ರಾಜಮನೆತನದ ವೈಭೋಗ ಬೇಡ ಎಂದು ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಕಳೆದ ಮಾರ್ಚ್ನಲ್ಲಿ ಅಧಿಕೃತವಾಗಿ ಅರಮನೆಯಿಂದ ಹೊರನಡೆದಿದ್ದರು. ರಾಜಮನೆತನದ ಜವಾಬ್ದಾರಿಯಿಂದ ದೂರಾಗಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಸಾಂತಾ ಬಾರ್ಬರಾದಲ್ಲಿ ಸಾಮಾನ್ಯರಂತೆ ವಾಸಿಸುತ್ತಿದ್ದಾರೆ. ಸ್ವತಂತ್ರವಾಗಿ ಜೀವನ ನಡೆಸುತ್ತಿರುವ ಈ ಜೋಡಿ ಈಗ ಮಗುವನ್ನು ಕಳೆದುಕೊಂಡು ದುಃಖಕ್ಕೆ ಒಳಗಾಗಿದೆ. ಕಳೆದ ಜುಲೈನಲ್ಲಿ ಮೇಘನ್ಗೆ ಗರ್ಭಪಾತವಾಗಿದೆ ಎಂದು ನ್ಯೂಯರ್ಕ್ ಟೈಮ್ಸ್ ವರದಿ ಮಾಡಿದೆ. ಈ ಕುರಿತು ಮೇಘನ್ ಕೂಡ ಭಾವಾನಾತ್ಮಕವಾಗಿ ಪತ್ರಬರೆದು ತಮ್ಮ ನೋವನ್ನು ಹೊರಹಾಕಿದ್ದಾರೆ. ಈಗಾಗಲೇ ಆರ್ಚಿ ಎಂಬ ಗಂಡು ಮಗುವನ್ನು ಮೇಘನ್ ಹೊಂದಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿ ಅವರಿದ್ದರು.
"ಜುಲೈನಲ್ಲಿ ಮಗ ಆರ್ಚಿಗೆ ಡಯಪರ್ ಬದಲಾಯಿಸುತ್ತಿದ್ದೆ. ಈ ವೇಳೆ ಯಾವುದೋ ನೋವು ನನ್ನನ್ನು ಕಾಡಲಾರಂಭಿಸಿತು. ಈ ವೇಳೆ ಸೆಳೆತದಿಂದಾಗಿ ನೆಲಕ್ಕೆ ಬಿದ್ದ ನಾನು ಆರ್ಚಿಯ ತೋಳಿಗೆ ಅಪ್ಪಿಕೊಂಡು ಲಾಲಿ ಹಾಡಲಾರಂಭಿಸಿದೆ. ಆದರೆ, ಏನೋ ಆಂತರಿಕವಾಗಿ ಸರಿಯಿಲ್ಲ ಎಂಬುದು ನನಗೆ ಅರಿವಿಗೆ ಬರಲಾರಂಭಿಸಿತು. ಈ ವೇಳೆ ನನ್ನ ಎರಡನೇ ಮಗುವನ್ನು ಕಳೆದುಕೊಳ್ಳುತ್ತಿರುವುದು ನನಗೆ ಮನವರಿಕೆ ಆಯಿತು. ಇದಾದ ಬಳಿಕ ನಾನು ಆಸ್ಪತ್ರೆಯ ಹಾಸಿಗೆ ಮೇಲೆ ಕಣ್ಣು ಬಿಟ್ಟಿದೆ. ಈ ಘಟನೆ ಬಳಿಕ ನಾನು ಹ್ಯಾರಿ ಹೇಗೆ ಹೊರಬರುತ್ತೇವೆ ಎಂಬುದು ಗೊತ್ತಿರಲಿಲ್ಲ. ಈ ನೋವಿನನ್ನು ಹೇಗೆ ಮರೆಯಲು ಪ್ರಯತ್ನಿಸಿದೆ ಎಂಬುದು ನಾನು ಈಗ ಊಹಿಸಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಇದನ್ನು ಓದಿ: ತ್ರಿನೇತ್ರಾ, ಕರ್ನಾಟಕದ ಮೊದಲ ತೃತೀಯ ಲಿಂಗಿ ವೈದ್ಯೆ; ಅವನು ಅವಳಾದ ಕಥೆ
ರಾಜಕುಮಾರ ಹ್ಯಾರಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪತ್ರಕರ್ತರಿಂದ ನೀವು ಸುರಕ್ಷಿತವಾಗಿದ್ದೀರಾ ಎಂಬ ಪ್ರಶ್ನೆ ಎದುರಾಯಿತು. ಇದು ಸರಳ ಪ್ರಶ್ನೆಯಾದರೂ. ಇದರ ಅರ್ಥ ಗಂಭೀರವಾಗಿತ್ತು.
ಮಗುವನ್ನು ಕಳೆದುಕೊಳ್ಳುವುದು ಜಗತ್ತಿನಲ್ಲಿ ತುಂಬಾಲಾರದ ನಷ್ಟ. ಈ ನೋವಿನಲ್ಲಿದ್ದ ನನಗೆ ಆಸ್ಪತ್ರೆಯಲ್ಲಿ ನನ್ನಂತೆ ಇದೇ ನೋವಿನಿಂದ ಬಳಲುತ್ತಿದ್ದ 10-20 ಜನರು ಸಿಕ್ಕಿದರು. ಈ ನೋವು ಅವಮಾನ, ಶೋಕ ಮೌನಗಳ ಶಾಶ್ವತವಾಗಿರುವಂತೆ ಆಗಿದೆ. ಈ ಘಟನೆಯಿಂದ ಹೊರ ಬಂದು ಸಾಮಾನ್ಯ ಸ್ಥಿತಿಗೆ ಹೊಂದಿಕೊಳ್ಳುತ್ತಿದ್ದೇವೆ. ಈ ನೋವನ್ನು ಹಂಚಿಕೊಳ್ಳವ ಮೂಲಕ ಗುಣಮುಖರಾಗಲು ಒಗ್ಗಟ್ಟಿನಿಂದ ಪ್ರಯತ್ನಿಸುತ್ತಿದ್ದೇವೆ ಎಂದು ಬರೆದಿದ್ದಾರೆ.
ಬ್ರಿಟನ್ ರಾಜಮನೆತನದ ಪ್ರಕಾರ ರಾಜಮನೆತನದವರು ಅವರ ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳುವಂತಿಲ್ಲ. ರಾಣಿ ಎಲಿಜಬೆತ್ ತನ್ನ 68ವರ್ಷದ ಆಳ್ವಿಕೆಯಲ್ಲಿ ಯಾವುದೇ ಸಂದರ್ಶನದಲ್ಲಿ ರಾಜಮನೆತನ ಖಾಸಗಿ ಜೀವನದ ಬಗ್ಗೆ ಚರ್ಚಿಸಿಲ್ಲ. ಆದರೆ, ಮೇಘನ್ ಮೊದಲಿನಿಂದಲೂ ಭಿನ್ನವಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ