Luxury Jet: ಮೆಕ್ಸಿಕನ್ ಅಧ್ಯಕ್ಷರ ಲಕ್ಷುರಿ ಜೆಟ್​ನಲ್ಲಿ ಇನ್ಮುಂದೆ ಮುಂದೆ ಮದುವೆ, ಪಾರ್ಟಿ, ಫಂಕ್ಷನ್

ಮೆಕ್ಸಿಕನ್ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನುವಲ್ ಲೋಪೆಜ್ ಓಬ್ರಡಾರ್ ಅವರು, ಅಧ್ಯಕ್ಷೀಯ ಜೆಟ್ ಅನ್ನು ಇನ್ನು ಮುಂದೆ ಆ ಜೆಟ್ ಅನ್ನು ಮದುವೆ ಅಥವಾ ಪಾರ್ಟಿಗಳಿಗೆ ಬಾಡಿಗೆಗೆ ಕೊಡುವುದಾಗಿ ಅವರು ಹೇಳಿದ್ದಾರೆ. ಬೋಯಿಂಗ್ 787 ಜೆಟ್ ಅತ್ಯಂತ ಐಶಾರಾಮಿಯಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೆಕ್ಸಿಕನ್ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನುವಲ್ ಲೋಪೆಜ್ ಓಬ್ರಡಾರ್ ಅವರು, ಅಧ್ಯಕ್ಷೀಯ ಜೆಟ್ (Presidential jet) ಅನ್ನು ಮಾರಾಟ ಮಾಡುವ ತಮ್ಮ ನಿರ್ಧಾರವನ್ನು ಸೋಮವಾರ ಕೈಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ಆ ಜೆಟ್ ಅನ್ನು ಮದುವೆ (Wedding) ಅಥವಾ ಪಾರ್ಟಿಗಳಿಗೆ (Party) ಬಾಡಿಗೆಗೆ (Rent) ಕೊಡುವುದಾಗಿ ಅವರು ಹೇಳಿದ್ದಾರೆ. ಬೋಯಿಂಗ್ 787 ಜೆಟ್ ಅತ್ಯಂತ ಐಶಾರಾಮಿಯಾಗಿದೆ (Luxury) ಎಂದು ಪರಿಗಣಿಸಿರುವ ಆ್ಯಂಡ್ರೆಸ್ ಮ್ಯಾನುವಲ್ ಲೋಪೆಜ್ ಓಬ್ರಡಾರ್, ಅದನ್ನು ಬಳಸಲು ನಿರಾಕರಿಸಿದ್ದಾರೆ. ಈ ಮೊದಲು ಅದನ್ನು ಮಾರಾಟ ಮಾಡುವ ಉದ್ದೇಶ ಅವರಿಗಿತ್ತು. ಆ ಪ್ರಯತ್ನವನ್ನು ನಡೆಸಿದ್ದರೂ ಕೂಡ. ಆದರೆ ಇದೀಗ ತನ್ನ ಸರಕಾರವು ಆ ಐಶಾರಾಮಿ ವಿಮಾನವನ್ನು ಮಾರಾಟ ಮಾಡುವಲ್ಲಿ ವಿಫಲವಾಗಿದೆ ಎಂಬುದನ್ನು ಅವರು ಸ್ವತಃ ಒಪ್ಪಿಕೊಂಡಿದ್ದಾರೆ.

ಹಾಗಾಗಿ ಇದೀಗ ಅದನ್ನು ಮಾರಾಟ ಮಾಡುವ ಬದಲಿಗೆ ಅಧ್ಯಕ್ಷರು, ಹೊಸ ಮೆಕ್ಸಿಕೋ ಸಿಟಿ ಫೆಲಿಪ್ ಏಂಜಲೀಸ್ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಮಿಲಿಟರಿ ನೇತೃತ್ವದ ಕಂಪೆನಿಗೆ ಜೆಟ್ ಅನ್ನು ಹಾಗೆಯೇ ಕೊಟ್ಟು ಬಿಡುವುದಾಗಿ ಅವರು ಹೇಳಿದ್ದಾರೆ. ಆ ವಿಮಾನವನ್ನು ಅಲ್ಲಿ ನಿಲ್ಲಿಸಲಾಗುವುದು ಮತ್ತು ವಿಮಾನದಲ್ಲಿ ಪಾರ್ಟಿಗಳನ್ನು ನಡೆಸಲು ಬಯಸುವ ಮಂದಿಗೆ, ಅಲ್ಲಿ ಅದು ಬಾಡಿಗೆಗೆ ಲಭ್ಯವಿರುತ್ತದೆ ಎಂದು ಲೊಪೇಜ್ ಓಬ್ರಡಾರ್ ತಿಳಿಸಿದ್ದಾರೆ.

ಮದುವೆ, ಬರ್ತ್​ಡೇ, ಪಾರ್ಟಿಗಳಿಗೆ ಅವಕಾಶ

“ಬಾಡಿಗೆ ಶುಲ್ಕವು, ಅದರ ವೆಚ್ಚ ಮತ್ತು ನಿರ್ವಹಣೆಗೆ ಪಾವತಿ ಆಗುತ್ತದೆ” ಎಂದು ಲೊಪೇಜ್ ಓಬ್ರಡಾರ್ ಹೇಳಿದ್ದಾರೆ. “ಯಾರಿಗಾದರೂ ಬೇಕಾಗಿದ್ದರೆ, ಇದು ಸಾರ್ವಜನಿಕ ಬಳಕೆಗೆ ಲಭ್ಯವಿದೆ. ಏಕೆಂದರೆ ಅವರು ಮದುವೆಯಾಗುತ್ತಿದ್ದಾರೆ. . . ಮತ್ತು ತಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಕರೆ ತರಲು ಇಷ್ಟ ಪಡುತ್ತಾರೆ. ಅಥವಾ ವಯಸ್ಸಿಗೆ ಬಂದದ್ದರ ಪಾರ್ಟಿಗಳು, ಹುಟ್ಟುಹಬ್ಬಗಳು ಏನೇ ಇದ್ದರು ಇದರಲ್ಲಿ ಮಾಡಬಹುದು” ಎಂದಿದ್ದಾರೆ ಅವರು.

15 ವರ್ಷದ ನಂತರ ಹೆಣ್ಮಕ್ಕಳಿಗಾಗಿ ದೊಡ್ಡ ದೊಡ್ಡ ಪಾರ್ಟಿ

ಮೆಕ್ಸಿಕೋದಲ್ಲಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತೆ ಒಂದು ಅಭ್ಯಾಸ ರೂಢಿಯಲ್ಲಿದೆ. ಅದೇನೆಂದರೆ, ಅಲ್ಲಿನ ಕುಟುಂಬಗಳು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ 15 ವರ್ಷ ವಯಸ್ಸಾದಾಗ, ಅವರಿಗಾಗಿ ಆಗಾಗ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುತ್ತಿರುತ್ತಾರೆ.

2018 ರಿಂದ, ಲೊಪೇಜ್ ಓಬ್ರಡಾರ್ ಅವರು, ಈ ಜೆಟ್ ಖರೀದಿಸಲು, ಕಾರ್ಪರೇಶನ್‍ಗಳು ಮತ್ತು ಉದ್ಯಮ ಕಾರ್ಯ ನಿರ್ವಾಹಕರುಗಳಿಗೆ ಹಲವಾರು ಆಮೀಷಗಳನ್ನು ಒಡ್ಡಲು ಪ್ರಯತ್ನಿಸಿದ್ದರು. ಅಷ್ಟೇ ಅಲ್ಲ ಅದಕ್ಕಾಗಿ ಅವರು, ಒಂದು ಸಾಂಕೇತಿಕ ರಾಫೆಲ್ ಅನ್ನು ಕೂಡ ಆಯೋಜಿಸಿದ್ದರು.

ಇದನ್ನೂ ಓದಿ: ಮಾ.31ರಂದು ರಾಜ್ಯಕ್ಕೆ ರಾಹುಲ್ ಗಾಂಧಿ, ನವೆಂಬರ್ 27ಕ್ಕೆ ವಿಧಾನಸಭೆ ಚುನಾವಣೆನಾ?: DK Shivakumar ಹೇಳಿದ್ದೇನು?

ಲೋಪೆಜ್ ಓಬ್ರಡಾರ್ ಅವರಿಗೆ ತಮ್ಮ ಸರಳತೆಯ ಬಗ್ಗೆ ಬಹಳ ಹೆಮ್ಮೆ ಇದೆ. ಅವರು ವಾಣಿಜ್ಯ ವಿಮಾನಗಳನ್ನು ಹಾರಿಸುತ್ತಾರೆ ಮತ್ತು ವಿದೇಶಕ್ಕೆ ಕೇವಲ ಒಂದೇ ಒಂದು ಪ್ರಯಾಣವನ್ನು ಮಾಡಿದ್ದಾರೆ.

ಈ ವಿಮಾನವನ್ನು ಮಾರಾಟ ಮಾಡುವುದು ಕಷ್ಟ, ಏಕೆಂದರೆ ಅದು ತುಂಬಾ ವಿಶೇಷವಾಗಿದೆ ಮತ್ತು ಆದೇಶಕ್ಕೆ ತಕ್ಕಂತೆ ತಯಾರಿಸಲ್ಪಟ್ಟಿರುವುದಾಗಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರವು ಇನ್ನು ಕೂಡ ವಿಮಾನದ ಕೊಡುಗೆಗಳಿಗೆ ಮುಕ್ತವಾಗಿರುತ್ತದೆ, ಆದರೆ ಸುಮಾರು ಮೂರೂವರೆ ವರ್ಷಗಳ ನಂತರ ಆ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Peace Talk: ಉಕ್ರೇನ್-ರಷ್ಯಾ ಯುದ್ಧ ಶಾಂತಿ ಸಂಧಾನಕ್ಕೆ ಹೋದವರಿಗೇ ವಿಷ ಉಣಿಸಿದ್ರು..!

ಈ ವಿಮಾನವನ್ನು 200 ಮಿಲಿಯನ್ ಡಾಲರ್‌ಗೆ ಖರೀದಿಸಲಾಗಿತ್ತು. ಈ ಮೊದಲು, ಹಿಂದಿನ ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೋ ಕೂಡ ಅದನ್ನು ಬಳಸಿದ್ದರು. ಈ ವಿಮಾನವನ್ನು ಮಾರಾಟ ಮಾಡುವುದು ಸುಲಭದ ಸಂಗತಿಯಲ್ಲ, ತುಂಬಾ ಕಷ್ಟದ್ದು. ಏಕೆಂದರೆ, ಅದನ್ನು ಕೇವಲ 80 ಮಂದಿಯನ್ನು ಮಾತ್ರ ಸಾಗಿಸಲು ಅನುಕೂಲ ಆಗುವಂತೆ ತಯಾರಿಸಲಾಗಿದೆ ಮತ್ತು ಖಾಸಗಿ ಸ್ನಾನಗೃಹವುಳ್ಳ ಸಂಪೂರ್ಣ ಅಧ್ಯಕ್ಷೀಯ ಸೂಟ್ ಕೂಡ ಇದೆ.

300 ಜನರನ್ನು ಸಾಗಿಸುವ ಸಾಮರ್ಥ್ಯ

ಆದರೆ ಈ ವಿಮಾನವನ್ನು, 300 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ, ವಿಶಿಷ್ಟ ಪ್ರಯಾಣಿಕ ಜೆಟ್ ಆಗಿ ಪರಿವರ್ತನೆ ಮಾಡುವುದು ದುಬಾರಿ ಬಾಬ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Published by:Divya D
First published: