ಕಾಶ್ಮೀರದ ಕಗ್ಗಂಟು: ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್ ಬಂಧನ

ಮಾಜಿ ಸಿಎಂ ಮೆಹಬೂಬ ಮುಫ್ತಿ ಕೂಡ ಟ್ವೀಟ್​ ಮೂಲಕ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಶ್ಮೀರದಲ್ಲಿ ಏನಾದರೂ ಆದಲ್ಲಿ ಮೋದಿ ಸರ್ಕಾರವೇ ಹೊಣೆ. ಎಲ್ಲರಿಗೂ ಒಳ್ಳೆಯದು ಆಗಬೇಕು, ಸುರಕ್ಷಿತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.

news18-kannada
Updated:January 2, 2020, 4:13 PM IST
ಕಾಶ್ಮೀರದ ಕಗ್ಗಂಟು: ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್ ಬಂಧನ
ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್
  • Share this:
ನವದೆಹಲಿ(ಜ.02): ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್ ಬಂಧನವಾಗಿದೆ. ಸದ್ಯ ಕಾಶ್ಮೀರದಲ್ಲಿ ತಾತ್ಕಲಿಕ ಬಂಧನದಲ್ಲಿರುವ ಮೆಹಬೂಬಾ ಮುಫ್ತಿ ಟ್ವಿಟರ್​​​​​​​ ಖಾತೆಯನ್ನು ಪುತ್ರಿ ಸನಾ ಇಲ್ತಿಜಾ ಜವೇದ್ ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಶ್ಮೀರ ಪೊಲೀಸರು ಸನಾ ಇಲ್ತಿಜಾ ಜವೇದ್​​ರನ್ನು ತನ್ನ ಶ್ರೀನಗರದ ನಿವಾಸದಲ್ಲೇ ವಶಕ್ಕೆ ಪಡೆದಿದ್ದಾರೆ.

ಕಳೆದ ವರ್ಷ ಆಗಸ್ಟ್​​ನಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಈ ನಿರ್ಧಾರದ ವಿರುದ್ಧ ಪಾಕಿಸ್ತಾನ ಸೇರಿದಂತೆ ಜಮ್ಮು-ಕಾಶ್ಮೀರದ ರಾಜಕೀಯ ನಾಯಕರು ಕಿಡಿಕಾರಿದ್ದರು. ಹೀಗೆ ಟ್ವೀಟ್​​ ಮೂಲಕ ಕೇಂದ್ರದ ನಿರ್ಧಾರವನ್ನು ವಿರೋಧಿಸಿದ್ದ ಎನ್​ಸಿ ಮುಖ್ಯಸ್ಥ ಒಮರ್​ ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಬಳಿಕ ಗೃಹಬಂಧನದಲ್ಲಿದ್ದ ಇಬ್ಬರನ್ನೂ ಬಂಧಿಸಿ ತಾತ್ಕಾಲಿಕ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿಗಳಾದ ಒಮರ್​ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಬಂಧನದ ವೇಳೆ ಕಾಶ್ಮೀರ ಪೊಲೀಸರು ಎಚ್ಚರವಹಿಸಿದ್ದರು. ನಗರದೆಲ್ಲೆಡೆ ಬಿಗಿ ಪೊಲೀಸ್​​ ಬಂದೋಬಸ್ತ್​​ ಜತೆಗೆ ನಿಷೇಧಾಜ್ಞೆಯೂ ಹೇರಲಾಗಿತ್ತು. ಇಲ್ಲಿನ ಭದ್ರತೆ ಬಿಗಿಗೊಳಿಸಿ ಈಗಾಗಲೇ ಪ್ರವಾಸಿಗರನ್ನು ತಮ್ಮ ತಮ್ಮ ಸ್ಥಳಕ್ಕೆ ವಾಪಸ್​ ಕಳಿಸಲಾಗಿತ್ತು. ಮೊಬೈಲ್​, ಇಂಟರ್​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಯಾವುದೇ ಅನಾಹುತ ಸಂಭವಿದಂತೆ ನೋಡಿಕೊಳ್ಳಲು ಹೀಗೆ ಮಾಡಲಾಗಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ನಾವು ಪಾಕ್​​ ವಿರುದ್ಧ ಧ್ವನಿ ಎತ್ತುತ್ತೇವೆ; ನೀವು ಹಿಂದುಗಳ ಮೇಲಿನ ದೌರ್ಜ್ಯನದ ಬಗ್ಗೆ ಮಾತಾಡಿ; ಕಾಂಗ್ರೆಸ್​​ಗೆ ಮೋದಿ ಸವಾಲ್​​

ಮಾಜಿ ಸಿಎಂ ಮೆಹಬೂಬ ಮುಫ್ತಿ ಕೂಡ ಟ್ವೀಟ್​ ಮೂಲಕ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಶ್ಮೀರದಲ್ಲಿ ಏನಾದರೂ ಆದಲ್ಲಿ ಮೋದಿ ಸರ್ಕಾರವೇ ಹೊಣೆ. ಎಲ್ಲರಿಗೂ ಒಳ್ಳೆಯದು ಆಗಬೇಕು, ಸುರಕ್ಷಿತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.

ಆಗ ಜಮ್ಮುಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಕೇಂದ್ರ ವಿರೋಧ ಪಕ್ಷಗಳು ಪ್ರಶ್ನಿಸುತ್ತಲೇ ಇದ್ದವು. ಏನು ನಡೆಯುತ್ತಿದೆ? ರಾಜಕೀಯ ಮುಖಂಡರು ಏನೂ ತಪ್ಪು ಮಾಡದೆ ಯಾಕೇ ಗೃಹಬಂಧನದಲ್ಲಿ ಇರಿಸಲಾಗಿದೆ? ಎಂದು ಕುಟಕಿದ್ದರು. ಕಾಶ್ಮೀರಿಗಳು ನಮ್ಮಂತೆ ನಾಗರಿಕರು ಎಂದು ಉಮರ್​ ಹಾಗೂ ಮುಫ್ತಿ ಗೃಹಬಂಧನವನ್ನು ವಿರೋಧಿಸಿದ್ದರು.
First published:January 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ