ಕತ್ತರಿ ಬದಲು ಹಲ್ಲಿನಿಂದ ರಿಬ್ಬನ್ ಕತ್ತರಿಸಿದ ಪಾಕ್​ ಸಚಿವ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

Inauguration ceremony: ಇಲ್ಲೊಬ್ಬರು ಮಂತ್ರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಹಲ್ಲು ಬಳಸಿ ರಿಬ್ಬನ್ ಕತ್ತರಿಸಿದ್ದಾರೆ. ಸದ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Photo: Google

Photo: Google

 • Share this:
  Viral Video: ಸಭೆ, ಸಮಾರಂಭಗಳಿಗೆ, ಉದ್ಘಾಟನಾ ಕಾಯಕ್ರಮಗಳಿಗೆ ಗಣ್ಯ ಅತಿಥಿಗಳನ್ನು ಕರೆಸುತ್ತೇವೆ. ಅವರ ಮೂಲಕ ದೀಪ ಬೆಳಗಿಸುವುದು ಅಥವಾ ರಿಬ್ಬನ್​ ಕತ್ತರಿಸುತ್ತೇವೆ. ಆದರೆ ಇಲ್ಲೊಬ್ಬರು ಸಚಿವ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಹಲ್ಲು ಬಳಸಿ ರಿಬ್ಬನ್ ಕತ್ತರಿಸಿದ್ದಾರೆ. ಸದ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  ಉದ್ಯಮಿಯೊಬ್ಬರು ಪಂಜಾಬ್​ನ ಪ್ರಾಂತೀಯ ವಿಧಾನಸಭೆಯ ಸದಸ್ಯರಾಗಿರುವ ಫಯಾಜ್​ ಉಲ್​ ಹಸನ್​ ಚೌಹಾಣ್​ ಅವರನ್ನುಪಾಕಿಸ್ತಾನದ ರಾವಲ್​ಪಿಂಡಿಯಲ್ಲಿ ಅಂಗಡಿಯನ್ನು ಉದ್ಧಾಟಿಸಲೆಂದು ಅತಿಥಿಯಾಗಿ ಆಹ್ವಾನಿಸಿದ್ದರು. ಅದರಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಫಯಾಜ್​ ಉಲ್​ ಹಸನ್​ ಚೌಹಾಣ್​ ಬಾಯಿಯಿಂದ ರಿಬ್ಬನ್​ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ.

  ಗೊತ್ತಿಲ್ಲದೆ ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿದ ವೃದ್ಧೆ; ಮುಂದೇನಾಯ್ತು ಗೊತ್ತಾ?


  ಫಯಾಜ್​ ಉಲ್​ ಹಸನ್​ ಚೌಹಾಣ್ ಪ್ರಾರಂಭದಲ್ಲಿ ಕತ್ತರಿಯ ಮೂಲಕ ರಿಬ್ಬನ್​ ಕತ್ತರಿಸಲು ಮುಂದಾಗುತ್ತಾರೆ. ಆದರೆ ಕತ್ತರಿಯಿಂದ ಎಷ್ಟೇ ಪ್ರಯತ್ನಿಸಿದರು ರಿಬ್ಬನ್​ ಕತ್ತರಿಸಿ ಹೋಗುವುದಿಲ್ಲ. ಕೊನೆಗೆ ತನ್ನ ಬಾಯಿಯಿಂದ ಕಚ್ಚಿ ರಿಬ್ಬನ್​ ತುಂಡರಿಸಿದ್ದಾರೆ. ಈ ಘಟನೆ ತಮಾಷೆಯಿಂದ ಕೂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೋ ನೋಡಿ ಕಾಮೆಂಟ್​ ಬರೆದಿದ್ದಾರೆ.
  Published by:Harshith AS
  First published: