Saurabh Kirpal| ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ LGBT Activist ಸೌರಭ್‌ ಕಿರ್ಪಾಲ್ ಹೆಸರು ಶಿಫಾರಸು; ಕೊಲಿಜಿಯಂ ಮಹತ್ವದ ನಿರ್ಧಾರ!

ನ್ಯಾಯಾಧೀಶ ಸೌರಭ್ ಕಿರ್ಪಾಲ್ ಅವರ ತಂದೆ, ನ್ಯಾಯಮೂರ್ತಿ ಬಿ.ಎನ್.ಕಿರ್ಪಾಲ್ ಅವರು ಮೇ 2002ರಿಂದ ನವೆಂಬರ್ 2002ರವರೆಗೆ ಸುಪ್ರೀಂಕೋರ್ಟ್‌ನ 31ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ನ್ಯಾಯಮೂರ್ತಿ ಸೌರಭ್‌ ಕಿರ್ಪಾಲ್.

ನ್ಯಾಯಮೂರ್ತಿ ಸೌರಭ್‌ ಕಿರ್ಪಾಲ್.

 • Share this:
  ನವ ದೆಹಲಿ (ನವೆಂಬರ್​ 16); ಎಲ್‌‌ಜಿಬಿಟಿ ಹೋರಾಟಗಾರ (LGBT Activist), ವಕೀಲ ಸೌರಭ್‌ ಕಿರ್ಪಾಲ್‌ (Saurabh Kirpal) ಅವರನ್ನು ದೆಹಲಿ ಹೈಕೋರ್ಟ್ (Delhi High Court) ನ್ಯಾಯಮೂರ್ತಿಯಾಗಿ ನೇಮಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ (NV Ramana) ಅವರ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ. ಇದು ಎಲ್‌ಜಿಬಿಟಿ ಹಕ್ಕುಗಳ ಹೋರಾಟಗಾರರಿಗೆ ಅತ್ಯಂತ ಮಹತ್ವದ ಸಂಗತಿ ಎನ್ನಲಾಗಿದೆ. ಸುಪ್ರೀಂ ಕೋರ್ಟ್‌ನಿಂದ (Supreme Court) ಅಪರಾಧಿಕರಣಗೊಂಡ ಸಲಿಂಗಕಾಮದ ಪರವಾಗಿ ಸ್ವತಃ ಸಲಿಂಗಾಸಕ್ತರಾದ ಕಿರ್ಪಾಲ್ ವಾದಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ನ್ಯಾಯಮೂರ್ತಿಯಾಗಿ ನೇಮಿಸಲು ತಡವಾಗುತ್ತಿದೆ ಎಂಬ ಆರೋಪಗಳು ಬಂದಿದ್ದವು.

  2018ರಿಂದ ಕನಿಷ್ಠ ನಾಲ್ಕು ಬಾರಿ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರ ಉಮೇದುವಾರಿಕೆಯ ನಿರ್ಧಾರವನ್ನು ಮುಂದೂಡಿದ ನಂತರ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಂತಿಮವಾಗಿ ಅವರ ಹೆಸರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲು ಶಿಫಾರಸು ಮಾಡಿದೆ.

  ಮಾರ್ಚ್‌ನಲ್ಲಿ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರು ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ಮಾಡುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದರು.

  ಅಕ್ಟೋಬರ್ 2017ರಲ್ಲಿ ಮೊದಲ ಬಾರಿಗೆ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ದೆಹಲಿ ಹೈಕೋರ್ಟ್ ಕೊಲಿಜಿಯಂ ಕಿರ್ಪಾಲ್ ಅವರನ್ನು ಶಿಫಾರಸು ಮಾಡಿತು. ಸೆಪ್ಟೆಂಬರ್ 2018 ರಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಇದನ್ನು “ಕೆಲವು ಸಮಯದ ನಂತರ” ಪರಿಗಣನೆಗೆ ತೆಗೆದುಕೊಳ್ಳಲು ನಿರ್ಧರಿಸಿತು. ಜನವರಿ 2019ರಲ್ಲಿ ಮತ್ತು ನಂತರ ಏಪ್ರಿಲ್ 2019ರಲ್ಲಿ ಮತ್ತೆ ಹೆಸರು ಮುನ್ನಲೆಗೆ ಬಂದಾಗ ಕೊಲಿಜಿಯಂ ತನ್ನ ನಿರ್ಧಾರವನ್ನು ಮುಂದೂಡಿತು.

  ಕಿರ್ಪಾಲ್‌ ಅವರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಯಾಕೆಂದರೆ ಅವರು ಎಲ್‌ಜಿಬಿಟಿ ಸಮುದಾಯದ ಹೋರಾಟದ ಭಾಗವಾಗಿದ್ದರು. ಕಿರ್ಪಾಲ್ ಅವರ ಹೆಸರನ್ನು ಶಿಫಾರಸು ಮಾಡುವಲ್ಲಿನ ವಿಳಂಬವು ಅವರ ಲೈಂಗಿಕ ದೃಷ್ಟಿಕೋನದ ಕಾರಣಕ್ಕೂ ಆಗಿದೆ ಎನ್ನಲಾಗುತ್ತಿತ್ತು. ಕಿರ್ಪಾಲ್ ಅವರು ನೇಮಕವಾದಲ್ಲಿ ಭಾರತದ ಮೊದಲ ಬಹಿರಂಗ ಸಲಿಂಗಾಸಕ್ತ ನ್ಯಾಯಾಧೀಶರಾಗುತ್ತಾರೆ.

  ಇದನ್ನೂ ಓದಿ: Crime News| ಕಳೆದ 20 ವರ್ಷದಲ್ಲಿ ದೇಶದಲ್ಲಿ 1888 ಲಾಕಪ್​ ಡೆತ್​; ಕೇವಲ 26 ಜನ ಪೊಲೀಸರಿಗೆ ಮಾತ್ರ ಶಿಕ್ಷೆ!

  ನ್ಯಾಯಾಧೀಶ ಸೌರಭ್ ಕಿರ್ಪಾಲ್ ಅವರ ತಂದೆ, ನ್ಯಾಯಮೂರ್ತಿ ಬಿ.ಎನ್.ಕಿರ್ಪಾಲ್ ಅವರು ಮೇ 2002ರಿಂದ ನವೆಂಬರ್ 2002ರವರೆಗೆ ಸುಪ್ರೀಂಕೋರ್ಟ್‌ನ 31ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

  ದೆಹಲಿಯ ಸೇಂಟ್ ಸ್ಟೀಫನ್ಸ್‌ನಿಂದ ಭೌತಶಾಸ್ತ್ರದಲ್ಲಿ ಪದವೀಧರರಾಗಿರುವ ನ್ಯಾಯಾಧೀಶ ಕಿರ್ಪಾಲ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

  ಇದನ್ನೂ ಓದಿ: Viral Video: ಹೆಂಡತಿಯ ಅತ್ತಿಗೆಯ ಜೊತೆ ಕಿಸ್​ ಮಾಡಿದ ಪೊಲೀಸ್​ ಕಾನ್ಸ್​ಟೇಬಲ್​, ವೈರಲ್​ ಆಯ್ತು ವಿಡಿಯೋ

  ಭಾರತಕ್ಕೆ ಹಿಂದಿರುಗುವ ಮೊದಲು, ಸೌರಭ್ ಕಿರ್ಪಾಲ್ ಜಿನೀವಾದಲ್ಲಿ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡಿದ್ದರು. ಅವರು ಎರಡು ದಶಕಗಳಿಂದ ಭಾರತದಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ. "ಸೆಕ್ಸ್ ಮತ್ತು ಸುಪ್ರೀಂ ಕೋರ್ಟ್" ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯು ಕಾನೂನು, ಲಿಂಗ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತದೆ.
  Published by:MAshok Kumar
  First published: