• Home
  • »
  • News
  • »
  • national-international
  • »
  • Shitcoin: ನಿಮ್ಮ ಮಲದಿಂದ ಕೂಡಾ ಹಣಗಳಿಸಬಹುದು, ಬಿಟ್ ಕಾಯ್ನ್ ರೀತಿಯಲ್ಲೇ ಬಂದಿದೆ ಶಿಟ್​ಕಾಯ್ನ್ !

Shitcoin: ನಿಮ್ಮ ಮಲದಿಂದ ಕೂಡಾ ಹಣಗಳಿಸಬಹುದು, ಬಿಟ್ ಕಾಯ್ನ್ ರೀತಿಯಲ್ಲೇ ಬಂದಿದೆ ಶಿಟ್​ಕಾಯ್ನ್ !

ಜೊ ಜೇ-ವಿಯಾನ್

ಜೊ ಜೇ-ವಿಯಾನ್

ಮಾನವನ ಮಲದಿಂದ ಶಕ್ತಿ ಉತ್ಪಾದಿಸಲಾಗುತ್ತದೆ ಎಂದು ತಿಳಿದ ಜೊ ಜೇ-ವಿಯಾನ್ ಅವರು ಮಿಥೇನ್​ ಉತ್ಪಾದನೆಗಾಗಿ ಮಲ ಸಂಗ್ರಹಿಸಲು ಮುಂದಾಗುತ್ತಾರೆ. ನಂತರ ಇದರಿಂದ ಡಿಜಿಟಲ್​ ಕರೆನ್ಸಿ ಉತ್ಪಾದಿಸುತ್ತಾರೆ. ಆ ಬಳಿಕ ಮಲ ನೀಡಿದ ಜನರಿಗೆ ಉತ್ಪಾದಿಸಿದ ಡಿಜಿಟಲ್​ ಕರೆನ್ಸಿ ನೀಡುತ್ತಾರೆ.

  • Share this:

    ಕಸದಿಂದ ರಸ ಎಂಬ ಮಾತಿದೆ. ಬೇಡವಾದ ವಸ್ತುಗಳನ್ನು ಮರು ಬಳಕೆ ಮಾಡಿ ಅದರಿಂದ ಏನಾದರು ವಸ್ತುಗಳ ಉತ್ತಾದಿಸುವುದು ಈ ಮಾತಿನ ಆರ್ಥವಾಗಿದೆ. ಇದಕ್ಕೆ ಉದಾಹರಣೆ ಎಂದರೆ ಪ್ರಾಣಿಗಳ ಮಲದಿಂದ ಗ್ಯಾಸ್​ ತಯಾರಿಸುದು. ಅದರಲ್ಲೂ ದನದ ಸಗಣಿಯಿಂದ ಗೋಬರ್​ ಗ್ಯಾಸ್​ ತಯಾರಿಸಿ ಅಡುಗೆಗೆ ಬಳಸುವುದು ಗೊತ್ತಿರುತ್ತದೆ. ಹಾಗಾಗಿ ದನದ ಸೆಗಣಿಗೆ ಬೇರೆನೆ ಡಿಮ್ಯಾಂಡ್​ ಇದೆ. ಈ ವಿಚಾರ ಅನೇಕರಿಗೆ ಗೊತ್ತಿದೆ. ಆದರೀಗ ಮನುಷ್ಯರ ಮಲಕ್ಕೂ ಡಿಮ್ಯಾಂಡ್​ ಇದೆ ಎಂದರೆ ನಂಬುತ್ತೀರಾ? ಈ ಮಾತು ನಗು ತರಿಸುವಂತಾದರು. ಈ ಸುದ್ದಿ ಓದಿದ ನಂತರ ಹೌದಪ್ಪಾ ಎಂಬ ಉದ್ಧಾರ ನಿಮ್ಮಲ್ಲಿ ಬರಬಹುದು.


    ಸೌತ್​​ ಕೊರಿಯಾದ ಪ್ರಾಧ್ಯಾಪಕನೋರ್ವ ಸರಳ ಜೈವಿಕ ತಂತ್ರಜ್ನಾನವನ್ನು ಬಳಸಿಕೊಂಡು ಮನುಷ್ಯರ ಮಲದಿಂದ ಮಿಥೇನ್​ ಅನಿಲ ತಯಾರಿಸುತ್ತಿದ್ದಾರೆ. ನಂತರ ಮಿಥೇನ್​ನಿಂದಾಗಿ ಡಿಜಿಟಲ್​ ಕರೆನ್ಸಿಯನ್ನು ಉತ್ಪಾದಿಸುತ್ತಾರೆ. ಹಾಗಾಗಿ ಅಲ್ಲಿ ಮಾನವರ ಮಲಕ್ಕೆ ಭಾರೀ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ.


    ಸೌತ್​​ಕೊರಿಯಾದ ಉಲ್ಸಾನ್​​ ನ್ಯಾಷನಲ್​ ಇನ್ಸಿಟ್ಯೂಟ್​ ಆಫ್​ ಸೈನ್​ ಆ್ಯಂಡ್​ ಟೆಕ್ನಾಲಜಿಯ ನಗರ ಮತ್ತು ಪರಿಸರ ಎಂಜಿನ್​ನಿಯರಿಂಗ್​ ಪ್ರಾಧ್ಯಪಕ ಜೊ ಜೇ-ವಿಯಾನ್​ ಇಂತಹದೊಂದು ಅನ್ವೇಷಣೆಗೆ ಮಾಡಿದ್ದಾರೆ.


    ಮಾನವನ ಮಲದಿಂದ ಶಕ್ತಿ ಉತ್ಪಾದಿಸಲಾಗುತ್ತದೆ ಎಂದು ತಿಳಿದ ಜೊ ಜೇ-ವಿಯಾನ್ ಅವರು ಮಿಥೇನ್​ ಉತ್ಪಾದನೆಗಾಗಿ ಮಲ ಸಂಗ್ರಹಿಸಲು ಮುಂದಾಗುತ್ತಾರೆ. ನಂತರ ಇದರಿಂದ ಡಿಜಿಟಲ್​ ಕರೆನ್ಸಿ ಉತ್ಪಾದಿಸುತ್ತಾರೆ. ಆ ಬಳಿಕ ಮಲ ನೀಡಿದ ಜನರಿಗೆ ಉತ್ಪಾದಿಸಿದ ಡಿಜಿಟಲ್​ ಕರೆನ್ಸಿ ನೀಡುತ್ತಾರೆ. ಅಂದಹಾಗೆಯೇ ಈ ಡಿಜಿಟಲ್​ ಕರೆನ್ಸಿಗೆ ‘ಶಿಟ್​ ಕಾಯಿನ್​’ ಎಂದು ಹೆಸರಿಟ್ಟಿರುವ ಅವರು ಬಿಟ್​ ಕಾಯಿನ್​ ತರ ಬಳಸಬಹುದು ಎನ್ನುತ್ತಾರೆ ಜೊ ಜೇ-ವಿಯಾನ್.


    ಜೊ ಜೇ-ವಿಯಾನ್ ಅವರು ಡಿಜಿಟಲ್​ ಕರೆನ್ಸಿ ಮಾಡುವ ಮಾರ್ಗವನ್ನು ‘ಸ್ಟ್ಯಾಂಡರ್ಡ್​ ಮನಿ’ ಎಂದು ಕರೆಯುತ್ತಾರೆ. ಇನ್ನು ಹಣದ ಘಟಕ್ಕಕೆ ‘Ggool’ ಹೆಸರಿಟ್ಟಿದ್ದು, ಕೊರಿಯನ್​ ಭಾಷೆಯಲ್ಲಿ ಜೇನುತುಪ್ಪ ಎಂಬ ಅರ್ಥವಿದೆ.


    ಜೊ ಜೇ-ವಿಯಾನ್ ಈ ಬಗ್ಗೆ ಮಾತನಾಡಿದ್ದು, ‘ಜೀವತವಾಗಿದ್ದರೆ ನೀವು ಅಮೂಲ್ಯರು, ನಾನು ಭಾವಿಸುವುದೇನೆಂದರೆ ಪ್ರತಿಯೊಬ್ಬರು ತಮ್ಮ ಸಂಪತ್ತು ಮತ್ತು ವಯಸ್ಸಿನ ಹೊರತಾಗಿ ಮೌಲ್ಯ ಸಂಪಾದಿಸಬಹುದು ಮತ್ತು ಸಮಾಜಕ್ಕೆ ಕೊಡುಗೆ ನೀಡಬಹುದು’ ಎಂದು ಹೇಳಿದ್ದಾರೆ.




    2015ರಲ್ಲಿ ಜೊ ಜೇ-ವಿಯಾನ್ ‘ಶಿಟ್​ ಕರೆನ್ಸಿ’ ಉತ್ಪಾದನೆಗಾಗಿ ಮಲವನ್ನು ಹೇಗೆ ಬಳಸಿಕೊಳ್ಳುವುದು ಎಂದು ಸಂಶೋಧಿಸಿದರು. ಜಾಗತಿಕವಾಗಿ ಡಿಜಿಟಲ್​ ಕರೆನ್ಸಿಗೆ ತನ್ನದೇ ಆದ ಸ್ಥಾನ ಸಿಕ್ಕಾಗ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾದರು.


    2018ರಲ್ಲಿ ಜೊ ಜೇ-ವಿಯಾನ್ ಅವರು ತಮ್ಮ ಕ್ಯಾಂಪಸ್​ನಲ್ಲಿ 2 ಹಂತದ ಪ್ರಾಯೋಗಿಕ ಸಂಕೀರ್ಣ ತೆರೆದರು. ಇದರಲ್ಲಿ ಮಲಗುವ ಕೋಣೆ ಮತ್ತು ಶೌಚಾಲಯವು ಇದೆ. ಮಾನವ ಮಲವನ್ನು ಶೇಖರಿಸಲು ಮೂರು ಟಾಯ್ಲೆಟ್​ ನಿರ್ಮಿಸಲಾಗಿದೆ. ಇದಕ್ಕೆ ''Beevi'' ಎಂದು ಹೆಸರಿಡಲಾಗಿದೆ. ಈ ಮಲವನ್ನು ಮಿಥೇನ್​ ಅನಿಲ ರೂಪದಲ್ಲಿ ಬಳಸಲಾಗುತ್ತದೆ.


    ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸರಾಸರಿ 500 ಗ್ರಾಂ ಮಲವಿಸರ್ಜನೆ ಮಾಡುತ್ತಾನೆ. ಇದು 50 ಲೀಟರ್​ ಮಿಥೇನ್​ ಅನಿಲವನ್ನು ಉತ್ಪಾದಿಸುತ್ತದೆ ಎನ್ನುತ್ತಾರೆ ಜೊ ಜೇ-ವಿಯಾನ್.



    ವ್ಯಕ್ತಿಯೋರ್ವನ ಮಲದಿಂದಾಗಿ 0.5 ಕಿ.ಲೋ ವ್ಯಾಟ್​ ವಿದ್ಯುತ್​ ಉತ್ಪಾದಿಸಲಾಗುತ್ತದೆ. ಮತ್ತೊಂದು ಅಚ್ಚರಿ ವಿಚಾರವೆಂದರೆ ಇದರಿಂದ ಎಲೆಕ್ಟ್ರಿಕ್​ ಬಸ್​ 500 ಮೀಟರ್​ ಚಲಿಸುತ್ತದೆ, ಎಲೆಕ್ಟ್ರಿಕ್​ ಕಾರು 3 ಕಿ.ಮೀ ಚಲಿಸುತ್ತದೆ.


    ಪ್ರತಿದಿನ ಒಬ್ಬ ವ್ಯಕ್ತಿ Ggool ಸಂಪಾದಿಸುತ್ತಾರೆ. ಅಮೆರಿಕ ಡಾಲರ್​, ಕೊರಿಯನ್​  ವೊನ್, ಬಿಟ್​ಕಾಯಿನ್​ ನಂತೆಯೇ Ggool ಮೌಲ್ಯವನ್ನು ಪತ್ರ್ಯೇಕಿಸಲು ಬಸಯುತ್ತೇನೆ ಎಂಬುದು ಜೊ ಜೇ-ವಿಯಾನ್ ಮಾತು.


    5 ಸಾವಿರ ವಿದ್ಯಾರ್ಥಿಗಳಿರುವ ಈ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳು ಮಲ ವಿರ್ಸಜಿಸುವ ಮೂಲಕ Ggool ಸಂಪಾದಿಸಲು ಬಯಸುತ್ತಾರೆ. ಇದು ಅವರ ಕ್ಯಾಂಟೀನ್​ ಆಹಾರ ಇನ್ನಿತರ ಟೋಕನ್​ ಪಡೆಯಲು ಸಹಾಯಕವಾಗುತ್ತದೆ.


    ಇನ್ನು ಶಿಟ್​ ಕಾಯಿನ್​ ಅನ್ನು ಕೆಫೆ, ಬಾರ್​, ರೆಸ್ಟೋರೆಂಟ್​​, ಚಿಕಿತ್ಸಾಲಯದಲ್ಲಿ ಸೇರಿದಂತೆ 20 ಅಂಗಸಂಸ್ಥೆಗಳು ಸ್ವೀಕರಿಸುತ್ತವೆ.

    Published by:Harshith AS
    First published: