ಭಾರತದಿಂದ ನನ್ನ ಅಪಹರಣಕ್ಕೆ ಯತ್ನ: ಇದರಿಂದ ನನಗೆ ಭಾರೀ ನೋವಾಗಿದೆ ಎಂದ ವಂಚಕ ಮೆಹುಲ್​ ಚೋಕ್ಸಿ

10,000 ಇಸಿ ಡಾಲರ್  ಹಣವನ್ನು ಠೇವಣಿ ಮಾಡಿದ ನಂತರ ಜಾಮೀನು ದೊರಕಿದೆ. ಜಾಮೀನ ಪಡೆದ ಮೇಲೆ ಚೋಕ್ಸಿ ಶರ್ಟ್ ಮತ್ತು ಶಾರ್ಟ್​ ಧರಿಸಿ ಚಾರ್ಟರ್ಡ್ ವಿಮಾನದಲ್ಲಿ ಆಂಟಿಗುವಾಕ್ಕೆ ಹಿಂತಿರುಗಿದರು ಎಂದು ಆಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ.

ಮೆಹುಲ್ ಚೋಕ್ಸಿಯ ಇತ್ತೀಚಿನ ಫೋಟೋ

ಮೆಹುಲ್ ಚೋಕ್ಸಿಯ ಇತ್ತೀಚಿನ ಫೋಟೋ

 • Share this:
  ಭಾರತದಿಂದ ವಿದೇಶಕ್ಕೆ ಪರಾರಿಯಾಗಿರುವ ವಂಚಕ ಮೆಹುಲ್ ಚೋಕ್ಸಿ ಮಾತನಾಡಿರುವ ಆಡಿಯೊ ಕ್ಲಿಪ್ ಒಂದು ಹರಿದಾಡುತ್ತಿದ್ದು ಅದರ ಮೂಲಕ, ’’ಭಾರತೀಯ ಏಜೆನ್ಸಿಗಳು ನನ್ನನ್ನು ಅಪಹರಿಸಿದ್ದಾರೆ’’, ಎಂದು ಆರೋಪಿಸಲಾಗಿದೆ ಮತ್ತು ಮೆಹುಲ್​ಚೋಕ್ಸಿ "ಶಾಶ್ವತವಾಗಿ ಗಾಯಗೊಂಡಿದ್ದಾರೆ" ಎಂದು ಹೇಳಲಾಗಿದೆ.

  “ನಾನು ಮನೆಗೆ ಮರಳಿದ್ದೇನೆ ಆದರೆ ಈ ಚಿತ್ರಹಿಂಸೆ ನನ್ನ ಆತ್ಮದ ಮೇಲೆ ಶಾಶ್ವತವಾದ ಗಾಯವನ್ನು ಮಾಡಿದೆ. ಅಲ್ಲದೇ ದೈಹಿಕವಾಗಿ ಶಾಶ್ವತವಾದ ಗುರುತುಗಳು ಸೇರಿದಂತೆ ಮಾನಸಿಕವಾದ ಆಳವಾದ ಗಾಯದ ಗುರುತುಗಳು ಉಳಿದು ಬಿಟ್ಟಿದೆ. ನನ್ನ ಎಲ್ಲಾ ವ್ಯವಹಾರಗಳನ್ನು ಮುಚ್ಚಿದ ನಂತರ ಮತ್ತು ನನ್ನ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಂಡ ನಂತರವು ಹೀಗೆ ನನ್ನ ಮೇಲೆ ದೌರ್ಜನ್ಯ ನಡೆಯುತ್ತದೆ ಎಂಬುದನ್ನು ನಾನು ಊಹಿಸಲೇ ಇರಲಿಲ್ಲ., ಭಾರತೀಯ ಏಜೆನ್ಸಿಗಳು ನನ್ನ ಮೇಲೆ ಅಪಹರಣದ ಪ್ರಯತ್ನವನ್ನು ಮಾಡಿದ್ದಾರೆ"ಎಂದು ಅವರು ಆಡಿಯೊ ಕ್ಲಿಪ್‌ನಲ್ಲಿ ಹೇಳಿದ್ದಾರೆ.

  ಏತನ್ಮಧ್ಯೆ, ಆಂಟಿಗುವಾ ಮತ್ತು ಬರ್ಮುಡಾ ಸರ್ಕಾರವು ರಾಯಲ್ ಪೊಲೀಸ್ ಪಡೆಗೆ ಸೂಚನೆ ಕೊಟ್ಟಿದ್ದು ಚೋಕ್ಸಿ ಅಪಹರಣದ ಕುರಿತು ತನಿಖೆಯನ್ನು ಮುಂದುವರಿಸುವುದಾಗಿ ಗುರುವಾರ ಪ್ರಕಟಿಸಿದೆ. 62 ವರ್ಷದ ಚೋಕ್ಸಿ ಡೊಮಿನಿಕಾ ಹೈಕೋರ್ಟ್ ಜಾಮೀನು ನೀಡಿದ ನಂತರ ನರವೈದ್ಯರ ವೈದ್ಯಕೀಯ ನೆರವು ಕೋರಿ ಆಂಟಿಗುವಾಕ್ಕೆ ಬಂದಿಳಿದಿದ್ದರು.

  10,000 ಇಸಿ ಡಾಲರ್  ಹಣವನ್ನು ಠೇವಣಿ ಮಾಡಿದ ನಂತರ ಜಾಮೀನು ದೊರಕಿದೆ. ಜಾಮೀನ ಪಡೆದ ಮೇಲೆ ಚೋಕ್ಸಿ ಶರ್ಟ್ ಮತ್ತು ಶಾರ್ಟ್​ ಧರಿಸಿ ಚಾರ್ಟರ್ಡ್ ವಿಮಾನದಲ್ಲಿ ಆಂಟಿಗುವಾಕ್ಕೆ ಹಿಂತಿರುಗಿದರು ಎಂದು ಆಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ. ದೇಶದ ಒಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಲಾಗಿದೆ ಎಂದು ನೆರೆಯ ಡೊಮಿನಿಕಾದಲ್ಲಿ 51 ದಿನಗಳ ಬಂಧನದ ನಂತರ ಚೋಕ್ಸಿ ಆಂಟಿಗುವಾ ಮತ್ತು ಬರ್ಮುಡಾಕ್ಕೆ ಮರಳಿದರು.

  ಜಾಮೀನು ಕೋರಿ, ಚೋಕ್ಸಿ ಸಿಟಿ ಸ್ಕ್ಯಾನ್ ಸೇರಿದಂತೆ ತನ್ನ ವೈದ್ಯಕೀಯ ವರದಿಗಳನ್ನು ಲಗತ್ತಿಸಿದ್ದಾನೆ,  ಸಿಟಿ ಸ್ಕ್ಯಾನ್​ ಮೂಲಕ "ರಕ್ತ ಹೆಪ್ಪುಗಟ್ಟಿರುವುದು ಈ ವೇಳೆ ತಿಳಿದುಬಂದಿದೆ.

  “ನನ್ನ ಕಕ್ಷಿದಾರ ಮೆಹುಲ್ ಚೋಕ್ಸಿ ಅವರು ಆಂಟಿಗುವಾದಲ್ಲಿನ ತನ್ನ ಮನೆಗೆ ಸುರಕ್ಷಿತವಾಗಿ ಮರಳಿದ್ದಾರೆ. ಆಂಟಿಗುವಾ ದೇಶಕ್ಕೆ ಮರಳಿ ಪ್ರವೇಶಿಸುವಾಗ ಅವರು ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ. ಅವರು ಸದ್ಯಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈಗ ಅವರ ಕುಟುಂಬವು ನಿರಾಳವಾಗಿದೆ, ಆದರೆ ಅಪಹರಣದ ಸಮಯದಲ್ಲಿ ನಡೆದ ಸಾಕಷ್ಟು ಚಿತ್ರಹಿಂಸೆ ಮತ್ತು  ಮಾನಸಿಕ, ದೈಹಿಕ ಹಲ್ಲೆಗಳಿಂದ ವಿಪರೀತ ಹಾನಿಯನ್ನುಂಟುಮಾಡಿದೆ. ಎಲ್ಲಾ ಚೆನ್ನಾಗಿ ಕೊನೆಗೊಳ್ಳುತ್ತದೆ. ಡೊಮಿನಿಕಾದಲ್ಲಿ ನಮಗೆ ಒಳ್ಳೆಯ ಯಶಸ್ಸು ದೊರೆತಿದೆ. ನಂತರ, ಈಗ ಕಾನೂನು ತಂಡವು ಆಂಟಿಗುವಾದಲ್ಲಿ ಸುದೀರ್ಘ ಹೋರಾಟಕ್ಕೆ ಸಜ್ಜಾಗಿದೆ ”ಎಂದು ಚೋಕ್ಸಿಯ ವಕೀಲ ವಿಜಯ್ ಅಗರ್‌ವಾಲ್ ಹೇಳಿದ್ದಾರೆ.

  ಇದನ್ನೂ ಓದಿ: ಯುರೋಪಾದಲ್ಲಿ ಮನುಷ್ಯರು ವಾಸಿಸಬಹುದಾ..? ನಾಸಾ ಹೇಳಿದ್ದೇನು..? ಎಲ್ಲಿದೆ ಈ ಯುರೋಪಾ

  ಭಾರತದಲ್ಲಿ 13,500 ಕೋಟಿ ರೂ.ಗಳಷ್ಟು ಹಣದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಬೇಕಾಗಿರುವ ಮೆಹುಲ್​ ಚೋಕ್ಸಿ ಅವರು ಮೇ 23 ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ನಾಪತ್ತೆಯಾಗಿದ್ದರು.  ಮೆಹುಲ್​ ಚೋಕ್ಸಿ 2018 ರಿಂದ ಈ ದೇಶದಲ್ಲಿ ನಾಗರಿಕರಾಗಿ ಉಳಿದುಕೊಂಡಿದ್ದಾನೆ.  ಗೆಳತಿಯೊಂದಿಗೆ  ತಪ್ಪಿಸಿಕೊಳ್ಳಲಾಗಿದೆ ಎಂದು ತನ್ನ ವದಂತಿ ಹಬ್ಬಿತ್ತು. ಅ ನಂತರ ಅವರನ್ನು ದ್ವೀಪ ದೇಶವಾದ ಡೊಮಿನಿಕಾದ ಒಳಗೆ ಅಕ್ರಮ ಪ್ರವೇಶಕ್ಕಾಗಿ ಬಂಧಿಸಲಾಯಿತು. ಆಂಟಿಗುವಾನ್‌ನ ಜಾಲಿ ಹಾರ್ಬರ್‌ನಿಂದ ಮೇ 23 ರಂದು ಆಂಟಿಗುವಾನ್ ಮತ್ತು ಇಂಡಿಯನ್‌ನಂತೆ ಕಾಣುವ ಚೋಕ್ಸಿಯನ್ನು ಅಪಹರಿಸಿ ದೋಣಿಯಲ್ಲಿ ಡೊಮಿನಿಕಾಗೆ ಕರೆತಂದರು ಎಂದು ಅವರ ವಕೀಲರು ಆರೋಪಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: