• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Trending News: ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಮಗು ಹೆತ್ತ ಮಹಿಳೆ, 'ಮೇರಿ ಸಹೇಲಿ' ಇದ್ದಿದ್ರಿಂದ ಬಹಳ ಸಹಾಯವಾಯ್ತು !

Trending News: ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಮಗು ಹೆತ್ತ ಮಹಿಳೆ, 'ಮೇರಿ ಸಹೇಲಿ' ಇದ್ದಿದ್ರಿಂದ ಬಹಳ ಸಹಾಯವಾಯ್ತು !

ರೈಲಿನಲ್ಲಿ ಹುಟ್ಟಿದ ಮಗು.

ರೈಲಿನಲ್ಲಿ ಹುಟ್ಟಿದ ಮಗು.

ಹೆರಿಗೆಯ ಬಳಿಕ ತಾಯಿ ಮತ್ತು ಮಗುವನ್ನು , ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೇ 2019ರಲ್ಲಿ , 22 ವರ್ಷದ ಮಹಿಳೆಯೊಬ್ಬರು ವಿರಾರ್ ನಿಲ್ದಾಣದಲ್ಲಿ ಒಂದು ಸ್ಥಳೀಯ ರೈಲ್ವೆ ಬೋಗಿಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

  • Share this:

ಭುವನೇಶ್ವರ ರೈಲು ನಿಲ್ದಾಣದಲ್ಲಿ 27 ವರ್ಷದ ಮಹಿಳೆಯೊಬ್ಬರು, ಹೌರಾ-ಯಶವಂತಪುರ ಎಕ್ಸ್‌ಪ್ರೆಸ್‌ ಬೋಗಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಸಹಾಯ ಮಾಡಲೆಂದು ರೈಲ್ವೆ ಇಲಾಖೆಯು ರಚಿಸಿರುವ ‘ಮೇರಿ ಸಹೇಲಿ’ ಎಂಬ ಸ್ವಯಂ ಸೇವಕರ ತಂಡದ ಸಹಾಯದಿಂದ ಆಯೇಶಾ ಖಾತೂನ್ ಗಂಡು ಮಗುವಿಗೆ ಜನ್ಮ ನೀಡಿದರು. ಬಳಿಕ ಮಗು ಮತ್ತು ತಾಯಿಯ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಭುವನೇಶ್ವರ ಸ್ಟೇಷನ್ ಡೈರೆಕ್ಟರ್ ಚಿತ್ತರಂಜನ್ ನಾಯಕ್ , ಪ್ರೀತಿ ಮತ್ತು ಆತ್ಮೀಯತೆಯ ಸಂಕೇತವಾಗಿ, ಭಾನುವಾರ ಆಕೆಗೆ ಅಲ್ಲಿಂದ ಪ್ರಯಾಣಿಸಲು ಟಿಕೆಟ್ ಮತ್ತು ತಿನಿಸುಗಳನ್ನು ಕೊಡಿಸಿದರು.


“ನಾನು ಯಶವಂತಪುರಕ್ಕೆ ಹೋಗಲು, ಹೌರಾ-ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಕಟಕ್ ನಿಲ್ದಾಣ ಹತ್ತಿರವಾಗುತ್ತಿದ್ದಂತೆ ನನಗೆ ತೀವ್ರ ಹೊಟ್ಟೆ ನೋವಿನ ಅನುಭವ ಆಗತೊಡಗಿತು. ಭುವನೇಶ್ವರ ರೈಲು ನಿಲ್ದಾಣದಲ್ಲಿ ರೈಲ್ವೆ ದೀದಿ ಮತ್ತು ವೈದ್ಯರ ಸಹಾಯದಿಂದ ನಾನು ಗಂಡು ಮಗುವಿಗೆ ಜನ್ಮ ನೀಡಿದೆ” ಎಂದು ಆಯೇಶಾ ಖಾತೂನ್ ಎಎನ್‍ಐಗೆ ಹೇಳಿದ್ದಾರೆ.


“ಬಳಿಕ ನನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾನು ಮತ್ತು ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದೇವೆ. ನಾವು ಇಂದು ರೈಲಿನ ಮೂಲಕ ಯಶವಂತಪುರಕ್ಕೆ ಪ್ರಯಾಣಿಸಲಿದ್ದೇವೆ. ಪ್ರಯಾಣದ ಟಿಕೆಟನ್ನು ನನಗೆ ರೈಲ್ವೇ ಇಲಾಖೆ ಉಡುಗೊರೆಯಾಗಿ ನೀಡಿದೆ” ಎಂದು ಆಕೆ ಹೇಳಿದ್ದಾರೆ.


ಆಯೇಶಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕುರಿತು, ಹೌರಾ - ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಟಿಕೆಟ್ ಕಲೆಕ್ಟರ್ ಅವರಿಂದ ಮಾಹಿತಿ ಸಿಕ್ಕಿತು. ಈ ಪ್ರಾಥಮಿಕ ಮಾಹಿತಿ ದೊರೆತಿದ್ದೇ ತಡ, ಅವರು ಮೇರಿ ಸಹೇಲಿ ತಂಡ ಮತ್ತು ಭುವನೇಶ್ವರ ನಿಲ್ದಾಣದಲ್ಲಿನ ಇತರ ಅಧಿಕಾರಿಗಳಿಗೆ ಆ ಬಗ್ಗೆ ಸೂಚನೆ ನೀಡಿದರು.


“ಈ ತಂಡದ ಸಹಾಯದಿಂದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು. ನಿಲ್ದಾಣದಲ್ಲಿ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಿದ ಬಳಿಕ ಒಂದು ವೈದ್ಯರ ತಂಡ, ತಾಯಿ ಮತ್ತು ನವಜಾತ ಶಿಶು ಆರೋಗ್ಯವಾಗಿದ್ದಾರೆ ಎಂದು ತಿಳಿಸಿತು” ಎಂದು ಚಿತ್ತರಂಜನ್ ನಾಯಕ್ ತಿಳಿಸಿದ್ದಾರೆ.


ಹೆರಿಗೆಯ ಬಳಿಕ ತಾಯಿ ಮತ್ತು ಮಗುವನ್ನು , ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೇ 2019ರಲ್ಲಿ , 22 ವರ್ಷದ ಮಹಿಳೆಯೊಬ್ಬರು ವಿರಾರ್ ನಿಲ್ದಾಣದಲ್ಲಿ ಒಂದು ಸ್ಥಳೀಯ ರೈಲ್ವೆ ಬೋಗಿಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಸೋನಿ ಪಟೇಲ್ ಎಂಬ ಆ ಮಹಿಳೆ ಲೋಕಲ್ ರೈಲಿನ ದಿವ್ಯಾಂಗ್ ಬೋಗಿಯಲ್ಲಿ ತಮ್ಮ ಪತಿ ಅಜಯ್ ಜೊತೆ ಪ್ರಯಾಣಿಸುತ್ತಿದ್ದರು. ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದ ಆ ಮಹಿಳೆ , ವಿರಾರ್‍ನ ಸರಕಾರಿ ಆಸ್ಪತ್ರೆಗೆ ಹೊರಟಿದ್ದರು.


ಇದನ್ನೂ ಓದಿ: ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಯುವಕ ಕೋಮು ಭಾಷಣಕ್ಕಾಗಿ ಮತ್ತೆ ಅರೆಸ್ಟ್

ರೈಲು ಇನ್ನೇನು ವಿರಾರ್ ತಲುಪಲಿದೆ ಎನ್ನುವಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ರೈಲು ವಿರಾರ್ ನಿಲ್ದಾಣ ತಲುಪಿದ ಕೂಡಲೇ ಆಕೆಯ ಪತಿ ಸಹಾಯಕ್ಕಾಗಿ ಕೇಳಿಕೊಂಡರು. ರೈಲ್ವೆ ಫ್ಲಾಟ್‍ಫಾರಂನಲ್ಲಿದ್ದ ವಿಮಲಾ ಪಟೇಲ್ ಎಂಬ ಒಬ್ಬ ರೈಲ್ವೆ ಕೂಲಿ ಕೂಡಲೇ ಸಹಾಯಕ್ಕೆ ಧಾವಿಸಿದರು. ಇತರ ಮಹಿಳಾ ರೈಲ್ವೆ ಕೂಲಿಗಳು ಕೂಡ ಸಹಾಯಕ್ಕೆ ಬಂದರು. ಅವರ ಸಹಾಯದಿಂದ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

First published: