HOME » NEWS » National-international » METRO MAN SREEDHARAN WONT BE BJPS CM CANDIDATE IN KERALA UNION MINISTER V MURALEEDHARAN RHHSN

Metro Man Sreedharan | ಮೆಟ್ರೋಮ್ಯಾನ್ ಶ್ರೀಧರನ್ ಕೇರಳ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ; ಗೊಂದಲದ ಹೇಳಿಕೆ ನೀಡಿದ ಕೇಂದ್ರ ಸಚಿವ

ದೆಹಲಿ ಮೆಟ್ರೋ ರೈಲ್ ಕಾರ್ಪೋರೆಷನ್​ ಮುಖ್ಯಸ್ಥರಾಗಿರುವ ಶ್ರೀಧರನ್ ಅವರು ಕೇರಳ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಇಂದು ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಒಂದು ವೇಳೆ ನಾನು ಪುನಃ ವಾಪಸ್ಸಾದರೂ ಯೂನಿಫಾರಂ ತೊಡುವುದಿಲ್ಲ. ಆದರೆ, ಖಂಡಿತವಾಗಿಯೂ ಪಾಲರಿವಟ್ಟಂ ಫ್ಲೈಓವರ್ ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

news18-kannada
Updated:March 4, 2021, 9:23 PM IST
Metro Man Sreedharan | ಮೆಟ್ರೋಮ್ಯಾನ್ ಶ್ರೀಧರನ್ ಕೇರಳ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ; ಗೊಂದಲದ ಹೇಳಿಕೆ ನೀಡಿದ ಕೇಂದ್ರ ಸಚಿವ
ಮೆಟ್ರೋ ಮ್ಯಾನ್ ಶ್ರೀಧರನ್
  • Share this:
ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ಇ. ಶ್ರೀಧರನ್​ ಅವರು ಕೇರಳ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಇಂದು ಘೋಷಣೆ ಮಾಡಿತ್ತು. ಈ ಮಾಡಿದ ಕೆಲವೇ ಸಮಯದ ನಂತರ ಕೇಂದ್ರ ಸಚಿವ ವಿ. ಮುರಳೀಧರನ್ ಅವರು ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ಕೇರಳ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ಅವರು ಈ ಸಂಬಂಧ ಯಾವುದೇ ಹೇಳಿಕೆ ನೀಡಿಲ್ಲ ಎಂಬುದನ್ನು ನಾನು ಮರುಪರಿಶೀಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

"ನಾನು ಹೇಳಲು ಬಯಸಿದ್ದು,  ಶ್ರೀಧರನ್​ ಅವರು ಕೇರಳದ ಮುಂದಿನ ಸಿಎಂ ಅಭ್ಯರ್ಥಿ ಎಂದು  ಬಿಜೆಪಿ  ಘೋಷಣೆ ಮಾಡಿದೆ ಎಂದು ನಾನು ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡಿದ್ದೇನೆ. ನಂತರ, ನಾನು ಪಕ್ಷದ ಮುಖ್ಯಸ್ಥರೊಂದಿಗೆ ಈ ವಿಚಾರವಾಗಿ ಮರುಪರಿಶೀಲನೆ ನಡೆಸಿದ್ದೇನೆ, ಅವರು ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಹೇಳಿದರು, " ಎಂದು ವಿ. ಮುರಳೀಧರನ್ ಅವರು ಎಎನ್ಐಗಎ ಹೇಳಿದ್ದಾರೆ. 

ಶ್ರೀಧರನ್​ ಅವರು ದೆಹಲಿ ಮೆಟ್ರೋ ನಿರ್ಮಾತೃ. ಕಳೆದ ಫೆಬ್ರವರಿ 25ರಂದು ಕೇಂದ್ರ ಸಚಿವ ಆರ್​.ಕೆ. ಸಿಂಗ್​ ಸಮ್ಮುಖದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಚಂಗಾರಂಕುಲಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ಇದನ್ನು ಓದಿ: ಡಿಎಂಆರ್​ಸಿ ವೃತ್ತಿಗೆ ಶ್ರೀಧರನ್ ವಿದಾಯ; ಕೇರಳ ಸಿಎಂ ಅಭ್ಯರ್ಥಿಯಾಗಿ ಬಿಜೆಪಿಯಿಂದ ಮೆಟ್ರೋಮ್ಯಾನ್ ಸ್ಪರ್ಧೆ
1932 ಜೂನ್ 12ರಂದು ಕೇರಳದ ಪಾಲಕ್ಕಾಡ್​ನಲ್ಲಿ ಜನಿಸಿದ ಇ. ಶ್ರೀಧರನ್ ಅವರು 1994ರಿಂದ ದೆಹಲಿ ಮೆಟ್ರೋ ರೈಲ್ ಕಾರ್ಪೊರೆಷನ್​ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೊಂಕಣ ರೈಲ್ವೆ ಕನಸನ್ನು ಸಾಕಾರಗೊಳಿಸಿದವರು ಇವರೆ. ಶ್ರೀಧರನ್ ಅವರು ಭಾರತೀಯ ರೈಲ್ವೆಗೆ ಸಲ್ಲಿಸಿರುವ ಅನುಪಮ ಸೇವೆಗಾಗಿ 2001ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚಿಗೆ ಇವರನ್ನು ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಲಹಾ ಗುಂಪು ಸಸ್ಟೀನೇಬಲ್ ಟ್ರಾನ್ಸ್​ಪೋರ್ಟ್ ಸಂಸ್ಥೆಯಲ್ಲಿ ಕೆಲಸ ಮಾಡಲು ವಿಶ್ವಸಂಸ್ಥೆ ಅಧ್ಯಕ್ಷರಾದ ಬಾನ್​ ಕಿ ಮೂನ್ ಅವರು ಆಹ್ವಾನಿಸಿದ್ದರು. ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ಶ್ರೀಧರನ್ ಅವರು ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಅದೇ ಪಕ್ಷದಿಂದ ಅಭ್ಯರ್ಥಿಯಾಗಿ ರಾಜಕೀಯ ರಂಗಕ್ಕೆ ದುಮುಕ್ಕುತ್ತಿದ್ದಾರೆ.
Youtube Video

ದೆಹಲಿ ಮೆಟ್ರೋ ರೈಲ್ ಕಾರ್ಪೋರೆಷನ್​ ಮುಖ್ಯಸ್ಥರಾಗಿರುವ ಶ್ರೀಧರನ್ ಅವರು ಕೇರಳ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಇಂದು ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಒಂದು ವೇಳೆ ನಾನು ಪುನಃ ವಾಪಸ್ಸಾದರೂ ಯೂನಿಫಾರಂ ತೊಡುವುದಿಲ್ಲ. ಆದರೆ, ಖಂಡಿತವಾಗಿಯೂ ಪಾಲರಿವಟ್ಟಂ ಫ್ಲೈಓವರ್ ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಮುಂದುವರೆದು, ನಾನು ಶಾಸಕನಾಗಿ ಆಯ್ಕೆಯಾಗಬಹುದು, ಇಲ್ಲ ಬೇರೆ ಯಾವುದೇ ಸ್ಥಾನದಲ್ಲಿ ಇರಬಹುದು. ಕಾಮಗಾರಿ ನಡೆಯುವಾಗ ನಾನು ಅದರ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಡಿಎಂಆರ್​ಸಿಯಿಂದ ರಾಜೀನಾಮೆ ಸಲ್ಲಿಸಿದ ನಂತರವೇ ನಾನು ನನ್ನ ನಾಮಪತ್ರ ಸಲ್ಲಿಸುತ್ತೇನೆ ಎಂದು ಇದೇ ವೇಳೆ ಹೇಳಿದರು.
Published by: HR Ramesh
First published: March 4, 2021, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories