂದಿಯ ಅಪಹರಣ ನಿರಂತರವಾಗಿ ನಡೆಯುತ್ತಿದೆ. ಜೂನ್​ನಲ್ಲಿ ರೈಫಲ್​ಮನ್ ಔರಂಜೇಬ್  ರಾಜ್​ದೋರಿ ಜಿಲ್ಲೆಯಲ್ಲಿ ಈದ್ ಸಂಭ್ರಮಾಚರಣೆ ಮುಗಿಸಿಕೊಂಡು ತನ್ನ ಮನೆಗೆ ತೆರಳುವಾಗ ಉಗ್ರರು ಅಪಹರಿಸಿದ್ದರು. ಒಂದು ದಿನದ ನಂತರ ಆತನ ಬಂದೂಕಿನ ಬುಲೆಟ್​ಗಳು ಹೊಕ್ಕಿದ ಮೃತದೇಹ ಪತ್ತೆಯಾಗಿತ್ತು.

ಜುಲೈ 20ರಂದು ಟ್ರೈನಿ ಕಾನ್​ಸ್ಟೇಬಲ್ ಮೊಹಮ್ಮದ್ ಸಲೀಂ ಶಾ ಕುಲ್ಗಾಮ್ ಜಿಲ್ಲೆಯ ತನ್ನ ಮನೆಯಿಂದ ಅಪಹರಣಕ್ಕೆ ಒಳಗಾಗಿದ್ದರು. ಮಾರನೇ ದಿನ ಇವರ ಮೃತದೇಹ ಪತ್ತೆಯಾಗಿತ್ತು. ಇವರ ದೇಹದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದ ಗುರುತುಗಳು ಇದ್ದವು.

ಆಗಸ್ಟ್ 22ರಂದು ವಿಶೇಷ ಪೊಲೀಸ್ ಅಧಿಕಾರಿ ಫಯಾಜ್ ಅಹ್ಮದ್ ಅವರು ಜಮ್ಮು-ಕಾಶ್ಮೀರದ ಶೋಪಿನ್ ಜಿಲ್ಲೆಯಲ್ಲಿ ಉಗ್ರರಿಂದ ಹತ್ಯೆಗೀಡಾದರು. ಇದೀಗ ಪೊಲೀಸ್ ಕುಟುಂಬದ ಸದಸ್ಯರನ್ನು ಉಗ್ರರು ಅಪಹರಿಸಿದ್ದಾರೆ.

First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ