HOME » NEWS » National-international » MILIND DEORA SHOWERS PRAISE ON AAP AJAY MAKEN ASKS HIM TO LEAVE CONGRESS NOT POST HALF BAKED FACTS SNVS

ಎಎಪಿ ಹೊಗಳಿದ ಮಿಲಿಂದ್ ದಿಯೋರಾ; ಕಾಂಗ್ರೆಸ್ ಬಿಟ್ಟು ಹೋಗಿ ಎಂದ ಅಜಯ್ ಮಾಕನ್

ಪಕ್ಷದ ಹಿರಿಯ ಮುಖಂಡ ಅಜಯ್ ಮಾಕನ್ ಅವರು ತಮ್ಮ ಕಿರಿಯ ಸಹೋದ್ಯೋಗಿಯ ಕಾರ್ಯಕ್ಕೆ ಕೆಂಡಾಮಂಡಲಗೊಂಡಿದ್ಧಾರೆ. ಅರ್ಧಂಬರ್ಧ ಸತ್ಯದ ವಿಚಾರಗಳನ್ನು ಹರಡಬೇಡಿ ಎಂದು ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಅವರು, ಕಾಂಗ್ರೆಸ್ ಬಿಟ್ಟು ಹೋಗುವಂತೆ ಮಿಲಿಂದ್​ರನ್ನು ಆಗ್ರಹಿಸಿದ್ಧಾರೆ.

Vijayasarthy SN | news18
Updated:February 17, 2020, 2:37 PM IST
ಎಎಪಿ ಹೊಗಳಿದ ಮಿಲಿಂದ್ ದಿಯೋರಾ; ಕಾಂಗ್ರೆಸ್ ಬಿಟ್ಟು ಹೋಗಿ ಎಂದ ಅಜಯ್ ಮಾಕನ್
ಅಜಯ್ ಮಾಕನ್
  • News18
  • Last Updated: February 17, 2020, 2:37 PM IST
  • Share this:
ನವದೆಹಲಿ(ಫೆ. 17): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವೀಪ್ ಮಾಡಿ ಗೆದ್ದ ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅಭಿಮಾನಿಗಳು ಹೆಚ್ಚಿರುವಂತಿದೆ. ಸತತ ಮೂರನೇ ಬಾರಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭ ಕೋರುವ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಆಮ್ ಆದ್ಮಿ ಪಕ್ಷದ ಸಾಧನೆಯನ್ನು ಕೊಂಡಾಡಿದ್ದಾರೆ. ಕೇಜ್ರಿವಾಲ್ ನೇತೃತ್ವದ ಸರ್ಕಾರ ಕಳೆದ 5 ವರ್ಷದಲ್ಲಿ ಆದಾಯ ಗಳಿಕೆ ಮಾಡಿದ್ದನ್ನು ಯುವ ಕಾಂಗ್ರೆಸ್ ಮುಖಂಡರು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ. ಆದರೆ, ಕಾಂಗ್ರೆಸ್​ನ ಹಿರಿಯ ಮುಖಂಡ ಅಜಯ್ ಮಾಕನ್ ಅವರು ಈ ಟ್ವೀಟ್​ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಬಿಟ್ಟು ಹೋಗಿ ಎಂದು ಮಿಲಿಂದ್​ಗೆ ಆಗ್ರಹಪಡಿಸಿದ್ಧಾರೆ.

ಕೇಜ್ರಿವಾಲ್ ಸರ್ಕಾರ ಕಳೆದ 5 ವರ್ಷದಲ್ಲಿ ತನ್ನ ಆದಾಯವನ್ನ ದ್ವಿಗುಣಗೊಳಿಸಿದೆ. ಆದಾಯ ಹೆಚ್ಚಳವನ್ನೂ ಕಾಯ್ದುಕೊಂಡಿದೆ ಎಂದು ಮಾಜಿ ಐಟಿ ಖಾತೆ ರಾಜ್ಯ ಸಚಿವರಾಗಿದ್ದ ಮಿಲಿಂದ್ ದೇವರಾ ತಮ್ಮ ಟ್ವೀಟ್​ನಲ್ಲಿ ಶ್ಲಾಘಿಸಿದ್ದರು. ಹಾಗೆಯೆ, ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಸರ್ಕಾರಗಳಲ್ಲಿ ದೆಹಲಿಯೂ ಒಂದು ಎಂದು ಹೇಳಿ ಒಂದು ವಿಡಿಯೋವನ್ನೂ ಜೋಡಿಸಿ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್​ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು 15 ಸಾವಿರಕ್ಕೂ ಹೆಚ್ಚು ಜನರು ಲೈಕ್ ಬಟನ್ ಒತ್ತಿದ್ದರು.

ಇದನ್ನೂ ಓದಿ: ಸತತ ಸೋಲಿನ ಬಳಿಕ ಮೇಜರ್​ ಸರ್ಜರಿಗೆ ಮುಂದಾದ ಕಾಂಗ್ರೆಸ್​; ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ನಾಮ ನಿರ್ದೇಶನ?


ಆದರೆ, ಪಕ್ಷದ ಹಿರಿಯ ಮುಖಂಡ ಅಜಯ್ ಮಾಕನ್ ಅವರು ತಮ್ಮ ಕಿರಿಯ ಸಹೋದ್ಯೋಗಿಯ ಕಾರ್ಯಕ್ಕೆ ಕೆಂಡಾಮಂಡಲಗೊಂಡಿದ್ಧಾರೆ. ಅರ್ಧಂಬರ್ಧ ಸತ್ಯದ ವಿಚಾರಗಳನ್ನು ಹರಡಬೇಡಿ ಎಂದು ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಅವರು, ಕಾಂಗ್ರೆಸ್ ಬಿಟ್ಟು ಹೋಗುವಂತೆ ಮಿಲಿಂದ್​ರನ್ನು ಆಗ್ರಹಿಸಿದ್ಧಾರೆ.

“ಬ್ರದರ್, ನೀವು ಕಾಂಗ್ರೆಸ್ ಬಿಡಬೇಕೆಂದಿದ್ದರೆ ದಯವಿಟ್ಟು ಬಿಟ್ಟುಹೋಗಿ. ಆ ಬಳಿಕ ಬೇಕಾದರೆ ಅರ್ಧ ಸತ್ಯದ ವಿಚಾರವನ್ನು ಹರಡಿರಿ” ಎಂದಿದ್ಧಾರೆ. ಜೊತೆಗೆ, ದೆಹಲಿ ಸರ್ಕಾರದ ಆದಾಯ ಗಳಿಕೆಯ ವಾಸ್ತವ ವಿಚಾರವನ್ನೂ ಅದೇ ಟ್ವೀಟ್​ನಲ್ಲಿ ಅವರು ತಿಳಿಸಿದ್ಧಾರೆ.

ಇದನ್ನೂ ಓದಿ: ಸುಪ್ರೀಂ ತರಾಟೆ ಬೆನ್ನಲ್ಲೇ ರೂ. 10 ಸಾವಿರ ಕೋಟಿ ಬಾಕಿ ಹಣ ಟೆಲಿಕಾಂ ಇಲಾಖೆಗೆ ಸಲ್ಲಿಸಿದ ಏರ್​ಟೆಲ್​

ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಆಪ್ ಸರ್ಕಾರ ಇದ್ದ ಅವಧಿಯಲ್ಲಿ ಆದ ಆದಾಯ ಗಳಿಕೆ ಪ್ರಗತಿಯ ವಿವರವನ್ನು ಅಜಯ್ ಮಾಕನ್ ನೀಡಿದ್ದಾರೆ. 1997-98ರಲ್ಲಿ 4,073 ಕೋಟಿ ಇದ್ದ ಆದಾಯ 2013-14ರಲ್ಲಿ 37,459 ಕೋಟಿ ರೂಪಾಯಿಗೆ ಏರಿತು. ಇದು ಶೇ. 14.87ರ ದರದಲ್ಲಿ ವೃದ್ಧಿಯಾಗಿದೆ. ಆದರೆ, 2015-16ರಲ್ಲಿ 41,129 ರೂ ಇದ್ದ ಆದಾಯ 2019-20ರಲ್ಲಿ 60,000 ಕೋಟಿ ರೂಗೆ ಏರಿಕೆ ಆಗಿದೆ. ಈ ಅವಧಿಯಲ್ಲಿ ಆದ ವೃದ್ಧಿ ದರ ಶೇ. 9.90 ಎಂದು ಅಜಯ್ ಮಾಕನ್ ಅಂಕಿ ಅಂಶ ಸಮೇತ ವಿವರ ನೀಡಿದ್ಧಾರೆ.ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನ ಗಳಿಸಿದರೆ, ಬಿಜೆಪಿ ಉಳಿದ 8 ಸ್ಥಾನಗಳನ್ನ ಜಯಿಸಿತ್ತು. ಕಾಂಗ್ರೆಸ್ ಪಕ್ಷ ಸತತ ಎರಡು ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ದಿವಂಗತ ಶೀಲಾ ದೀಕ್ಷಿತ್ ಅವರೇ ಹೊಣೆ ಎಂದು ದೆಹಲಿ ಕಾಂಗ್ರೆಸ್ ಉಸ್ತುವಾರಿ ಪಿ.ಸಿ. ಚಾಕೋ ಅವರು ಹೇಳಿ ವಿವಾದ ಸೃಷ್ಟಿಸಿದ್ದರು. ಆ ಸಂದರ್ಭದಲ್ಲಿ 43 ವರ್ಷದ ಮಿಲಿಂದ್ ದೇವರಾ ಅವರು ಚಾಕೋ ಹೇಳಿಕೆಗೆ ಪ್ರಬಲ ಆಕ್ಷೇಪಣೆ ವ್ಯಕ್ತಪಡಿಸಿ ಬಹಿರಂಗವಾಗಿಯೇ ಟೀಕೆ ಮಾಡಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

 
First published: February 17, 2020, 1:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories