• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mehul Choksi | ಕೊಲೆಯಾಗುತ್ತೇನೆಂಬ ಭಯ ಚೋಕ್ಸಿಯನ್ನು ಕಾಡುತ್ತಿತ್ತು; ಮೆಹುಲ್ ಚೋಕ್ಸಿ ಬಗ್ಗೆ ಹೆಂಡತಿ ಪ್ರೀತಿ ಹೇಳಿದ್ದೇನು?

Mehul Choksi | ಕೊಲೆಯಾಗುತ್ತೇನೆಂಬ ಭಯ ಚೋಕ್ಸಿಯನ್ನು ಕಾಡುತ್ತಿತ್ತು; ಮೆಹುಲ್ ಚೋಕ್ಸಿ ಬಗ್ಗೆ ಹೆಂಡತಿ ಪ್ರೀತಿ ಹೇಳಿದ್ದೇನು?

ಮೆಹುಲ್ ಚೋಕ್ಸಿ

ಮೆಹುಲ್ ಚೋಕ್ಸಿ

Mehul Choksi Extradition | ಬಂಧನಕ್ಕೊಳಗಾದ ದಿನ ನನ್ನ ಗಂಡನ ಜೊತೆಗಿದ್ದ ಬಾರ್ಬರಾ ಜಬರಿಕಾಳನ್ನು ಹನಿಟ್ರ್ಯಾಪ್​ ಯುವತಿಯಂತೆ ಬಿಂಬಿಸಲಾಗುತ್ತಿದೆ. ಆದರೆ, ಆಕೆ ಆ ರೀತಿಯ ಮಹಿಳೆಯಲ್ಲ ಎಂದು ಮೆಹುಲ್ ಚೋಕ್ಸಿ ಹೆಂಡತಿ ಪ್ರೀತಿ ಚೋಕ್ಸಿ ಹೇಳಿದ್ದಾರೆ.

  • Share this:

ನವದೆಹಲಿ (ಜೂನ್ 2): ಭಾರತದಿಂದ ತಲೆಮರೆಸಿಕೊಂಡಿದ್ದ ಪಿಎನ್​ಬಿ ಹಗರಣದ ಪ್ರಮುಖ ಆರೋಪಿ, ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಈಗಾಗಲೇ ಅವರನ್ನು ಡೊಮಿನಿಕಾದಲ್ಲಿ ಜೈಲಿನಲ್ಲಿದ್ದಾರೆ. ಡೊಮಿನಿಕಾ ದ್ವೀಪದಲ್ಲಿ ಚೋಕ್ಸಿಯನ್ನು ಸಿನಿಮೀಯವಾಗಿ ಬಂಧಿಸಲಾಗಿದ್ದು, ಈ ಬಗ್ಗೆ ಮೊದಲ ಬಾರಿಗೆ ಮೆಹುಲ್ ಚೋಕ್ಸಿಯ ಹೆಂಡತಿ ಪ್ರೀತಿ ಚೋಕ್ಸಿ ಮೌನ ಮುರಿದಿದ್ದಾರೆ. ನನ್ನ ಗಂಡನ ಬಂಧನದ ಸುತ್ತ ಅನೇಕ ಅನುಮಾನಗಳು ಮೂಡಿವೆ. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ವೈದ್ಯಕೀಯ ಪರೀಕ್ಷೆಗೂ ಕರೆದುಕೊಂಡು ಹೋಗಿಲ್ಲ. ಜೈಲಿನಲ್ಲಿಯೂ ಹೊಡೆದು ಹಿಂಸೆ ನೀಡಲಾಗುತ್ತಿದೆ. ನನ್ನ ಗಂಡನನ್ನು ಪೊಲೀಸರು ಕೊಲೆ ಮಾಡಬಹುದು ಎಂಬ ಅನುಮಾನ ಅವರನ್ನು ಸದಾ ಕಾಡುತ್ತಿತ್ತು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.


ಬ್ಯುಸಿನೆಸ್ ಸ್ಟಾಂಡರ್ಡ್ ಜೊತೆಗೆ ಮಾತನಾಡಿರುವ ಪ್ರೀತಿ ಚೋಕ್ಸಿ, ಬಂಧನಕ್ಕೊಳಗಾದ ದಿನ ನನ್ನ ಗಂಡನ ಜೊತೆಗಿದ್ದ ಬಾರ್ಬರಾ ಜಬರಿಕಾಳನ್ನು ಹನಿಟ್ರ್ಯಾಪ್​ ಯುವತಿಯಂತೆ ಬಿಂಬಿಸಲಾಗುತ್ತಿದೆ. ಆದರೆ, ಆಕೆ ಆ ರೀತಿಯ ಮಹಿಳೆಯಲ್ಲ. ಆಕೆ 2020ರಲ್ಲಿಯೇ ಆ್ಯಂಟಿಗುವಾಗೆ ಬಂದಿದ್ದಳು. ಇದೆಲ್ಲದರ ಹಿಂದೆ ಬೇರೆಯವರ ಕೈವಾಡವಿದೆ ಎಂದಿದ್ದಾರೆ.


ಆ ದಿನ ಚೋಕ್ಸಿ ರಾತ್ರಿ ಊಟಕ್ಕಾಗಿ ಮನೆಯಿಂದ ಹೊರಗೆ ಹೋದವರು ವಾಪಾಸ್ ಬರಲೇ ಇಲ್ಲ. ನಾನು ಆತನ ಸಹಚರರು, ಅಡುಗೆಯವನಿಗೆ ಫೋನ್ ಮಾಡಿ ಅವರು ಎಲ್ಲಿದ್ದಾರೆಂದು ಹುಡುಕಲು ಹೇಳಿದೆ. ಅದಾದ ಮಾರನೇ ದಿನ ಬೆಳಗ್ಗೆ ಅವರನ್ನು ಬಂಧಿಸಲಾಗಿದೆ ಎಂಬ ವಿಷಯ ಟಿವಿಗಳಲ್ಲಿ ಪ್ರಸಾರವಾಗುತ್ತಿತ್ತು. ಅವರ ಆರೋಗ್ಯ ಸರಿಯಿಲ್ಲದ ಕಾರಣ ಕಳೆದ 3 ವರ್ಷಗಳಿಂದ ಅವರು ನಮ್ಮ ದ್ವೀಪವನ್ನು ಬಿಟ್ಟು ಎಲ್ಲೂ ಹೊರಗೆ ಹೋಗುತ್ತಿರಲಿಲ್ಲ. ಅವರನ್ನು ಈಗ ಬಂಧಿಸಲಾಗಿದ್ದು, ಅವರ ವಕೀಲರ ಭೇಟಿಗೂ ಅವಕಾಶ ನೀಡಿಲ್ಲ. ಅಲ್ಲದೆ, ಅವರ ವೈದ್ಯಕೀಯ ಪರೀಕ್ಷೆಯನ್ನೂ ಮಾಡಿಸಿಲ್ಲ. ಅವರನ್ನು ಪೊಲೀಸರು ಕೊಂದೇ ಹಾಕುತ್ತಾರೇನೋ ಎಂದು ಅವರಿಗೆ ಭಯವಾಗುತ್ತಿತ್ತು ಎಂದು ಪ್ರೀತಿ ಚೋಕ್ಸಿ ಹೇಳಿದ್ದಾರೆ.


ಇದನ್ನೂ ಓದಿ: Mehul Choksi | ಮೆಹುಲ್ ಚೋಕ್ಸಿಯನ್ನು ಆ್ಯಂಟಿಗುವಾದಿಂದ ಭಾರತಕ್ಕೆ ಕರೆತರಲು ಖರ್ಚಾಗುವ ಹಣವೆಷ್ಟು ಗೊತ್ತಾ?


ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 6.30ಕ್ಕೆ ಅವರನ್ನು ಡೊಮಿನಿಕಾ ಹೈಕೋರ್ಟ್​ ಎದುರು ಹಾಜರುಪಡಿಸುವ ಸಾಧ್ಯತೆಯಿದೆ. ಚೋಕ್ಸಿಯನ್ನು ಗಡಿಪಾರು ಮಾಡಿದ ಬಳಿಕ ಆತನನ್ನು ಭಾರತಕ್ಕೆ ಕರೆತರಲು ಈಗಾಗಲೇ ದೆಹಲಿಯಿಂದ ಪ್ರೈವೇಟ್ ಜೆಟ್ ಕಳುಹಿಸಲಾಗಿದ್ದು, ಸಿಬಿಐ ಡಿಐಜಿ ನೇತೃತ್ವದ ತಂಡ ಕೂಡ ಡೊಮಿನಿಕಾಗೆ ತೆರಳಿದೆ.


ಆ್ಯಂಟಿಗುವಾ ಪ್ರಜೆಯಾಗಿರುವ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಈಗಾಗಲೇ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ದೆಹಲಿಯಿಂದ ಆ್ಯಂಟಿಗುವಾಕ್ಕೆ ವಿಶೇಷ ಜೆಟ್ ಕಳುಹಿಸಲಾಗಿದೆ. ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ದೆಹಲಿಯಿಂದ ಬೋಂಬರ್ಡಿಯರ್ ಗ್ಲೋಬಲ್ 5000 ಜೆಟ್ ಅನ್ನು ಕಳುಹಿಸಲಾಗಿದೆ. ಈ ಚಾರ್ಟರ್ ಜೆಟ್​ಗೆ 1 ಗಂಟೆಗೆ 8.46 ಲಕ್ಷ ರೂ. ನೀಡಬೇಕು. ಆ್ಯಂಟಿಗುವಾದಿಂದ ಭಾರತಕ್ಕೆ ಸುಮಾರು 16ರಿಂದ 17 ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಹೀಗಾಗಿ, ಈಗಾಗಲೇ ದೆಹಲಿಯಿಂದ ಆ್ಯಂಟಿಗುವಾಗೆ ತೆರಳುವುದಕ್ಕೆ ಈ ಜೆಟ್​ಗೆ 1.35 ಕೋಟಿಯಿಂದ 1.43 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ವಾಪಾಸ್ ಕರೆತರಲು 2.75ರಿಂದ 2.86 ಕೋಟಿ ರೂ. ಖರ್ಚಾಗಲಿದೆ. ಇದಲ್ಲದೆ, ಈ ಜೆಟ್​ಗೆ ಜಿಎಸ್​ಟಿ ಕೂಡ ಕಟ್ಟಬೇಕು.


ಇದಿಷ್ಟು ಮಾತ್ರವಲ್ಲದೆ, ಈ ಜೆಟ್​ ಅನ್ನು ಕಳುಹಿಸಿದ ಏಜೆನ್ಸಿಗೆ ಎರಡೂ ದೇಶಗಳೂ 5,11,000 ರೂ. ನೀಡಬೇಕು. ಇದಲ್ಲದೆ, ಇಂಧನದ ಖರ್ಚು ಅದೂ ಇದು ಎಂದು ಹಣ ಖರ್ಚಾಗುತ್ತದೆ. ಹಾಗೇ, ಈಗಾಗಲೇ ಆ್ಯಂಟಿಗುವಾಗೆ ತೆರಳಿರುವ ಜೆಟ್​ಗೆ ಸುಮಾರು 1 ಲಕ್ಷ ರೂ. ಹಾಲ್ಟಿಂಗ್ ಚಾರ್ಜಸ್ ಕೂಡ ನೀಡಬೇಕು.


ಇದನ್ನೂ ಓದಿ: Mehul Choksi: ಮೆಹುಲ್ ಚೋಕ್ಸಿಯಿಂದ ಲಾಭ ಪಡೆದು ಪೌರತ್ವ ಕೊಟ್ಟವರೇ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ; ಆ್ಯಂಟಿಗುವಾ ಪ್ರಧಾನಿ ವಿರುದ್ಧ ವಿಪಕ್ಷ ಟೀಕೆ


ಆಂಟಿಗುವಾ ದ್ವೀಪದಿಂದ ನಾಪತ್ತೆಯಾಗಿದ್ದ ಭಾರತದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕ್ಯೂಬಾಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ ಡೊಮಿನಿಕಾ ದ್ವೀಪದಲ್ಲಿ ಬಂಧಿಸಲಾಗಿದೆ. ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಿದ್ದರು. ಪಿಎನ್​ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್‌) ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿಗಳಲ್ಲಿ ಒಬ್ಬರಾಗಿರುವ ಮೆಹುಲ್ ಚೋಕ್ಸಿ ಈಗ ಡೊಮಿನಿಕಾದಲ್ಲಿ ಬಂಧನದಲ್ಲಿದ್ದಾರೆ.


62 ವರ್ಷದ ಚೋಕ್ಸಿ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿ ನೆಲೆಸಿದ್ದರು. ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಯತ್ನ ನಡೆಸಿರುವ ಸಂದರ್ಭದಲ್ಲಿಯೇ ಅವರು ಆಂಟಿಗುವಾದಿಂದಲೂ ಪಲಾಯನ ಮಾಡಲು ಯೋಜನೆ ರೂಪಿಸಿದ್ದರು.


ಮನೆಯಿಂದ ಹೊರಹೋಗಿದ್ದ ಚೋಕ್ಸಿ, ದೋಣಿಯೊಂದರಲ್ಲಿ ಪುಟ್ಟ ದ್ವೀಪವಾದ ಡೊಮಿನಿಕಾಕ್ಕೆ ತೆರಳಿದ್ದರು. ಆತನ ವಿರುದ್ಧ ಆಂಟಿಗುವಾ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಚೋಕ್ಸಿಯನ್ನು ಗಮನಿಸಿದ ಆಂಟಿಗುವಾ ಪೊಲೀಸರು ಡೊಮಿನಿಕಾದಲ್ಲಿ ಆತನನ್ನು ಬಂಧಿಸಿದ್ದರು. ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎನ್ನಲಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಡೊಮಿನಿಕಾಗೆ ದೆಹಲಿಯಿಂದ ವಿಮಾನವನ್ನು ಕಳುಹಿಸಲಾಗಿದೆ.


ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಡೊಮಿನಿಕಾ ಮತ್ತು ಆಂಟಿಗುವಾ ಸರ್ಕಾರವನ್ನು ಕೇಳಿತ್ತು.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು