China: ರೆಸ್ಟೋರೆಂಟ್​ನಲ್ಲಿದ್ದ ಯುವತಿಯರ ಹೊರಗೆಳೆದು ಅಮಾನುಷ ಹಲ್ಲೆ

ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನಂತರ ವಿರೋಧಿಸಿದ ಯುವತಿಯರ ಮೇಲೆ ದಾಳಿ ಮಾಡಿದ್ದಾರೆ. ಯುವತಿಯರ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿರುವ ವಿಡಿಯೋ ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರೆಸ್ಟೋರೆಂಟ್​ನಲ್ಲಿ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿದ್ದ ಗೆಳತಿಯರ ಮೇಲೆ ದಾಳಿ ಮಾಡಿರುವ ಯುವಕರ ತಂಡದ ವಿಡಿಯೋ ವೈರಲ್ (Viral) ಆಗಿದೆ. ಬಾರ್ಬಿಕ್ಯೂನಲ್ಲಿ ತಮ್ಮ ಜೊತೆಯಾಗಿ ಆಹಾರ ಹಂಚಿಕೊಂಡು ತಿನ್ನುತ್ತಿದ್ದ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನಂತರ ವಿರೋಧಿಸಿದ ಯುವತಿಯರ ಮೇಲೆ ದಾಳಿ ಮಾಡಿದ್ದಾರೆ. ಯುವತಿಯರ ಮೇಲೆ ಹಿಗ್ಗಾಮುಗ್ಗ ಹಲ್ಲೆ (Attack) ಮಾಡಿರುವ ವಿಡಿಯೋ ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಚೀನಾದ (China) ರೆಸ್ಟೊರೆಂಟ್‌ನಲ್ಲಿ (Restaurant) ಮಹಿಳೆಯರ ಗುಂಪಿನ ಮೇಲೆ ದಾಳಿ ಮಾಡಿದ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ. ಇದು ಲೈಂಗಿಕ ದೌರ್ಜನ್ಯ ನಡವಳಿಕೆಯ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿದೆ.

ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ ಘಟನೆಯ ದೃಶ್ಯಾವಳಿಗಳು ಉತ್ತರ ಚೀನಾದ ಹೆಬೈ ಪ್ರಾಂತ್ಯದ ಬಾರ್ಬಿಕ್ಯೂ ರೆಸ್ಟೊರೆಂಟ್‌ನಲ್ಲಿ ನಡೆದ ಘಟನೆಯದ್ದಾಗಿದೆ.

ಯುವತಿಯೊಂದಿಗೆ ಅಸಭ್ಯ ವರ್ತನೆ

ಇಬ್ಬರು ಸಹಚರರೊಂದಿಗೆ ಯುವತಿಯಯೊಬ್ಬರು ಊಟವನ್ನು ಹಂಚಿಕೊಳ್ಳುತ್ತಿರುವಾಗ ಪುರುಷನೊಬ್ಬ ಮಹಿಳೆಯ ಬೆನ್ನಿನ ಮೇಲೆ ಕೈ ಹಾಕುತ್ತಿರುವುದನ್ನು ತೋರಿಸಿದೆ.

ಯುವತಿ ಅವನನ್ನು ತಳ್ಳಿದ ನಂತರ, ಇತರರು ಅವಳನ್ನು ಹೊರಗೆ ಎಳೆದುಕೊಂಡು ಹೋಗುವ ಮೊದಲು ಒಬ್ಬಾತ ಅವಳನ್ನು ಹೊಡೆಯುತ್ತಾನೆ. ಅವಳು ನೆಲದ ಮೇಲೆ ಬಿದ್ದಿರುವಾಗ ವಿಪರೀತವಾಗಿ ಹಲ್ಲೆ ಮಾಡಿದ್ದಾನೆ. ಮತ್ತೊಬ್ಬ ಯುವತಿ ಕೂಡ ನೆಲಕ್ಕೆ ಬಿದ್ದಿದ್ದಾಳೆ.

ಲಿಂಗ ಆಧಾರಿತ ಹಿಂಸಾಚಾರದ ಕುರಿತು ಆನ್‌ಲೈನ್ ಚರ್ಚೆ

ಚೀನಾದಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಕುರಿತು ಆನ್‌ಲೈನ್ ಚರ್ಚೆ ವೀಡಿಯೊ ವೈರಲ್ ಆದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಿತೃಪ್ರಭುತ್ವದ ಸಮಾಜ, ಇಂಟರ್ನೆಟ್ ಸೆನ್ಸಾರ್‌ಶಿಪ್ ಮತ್ತು ಕಾನೂನು ಬೆಂಬಲದ ಹೊರತಾಗಿಯೂ ಮಹಿಳೆಯರ ಹಕ್ಕುಗಳ ಸಂರಕ್ಷಣೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: Morning Digest: ಬೆಂಗಳೂರಿನಲ್ಲಿ ಸ್ಟಾರ್ ನಟನ ಪುತ್ರ ಅರೆಸ್ಟ್, ವಿಧಾನ ಪರಿಷತ ಚುನಾವಣೆ, ಬಂಗಾಳದಲ್ಲಿ ರೈಲು ಧ್ವಂಸ; ಬೆಳಗಿನ ಟಾಪ್ ನ್ಯೂಸ್ ಗಳು

ಪ್ರಮುಖ ಸ್ತ್ರೀವಾದಿಗಳು ಸಹ ನಿಯಮಿತ ಪೋಲೀಸ್ ಕಿರುಕುಳ ಮತ್ತು ಬಂಧನವನ್ನು ಎದುರಿಸುತ್ತಿರುವಾಗ ಈ ಬೆಳವಣಿಗೆಯು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. 2018 ರಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮೇಲೆ ಲೈಂಗಿಕ ಕಿರುಕುಳದ ಆರೋಪದ ಮೇಲೆ  #MeToo ಚಳುವಳಿಗೆ ಲಿಂಕ್ ಮಾಡಲಾದ ಕೀವರ್ಡ್‌ಗಳನ್ನು ವೆಬ್ ಸೆನ್ಸಾರ್‌ಗಳು ನಿರ್ಬಂಧಿಸಿವೆ.

ಘಟನೆಗೆ ಸಂಬಂಧಿಸಿದ 9 ಜನರು ಅರೆಸ್ಟ್

ಹಿಂಸಾತ್ಮಕ ಹಲ್ಲೆ ಮತ್ತು ತೊಂದರೆ ಉಂಟುಮಾಡುವ ಉದ್ದೇಶ ಆರೋಪದಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಟಾಂಗ್ಶಾನ್ ನಗರದ ಪೊಲೀಸರು ಶನಿವಾರ ಹೇಳಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pulitzer Prize 2022: ಪುಲಿಟ್ಜರ್ ಪ್ರಶಸ್ತಿಗೆ ಪುರಸ್ಕೃತ ಭಾರತದ ನಾಲ್ವರು ಪತ್ರಕರ್ತರ ವಿಶೇಷ ವಿವರ ಇಲ್ಲಿದೆ!

ಘಟನೆಯ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರು ಮಹಿಳೆಯರ ಆರೋಗ್ಯ ಸ್ಥಿತಿಯು ಸದ್ಯ ಸ್ಥಿರವಾಗಿದೆ. ಮಾರಣಾಂತಿಕ ಅಪಾಯದಲ್ಲಿಲ್ಲ, ಆದರೆ ಇಬ್ಬರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಮೆಂಟ್ ಮೂಲಕ ನೆಟ್ಟಿಗರ ಆಕ್ರೋಶ

ಇದೆಲ್ಲವೂ ನನಗೂ ಸಂಭವಿಸಬಹುದು, ನಮ್ಮಲ್ಲಿ ಯಾರಿಗಾದರೂ ಸಂಭವಿಸಬಹುದು, ”ಎಂದು ಪೋಸ್ಟ್‌ನಲ್ಲಿ ಒಬ್ಬರು ಕೆಮಂಟ್ ಮಾಡಿದ್ದಾರೆ. 100,000 ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲ್ಪಟ್ಟಿದೆ. "2022 ರಲ್ಲಿ ಈ ರೀತಿಯ ವಿಷಯ ಇನ್ನೂ ಹೇಗೆ ನಡೆಯುತ್ತಿದೆ? ಎಂದು ಇನ್ನೊಬ್ಬರು ಅಚ್ಚರಿಯಿಂದ ಬರೆದಿದ್ದಾರೆ. ದಯವಿಟ್ಟು ಅವರಿಗೆ ಕ್ರಿಮಿನಲ್ ಶಿಕ್ಷೆಯನ್ನು ನೀಡಿ, ಮತ್ತು ಅವರಲ್ಲಿ ಯಾರನ್ನೂ ತಪ್ಪಿಸಿಕೊಳ್ಳಲು ಬಿಡಬೇಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಕಳೆದ ವರ್ಷ, ಚೀನಾದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯನ್ನು ಹತ್ಯೆಗೈದಿದ್ದಕ್ಕಾಗಿ ಮರಣದಂಡನೆ ವಿಧಿಸಲಾಯಿತು.
Published by:Divya D
First published: