ಜಮ್ಮು-ಕಾಶ್ಮೀರ (ಡಿಸೆಂಬರ್ 09); ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷ ಆಗಸ್ಟ್ 05 ರಂದು ರದ್ದುಗೊಳಿಸಿತ್ತು. ಆದರೆ, ಶಾಂತಿ ಕಾಪಾಡುವ ಉದ್ದೇಶದಿಂದ ಅಂದಿನಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಪೀಪಲ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಸತತ ಕೋರಿಕೆಯ ನಂತರ ಅವರನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರ ಇದೀಗ ಮತ್ತೆ ಕಳೆದ 15 ದಿನಗಳಲ್ಲಿ ಅವರನ್ನು ಮೂರು ಬಾರಿ ವಶಕ್ಕೆ ಪಡೆದು ಗೃಹ ಬಂಧನದಲ್ಲಿರಿಸಿದೆ. ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಬುಡಕಟ್ಟು ಜನರನ್ನು ಅರಣ್ಯ ಪ್ರದೇಶಗಳಿಂದ ಹೊರಹಾಕಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಡೆಯಿಂದ ಬುಡಕಟ್ಟು ಸಮುದಾಯದ ಕುಟುಂಬಗಳು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮೆಹಬೂಬಾ ಮುಫ್ತಿ ಬುಡಕಟ್ಟು ಸಮುದಾಯಗಳ ಕುಟುಂಬಗಳನ್ನು ಮುಖತಃ ಭೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಅವರನ್ನು ಅವರ ಗುಪ್ಕರ್ ನಿವಾಸದಿಂದ ಹೊರಬರದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಮೆಹಬೂಬಾ ಮುಫ್ತಿ ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
Illegally detained today for the third time in less than a fortnight. Too much democracy indeed. If my movements are curbed due to ‘security concerns’ then why are BJP ministers allowed to campaign freely in Kashmir while Ive been asked to wait until culmination of DDC elections? pic.twitter.com/H3v0ixISrL
— Mehbooba Mufti (@MehboobaMufti) December 9, 2020
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಗಾಗಿ ಕೇಂದ್ರ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು: ಸುಪ್ರೀಂ ಆದೇಶ
"ಒಂದು ಕಡೆ ಬಿಜೆಪಿ ರಾಜಕಾರಣಿಗಳಿಗೆ ಕಣಿವೆಯ ಪ್ರತಿಯೊಂದು ಮೂಲೆ ಮೂಲೆಯಲ್ಲೂ ತಮ್ಮ ಆಯ್ಕೆಯ ಪ್ರಯಾಣವನ್ನು ಕೈಗೊಳ್ಳಲು ಸಂಪೂರ್ಣ ಭದ್ರತಾ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ನನ್ನ ವಿಷಯಕ್ಕೆ ಬಂದರೆ, ಗೃಹಬಂಧನದಲ್ಲಿರಿಸಲಾಗುತ್ತಿದೆ. ಪ್ರಶ್ನೆ ಮಾಡಿದರೆ ಉನ್ನತ ಅಧಿಕಾರಿಗಳಿಂದ ಆದೇಶವಾಗಿದೆ ಎನ್ನುತ್ತಾರೆ" ಎಂದು ಮೆಹಬೂಬಾ ಮುಫ್ತಿ ಅಸಮಾಧಾನ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ