Sushma ChakreSushma Chakre
|
news18-kannada Updated:January 25, 2021, 11:31 AM IST
ಪ್ರಾತಿನಿಧಿಕ ಚಿತ್ರ
ಸಣ್ಣಪುಟ್ಟ ಅನುಮಾನಗಳು ಕೆಲವೊಮ್ಮೆ ಜೀವವನ್ನೇ ಬಲಿ ಪಡೆದುಬಿಡುತ್ತವೆ. ಅದರಲ್ಲೂ ಗಂಡ-ಹೆಂಡತಿಯ ಸಂಸಾರಕ್ಕೆ ನಂಬಿಕೆಯೇ ಅಡಿಪಾಯ. ಈ ನಂಬಿಕೆಯ ಕೊರತೆಯಿಂದಲೇ ಬಹುತೇಕ ಮದುವೆಗಳು ಮುರಿದುಬೀಳುತ್ತವೆ. ಕೊಂಚ ತಾಳ್ಮೆಯಿಂದ ಯೋಚಿಸಿದರೆ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಮೆಕ್ಸಿಕೋದಲ್ಲಿ ಒಬ್ಬಳು ಮಹಿಳೆ ತನ್ನ ಗಂಡ ಸುಂದರ ಯುವತಿಯೊಂದಿಗೆ ಇರುವ ಫೋಟೋವನ್ನು ನೋಡಿ ಕೋಪದಿಂದ ಆತನಿಗೆ ಚಾಕುವಿನಿಂದ ಇರಿದಿದ್ದಾಳೆ. ಆದರೆ, ಮತ್ತೊಮ್ಮೆ ಆ ಫೋಟೋವನ್ನು ಸರಿಯಾಗಿ ನೋಡಿದ ಮೇಲೆ ತನ್ನ ಎಡವಟ್ಟಿಗೆ ಕೈ ಕೈ ಹಿಸುಕಿಕೊಂಡಿದ್ದಾಳೆ! ಅಷ್ಟಕ್ಕೂ ಆಕೆ ಮಾಡಿದ ಎಡವಟ್ಟೇನು ಗೊತ್ತಾ?
ಮೆಕ್ಸಿಕೋದ ಲಿಯೋನೊರ ಎಂಬ ಮಹಿಳೆಯೊಬ್ಬಳು ತನ್ನ ಗಂಡನ ಜೊತೆಗೆ ಯುವತಿಯಿದ್ದ ಫೋಟೋ ನೋಡಿ ಕೋಪದಿಂದ ಚಾಕುವಿನಿಂದ ಇರಿದಿದ್ದಾಳೆ. ಗಂಡನ ಮೊಬೈಲ್ ನೋಡುತ್ತಿದ್ದ ಆಕೆಗೆ ಅದರಲ್ಲಿ ಯುವತಿಯೊಂದಿಗೆ ತನ್ನ ಗಂಡ ಇದ್ದ ಫೋಟೋಗಳನ್ನು ನೋಡಿ ಗಂಡನ ಮೇಲೆ ಕೋಪ ಉಕ್ಕಿತು. ಹಿಂದೆಮುಂದೆ ಯೋಚಿಸದ ಆಕೆ ತನ್ನ ಗಂಡ ಬೇರೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡು ತನಗೆ ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ, ಚಾಕುವಿನಿಂದ ಆತನ ಮೇಲೆ ಹಲ್ಲೆ ಮಾಡಿದ್ದಾಳೆ.
ಇದನ್ನೂ ಓದಿ: ರಿಯಲ್ ಲೈಫ್ನಲ್ಲಿ ಮುದಲ್ವನ್; ಒಂದು ದಿನ ಸಿಎಂ ಆಗಿ 20 ವರ್ಷದ ಹುಡುಗಿ ಮಾಡಿದ್ದೇನು?
ಬಳಿಕ ಆ ಫೋಟೋವನ್ನು ಇನ್ನೊಮ್ಮೆ ನೋಡಿದಾಗ ಅದು ತಾವಿಬ್ಬರೂ ಡೇಟಿಂಗ್ ಮಾಡುವಾಗ ತೆಗೆಸಿಕೊಂಡಿದ್ದ ಹಳೆಯ ಫೋಟೋ ಎಂಬುದು ಗೊತ್ತಾಗಿದೆ!. ತನ್ನ ಗಂಡನ ಜೊತೆ ತಾನೇ ತೆಗೆಸಿಕೊಂಡಿದ್ದ ಫೋಟೋವನ್ನು ಮೊಬೈಲ್ನಲ್ಲಿ ನೋಡಿ ತಪ್ಪು ತಿಳಿದುಕೊಂಡ ಮಹಿಳೆ ಗಂಡನಿಗೆ ಚಾಕುವಿನಿಂದ ಇರಿದಿದ್ದಾಳೆ. ತಮ್ಮಿಬ್ಬರ ಹಳೆಯ ಫೋಟೋಗಳನ್ನು ಆಕೆಯ ಗಂಡ ಡಿಜಿಟಲೈಸ್ ಮಾಡಿ, ಮೊಬೈಲ್ನಲ್ಲಿ ಸೇವ್ ಮಾಡಿಕೊಂಡಿದ್ದ.
ತನ್ನ ಹಳೆಯ ಫೋಟೋವನ್ನು ಗುರುತಿಸದ ಆಕೆ ತನ್ನ ಗಂಡ ಬೇರೊಬ್ಬ ಯುವತಿಯೊಂದಿಗೆ ಇದ್ದಾನೆಂದು ಕೋಪದಿಂದ ಈ ರೀತಿ ಮಾಡಿದ್ದಾಳೆ ಎಂದು ಮೆಕ್ಸಿಕೋದ ಪತ್ರಿಕೆ ವರದಿ ಮಾಡಿದೆ. ಆಕೆಯ ಗಂಡ ಆ ಫೋಟೋದ ಬಗ್ಗೆ ವಿವರ ನೀಡುವ ಮೊದಲು ಆಕೆ ಇರಿದಾಗಿತ್ತು. ಮೆಕ್ಸಿಕೋದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
Published by:
Sushma Chakre
First published:
January 25, 2021, 11:30 AM IST