Congress Developments| Miss Call ಮೂಲಕ ಸದಸ್ಯತ್ವ ನೋಂದಣಿ-ಬೆಲೆ ಏರಿಕೆ ವಿರುದ್ಧ ಬೀದಿಗಿಳಿಯಲು ಕಾಂಗ್ರೆಸ್ ನಿರ್ಧಾರ!

Congress Protest Against Price Hike: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರುದ್ಧ ನವೆಂಬರ್ 14ರಿಂದ ದೇಶಾದ್ಯಂತ ಜನ ಜಾಗರಣ್ ಅಭಿಯಾನ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು‌ ಬೀದಿಗೆ ಇಳಿದು ಹೋರಾಟ ಮಾಡಬೇಕು. ಜನಸಾಮಾನ್ಯರು ಕೂಡ ಪ್ರತಿಭಟನೆ ಜೊತೆ ಕೈಜೋಡಿಸುವಂತೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.

ಸೋನಿಯಾ ಗಾಂಧಿ-ರಾಹುಲ್ ಗಾಂಧಿ

ಸೋನಿಯಾ ಗಾಂಧಿ-ರಾಹುಲ್ ಗಾಂಧಿ

  • Share this:
ನವ ದೆಹಲಿ (ಅಕ್ಟೋಬರ್​.‌ 26): ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ (International Oil Market) ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳು ಕಡಿಮೆ ಇದ್ದರೂ, ನಿರುದ್ಯೋಗ (Unemployment), ಹಣದುಬ್ಬರ, ಹವಾಮಾನ ವೈಪರೀತ್ಯ ಮತ್ತಿತರ ಸಮಸ್ಯೆಗಳಿಂದ ಜನ ಸಾಮಾನ್ಯ ಕಂಗಲಾಗಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಳ ಮಾಡುತ್ತಿದೆ. ಈ‌ ಹಿನ್ನೆಲೆಯಲ್ಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ (Congress) ನವೆಂಬರ್ 14ರಿಂದ ದೇಶಾದ್ಯಂತ ಬೀದಿಗಿಳಿದು ಹೋರಾಟ ಮಾಡಲು ‌ನಿರ್ಧರಿಸಿದೆ. ಅಲ್ಲದೆ ಮಿಸ್ ಕಾಲ್ (Miss Call) ಕೊಟ್ಟು ಪಕ್ಷದ ಸದಸ್ಯತ್ವ ನೊಂದಣಿ (Membership Registration) ಮಾಡಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಿದೆ.

ದೆಹಲಿಯ ಎಐಸಿಸಿ ಕಚೇರಿಯಲ್ಲಿ (AICC Head Quarters) ಮಂಗಳವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ (Pradesh Congress Samiti) ಅಧ್ಯಕ್ಷರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ (AICC General Secretaries) ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ನವೆಂಬರ್ 14ರಿಂದ ಜನ ಜಾಗರಣ್ ಅಭಿಯಾನ:

ದೇಶಾದ್ಯಂತ ಹಲವು ಸಮಸ್ಯೆಗಳಿದ್ದು ಜನ‌ ತೀವ್ರ ಸಂಕಷ್ಟದಲ್ಲಿದ್ದಾರೆ. ಕಷ್ಟದಲ್ಲಿ ಇರುವ ಜನರ ನೆರವಿಗೆ ಬರುವ ಬದಲು ಕೇಂದ್ರ ಬಿಜೆಪಿ ಸರ್ಕಾರ (Union Government) ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಳ ಮಾಡಿ ಇನ್ನಷ್ಟು‌ ಹೊರೆ ಏರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚೆಚ್ಚು ತೆರಿಗೆ ಹಾಕಿ ಜನರಿಂದ ಹಣವನ್ನು ಲೂಟಿ ಮಾಡುತ್ತಿದೆ. ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.

ಈ ಬಗ್ಗೆ ಕಾಂಗ್ರೆಸ್ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಈಗ ಪ್ರತಿಭಟನೆಯನ್ನು ತೀವ್ರಗೊಳಿಸಿ ನವೆಂಬರ್ 14ರಿಂದ ದೇಶಾದ್ಯಂತ ಬೆಲೆ ಏರಿಕೆ ಬಗ್ಗೆ 'ಜನ ಜಾಗರಣ್ ಅಭಿಯಾನ' (Jan Jagaran Abhiyana) ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು‌ ಬೀದಿಗೆ ಇಳಿದು ಹೋರಾಟ ಮಾಡಬೇಕು. ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಜನಸಾನ್ಯರು ಕಾಂಗ್ರೆಸ್ ಪ್ರತಿಭಟನೆ ಜೊತೆ ಕೈಜೋಡಿಸುವಂತೆ ಮಾಡಬೇಕೆಂದು ನಿರ್ಧರಿಸಲಾಗಿದೆ.

ಚುನಾವಣೆ ಬಗ್ಗೆಯೂ‌ ಚರ್ಚೆ:

ಮುಂದಿನ‌ ವರ್ಷದ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರ ಖಂಡ (Uttarkhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಪೈಕಿ‌ 2024ರ ಲೋಕಸಭಾ‌ ಚುನಾವಣೆಯ (2024 Lokasabha Election) ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಈ‌ ವಿಧಾನಸಭಾ ಚುನಾವಣೆಗಳು ಭಾರೀ ಮುಖ್ಯವಾದವು. ಈ‌ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮುಂಬರುವ ಚುನಾವಣೆಗಳ ಬಗ್ಗೆಯೂ‌ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಮಿಸ್ ಕಾಲ್ ಮೂಲಕ ಸದಸ್ಯತ್ವ ನೊಂದಣಿ, ಎಐಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ:

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ (Congress Working Committee Meeting) ನಂತರ ಇದು ಕಾಂಗ್ರೆಸ್‌ನ ಎರಡನೇ ಪ್ರಮುಖ ಸಭೆ. ಈ ಸಭೆಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ (Rahul Gandhi) ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಆಗ್ರಹ ಮೂಡಿದೆ. ಅಲ್ಲದೆ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಪೂರಕವಾಗಿ ಸದಸ್ಯತ್ವ ನೊಂದಣಿ (Membership Registration) ಆಗಬೇಕಿದ್ದು ಆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ.

ಬಹುತೇಕ ನವೆಂಬರ್ 1ರಿಂದ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ನೊಂದಣಿ ಆರಂಭವಾಗಲಿದ್ದು ಮಿಸ್ ಕಾಲ್ ಕೊಟ್ಟು ಪಕ್ಷದ ಸದಸ್ಯತ್ವ ಪಡೆಯುವ ಅವಕಾಶ ಮಾಡಿಕೊಡಬೇಕು. ಆ ಮೂಲಕ ಸುಲಭವಾಗಿ ಪಕ್ಷದ ನೊಂದಣಿ ಆಗಲು ಅವಕಾಶ ಮಾಡಿಕೊಡಬೇಕು ಎಂದು ನಿರ್ಧರಿಸಲಾಗಿದೆ.

ಇದನ್ನೂ ಓದಿ: Goa Election: ಅಕ್ಟೋಬರ್. 30ರಂದು ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ!

ಡಿ.ಕೆ. ಶಿವಕುಮಾರ್ ಗೈರು:

ರಾಜ್ಯದ ಉಪ ಚುನಾವಣೆಗಳು ಮತ್ತು ಕುಟುಂಬದವರೊಬ್ಬರ ಅನಾರೋಗ್ಯದ ಕಾರಣದಿಂದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President D.K. Shivakumar) ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಮೇಘಾಲಯ, ಮಣಿಪುರ ಮತ್ತು ಮಧ್ಯಪ್ರದೇಶದ ರಾಜ್ಯಾಧ್ಯಕ್ಷರು ಸಭೆಗೆ ಗೈರಾಗಿದ್ದರು.

ಇದನ್ನೂ ಓದಿ: Case Against Kashmir Students| ಭಾರತದ ವಿರುದ್ಧದ ಪಾಕ್​ ಗೆಲುವಿಗೆ ಸಂಭ್ರಮ ಅರೋಪ; ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ವಿರುದ್ಧ UAPA ಕೇಸ್​!

ಪಂಜಾಬ್‌ (Punjab) ಕಾಂಗ್ರೆಸಿನಲ್ಲಿ ವಿವಾದ ಎದ್ದು ಮಹತ್ವದ ಬದಲಾವಣೆ ಆದ ಬಳಿಕ‌ ಇದೇ ಮೊದಲ ಬಾರಿಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Punjab Congress President Navajoth Sing Sidhu) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು. ಈ ಹಿಂದೆ ನವಜೋತ್ ಸಿಂಗ್ ಸಿಧು ಅವರ ಭೇಟಿಗೆ ಸೋನಿಯಾ ಗಾಂಧಿ ಅವರು ಸಮಯಾವಕಾಶ ನೀಡಿರಲಿಲ್ಲ.
Published by:MAshok Kumar
First published: