Paramilitary Forces: ಸಿಎಫಿಎಫ್​ ಸಿಬ್ಬಂದಿಗಳಿಗೆ 100ದಿನ ವೇತನ ಸಹಿತ ರಜೆ

ದೇಶಕ್ಕೆ ತಮ್ಮ ಅತ್ಯಮೂಲ್ಯ ಸಮಯವನ್ನು ನೀಡುವ ಪ್ರತಿಯೊಬ್ಬ ಸೈನಿಕನು ತನ್ನ ಕುಟುಂಬದೊಂದಿಗೆ ವರ್ಷದಲ್ಲಿ ಸುಮಾರು 100 ದಿನಗಳನ್ನು ಕಳೆಯಲು ಕೇಂದ್ರ ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವರ್ಷವಿಡೀ ಕುಟುಂಬದಿಂದ ದೂರಾಗಿ ದೇಶವನ್ನು ಕಾಯುವ ಭದ್ರತಾ ಸಿಬ್ಬಂದಿಗಳಿಗೆ ಇದೀಗ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಿದೆ. ರಜೆಗಳಿಲ್ಲ ಕೆಲಸ ಮಾಡುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಗೆ (CAPF) 100 ದಿನಗಳ ವಾರ್ಷಿಕ ರಜೆಯನ್ನು ನೀಡಲು ಕೇಂದ್ರ ಗೃಹ ಸಚಿವಾಲಯ (Ministry Of Home Affair) ಮುಂದಾಗಿದೆ. ಸಿಎಪಿಎಫ್‌ನ ಪ್ರತಿ ಭದ್ರತಾ ಸಿಬ್ಬಂದಿಗೆ ಅವರ ಕುಟುಂಬಗಳೊಂದಿಗೆ ಸಮಯ ಕಳೆಯಲು ವರ್ಷದಲ್ಲಿ 100 ದಿನಗಳ ವೇತನದ ರಜೆಯನ್ನು ಒದಗಿಸುವ ನೀತಿಯ ಎಲ್ಲಾ ಅಂಶಗಳನ್ನು ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸುತ್ತಿದೆ.

  ಸದ್ಯ 75 ದಿನ ವೇತನ ರಜೆ ಪಡೆಯುತ್ತಿರುವ ಸಿಬ್ಬಂದ

  ಸಿಬ್ಬಂದಿಗಳ ಕೆಲಸ-ಸಂಬಂಧಿತ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಮತ್ತು ದೂರದ ಸ್ಥಳಗಳಲ್ಲಿ ಪ್ರಯಾಸಕರ ಕರ್ತವ್ಯಗಳಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಗಳಲ್ಲಿ ಸಂತೋಷ ತರುವ ಉದ್ದೇಶದಿಂದ ಈ ನೀತಿಯನ್ನು 2019ರಲ್ಲೇ ಅಮಿತ್​ ಶಾ ಘೋಸಿಸಿದರು. ಸದ್ಯ ಇದೀಗ ಸಿಎಪಿಎಫ್​​ ಸಿಬ್ಬಂದಿಗಳು ಪ್ರತಿ ವರ್ಷ ಸರಾಸರಿ 75 ದಿನಗಳ ರಜೆಯನ್ನು ಪಡೆಯುತ್ತಿದ್ದಾರೆ. ಇದಕ್ಕೆ ಇನ್ನು ಹೆಚ್ಚುವರಿಯಾಗಿ 25 ದಿನ ರಜೆ ಪಡೆಯಲಿದ್ದಾರೆ. ಈ ರಜೆಗಳ ಮೂಲಕ ಪಡೆಗಳ ಕಾರ್ಯಾಚರಣೆಯ ಅಗತ್ಯತೆಗಳ ಪ್ರಕಾರ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.

  ಮುಂದಿನ ತಿಂಗಳು ಆದೇಶ ಹೊರ ಬೀಳುವ ಸಾಧ್ಯತೆ

  ಇನ್ನು ಈ ರಜೆ ನೀತಿಯ ತ್ವರಿತ ಮತ್ತು ಸುಗಮ ಅನುಷ್ಠಾನ ನಡೆಸಲು ಗೃಹ ಸಚಿವಾಲಯ ಈಗಾಗಲೇ ಹಲವಾರು ಸುತ್ತಿನ ಸಭೆ ನಡೆಸಿದ್ದು, ಈ ತಿಂಗಳ ಆರಂಭದಲ್ಲೂ ಈ ಬಗ್ಗೆ ಚರ್ಚೆ ಆಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಚಿವಾಲಯವು ಎಲ್ಲಾ ಸಿಎಪಿಎಫ್‌ಗಳಿಂದ ಸಲಹೆಗಳನ್ನು ಅವರ ಅಭಿಪ್ರಾಯಗಳೊಂದಿಗೆ ತೆಗೆದುಕೊಂಡಿದೆ ಶೀಘ್ರದಲ್ಲೇ ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದರ ಆದೇಶ ಮುಂದಿನ ತಿಂಗಳು ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ

  ಇದನ್ನು ಓದಿ: ಕಣಿವೆ ರಾಜ್ಯದಲ್ಲಿ 20,000 ಕೋಟಿ ಯೋಜನೆಗೆ ಪ್ರಧಾನಿ ಚಾಲನೆ

  ಕಳೆದ ಡಿಸೆಂಬರ್ 2021 ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೈಸಲ್ಮೇರ್‌ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಉದ್ದೇಶಿಸಿ ಮಾತನಾಡಿದ್ದ ವೇಳೆ, 50 ಡಿಗ್ರಿ ಶಾಖ ಮತ್ತು ಮೈನಸ್ ತಾಪಮಾನದಲ್ಲಿ ಯೋಧರು ದೇಶದ ಭದ್ರತೆ ನಡೆಸುತ್ತಾರೆ. ದೇಶಕ್ಕೆ ತಮ್ಮ ಅತ್ಯಮೂಲ್ಯ ಸಮಯವನ್ನು ನೀಡುವ ಪ್ರತಿಯೊಬ್ಬ ಸೈನಿಕನು ತನ್ನ ಕುಟುಂಬದೊಂದಿಗೆ ವರ್ಷದಲ್ಲಿ ಸುಮಾರು 100 ದಿನಗಳನ್ನು ಕಳೆಯಲು ಕೇಂದ್ರ ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ. ಇದು ಸರ್ಕಾರದ ದೊಡ್ಡ ಜವಾಬ್ದಾರಿಯಾಗಿದ್ದು, ಶೀಘ್ರದಲ್ಲೇ ಇದನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

  ಇದನ್ನು ಓದಿ: ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಲು ಮೋದಿ ಕರೆ, ಡಿಜಿಟಲ್ ಆರ್ಥಿಕತೆ ಬಗ್ಗೆ ಮಾತು

  ಈ ನೀತಿಯನ್ನು ಬಿಎಸ್​ಎಫ್​​, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಮತ್ತು ಸಶಸ್ತ್ರ ಸೀಮಾ ಬಾಲ್‌ನಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ಅಸ್ಸಾಂ ರೈಫಲ್ಸ್, ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (NSG) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆಯಂತಹ ಇತರ CAPF ಗಳಲ್ಲಿಯೂ ಇದನ್ನು ಜಾರಿಗೆ ತರಲಾಗುತ್ತದೆ. ಎನ್​ಡಿಆರ್​ಎರ್ಫ್ ಒಮ್ಮೆ ಈ ನೀತಿಯನ್ನು ಜಾರಿಗೆ ತಂದರೆ ಅದನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುವುದು.

  ಇದರಿಂದ ಆಗುವ ಲಾಭಗಳು
  100 ದಿನಗಳ ವಾರ್ಷಿಕ ರಜೆ ನೀತಿ ಜಾರಿಗೆ ಬಂದರೆ. ಯೋಧರ ಆತ್ಮಹತ್ಯೆ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿವೆ ಹಿರಿಯ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
  ಇದು ಸಿಎಪಿಎಫ್​​ ಗಳಲ್ಲಿ ಸ್ವಯಂ ನಿವೃತ್ತಿ ಯೋಜನ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಆಗುತ್ತದೆ ಎಂದು ಅವರು ಹೇಳಿದರು.
  ಕಳೆದ ಒಂದು ದಶಕದಲ್ಲಿ 80,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ವಿಆರ್‌ಎಸ್ ತೆಗೆದುಕೊಂಡಿದ್ದಾರೆ. ಇದು ಪಡೆ ಸಿಬ್ಬಂದಿಯ ಅತಿಯಾದ ಕರ್ತವ್ಯದ ಅವಧಿಗೆ ಪ್ರಮುಖ ಕಾರಣವಾಗಿದೆ ಎಂಬ ಮಾಹಿತಿ ಇದೆ.
  Published by:Seema R
  First published: