ಲಂಚ ಕೊಡಲು ನಿರಾಕರಣೆ: ವಯಸ್ಸಿನ ದಾಖಲೆಯನ್ನು 100 ವರ್ಷ ಹೆಚ್ಚಿಸಿ ಜನನ ಪ್ರಮಾಣ ನೀಡಿದ ಅಧಿಕಾರಿ

ಜನನ ಪ್ರಮಾಣ ದಾಖಲಾತಿಗೆ ಲಂಚ ನೀಡಲು ನಿರಾಕರಿಸಿದ ಹಿನ್ನೆಲೆ ಅವರ ವಯಸ್ಸನ್ನು 100 ವರ್ಷಗಳ ಕಾಲ ಹೆಚ್ಚಿಸಿ ಅಧಿಕಾರಿ ನೋಂದಣಿ ಮಾಡಿದ್ದಾರೆ.

Seema.R | news18-kannada
Updated:January 22, 2020, 12:50 PM IST
ಲಂಚ ಕೊಡಲು ನಿರಾಕರಣೆ: ವಯಸ್ಸಿನ ದಾಖಲೆಯನ್ನು 100 ವರ್ಷ ಹೆಚ್ಚಿಸಿ ಜನನ ಪ್ರಮಾಣ ನೀಡಿದ ಅಧಿಕಾರಿ
ಸಾಂದರ್ಭಿಕ ಚಿತ್ರ
  • Share this:
ಬರೇಲಿ (ಜ.22):  ಲಂಚ ಕೊಡಲು ನಿರಾಕರಿಸಿದ ಹಿನ್ನೆಲೆ ವಯಸ್ಸಿನ ದಾಖಲೆಯನ್ನು ನೂರು ವರ್ಷಕ್ಕೆ ಹೆಚ್ಚಿಸಿ ಅಧಿಕಾರಿಯೊಬ್ಬರು ಸಿಟ್ಟು ತೀರಿಸಿಕೊಳ್ಳುವ ಮೂಲಕ ಎಡವಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ.

ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳ ಜನನ ಪ್ರಮಾಣ ದಾಖಲಾತಿಗೆ ಲಂಚ ನೀಡಲು ನಿರಾಕರಿಸಿದ ಹಿನ್ನೆಲೆ ಅವರ ವಯಸ್ಸನ್ನು 100 ವರ್ಷಗಳ ಕಾಲ ಹೆಚ್ಚಿಸಿ ಅಧಿಕಾರಿ ನೋಂದಣಿ ಮಾಡಿದ್ದಾರೆ. ಈ ಆಚಾತುರ್ಯ ಬೆಳಕಿಗೆ ಬರುತ್ತಿದ್ದಂತೆ ಭ್ರಷ್ಟಚಾರ ವಿರೋಧಿ ನ್ಯಾಯಾಲಯ ಅಧಿಕಾರಿ ವಿರುದ್ಧ ದೂರು ದಾಖಲಿಸುವಂತೆ ಆದೇಶ ನೀಡಿದೆ.

ಜೂನ್​ 13, 2018ರಂದು ಹುಟ್ಟಿದ ಎರಡು ವರ್ಷದ ಸಂಕೇತ್​ ಎಂಬ ಬಾಲಕನ ವಯಸ್ಸನ್ನು ಜೂನ್​ 13, 1961 ಎಂದು ದಾಖಲಿಸಲಾಗಿದೆ. ಇನ್ನು ಈತನ ಅಣ್ಣ ನಾಲ್ಕು ವರ್ಷದ ಶುಭ್​ ಜ.6, 2016ರಂದು ಜನಿಸಿದರೆ, ಈತನ ವಯಸ್ಸಿನ ದೃಢೀಕರಣ ಪತ್ರದಲ್ಲಿ ಜ.6 ,1916 ಎಂದು ತಿರುಚಿ ಪ್ರಮಾಣ ಪತ್ರ ನೀಡಲಾಗಿದೆ.

ಅಧಿಕಾರಿ ಮಾಡಿರುವ ಈ ಎಡವಟ್ಟಿನ ವಿರುದ್ಧ ಆತನ ಮಾವ ಪವನ್​ ಕುಮಾರ್​, ಶಹಾಜನ್​ಪುರ ಪೊಲೀಸ್​ ಠಾಣೆ ಮಟ್ಟಿಲೇರಿದ್ದಾರೆ.

ಎರಡು ತಿಂಗಳ ಹಿಂದೆಯೇ ಜನನ ಪ್ರಮಾಣಕ್ಕೆ ಆಗ್ರಹಿಸಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಆದರೂ, ಗ್ರಾಮೀಣಾಭಿವೃದ್ಧಿ ಅಧಿಕಾರಿ ಸುಶೀಲ್​ ಚಂದ್​ ಅಗ್ನಿಹೋತ್ರಿ ಮತ್ತು ಗ್ರಾಮದ ಮುಖ್ಯಸ್ಥ ಪ್ರವೀಣ್​ ಮಿಶ್ರಾ , ಜನನ ಪ್ರಮಾಣ ಪತ್ರ ನೀಡಲು ತಲಾ 500ರೂ ಲಂಚ ಕೇಳಿದ್ದರು ಎಂದು ಪವನ್​ ಆರೋಪಿಸಿದ್ದಾರೆ.

ಇದನ್ನು ಓದಿ: ಜೆಎನ್​ಯು ಗಲಭೆ: ಜ.3ರಂದು ಸಿಸಿಟಿವಿ, ಸರ್ವರ್​ ರೂಮ್​ ಮೇಲೆ ದಾಳಿಯಾಗಿಲ್ಲ; ಆರ್​ಟಿಐ ಮಾಹಿತಿಯಲ್ಲಿ ಬಹಿರಂಗ

ಲಂಚ ನೀಡಲು ನಿರಾಕರಿಸಿದ ಹಿನ್ನೆಲೆ ಜನನ ದಿನಾಂಕವನ್ನು ತಿರುಚಿ ನೀಡುವ ಮೂಲಕ ಕುಟುಂಬಕ್ಕೆ ದೌರ್ಜನ್ಯ ನೀಡಿದ್ದಾರೆ ಎಂದಿದ್ದಾರೆ.ಈ ಕುರಿತು ನ್ಯಾಯಾಲಯದ ಆದೇಶ ಪಡೆದಿದ್ದು, ಅದರಂತೆ ಮುಂದುವರೆಯುತ್ತೇವೆ ಎಂದು ಎಸ್​ಎಚ್​ಒ ತಿಳಿಸಿದ್ದಾರೆ.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ