Success Story: ದೃಷ್ಟಿ ಇಲ್ಲದಿದ್ದರೇನು? ಮೈಕ್ರೋಸಾಫ್ಟ್‌ನಿಂದ ₹ 47 ಲಕ್ಷ ಪ್ಯಾಕೇಜ್ ಪಡೆದ ಸಾಧಕ

ಎಳೆಯ ಹರೆಯದಿಂದಲೇ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಅದಮ್ಯ ಹಂಬಲವನ್ನಿಟ್ಟುಕೊಂಡಿದ್ದ ಸೋನಾಕಿಯಾ ಬಯಸಿದಂತೆ ಸಾಧನೆ ಮಾಡಿದ್ದಾರೆ.

ಯಶ್ ಸೋನಾಕಿಯಾ

ಯಶ್ ಸೋನಾಕಿಯಾ

  • Share this:
ಸಾಧಿಸುವ ಛಲವೊಂದಿದ್ದರೆ ಸಾಕು ಯಾವುದೇ ಸಾಧನೆಯನ್ನು (Achievement) ಸಾಧಿಸಬಹುದು ಎಂಬ ನಾಣ್ಣುಡಿಯಂತೆ ಯಶ್ ಸೋನಾಕಿಯಾ (Yash Sonakia) ನ್ಯೂನತೆಗಳನ್ನು ಮೆಟ್ಟಿ ನಿಂತು ತಮ್ಮ ಕನಸನ್ನು ನನಸಾಗಿಸಿದ್ದಾರೆ ಹಾಗೂ ಪ್ರತಿಷ್ಟಿತ ಸಂಸ್ಥೆಯಲ್ಲಿ ಕೈತುಂಬಾ ಸಂಬಳದ ಉದ್ಯೋಗವನ್ನು (Employment) ಹೊಂದಿ ಇತರರಿಗೂ ಮಾದರಿ ಎಂದೆನಿಸಿದ್ದಾರೆ. ಮಧ್ಯಪ್ರದೇಶದ ಯಶ್ ಸೋನಾಕಿಯಾ ಎಳೆಯ ಹರೆಯದಿಂದಲೇ ದೃಷ್ಟಿದೋಷ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅವರ ಸಾಧನೆಗೆ ಈ ಅಂಗವೈಕಲ್ಯ (Disability) ಯಾವುದೇ ಅಡ್ಡಿಯನ್ನುಂಟು ಮಾಡಲಿಲ್ಲ. ಎಳೆಯ ಹರೆಯದಿಂದಲೇ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಅದಮ್ಯ ಹಂಬಲವನ್ನಿಟ್ಟುಕೊಂಡಿದ್ದ ಸೋನಾಕಿಯಾ ಬಯಸಿದಂತೆ ಸಾಧಿಸಿದ್ದು, ಐಟಿ ದೈತ್ಯ ಮೈಕ್ರೋಸಾಫ್ಟ್(Microsoft) ಕಂಪನಿಯಿಂದ ವಾರ್ಷಿಕ ರೂ 47 ಲಕ್ಷದ ಪ್ಯಾಕೇಜ್‌ಗೆ ಅರ್ಹರಾಗಿದ್ದಾರೆ ಎಂದು ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

ಮೈಕ್ರೋಸಾಫ್ಟ್ ಆಫರ್ ಮಾಡಿದೆ ಉತ್ತಮ ಪ್ಯಾಕೇಜ್ ಇರುವ ಉದ್ಯೋಗ
ಯಶ್ ಸೋನಾಕಿಯಾ 2021 ರಲ್ಲಿ ಇಂಧೋರ್ ಮೂಲದ ಗೋವಿಂದರಾಮ್ ಸೆಕ್ಸಾರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (SGSITS) ಸರಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆಯಿಂದ ಬಿಟೆಕ್ ಪದವಿಯನ್ನು ಗಳಿಸಿದ್ದಾರೆ.

ಇದನ್ನೂ ಓದಿ: Business Startup: ತನ್ನದೇ ಆದ ಎರಡು ಮಲ್ಟಿ ಕ್ರೋರ್ ಮೆನ್ಸ್ ವೇರ್ ಬ್ರಾಂಡ್ ಅನ್ನು ನಿರ್ಮಿಸಿದ ಕೇರಳದ ಯುವಕ

ಪದವಿ ಮುಗಿಸಿದೊಡನೆ ಅರಸಿ ಬಂದಿತ್ತು ಉದ್ಯೋಗ
ಇದೀಗ ತಾನೇ ಪದವಿ ಮುಗಿಸಿರುವ ಸೋನಾಕಿಯಾ ಮೈಕ್ರೋಸಾಫ್ಟ್‌ನಿಂದ ವಾರ್ಷಿಕ ರೂ 47 ಲಕ್ಷ ವೇತನದ ಪ್ಯಾಕೇಜ್ ಇರುವ ಆಫರ್ ಅನ್ನು ಸ್ವೀಕರಿಸಿದ್ದಾರೆ ಎಂಬುದಾಗಿ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ. ಈ ಆಫರ್ ಅನ್ನು ಸೋನಾಕಿಯಾ ಸ್ವೀಕರಿಸಿದ್ದು ಕಂಪನಿಯ ಬೆಂಗಳೂರಿನ ಕಚೇರಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರಲಿದ್ದಾರೆ ಅದಾಗ್ಯೂ ಆರಂಭದಲ್ಲಿ ಕಂಪನಿಯು ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ನೀಡಿದೆ ಎಂದು ಸೋನಾಕಿಯಾ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸೋನಾಕಿಯಾ ಎಂಟರ ಹರೆಯದಲ್ಲಿರುವಾಗಲೇ ಗ್ಲುಕೋಮಾದಿಂದ ತಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರು. ಆದರೆ ಛಲ ಬಿಡದ ತ್ರಿವಿಕ್ರಮನಂತೆ ಓದು ಮುಂದುವರಿಸಿದ ಸೋನಾಕಿಯಾ ಸ್ಕ್ರೀನ್ ರೀಡರ್ ಸಾಫ್ಟ್‌ವೇರ್‌ನಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಅಧ್ಯಯನ ಪೂರ್ಣಗೊಂಡ ಒಡನೆಯೇ ಉದ್ಯೋಗವನ್ನರಸಲು ಆರಂಭಿಸಿದರು. ಕೋಡ್ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ಅರ್ಜಿಯನ್ನು ಸಲ್ಲಿಸಿದರು ಹೀಗೆ ಸೋನಾಕಿಯಾ ಗೆಲುವಿಗೆ ಒಂದೊಂದೇ ಮೆಟ್ಟಿಲುಗಳನ್ನು ಏರಿದ್ದಾರೆ. ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನದ ನಂತರ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ನಾನು ಆಯ್ಕೆಯಾಗಿರುವುದಾಗಿ ಸೋನಾಕಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: Multibagger Stock: 5 ವರ್ಷದಲ್ಲಿ 1 ಲಕ್ಷದಿಂದ 43 ಲಕ್ಷಕ್ಕೆ ಏರಿಕೆ ಕಂಡ ಮಲ್ಟಿಬ್ಯಾಗರ್ ಷೇರುಗಳು

ಸೋನಾಕಿಯಾ ತಂದೆ ಯಶ್‌ಪಾಲ್‌ರ ಭಾವುಕ ನುಡಿ
ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಸೋನಾಕಿಯಾ ತಂದೆ ಯಶ್‌ಪಾಲ್ ಮಗನಿಗೆ ದೊರೆತಿರುವ ಉದ್ಯೋಗ ಹಾಗೂ ಸಂಬಳದಿಂದ ಹರ್ಷಚಿತ್ತರಾಗಿದ್ದು, ಸೋನಾಕಿಯಾ ಜನಿಸಿದ ಒಂದು ದಿನದ ತರುವಾಯ ಮಗುವಿಗೆ ಕಡಿಮೆ ದೃಷ್ಟಿ ದೋಷದಿಂದಾಗಿ ಗ್ಲುಕೋಮಾ ಇರುವುದು ಪತ್ತೆಯಾಯಿತು. ಮಗ ಎಂಟರ ಹರೆಯಕ್ಕೆ ಬಂದಾಗ ಸಂಪೂರ್ಣ ದೃಷ್ಟಿ ನಷ್ಟವಾಯಿತು. ಆದರೆ ಮಗನಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಅದಮ್ಯ ಬಯಕೆ ಇತ್ತು ಹೀಗಾಗಿ ನಾವು ಅವನ ಬೆಂಬಲಕ್ಕೆ ನಿಂತೆವು ಮತ್ತು ಅವನ ಆಸೆಯನ್ನು ಪೂರೈಸಲು ಸಹಕರಿಸಿದೆವು ಎಂದು ತಿಳಿಸಿದ್ದಾರೆ.

ವಿಶೇಷ ಶಾಲೆಯಲ್ಲಿ ಅಧ್ಯಯನ
ಯಶ್‌ಪಾಲ್ ಮಗನಿಗೆ ಐದನೇ ತರಗತಿಯವರೆಗೆ ವಿಶೇಷ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಿದರು ತದನಂತರ ಸೋನಾಕಿಯಾ ಸಹೋದರಿ ಇದ್ದ ಸಾಮಾನ್ಯ ಶಾಲೆಗೆ ಮಗನನ್ನು ಸೇರಿಸಿದರು. ಈ ಶಾಲೆಯಲ್ಲಿ ಸೋನಾಕಿಯಾ ಸಹೋದರಿ ವಿಜ್ಞಾನ ಹಾಗೂ ಗಣಿತ ಕಲಿಯಲು ಸಹೋದರನಿಗೆ ನೆರವು ನೀಡಿದರು.

ಇದನ್ನೂ ಓದಿ:  Billionaire: 5 ಸಾವಿರದಿಂದ ಕೋಟ್ಯಧಿಪತಿಯಾದ ಯುವಕನ ಕಥೆ ಇದು! ಸೈನಿಕನಾಗಬೇಕಿದ್ದವ ಈಗ ಸೂಪರ್​ ಟ್ರೇಡರ್​

ತಂದೆಯ ಕನಸು ನನಸು ಮಾಡಿದ ಮಗ
ನನ್ನ ಹಿರಿಯ ಮಗನಾಗಿರುವ ಯಶ್ ಬಗ್ಗೆ ನಾನು ಹಲವಾರು ಕನಸುಗಳನ್ನು ಕಂಡಿದ್ದೆ. ವೃತ್ತಿಪರ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಅವನ ಬಯಕೆಯು ಹಲವಾರು ಹೋರಾಟ ಸತತ ಪರಿಶ್ರಮದಿಂದ ಇಂದು ನನಸಾಗಿದೆ. ಪರಿಶ್ರಮ ಹಾಗೂ ಸಾಧಿಸುವ ಗುರಿ ಒಂದಿದ್ದರೆ ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ನನ್ನ ಮಗ ಉದಾಹರಣೆ ಎಂದು ಹೇಳಿ ಯಶ್‌ಪಾಲ್ ಭಾವುಕರಾಗುತ್ತಾರೆ.
Published by:Ashwini Prabhu
First published: