• Home
  • »
  • News
  • »
  • national-international
  • »
  • Padma Bhushan to Satya Nadella: ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಪ್ರದಾನ, ಭಾರತೀಯರಿಗೆ ಮೈಕ್ರೋಸಾಫ್ಟ್ ಸಿಇಒ ಧನ್ಯವಾದ

Padma Bhushan to Satya Nadella: ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಪ್ರದಾನ, ಭಾರತೀಯರಿಗೆ ಮೈಕ್ರೋಸಾಫ್ಟ್ ಸಿಇಒ ಧನ್ಯವಾದ

ಪದ್ಮಭೂಷಣ ಸ್ವೀಕರಿಸಿದ ಸತ್ಯ ನಾಡೆಲ್ಲ

ಪದ್ಮಭೂಷಣ ಸ್ವೀಕರಿಸಿದ ಸತ್ಯ ನಾಡೆಲ್ಲ

ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಗೌರವವಾಗಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಹೇಳಿದ್ದಾರೆ. ಇದು ನನಗೆ ಇನ್ನೂ ಹೆಚ್ಚಿನದನ್ನು ಸಾಧಿಸಲು ಸ್ಫೂರ್ತಿ ನೀಡಿದೆ ಎಂದಿದ್ದಾರೆ.

  • Share this:

ಅಮೆರಿಕ: ಮೈಕ್ರೋಸಾಫ್ಟ್ ಸಿಇಒ (Microsoft CEO), ಭಾರತೀಯ ಮೂಲದ ಸತ್ಯ ನಾಡೆಲ್ಲಾ (Satya Nadella) ಅವರಿಗೆ ಪದ್ಮಭೂಷಣ ಪ್ರಶಸ್ತಿ (Padma Bhushan award) ಪ್ರದಾನ ಮಾಡಲಾಗಿದೆ. ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ (India's third highest civilian award) ಪದ್ಮ ಭೂಷಣವನ್ನು ಅಮೆರಿಕಾದಲ್ಲಿ (America) ಭಾರತದ ಸರ್ಕಾರದ (Indian Government) ಪರವಾಗಿ ಇಂದು ಪ್ರದಾನ ಮಾಡಲಾಯಿತು. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ (San Francisco) ಭಾರತದ ಕಾನ್ಸುಲ್ ಜನರಲ್ ಡಾ ಟಿವಿ ನಾಗೇಂದ್ರ ಪ್ರಸಾದ್ (Dr TV Nagendra Prasad) ಅವರಿಂದ ವಿಶಿಷ್ಟ ಸೇವೆಗಾಗಿ ಔಪಚಾರಿಕವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ಈ ವೇಳೆ ಮಾತನಾಡಿದ ಸತ್ಯ ನಾಡೆಲ್ಲಾ, “ನನಗೆ ಈ ಗೌರವವನ್ನು ಸ್ವೀಕರಿಸಲು ಅತೀವ ಸಂತಸವಾಗುತ್ತಿದೆ. ಶೀಘ್ರವೇ ನಾನು ಭಾರತಕ್ಕೆ ಭೇಟಿ ನೀಡುವ ಯೋಜನೆ ಇದೆ” ಅಂತ ಹೇಳಿದ್ದಾರೆ. ‘


ಅಮೆರಿಕದಲ್ಲಿ ಪದ್ಮಭೂಷಣ ಸ್ವೀಕರಿಸಿದ ನಾಡೆಲ್ಲಾ


ಮೈಕ್ರೋಸಾಫ್ಟ್‌ನ 55 ವರ್ಷ ವಯಸ್ಸಿನ ಸಿಇಒ ಅವರು ಈ ವರ್ಷದ ಆರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ. ಕಳೆದ ವಾರ ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲ್ ಜನರಲ್ ಡಾ ಟಿವಿ ನಾಗೇಂದ್ರ ಪ್ರಸಾದ್ ಅವರಿಂದ ವಿಶಿಷ್ಟ ಸೇವೆಗಾಗಿ ಔಪಚಾರಿಕವಾಗಿ ಪ್ರಶಸ್ತಿಯನ್ನು ಪಡೆದರು.


“ಪದ್ಮ ಭೂಷಣ ಸ್ವೀಕರಿಸಲು ನನಗೆ ಸಂತಸವಾಗುತ್ತಿದೆ”


ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಗೌರವವಾಗಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಹೇಳಿದ್ದಾರೆ. ಇದು ನನಗೆ ಇನ್ನೂ ಹೆಚ್ಚಿನದನ್ನು ಸಾಧಿಸಲು ಸ್ಫೂರ್ತಿ ನೀಡಿದೆ ಎಂದಿದ್ದಾರೆ. ನಾನು ತಂತ್ರಜ್ಞಾನವನ್ನು ಬಳಸಲು ಸಹಾಯ ಮಾಡಲು ಭಾರತದಾದ್ಯಂತದ ಜನರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಅಂತ ಸತ್ಯ ನಾಡೆಲ್ಲಾ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: PFI Ban: ಅಯೋಧ್ಯೆ ಟಾರ್ಗೆಟ್​ ಮಾಡಿದ್ದ ಪಿಎಫ್​ಐ, ರಾಮ ಮಂದಿರ ಉರುಳಿಸಿ ಮಸೀದಿ ನಿರ್ಮಿಸಲು ಪ್ಲಾನ್!


ಶೀಘ್ರವೇ ಭಾರತಕ್ಕೆ ಭೇಟಿ ನೀಡಲಿರುವ ಸತ್ಯ ನಾಡೆಲ್ಲಾ


ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮುಂದಿನ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲು ನಾನು ಯೋಜಿಸಿದ್ದೇನೆ. ಭಾರತದ ಭೇಟಿ ಬಗ್ಗೆ ನಾನು ಕಾತರನಾಗಿದ್ದೇನೆ ಎಂದಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ಭಾರತ ದೇಶಕ್ಕೆ ಅವರ ಮೊದಲ ಭೇಟಿಯಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.


ಭಾರತದ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಚರ್ಚೆ


ಇನ್ನು ಸತ್ಯ ನಾಡೆಲ್ಲಾ ಅವರು ಭಾರತದ ಕಾನ್ಸುಲ್ ಜನರಲ್ ಡಾ ಟಿವಿ ನಾಗೇಂದ್ರ ಪ್ರಸಾದ್ ಅವರೊಂದಿಗೆ ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆ ಬಗ್ಗೆ ಚರ್ಚಿಸಿದರು. ಭಾರತದ ಅಂತರ್ಗತ ಬೆಳವಣಿಗೆಯನ್ನು ಸಶಕ್ತಗೊಳಿಸುವಲ್ಲಿ ಡಿಜಿಟಲ್ ತಂತ್ರಜ್ಞಾನವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮೈಕ್ರೋಸಾಫ್ಟ್ ಪ್ರಕಾರ, ಭಾರತದ ಬೆಳವಣಿಗೆಯ ಪಥ ಮತ್ತು ಜಾಗತಿಕ ರಾಜಕೀಯ ಮತ್ತು ತಂತ್ರಜ್ಞಾನದ ನಾಯಕನಾಗುವ ಭಾರತದ ಸಾಮರ್ಥ್ಯದ ಬಗ್ಗೆ ಇದೇ ಸಂದರ್ಭದಲ್ಲಿ ಚರ್ಚಿಸಿದರು.


ಇದನ್ನೂ ಓದಿ: Elnaz Rekabi: ಹಿಜಾಬ್ ಧರಿಸದೆ ಈವೆಂಟ್‌ಗೆ ಪ್ರವೇಶಿಸಿದ ಇರಾನ್‌ನ ಮಹಿಳಾ ಅಥ್ಲೀಟ್‌, ಸಿಕ್ತು ಭರ್ಜರಿ ಸ್ವಾಗತ!


ಹೈದರಾಬಾದ್ ಮೂಲದ ಸತ್ಯ ನಾಡೆಲ್ಲಾ


ಸತ್ಯ ನಾಡೆಲ್ಲಾ ಅವರು ತೆಲಂಗಾಣದ ಹೈದ್ರಾಬಾದ್ ಮೂಲದವರು. ಅವರನ್ನು ಫೆಬ್ರವರಿ 2014 ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಿಸಲಾಯಿತು. ಜೂನ್ 2021 ರಲ್ಲಿ ಅವರು ಕಂಪನಿಯ ಅಧ್ಯಕ್ಷರಾಗಿ ಬಡ್ತಿ ಪಡೆದರು, ಇದರಲ್ಲಿ ಅವರು ಮಂಡಳಿಯ ಕಾರ್ಯಸೂಚಿಯನ್ನು ಹೊಂದಿಸುವ ಕೆಲಸವನ್ನು ಮುನ್ನಡೆಸುವ ಹೆಚ್ಚುವರಿ ಪಾತ್ರವನ್ನು ವಹಿಸುತ್ತಾರೆ.

Published by:Annappa Achari
First published: