ಮೆಸ್ಸಿಯ ಅಭಿಮಾನಿ ಈ ಪುಟ್ಟ ಬಾಲಕನೇ ಈಗ ತಾಲಿಬಾನ್ ಉಗ್ರರ ಟಾರ್ಗೆಟ್.!!!

ಈ ಚಿತ್ರಹಿಂಸೆಯನ್ನು ವಿರೋಧಿಸಿದ ಸಂಬಂಧಿಕರನ್ನು ತಾಲಿಬಾನಿ ಉಗ್ರರು ಕೊಲೆ ಮಾಡುತ್ತಿದ್ದಾರೆ. ಇವರೊಂದಿಗೆ ಬೇರೆ ಸಂಘಟನೆಗಳೂ ಕೂಡ ಅಹ್ಮದಿ ಕುಟುಂಬವನ್ನು ಹಣಕ್ಕಾಗಿ ಪೀಡಿಸುತ್ತಿದೆ ಎಂದು ಸುದ್ದಿಯಾಗಿದೆ.

zahir | news18
Updated:February 17, 2019, 8:51 AM IST
ಮೆಸ್ಸಿಯ ಅಭಿಮಾನಿ ಈ ಪುಟ್ಟ ಬಾಲಕನೇ ಈಗ ತಾಲಿಬಾನ್ ಉಗ್ರರ ಟಾರ್ಗೆಟ್.!!!
ಅಹ್ಮದಿ-ಮೆಸ್ಸಿ
  • News18
  • Last Updated: February 17, 2019, 8:51 AM IST
  • Share this:
ಈ ಪುಟ್ಟ ಬಾಲಕನ ಹೆಸರು ಮುರ್ತಾಜಾ ಅಹ್ಮದಿ. ಅಫಘಾನಿಸ್ತಾನದ ಗುಡ್ಡಗಾಡು ಪ್ರದೇಶದ ಫುಟ್​ಬಾಲ್ ಅಭಿಮಾನಿ. ಅದರಲ್ಲೂ ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿಯ ಕಟ್ಟಾಭಿಮಾನಿ. 2016 ರಲ್ಲಿ ಅಹ್ಮದಿ  ಮೆಸ್ಸಿಯ ಪ್ಲಾಸ್ಟಿಕ್ ಜೆರ್ಸಿ ತೊಟ್ಟು ಸಖತ್ ಸುದ್ದಿಯಾಗಿದ್ದನು. ಅಷ್ಟೇ ಅಲ್ಲದೆ ವಿಶ್ವ ಫುಟ್​ಬಾಲ್ ಪ್ರಿಯರ ಗಮನಸೆಳೆದಿದ್ದ. ಈ ಬಾಲಕನ ಫೋಟೋ ವೈರಲ್ ಆಗಿದ್ದರಿಂದ ಖುದ್ದು ಮೆಸ್ಸಿ, ತನ್ನ ಪುಟಾಣಿ ಅಭಿಮಾನಿಯನ್ನು ಭೇಟಿಯಾಗಿ ಜೆರ್ಸಿಯೊಂದನ್ನು ನೀಡಿದ್ದನು.

ಇದರಿಂದ ವಿಶ್ವದಾದ್ಯಂತ ಸುದ್ದಿಯಾದ ಅಹ್ಮದಿಗೆ ಈಗ ಕಂಟಕ ಎದುರಾಗಿದೆ. ಮೆಸ್ಸಿ ಭೇಟಿಯಿಂದ ಅಹ್ಮದಿ ಸಾಕಷ್ಟು ನೆರವು ಪಡೆದಿದ್ದಾರೆಂದು ಸುದ್ದಿ ಹರಿದಾಡುತ್ತಿದೆ. ಇದು ತಾಲಿಬಾನ್ ಎಂಬ ರಕ್ಕಸರ ಗುಂಪಿನ ಕಿವಿಗೂ ಬಿದ್ದಿದೆ. ಹೀಗಾಗಿ ಅಹ್ಮದಿಯ ಕುಟುಂಬವನ್ನೇ ಕೇಂದ್ರವಾಗಿಸಿ ಈಗ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಕುಟುಂಬ ವರ್ಗದವರನ್ನು ದೈಹಿಕ ಹಿಂಸೆ ಸೇರಿದಂತೆ ನಾನಾ ದೌರ್ಜನ್ಯಕ್ಕೆ ಒಳಪಡಿಸುತ್ತಿದ್ದಾರೆ.

ಈ ಚಿತ್ರಹಿಂಸೆಯನ್ನು ವಿರೋಧಿಸಿದ ಸಂಬಂಧಿಕರನ್ನು ತಾಲಿಬಾನಿ ಉಗ್ರರು ಕೊಲೆ ಮಾಡುತ್ತಿದ್ದಾರೆ. ಇವರೊಂದಿಗೆ ಬೇರೆ ಸಂಘಟನೆಗಳೂ ಕೂಡ ಅಹ್ಮದಿ ಕುಟುಂಬವನ್ನು ಹಣಕ್ಕಾಗಿ ಪೀಡಿಸುತ್ತಿದೆ ಎಂದು ಸುದ್ದಿ ಇದೆ. ಸ್ಟಾರ್​ ಆಟಗಾರನ ಭೇಟಿಯಿಂದ ನೆರವು ಸಿಕ್ಕಿದೆ. ಈ ಹಣವನ್ನು ನಮಗೆ ನೀಡಬೇಕೆಂದು ಕೆಲ ಭಯೋತ್ಪಾದಕ ಸಂಘಟನೆಗಳು ಬೇಡಿಕೆ ಇಡುತ್ತಿದೆ. ಇದರಿಂದ ನಮ್ಮ ಕುಟುಂಬದವರು ಭಯಭೀತರಾಗಿದ್ದೇವೆ. ಮುರ್ತಾಜಾ ಅಹ್ಮದಿಯನ್ನು ಈಗ ಶಾಲೆಗೂ ಕಳುಹಿಸುತ್ತಿಲ್ಲ. ಅವರೆಲ್ಲ ನನ್ನ ಮಗುವನ್ನು ಏನಾದರೂ ಮಾಡಿ ಬಿಡುತ್ತಾರೆಂಬ ಭಯ ಆವರಿಸಿದೆ ಎಂದು ಕಣ್ಣೀರಿಡುತ್ತಿದ್ದಾರೆ ಹೆತ್ತಮ್ಮ ಶಫೀಕಾ.

ಅಧ್ಭುತ ಕಾಲ್ಚಳಕದಿಂದ ವಿಶ್ವ ವಿಖ್ಯಾತರಾದ ಲಿಯೋನೆಲ್ ಮೆಸ್ಸಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಹೀಗಾಗಿ ಅಹ್ಮದಿಗೂ ಉತ್ತಮ ಮೊತ್ತವನ್ನು ನೀಡಿದ್ದಾರೆಂಬ ಸುದ್ದಿಯೊಂದು ಅಫಘಾನಿಸ್ತಾನದಲ್ಲಿ ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಹಣಕ್ಕಾಗಿ ಉಗ್ರ ಸಂಘಟನೆಗಳು ತಮ್ಮ ನೀಚ ಪ್ರವೃತ್ತಿಯನ್ನು ಪುಟ್ಟ ಬಾಲಕನ ಮೇಲೆ ಪ್ರಯೋಗಿಸಲು ಮುಂದಾಗಿರುವುದು ಮಾತ್ರ ದುರಂತ.
First published: February 17, 2019, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading