ಭಾರತೀಯ ಎಸ್​ಯುವಿ ಮಾರುಕಟ್ಟೆಯಲ್ಲಿ ಎಂಜಿ ಮೋಟಾರ್ ಇಂಡಿಯಾ- ಜಿಯೋ ಹೊಸ ಆವಿಷ್ಕಾರ

jio

jio

ಭಾರತದ ಅತಿದೊಡ್ಡ ಸಂಯೋಜಿತ ಟೆಲಿಕಾಂ ಸೇವಾ ಪೂರೈಕೆದಾರ ಜಿಯೋ ತನ್ನ  ಸೇವೆಗಳನ್ನು ತನ್ನ ಗ್ರಾಹಕರಿಗೆ ಈ ಮೂಲಕ ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಎಂಜಿ ಕಾರು ತಯಾರಕ ಕಂಪೆನಿ ಮುಂಬರುವ ಮಧ್ಯಮ ಗಾತ್ರದ ಎಸ್​ಯುವಿ ತೆಗೆದುಕೊಳ್ಳುವ ಗ್ರಾಹಕರಿಗೆ ಜಿಯೋ ಸಂಪರ್ಕ ಹೊಂದಿದ ವ್ಯಾಪಕವಾದ ಅಂತರ್ಜಾಲ ಸಂಪರ್ಕ ಮತ್ತು ಉತ್ತಮ ಗುಣಮಟ್ಟದ ನೆಟ್​ವರ್ಕ್​ ಹೊಂದಿದ ಇನ್​ಬಿಲ್ಟ್​ ತಂತ್ರಜ್ಞಾನದ ಅನುಭವ ದೊರೆಯುತ್ತದೆ.

ಮುಂದೆ ಓದಿ ...
 • Share this:

  ಬೆಂಗಳೂರು: ಅತ್ಯುತ್ತಮ ದರ್ಜೆಯ ತಂತ್ರಜ್ಞಾನ ಸಂಪರ್ಕ ಹೊಂದಿರುವ ಕಾರನ್ನು ಮಾರುಕಟ್ಟೆಗೆ ತರಲು ಮುಂದಾಗಿರುವ ಎಂಜಿ ಮೋಟಾರ್ ಇಂಡಿಯಾ ಮಂಗಳವಾರದಂದು ಶುಭ ಸುದ್ದಿಯನ್ನು ಭಾರತದ ತನ್ನ ಗ್ರಾಹಕರಿಗೆ ನೀಡಿದೆ. ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ತಂತ್ರಜ್ಞಾನ ವಿಭಾಗದಲ್ಲಿ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ.


  ಮುಂಬರುವ ಮಧ್ಯಮ ಗಾತ್ರದ ಎಸ್​ಯುವಿ ಕಾರುಗಳಲ್ಲಿ ಜಿಯೋನ ಐಒಟಿ ಜೊತೆಗೆ ಸಮ್ಮಿಲನಗೊಳಿಸಿ ಸಕ್ರಿಯಗೊಳಿಸಲಾದ ಐಟಿ ವ್ಯವಸ್ಥೆಗಳ ತಡೆರಹಿತ ಸಂಪರ್ಕವನ್ನು  ಒದಗಿಸುತ್ತದೆ. ಇದು ಜಿಯೋ ಹಾಗೂ ಎಂಜಿ ಕಾರು ಬಳಕೆದಾರರಿಗೆ ಹೊಸಾ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿದೆ. ಭವಿಷ್ಯದ ದೃಷ್ಟಿಯಿಂದ ಈ ರೀತಿಯ ತಂತ್ರಜ್ಞಾನ ಭಾರತದಂತಹ ದೇಶಕ್ಕೆ ಅತ್ಯವಶ್ಯಕವಾಗಿದ್ದು, ಎಸ್​ಯುವಿಯಲ್ಲಿ ಇನ್​ಬಿಲ್ಟ್​ ಆಗಿರುವ ಈ ಅಪ್ಲಿಕೇಶನ್​ ಮಾಂತ್ರಿಕ ಅನುಭವಗಳನ್ನು ನೀಡುವುದರೊಂದಿಗೆ ಪ್ರಯಾಣದ ಸಂದರ್ಭದ ಅನುಭವವನ್ನು ಹಿಮ್ಮಡಿಗೊಳಿಸುತ್ತದೆ.


  ಭಾರತದ ಅತಿದೊಡ್ಡ ಸಂಯೋಜಿತ ಟೆಲಿಕಾಂ ಸೇವಾ ಪೂರೈಕೆದಾರ ಜಿಯೋ ತನ್ನ  ಸೇವೆಗಳನ್ನು ತನ್ನ ಗ್ರಾಹಕರಿಗೆ ಈ ಮೂಲಕ ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಎಂಜಿ ಕಾರು ತಯಾರಕ ಕಂಪೆನಿಯ ಮಧ್ಯಮ ಗಾತ್ರದ ಎಸ್​ಯುವಿ ತೆಗೆದುಕೊಳ್ಳುವ ಗ್ರಾಹಕರಿಗೆ ಜಿಯೋ ಸಂಪರ್ಕ ಹೊಂದಿದ ವ್ಯಾಪಕವಾದ ಅಂತರ್ಜಾಲ ಸಂಪರ್ಕ ಮತ್ತು ಉತ್ತಮ ಗುಣಮಟ್ಟದ ನೆಟ್​ವರ್ಕ್​ ಹೊಂದಿದ ಇನ್​ಬಿಲ್ಟ್​ ತಂತ್ರಜ್ಞಾನದ ಅನುಭವ ದೊರೆಯುತ್ತದೆ. ಮಹಾನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದಾಗಲು ಈ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದು.


  ಜಿಯೋದ ಹೊಸ ಯುಗದ ತಂತ್ರಜ್ಞಾನದ ಸಂಪರ್ಕ ಪಡೆದಿರುವ ವಾಹನವು ಹಾರ್ಡ್​ವೇರ್​ ಮತ್ತು ಸಾಫ್ಟ್​ವೇರ್​ ಸಂಪರ್ಕದ ಸಂಯೋಜನೆಯಾಗಿದ್ದು, ಎಂತಹ ಜಾಗದಲ್ಲೂ ನೀವು ಪ್ರಯಾಣ ಮಾಡುತ್ತಿರಲಿ  ಟ್ರೆಂಡಿಂಗ್ ಇನ್ಫೋಟೈನ್ಮೆಂಟ್ ಮತ್ತು ರಿಯಲ್​ ಟೈಮ್​ ಟೆಲಿಮ್ಯಾಟಿಕ್ಸ್ ಅನುಭವ ಪಡೆಯಬಹುದು. ಅಲ್ಲದೇ ಪ್ರಯಾಣದ ವೇಳೆ ಒಂಚೂರು ಬೇಸರವಾಗದಂತೆ ನಿಮ್ಮ ಪ್ರತಿದಿನದ ಕಾರ್ಯಕ್ರಮಗಳನ್ನು ಕಾರಿನಲ್ಲೇ ಪ್ರಯಾಣಿಸುತ್ತಾ, ಆನಂದಿಸುತ್ತಾ ಹೋಗಬಹುದು. ಎಂತಹ ಗುಡ್ಡಗಾಡು ಪ್ರದೇಶಕ್ಕೆ ಹೋದರು ಒಂಚೂರು ವ್ಯತ್ಯಾಸ ಬರದ ಹಾಗೆ ಸೇವೆ ಒದಗಿಸಲಿದೆ ಜಿಯೋ.


  ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ, "ಆಟೋಮೊಬೈಲ್ ಉದ್ಯಮದಲ್ಲಿ  ತಂತ್ರಜ್ಞಾನ ಮತ್ತು ನಾವೀನ್ಯತೆ ಸೇರಿ ಉದ್ಯಮವನ್ನು ಮುನ್ನಡೆಸುತ್ತಿದೆ. ಪ್ರಸ್ತುತ ಸಾಫ್ಟ್ವೇರ್-ಚಾಲಿತ ಸಾಧನಗಳ ಮೇಲೆ ಹೆಚ್ಚು ಜನರು ಹೆಚ್ಚು ಒಲು ತೋರಿಸುತ್ತಿದ್ದು, ಮತ್ತು ಐಒಟಿ ಜಾಗದಲ್ಲಿ ಜಿಯೋದಂತಹ ಟೆಕ್-ಡಿಜೈನರ್​ನೊಂದಿಗೆ ಎಂಜಿ ಮೋಟಾರ್ ಅನ್ನು ಆಟೋಮೊಬೈಲ್ ಉದ್ಯಮದಲ್ಲಿ ಟೆಕ್ ಲೀಡರ್ ಆಗಿ ಸ್ಥಾಪಿಸುವ ಒಂದು ಹೆಜ್ಜೆಯಾಗಿದೆ.


  ಈ ಪಾಲುದಾರಿಕೆಯು ನಮ್ಮ ಮುಂದಿನ ಮಧ್ಯಮ ಗಾತ್ರದ ಸಂಪರ್ಕಿತ ಎಸ್​ಯುವಿ ಚಾಲನಾ ಅನುಭವವನ್ನು ಇನ್ನಷ್ಟು ಸರಳಗೊಳಿಸುತ್ತದೆ ಮತ್ತು ತಂತ್ರಜ್ಞಾನದ ಬೆಂಬಲದೊಂದಿಗೆ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.


  ಆಟೋಮೊಬೈಲ್ ಉದ್ಯಮದಲ್ಲಿ ನಾವೀನ್ಯತೆ ತರುವ ಉದ್ದೇಶ ಮುಂದಿಟ್ಟುಕೊಂಡು, ಎಂಜಿ ಮೋಟಾರ್ ಭಾರತದಲ್ಲಿ ತನ್ನ ಕಾರ್ಯಾಚರಣೆಯ ಆರಂಭಿಸಿದ ದಿನದಿಂದಲೂ ಆಟೋ-ಟೆಕ್ ನಾವೀನ್ಯತೆಯತ್ತ ಗಮನ ಹರಿಸಿದೆ. ಕಾರು ತಯಾರಕ ಈ ಕಂಪೆನಿ ಭಾರತೀಯ ಆಟೋಮೊಬೈಲ್ ಉದ್ಯಮಕ್ಕೆ ಹಲವು ಪ್ರಥಮಗಳನ್ನು ಪರಿಚಯಿಸಿದೆ ಮತ್ತು ಇಂಟರ್ನೆಟ್/ಸಂಪರ್ಕಿತ ಕಾರುಗಳು, ಸ್ವಾಯತ್ತ ಮಟ್ಟದ ADAS ತಂತ್ರಜ್ಞಾನಗಳು ಮತ್ತು ವಿದ್ಯುತ್ ಕಾರುಗಳಿಗೆ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಿದ . ಎಂಜಿ ಮೋಟಾರ್ ಇಂಡಿಯಾ ದೇಶದ ಮೊದಲ ಅಂತರ್ಜಾಲ ಸಂಪರ್ಕಿತ ಕಾರನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು-ಎಂಜಿ ಹೆಕ್ಟರ್, ನಂತರ ಶುದ್ಧ ವಿದ್ಯುತ್ ಇಂಟರ್ನೆಟ್ ಎಸ್​ಯುವಿ-ಎಂಜಿ ಜೆಡ್​ಎಸ್​ ಬಿಡುಗಡೆ ಮಾಡಿದೆ, ಇದರಲ್ಲಿ ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಎಸಿಸಿ) ಮತ್ತು ಇತರ ಸುಧಾರಿತ ಅಂಶಗಳಿವೆ.


  1924 ರಲ್ಲಿ ಯುಕೆಯಲ್ಲಿ ಸ್ಥಾಪನೆಯಾದ ಮೋರಿಸ್ ಗ್ಯಾರೇಜಸ್ ವಾಹನ ತಯಾರಕ ಕಂಪೆನಿ ತಮ್ಮ ಕ್ರೀಡಾ ಕಾರುಗಳು ಮತ್ತು ಕ್ಯಾಬ್ರಿಯೊಲೆಟ್ ಸರಣಿಗಳಿಂದ ವಿಶ್ವಪ್ರಸಿದ್ಧವಾಗಿದ್ದವು. ಬ್ರಿಟಿಷ್ ಪ್ರಧಾನ ಮಂತ್ರಿಗಳು ಮತ್ತು ಬ್ರಿಟಿಷ್ ರಾಜಮನೆತನದವರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತಮ್ಮ ಸ್ಟೈಲಿಂಗ್, ಸೊಬಗು ಮತ್ತು ಚೈತನ್ಯಪೂರ್ಣ ಕಾರ್ಯಕ್ಷಮತೆಗಾಗಿ ಎಂಜಿ ವಾಹನಗಳನ್ನು ಹೆಚ್ಚು ಇಷ್ಟಪಡುತ್ತಾರೆ. 1930 ರಲ್ಲಿ ಯುಕೆ ಯ ಅಬಿಂಗ್ಡಾನ್​ನಲ್ಲಿ ಸ್ಥಾಪಿಸಲಾದ MG ಕಾರ್ ಕ್ಲಬ್, ಸಾವಿರಾರು ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದ್ದು, ಇದು ಕಾರ್ ಬ್ರಾಂಡ್​ಆಗಿ ವಿಶ್ವದ ಅತಿದೊಡ್ಡ ಕ್ಲಬ್​ಗಳಲ್ಲಿ ಒಂದಾಗಿದೆ.


  ಎಂಜಿ ಕಳೆದ 96 ವರ್ಷಗಳಲ್ಲಿ ಆಧುನಿಕ, ಭವಿಷ್ಯದ ಮತ್ತು ನವೀನ ಬ್ರ್ಯಾಂಡ್ ಆಗಿ ವಿಕಸನಗೊಂಡಿದೆ. ಗುಜರಾತಿನ ಹಾಲೋಲ್​ನಲ್ಲಿ ಇರುವ ಅದರ ಅತ್ಯಾಧುನಿಕ ತಯಾರಿಕಾ ಘಟಕವು ವಾರ್ಷಿಕ 80,000 ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸುಮಾರು 2,500 ಉದ್ಯೋಗಿಗಳನ್ನು ಹೊಂದಿದೆ. CASE (ಸಂಪರ್ಕಿತ, ಸ್ವಾಯತ್ತ, ಹಂಚಿದ ಮತ್ತು ವಿದ್ಯುತ್) ಚಲನಶೀಲತೆಯ ದೃಷ್ಟಿಯಿಂದ ನಡೆಸಲ್ಪಡುವ, ಅತ್ಯಾಧುನಿಕ ವಾಹನ ತಯಾರಕವು ಇಂದು ಆಟೋಮೊಬೈಲ್ ವಿಭಾಗದಲ್ಲಿ 'ನವೀನ ಅನುಭವಗಳನ್ನು' ವಿಸ್ತರಿಸಿದೆ.


  ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್​ನ ಅಂಗಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಇತ್ತೀಚಿನ 4ಜಿ ಎಲ್​ಟಿಇ ತಂತ್ರಜ್ಞಾನದೊಂದಿಗೆ ವಿಶ್ವ ದರ್ಜೆಯ ಆಲ್-ಐಪಿ ಡೇಟಾ ಪ್ರಬಲ ಭವಿಷ್ಯದ ಪ್ರೂಫ್ ನೆಟ್ವರ್ಕ್ ಅನ್ನು ನಿರ್ಮಿಸಿದೆ.


  ಇದು ತಳಮಟ್ಟದಿಂದ ಮೊಬೈಲ್ ವಿಡಿಯೋ ನೆಟ್ವರ್ಕ್ ಆಗಿ ರೂಪುಗೊಳಿಸಿರುವ ಏಕೈಕ ನೆಟ್ವರ್ಕ್ ಮತ್ತು ವಾಯ್ಸ್ ಓವರ್ ಎಲ್ ಟಿಇ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದು ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ಸಿದ್ಧವಾಗಿದೆ ಮತ್ತು ತಂತ್ರಜ್ಞಾನಗಳು 5ಜಿ, 6ಜಿ ಮತ್ತು ಅದಕ್ಕಿಂತ ಹೆಚ್ಚಿನದಕ್ಕೆ ಮುಂದುವರೆದಂತೆ ಇನ್ನಷ್ಟು ಡೇಟಾವನ್ನು ಬೆಂಬಲಿಸಲು ಸುಲಭವಾಗಿ ಅಪ್​ಗ್ರೇಡ್​ ಮಾಡಬಹುದು.


  ಇದನ್ನೂ ಓದಿ: CYBER CRIME: 3 ವರ್ಷಗಳಲ್ಲಿ 93 ಸಾವಿರ ಸೈಬರ್ ಅಪರಾಧ ಪ್ರಕರಣ; ಲೋಕಸಭೆಗೆ ಮಾಹಿತಿ ನೀಡಿದ ಸರ್ಕಾರ


  1.3 ಬಿಲಿಯನ್ ಭಾರತೀಯರಿಗೆ ಡಿಜಿಟಲ್ ಭಾರತದ ಅನುಭವ ನೀಡಲುಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಭಾರತವನ್ನು ಜಾಗತಿಕ ನಾಯಕತ್ವಕ್ಕೆ ತೆರೆದುಕೊಳ್ಳಲು ಭಾರತೀಯ ಡಿಜಿಟಲ್ ಸೇವೆಗಳ ಜಾಗದಲ್ಲಿ ಜಿಯೋ ಪರಿವರ್ತನೀಯ ಬದಲಾವಣೆಗಳನ್ನು ತಂದಿದೆ. ಇದು ಪ್ರತಿಯೊಬ್ಬರೂ ಜಿಯೋ ಡಿಜಿಟಲ್ ಜೀವನವನ್ನು ನಡೆಸಲು ನೆಟ್ವರ್ಕ್, ಸಾಧನಗಳು, ಅಪ್ಲಿಕೇಶನ್​ಗಳು ಮತ್ತು ಸೇವಾ ಅನುಭವ ಮತ್ತು ಕೈಗೆಟುಕುವ ದರಗಳನ್ನು ಒಳಗೊಂಡ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು