HOME » NEWS » National-international » METRO MAN SREEDHARAN TO BE BJPS CHIEF MINISTERIAL CANDIDATE FOR KERALA ELECTIONS RHHSN

ಡಿಎಂಆರ್​ಸಿ ವೃತ್ತಿಗೆ ಶ್ರೀಧರನ್ ವಿದಾಯ; ಕೇರಳ ಸಿಎಂ ಅಭ್ಯರ್ಥಿಯಾಗಿ ಬಿಜೆಪಿಯಿಂದ ಮೆಟ್ರೋಮ್ಯಾನ್ ಸ್ಪರ್ಧೆ

ಸರ್ಕಾರದ ಪ್ರಮುಖ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಯನ್ನು ಮುಂದುವರಿಸುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಶ್ರೀಧರನ್ ಅವರು ಖಂಡಿತವಾಗಿಯೂ  ಮೇಲ್ವಿಚಾರಣೆ ವಹಿಸುತ್ತೇನೆ. ಆದರೆ, ಸಮವಸ್ತ್ರದಲ್ಲಿ ಅಲ್ಲ ಎಂದು ಹೇಳಿದರು.

news18-kannada
Updated:March 4, 2021, 3:54 PM IST
ಡಿಎಂಆರ್​ಸಿ ವೃತ್ತಿಗೆ ಶ್ರೀಧರನ್ ವಿದಾಯ; ಕೇರಳ ಸಿಎಂ ಅಭ್ಯರ್ಥಿಯಾಗಿ ಬಿಜೆಪಿಯಿಂದ ಮೆಟ್ರೋಮ್ಯಾನ್ ಸ್ಪರ್ಧೆ
ಇ. ಶ್ರೀಧರನ್
  • Share this:
ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಇ. ಶ್ರೀಧರನ್ ಅವರು ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಕೇರಳ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಶ್ರೀಧರನ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ತಮ್ಮ ಅವರು ತಮ್ಮ ವೃತ್ತಿಯನ್ನು ತೊರೆಯಲಿದ್ದಾರೆ. ಇಂದು ಗುರುವಾರ ಶ್ರೀಧರನ್ ಅವರು ಕೊನೆಯದಾಗಿ ಡಿಎಂಆರ್​ಸಿ ಯೂನಿಫಾರಂ ತೊಡಲಿದ್ದಾರೆ. ದೆಹಲಿ ಮೆಟ್ರೋ ರೈಲ್ ಕಾರ್ಪೋರೆಷನ್​ (ಡಿಎಂಆರ್​ಸಿ) ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸಿಎಂ ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್ ಶ್ರೀಧರನ್ ಅವರನ್ನು ಚುನಾವಣಾ ಕಣಕ್ಕೆ ಇಳಿಸುತ್ತಿದೆ.

ಪಾಲರಿವಟ್ಟಂ ಫ್ಲೆವರ್ ಮರುನಿರ್ಮಾಣ ಅಂತಿಮ ಹಂತದ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇ. ಶ್ರೀಧರನ್ ಅವರು, ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಶಾಸಕನಾಗಿ ಅಥವಾ ಬೇರೆ ಇನ್ಯಾವುದೇ ಹುದ್ದೆಯಲ್ಲಿ ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಒಂದು ವೇಳೆ ನಾನು ಪುನಃ ವಾಪಸ್ಸಾದರೂ ಯೂನಿಫಾರಂ ತೊಡುವುದಿಲ್ಲ. ಆದರೆ, ಖಂಡಿತವಾಗಿಯೂ ಈ ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಮುಂದುವರೆದು, ನಾನು ಶಾಸಕನಾಗಿ ಆಯ್ಕೆಯಾಗಬಹುದು, ಇಲ್ಲ ಬೇರೆ ಯಾವುದೇ ಸ್ಥಾನದಲ್ಲಿ ಇರಬಹುದು. ಕಾಮಗಾರಿ ನಡೆಯುವಾಗ ನಾನು ಅದರ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಡಿಎಂಆರ್​ಸಿಯಿಂದ ರಾಜೀನಾಮೆ ಸಲ್ಲಿಸಿದ ನಂತರವೇ ನಾನು ನನ್ನ ನಾಮಪತ್ರ ಸಲ್ಲಿಸುತ್ತೇನೆ ಎಂದು ಇದೇ ವೇಳೆ ಹೇಳಿದರು.

ರಾಜಕೀಯವಾಗಿ ಪ್ರಮುಖ ಅಂಶವಾಗಿರುವ ಪಾಲರಿವಟ್ಟಂ ಫ್ಲೈಓವರ್ ಯೋಜನೆಯ ಮುಖ್ಯ ಸಲಹೆಗಾರರಾಗಿ ಶ್ರೀಧರನ್ ಅವರನ್ನು ಸರ್ಕಾರ ನೇಮಿಸಿತ್ತು. ನಾನು ಈ ಉಡುಗೆಯನ್ನು ಧರಿಸುವ ಕೊನೆಯ ದಿನ ಇದು. ಇದು ಡಿಎಂಆರ್‌ಸಿಯ ವಿಶಿಷ್ಟ ಹೊರಾಂಗಣ ಸಮವಸ್ತ್ರವಾಗಿದೆ, ಎಂದು ಶ್ರೀಧರನ್ ಅವರು ಗುರುವಾರ ಹೇಳಿದರು. ಅವರು ಮೊದಲು ಈ ಸಮವಸ್ತ್ರವನ್ನು 1997 ರ ನವೆಂಬರ್‌ನಲ್ಲಿ ದೆಹಲಿಯಲ್ಲಿ ಧರಿಸಿದ್ದರು ಮತ್ತು 24 ವರ್ಷಗಳ ಕಾಲ ಅದೇ ಕೆಲಸ ಮುಂದುವರಿಸಿದರು.

ಇದನ್ನು ಓದಿ: ಬಿಬಿಸಿ ರೆಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಾಯಿ ನಿಂದಿಸಿದ ಕಾಲರ್; ವ್ಯಾಪಕ ಖಂಡನೆ

ಸರ್ಕಾರದ ಪ್ರಮುಖ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಯನ್ನು ಮುಂದುವರಿಸುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಶ್ರೀಧರನ್ ಅವರು ಖಂಡಿತವಾಗಿಯೂ  ಮೇಲ್ವಿಚಾರಣೆ ವಹಿಸುತ್ತೇನೆ. ಆದರೆ, ಸಮವಸ್ತ್ರದಲ್ಲಿ ಅಲ್ಲ ಎಂದು ಹೇಳಿದರು.
1932 ಜೂನ್ 12ರಂದು ಕೇರಳದ ಪಾಲಕ್ಕಾಡ್​ನಲ್ಲಿ ಜನಿಸಿದ ಇ. ಶ್ರೀಧರನ್ ಅವರು 1994ರಿಂದ ದೆಹಲಿ ಮೆಟ್ರೋ ರೈಲ್ ಕಾರ್ಪೊರೆಷನ್​ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೊಂಕಣ ರೈಲ್ವೆ ಕನಸನ್ನು ಸಾಕಾರಗೊಳಿಸಿದವರು ಇವರೆ. ಶ್ರೀಧರನ್ ಅವರು ಭಾರತೀಯ ರೈಲ್ವೆಗೆ ಸಲ್ಲಿಸಿರುವ ಅನುಪಮ ಸೇವೆಗಾಗಿ 2001ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚಿಗೆ ಇವರನ್ನು ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಲಹಾ ಗುಂಪು ಸಸ್ಟೀನೇಬಲ್ ಟ್ರಾನ್ಸ್​ಪೋರ್ಟ್ ಸಂಸ್ಥೆಯಲ್ಲಿ ಕೆಲಸ ಮಾಡಲು ವಿಶ್ವಸಂಸ್ಥೆ ಅಧ್ಯಕ್ಷರಾದ ಬಾನ್​ ಕಿ ಮೂನ್ ಅವರು ಆಹ್ವಾನಿಸಿದ್ದರು. ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ಶ್ರೀಧರನ್ ಅವರು ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಅದೇ ಪಕ್ಷದಿಂದ ಅಭ್ಯರ್ಥಿಯಾಗಿ ರಾಜಕೀಯ ರಂಗಕ್ಕೆ ದುಮುಕ್ಕುತ್ತಿದ್ದಾರೆ. ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶ್ರೀಧರನ್ ಅವರು ರಾಜಕೀಯ ರಂಗ ಪ್ರವೇಶಿಸಿದ್ದಾರೆ.
Published by: HR Ramesh
First published: March 4, 2021, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories