ಕೋವಿಡ್ 19 ಮತ್ತು ಸಾಂಕ್ರಾಮಿಕ ದಿಂದ ಬಹು ದೊಡ್ಡ ಹೊಡೆತ ಬಿದ್ದಿದ್ದು ಪ್ರವಾಸೋದ್ಯಮಕ್ಕೆ. ನಮ್ಮ ದೇಶದ ಆರ್ಥಿಕ ಬೊಕ್ಕಸ ಬಹುತೇಕ ಭಾಗ ಪ್ರವಾಸೋದ್ಯಮದಿಂದಲೇ ತುಂಬುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಪ್ರವಾಸೋದ್ಯಮ ಕ್ಷೇತ್ರ ನಿಂತ ನೀರಾಗಿದೆ. ಸಾವಿರಾರು ಜನರು ಉದ್ಯೋಗ ನಷ್ಠ ಅನುಭವಿಸಿದ್ದಾರೆ. ಆದರೆ ಇದೆಲ್ಲದರ ನಡುವೆಯೇ ಕೊರೊನಾ ಲಸಿಕೆ ಪ್ರವಾಸೋದ್ಯಮಕ್ಕೂ ವರದಾನವಾಗುವ ಎಲ್ಲಾ ನಿರೀಕ್ಷೆಗಳು ಕಾಣಿಸುತ್ತಿವೆ. ಹೌದು! ಮೇಘಾಲಯದ ಮೇಘ್ ಏಜೆನ್ಸಿ ಇದನ್ನು ನಿಜ ಮಾಡುತ್ತಿದೆ. ನೀವು ಕೊರೊನಾ ಲಸಿಕೆ ಪಡೆದಿದ್ದರೆ ಮೇಘಾಲಯ ನಿಮ್ಮನ್ನು ಪ್ರವಾಸಕ್ಕೆ ಕೈ ಬೀಸಿ ಕರೆಯುತ್ತಿದೆ. ಅದರ ಪ್ಯಾಕೇಜ್ ಕೇಳಿದರಂತೂ ನೀವು ಥ್ರಿಲ್ ಆಗೋದು ಗ್ಯಾರಂಟಿ.
ಮೇಘಾಲಯದ ಮೇಘ್ ಟ್ರಾವೆಲ್ ಏಜೆನ್ಸಿ ವ್ಯಾಕ್ಸ್ ಟ್ರಿಪ್ ಅನೌನ್ಸ್ ಮಾಡಿದೆ. 6 ದಿನಗಳು, 5 ರಾತ್ರಿಯ ಈ ಪ್ಯಾಕೇಜ್ ಫ್ಲೈಟ್ ಚಾರ್ಜ್ ಸೇರಿಸಿ 19,495 ರೂಪಾಯಿಗಳಾಗಿದೆ. ಮೇಘಾಲಯದಲ್ಲಿ ಜುಲೈಯಿಂದ ಸೆಪ್ಟೆಂಬರ್ ನಲ್ಲಿ ಕಾಣ ಸಿಗುವ ಮಾನ್ಸೂನ್ ಹಸಿರಿನ ಸಿರಿಯನ್ನು ಮಿಸ್ ಮಾಡದೇ ನೋಡಬೇಕು ಅಂದ್ರೆ ಈ ಟ್ರಿಪ್ ಆಯ್ಕೆ ಮಾಡಿಕೊಳ್ಳಬೇಕು.
ಮೊದಲ ದಿನ ಗುವಾಹಟಿಯಲ್ಲಿ ಪ್ರವಾಸಿ ಕಂಪನಿಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೆ. ಇಲ್ಲಿಂದ ಚಿರಾಪುಂಜಿಗೆ ತಲುಪಲಾಗುತ್ತದೆ. ಇಲ್ಲಿ ಉತ್ತರಭಾಗದ ಸಾಕಷ್ಟು ಅದ್ಭುತ ವೀವ್ಗಳನ್ನು ಕಣ್ತುಂಬಿಕೊಳ್ಳಬಹುದು. ಉಮಿಯಾಂ ಸರೋವರ, ವಾವ್ ಎನಿಸುವ ಮೆಜೆಸ್ಟಿಕ್ ಮಾವ್ಕ್ಡಾಕ್ ಡಿಮ್ಪೆಪ್ ಕಣಿವೆಯಲ್ಲಿ ಪ್ರಕೃತಿ ಸಿರಿ ಗೆ ಮನಸೋಲುವುದು ಗ್ಯಾರಂಟಿ. ಆ ನಂತರ ಚಿರಾಪುಂಜಿಯಲ್ಲಿ ರಾತ್ರಿ ಊಟವನ್ನು ಮುಗಿಸಿ, ಅಲ್ಲಿಯೇ ಉಳಿಯುವುದು.
ಎರಡನೇ ದಿನ ಮೆಜೆಸ್ಟಿಕ್ ವಾಟರ್ ಫಾಲ್, ನೋಹ್ಕಾಲಿಕೈ ವಾಟರ್ ಫಾಲ್ ಬಳಿ ಇರುವ ರಹಸ್ಯ ಗುಹೆ ಇವೆಲ್ಲವೂ ಮಾನ್ಸೂನ್ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಸೆವೆನ್ ಸಿಸ್ಟರ್ಸ್ ವಾಟರ್ ಫಾಲ್, ದೈತ್ಲೈನ್ ವಾಟರ್ ಫಾಲ್, ಆರ್ವ ಗುಹೆ ಯನ್ನು ನೋಡುವುದರ ಜೊತೆಗೆ ಅಲ್ಲಿನ ಸ್ಥಳೀಯ ಜೇನು ತುಪ್ಪ ಮತ್ತು ಮೇಘಾಲಯದ ಮಸಾಲೆ ಪದಾರ್ಥಗಳ ಸೆಂಟರ್ಗಳನ್ನು ವೀಕ್ಷಿಸಬಹುದು.
ಉಳಿದ ದಿನಗಳಲ್ಲಿ ಮಾವ್ಲೀನಾಂಗ್ ಹಳ್ಳಿಗೆ ಮೊದಲ ಭೇಟಿ. ಈ ಹಳ್ಳಿಯಲ್ಲೊಂದು ರಹಸ್ಯ ಮತ್ತು ಅದ್ಭುತ ತಾಣವಿದೆ. ಮರಗಳ ಬೇರಿನಿಂದಲೇ ಪ್ರಕೃತಿಯೇ ಹೆಣೆದಿರುವ ವಿಸ್ಮಯಕಾರಿ ಬ್ರಿಡ್ಜ್ ಇಲ್ಲಿದೆ. ಇದು ಡ್ರೀಮ್ ಡೆಸ್ಟಿನೇಷನ್ ಎಂದೇ ಫೇಮಸ್, ಜೊತೆಗೆ ಮೇಘಾಲಯ ಪ್ರವಾಸದ ಪ್ರಮುಖ ತಾಣವಾಗಿದೆ. ಇದರ ಜೊತೆಗೆ ಮಾಫ್ಲಾಂಗ್ ಪವಿತ್ರ ಕಾಡು ನಿಮ್ಮೊಳಗೆ ಅಚ್ಚರಿ ಉಂಟು ಮಾಡುತ್ತದೆ. ಸೇತುವೆ ಪ್ರಕೃತಿಯ ವಿಸ್ಮಯವಾದರೆ, ಕಾಡು ನಿಮಗೆ ಮನುಕುಲದ ಆರಂಭದ ದಿನಗಳಿಗೆ ಕರೆದೊಯ್ಯುತ್ತದೆ. ಅಲ್ಲದೇ ಈ ಪವಿತ್ರ ಕಾಡಿನಲ್ಲಿ ವಿಶ್ವಾದ್ಯಂತ ಹರಡಿರುವ ಸಂಸ್ಕೃತಿಗಳ ಪ್ರತಿರೂಪವಾದ ವೃಕ್ಷಗಳಿವೆ. ಲಕೋಟಾ ಮತ್ತು ಉತ್ತರ ಅಮೆರಿಕದ ಬುಡಕಟ್ಟು ಜನಾಂಗದವರ ಹೆಗ್ಗುರುತು ಇಲ್ಲಿದೆ ಎನ್ನಲಾಗುತ್ತದೆ. ಇಲ್ಲಿ ನೀವು ನೋಡಲೇಬೇಕಾದ 5 ಪ್ರಮುಖ ಅಂಶಗಳಿವೆ. ಇನ್ನು ಈ ಟ್ರಿಪ್ ಮುಗಿದ ಬಳಿಕ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.
ಈ ಎಲ್ಲಾ ಆಕರ್ಷಣೀಯ ಸ್ಥಳಗಳನ್ನು ನೀವು ಕಣ್ತುಂಬಿಕೊಳ್ಳಬೇಕಾದರೆ, ತಪ್ಪದೇ ಲಸಿಕೆ ಹಾಕಿಸಿಕೊಂಡಿರಬೇಕು. ಒಂದು ವೇಳೆ 70 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು ಟ್ರಿಪ್ನಲ್ಲಿ ಭಾಗಿಯಾಗುವುದಿದ್ದರೆ, ನಿಮ್ಮ ಕುಟುಂಬದ ಸದಸ್ಯರೊಬ್ಬರು ನಿಮ್ಮ ಜೊತೆಗಿರಬೇಕು. ಅಲ್ಲದೇ ಮೆಡಿಕಲ್ ಟೆಸ್ಟ್ ಮಾಡಿಸಿರಬೇಕು. ಬುಕ್ಕಿಂಗ್ ಮಾಡುವ ಸಮಯದಲ್ಲಿ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ