HOME » NEWS » National-international » MEHUL CHOKSI GIFTED GIRLFRIEND BARBARA FAKE DIAMOND RING IN ANTIGUA STG SKTV

Mehul Choksi: ಗೆಳತಿ ಬಾರ್ಬರಾಗೆ ನಕಲಿ ವಜ್ರದುಂಗುರ ತೊಡಿಸಿದ್ದನಂತೆ ಚೋಕ್ಸಿ, ಏನೇನು ಹೇಳಿ ಯಾಮಾರಿಸಿದ್ದ ಗೊತ್ತಾ?

Mehul Choksi ತನ್ನನ್ನು ರಾಜ್ ಎಂದು ಪರಿಚಯಿಸಿಕೊಂಡಿದ್ದ, ತನಗೆ ಹೋಟೆಲ್ ರೂಂಗಳು ಮತ್ತು ಏರ್​ ಟಿಕೆಟ್​ಗಳನ್ನೂ ಆಫರ್ ಮಾಡುತ್ತಿದ್ದ. ತಾನು ಮಾಡುವ ವಹಿವಾಟಿಗೆ ಜೊತೆಯಾಗುವಂತೆ ಹೇಳುತ್ತಿದ್ದ ಎಂದು ಆತನ ಜಾತಕ ಬಿಚ್ಚಿಟ್ಟಿದ್ದಾಳೆ ಬಾರ್ಬರಾ.

news18-kannada
Updated:June 9, 2021, 2:53 PM IST
Mehul Choksi: ಗೆಳತಿ ಬಾರ್ಬರಾಗೆ ನಕಲಿ ವಜ್ರದುಂಗುರ ತೊಡಿಸಿದ್ದನಂತೆ ಚೋಕ್ಸಿ, ಏನೇನು ಹೇಳಿ ಯಾಮಾರಿಸಿದ್ದ ಗೊತ್ತಾ?
ಮೆಹುಲ್ ಚೂಕ್ಸಿ-ಬಾರ್ಬರಾ ಜರಾಬಿಕಾ
  • Share this:

Mehul Choksi: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ, ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ದೇಶಕ್ಕೆ ಮಾತ್ರವಲ್ಲ, ತನ್ನ ಗರ್ಲ್ ಫ್ರೆಂಡ್ಗೂ ನಕಲಿ ವಜ್ರದ ಉಂಗುರ ನೀಡಿ ವಂಚಿಸಿದ್ದಾನೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆತನ ಪ್ರೇಯಸಿ ಎನ್ನಲಾಗುತ್ತಿರುವ ಬಾರ್ಬರಾ ಜಾರಬಿಕ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ.


ಆತ ಸುಳ್ಳು ಹೆಸರು ಹೇಳಿ ಪರಿಚಯಿಸಿಕೊಂಡಿದ್ದ: ಕಳೆದ ವರ್ಷ ಆಂಟಿಗುವಾದಲ್ಲಿ ನನ್ನ ಭೇಟಿ ಮಾಡಿದ್ದ ಚೋಕ್ಸಿ, ತನ್ನ ಹೆಸರು ರಾಜ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಕ್ರಮೇಣ ನಾವು ಆತ್ಮೀಯ ಸ್ನೇಹಿತರಾದೆವು. ದ್ವೀಪದ ಜನರು ಹಾಗೂ ಸಿಬ್ಬಂದಿಗಳು ಕೂಡ ಆತನ ಅಸಲಿ ಹೆಸರು ಗೊತ್ತಿಲ್ಲದೆ, ರಾಜ್ ಎಂದೇ ಕರೆಯುತ್ತಿದ್ದರು. ಆತನ ಬಳಿ ಸುಮಾರು 6 - 8 ಮೊಬೈಲ್ ನಂಬರ್ ಗಳಿದ್ದವು. ನನಗೆ ವಾಟ್ಸ್ಆ್ಯಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಕಳಿಸುವಾಗಲೆಲ್ಲ ಆತ ರಾಜ್ ಎಂದೇ ಬರೆದುಕೊಳ್ಳುತ್ತಿದ್ದ. ಯಾರಿಗೂ ಆತನ ಅಸಲಿ ಹೆಸರೇನೆಂದು ಗೊತ್ತೇ ಇರಲಿಲ್ಲ” ಎಂದು ಬಾರ್ಬರಾ ಜಾರಬಿಕ ಸಂದರ್ಶನದಲ್ಲಿ ವಿವರಿಸಿದ್ದಾಳೆ.ಇದನ್ನೂ ಓದಿ: Money Tips: ನಿಮ್ಮ ಬಳಿ ಹಳೇ 2 ರೂಪಾಯಿ ನಾಣ್ಯ ಇದ್ಯಾ? 5 ಲಕ್ಷ ರೂಪಾಯಿ ಸಿಗುತ್ತೆ ನೋಡಿ !

“ಆತನಿಗೆ ನಾನು ರಿಯಲ್ ಎಸ್ಟೇಟ್ ಸಂಬಂಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಗೊತ್ತಾದ ಮೇಲೆ, ನನಗೆ ಹಲವು ವ್ಯವಹಾರದ ಆಫರ್ಗಳನ್ನು ನೀಡಿದ್ದ. ಆಂಟಿಗುವಾದಲ್ಲಿ ಬೊಟಿಕ್ ಹೋಟೆಲ್ಗಳು, ಕ್ಲಬ್‍ಗಳನ್ನು ಆರಂಭಿಸುವ ಉದ್ದೇಶ ಆತನಿಗಿತ್ತು. ಅದಕ್ಕೆ ಹಣ ಹೂಡುವುದಾಗಿ ಹೇಳಿದ್ದ. ಈ ವ್ಯವಹಾರದಿಂದಾಗಿ ಆತನ ಜತೆ ಸ್ನೇಹ ಗಟ್ಟಿಯಾಗಿತ್ತು” ಎಂದು ಆಕೆ ಹೇಳಿದ್ದಾಳೆ.


ನಾನು ಬರಿಯ ಸ್ನೇಹವನ್ನು ಮಾತ್ರ ಬಯಸಿದ್ದೆ: “ನಾನು ಕೇವಲ ಸ್ನೇಹವನ್ನು ಮಾತ್ರ ಬಯಸಿದ್ದೆ. ಚೋಕ್ಸಿ ಜತೆಗೆ ಕಾಫಿ ಶಾಪ್ಗಳಲ್ಲಿ ಭೇಟಿ ಮಾಡಲು, ಸಂಜೆ ವೇಳೆ ಜತೆಗೆ ವಾಕಿಂಗ್ ಮಾಡಲು ಹಾಗೂ ಜತೆಗೆ ಡಿನ್ನರ್ ಮಾಡಲು ಹೋಗಿದ್ದೆ. ಆದರೆ ಚೋಕ್ಸಿ ನನಗೆ ಪರಸ್ಪರ ಸಂಬಂಧ ಹೊಂದುವ ಸಲುವಾಗಿ ಹೋಟೆಲ್ನಲ್ಲಿ ವಾಸ್ತವ್ಯ ಮಾಡುವ, ವಿಮಾನದ ಟಿಕೆಟ್ಗಳನ್ನು ನೀಡುವೆ ಎಂದು ಆಫರ್ ಕೊಟ್ಟಿದ್ದ” ಎಂದು ಬಾರ್ಬರಾ ಜಾರಬಿಕ ಹೇಳಿದ್ದಾಳೆ.


“ಆತ ನನ್ನ ಮನೆಗೆ ಬಂದಿದ್ದ. ನಾನು ಕೇವಲ ಗೆಳತನ ಹಾಗೂ ಬ್ಯುಸಿನೆಸ್ ಗೆ ಮಾತ್ರ ಸೀಮಿತವಾಗಿರುವ ಸಂಬಂಧವನ್ನು ಇಟ್ಟುಕೊಳ್ಳಲು ಬಯಸಿದ್ದೆ. ಆದರೆ ಆತ ಬೇರೆ ಥರದ ಸಂಬಂಧಕ್ಕಾಗಿ ಹೋಟೆಲ್ ಹಾಗೂ ವಿಮಾನದ ಟಿಕೆಟ್ಗಳ ಆಫರ್ ಮಾಡುತ್ತಿದ್ದ. ಆದರೆ ಈ ಕೊಡುಗೆಗಳನ್ನು ನಾನು ತಿರಸ್ಕರಿಸಿದ್ದೆ. ಏಕೆಂದರೆ ನಿರೀಕ್ಷೆಗಳು ಹೆಚ್ಚಾದರೆ ಸಂಬಂಧಗಳಲ್ಲಿ ತಪ್ಪು ಗ್ರಹಿಕೆ ಉಂಟಾಗುತ್ತದೆ ಎಂಬುದು ನನ್ನ ನಂಬಿಕೆಯಾಗಿದೆ” ಎಂದು ಆಕೆ ವಿವರಿಸಿದ್ಧಾಳೆ.


ಇದನ್ನೂ ಓದಿ: Emmanuel Macron: ಎಲ್ಲರೆದುರು ಫ್ರೆಂಚ್ ಅಧ್ಯಕ್ಷನ ಕಪಾಳಕ್ಕೆ ಹೊಡೆದ ವ್ಯಕ್ತಿ: ಇಬ್ಬರ ಬಂಧನ

ಗೆಳತಿಗೆ ನಕಲಿ ವಜ್ರದ ಉಡುಗೊರೆ ನೀಡಿದ್ದ ಚೋಕ್ಸಿ: “ನಾವು ಆತ್ಮೀಯ ಸ್ನೇಹಿತರಾದ ಬಳಿಕ ನನಗೆ ವಜ್ರದ ಉಂಗುರಗಳು, ಬ್ರೇಸ್ ಲೆಟ್ಗಳನ್ನು ಚೋಕ್ಸಿ ಉಡುಗೊರೆಯಾಗಿ ನೀಡಿದ್ದ. ಆತನ ಅಸಲಿಯತ್ತು ಗೊತ್ತಾದ ನಂತರ ನಾನು ಅವುಗಳನ್ನು ಪರೀಕ್ಷಿಸಲು ಕೊಟ್ಟಾಗ ಅವು ನಕಲಿ ಎಂದು ತಿಳಿದುಬಂತು” ಎಂದು ಚೋಕ್ಸಿಯ ಅಸಲಿಯತ್ತನ್ನು ಬಾರ್ಬರಾ ಬಹಿರಂಗಪಡಿಸಿದ್ದಾಳೆ.


ಚೋಕ್ಸಿ ಅಪಹರಣಕ್ಕೂ ನನಗೂ ಸಂಬಂಧವಿಲ್ಲ. ಆತನ ಕುಟುಂಬದ ಸದಸ್ಯರು ಹಾಗೂ ವಕೀಲರು ವೃಥಾ ನನ್ನ ಹೆಸರನ್ನು ಇದರಲ್ಲಿ ಎಳೆದು ತಂದಿದ್ದಾರೆ. ಇದರಿಂದ ನನ್ನ ಕುಟುಂಬ ತುಂಬ ಒತ್ತಡದಲ್ಲಿದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.Youtube Video

ಬಾಬರಾ ಜಾರಬಿಕಾ ವಿರುದ್ಧ ದೂರು ನೀಡಿದ ಚೋಕ್ಸಿ: ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದೊಯ್ಯಲು ಒಂದು ವರ್ಷದ ಹಿಂದಷ್ಟೇ ಪರಿಚಯವಾಗಿದ್ದ ಬಾರ್ಬರಾ ಕೂಡ ಸಹಕರಿಸಿದ್ದಳು. ಆಕೆ ಭಾರತೀಯ ಏಜೆಂಟ್ ಆಗಿ ಪ್ರಮುಖ ಪಾತ್ರ ವಹಿಸಿದ್ದಾಳೆ ಎಂದು ಮೆಹುಲ್ ಚೋಕ್ಸಿ, ಆಂಟಿಗುವಾದಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದರು. ಮೇ 23ರ ರಾತ್ರಿ ನಡೆದ ಅಪಹರಣದಲ್ಲಿ ಭಾರತದ ಅಧಿಕಾರಿಗಳ ಪಾತ್ರವಿದೆ ಎಂದೂ ದೂರಿದ್ದರು. ಈ ಹಿನ್ನೆಲೆಯಲ್ಲಿ ಈವರೆಗೆ ಅಜ್ಞಾತಳಾಗಿದ್ದ ಬಾರ್ಬರಾ ಜಾರಬಿಕಾ, ಮಾಧ್ಯಮದ ಮುಂದೆ ಪ್ರತ್ಯಕ್ಷಳಾಗಿ ತನ್ನ ಮನಸ್ಸಿನ ಮಾತುಗಳನ್ನು ಬಹಿರಂಗಪಡಿಸಿದ್ದಾಳೆ.


Published by: Soumya KN
First published: June 9, 2021, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories