ಮುಖ್ಯಮಂತ್ರಿಗಳು (Chife Minister) ಎಂದರೆ ದಿನವಿಡೀ ಅವರಿಗೆ ಬಿಡುವಿಲ್ಲದೆ ಕೆಲಸದ ಜಂಜಾಟದಲ್ಲಿ ಮುಳುಗಿರುತ್ತಾರೆ. ಹತ್ತಾರು ಸಮಸ್ಯೆಗಳ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾರೆ. ಹೊಸ ಯೋಜನೆಗಳ ವಿಚಾರವಾಗಿ ಚರ್ಚೆ ನಡೆಸುತ್ತಾರೆ. ರಾಜ್ಯ ಪ್ರವಾಸ ಕೈಗೊಳ್ಳುತ್ತಾರೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡಲು ಅವರಿಗೆ ದಿನದ 24 ಗಂಟೆಗಳು ಸಾಕಾಗುವುದೇ ಇಲ್ಲ. ಇಷ್ಟೆಲ್ಲಾ ಒತ್ತಡದ ಕೆಲಸ, ಕಾರ್ಯಗಳ ನಡುವೆ ಇರುವ ಮುಖ್ಯಮಂತ್ರಿಗಳಿಗೆ ಖಾಸಗಿಯಾಗಿ ಸಮಯ ಮೀಸಲಿಡುವುದು ಸ್ವಲ್ಪ ಕಷ್ಟವೇ ಸರಿ. ಆದರೆ, ಇಲ್ಲೊಬ್ಬರು ಮುಖ್ಯಮಂತ್ರಿ ಸಹಜವಾದ ಹಾಡುಗಾರರಂತೆ ಕಾರ್ಯಕ್ರಮ ಒಂದರಲ್ಲಿ ವೇದಿಕೆ ಮೇಲೆ ಕೂಲಾಗಿ ಹಾಡು ಹೇಳುತ್ತಿರುವುದು ಎಲ್ಲರನ್ನು ಆಶ್ಚರ್ಯದ ಜೊತೆಗೆ ಮಂತ್ರಮುಗ್ಧರನ್ನಾಗಿ ಮಾಡಿದೆ.
ಹೀಗೆ ವೇದಿಕೆ ಮೇಲೆ ಕೂಲಾಗಿ ಹಾಡು ಹೇಳಿದ ಮುಖ್ಯಮಂತ್ರಿ ಬೇರೆ ಯಾರು ಅಲ್ಲ ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ (Meghalaya CM Conrad Sangma). ಸಂಗ್ಮಾ ಅವರು ಹಾಡುಗಾರಿಕೆ ನೆಟ್ಟಿಗರನ್ನು ಮೋಡಿ ಮಾಡಿದೆ. ಇಟಾನಗರದಲ್ಲಿ ನಡೆದ ಸಮಾರಂಭದಲ್ಲಿ ಸಂಗ್ಮಾ ಅವರು ಬ್ರಿಯಾನ್ ಆಡಮ್ಸ್ ಅವರ 'ಸಮ್ಮರ್ ಆಫ್ 69' (Bryan Adams’s iconic song ‘Summer of ‘69’) ಹಾಡನ್ನು ಸೊಗಸಾಗಿ ಹಾಡಿದ್ದಾರೆ. ಅವರು ಹಾಡಿರುವ ವಿಡಿಯೋ ಸಾಮಾಜಿಕ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
#Watch | Meghalaya CM Conrad Sangma serenading Itanagar with Bryan Adams’ Summer of ‘69 is the coolest thing in the Internet now.
*Video Courtesy: Sangeeta Barooah Pisharoty@SangmaConrad pic.twitter.com/RLCX50IAw0
— NORTHEAST TODAY (@NortheastToday) October 19, 2021
Coolest CM ever....🔥🔥🔥🔥
— Mr. villain (@AkashEkke) October 19, 2021
ಇದನ್ನು ಓದಿ: ಮುಸ್ಲಿಂ ಅಭ್ಯರ್ಥಿ ವಿವಾದ ಆರಂಭಿಸಿದ್ದೇ Siddaramaiah, ಅದಕ್ಕೆ ನಾನೇ ಅಂತ್ಯ ಹಾಡುತ್ತೇನೆ; HD Kumaraswamy
ಯಾರೂ ಈ ಕಾನ್ರಾಡ್ ಸಂಗ್ಮಾ?
ಕಾನ್ರಾಡ್ ಸಂಗ್ಮಾ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥರಾಗಿ ಮೇಘಾಲಯದಲ್ಲಿ ಸರ್ಕಾರ ರಚಿಸಿದ್ದಾರೆ. ಮೇಘಾಲಯದಲ್ಲಿ ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿ ಕೇಸರಿ ಬಾವುಟ ಹಾರಿಸುವಲ್ಲಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಜೋಡಿ ಯಶಸ್ವಿಯಾಗಲಿಲ್ಲ. ಕೊನೆಗೆ ನ್ಯಾಷನಲ್ ಪೀಪಲ್ಸ್ ಪಾರ್ಟಿ ಬಿಜೆಪಿ ಹಾಗೂ ಇತರೆ ಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚಿಸಿತು.
ರಾಜ್ಯದ ಒಟ್ಟು 59 ಸ್ಥಾನಗಳ ಪೈಕಿ ಕಾಂಗ್ರೆಸ್ಗೆ ಅತೀ ಹೆಚ್ಚು ಅಂದರೆ 21 ಸ್ಥಾನ, ಎನ್ಪಿಪಿಗೆ 19 ಸ್ಥಾನ, ಬಿಜೆಪಿ 2 ಹಾಗೂ ಇತರರು 17 ಸ್ಥಾನ ಗಳಿಸಿದ್ದರು. ಆದರೆ ಮೇಘಾಲಯದಲ್ಲಿ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯತೆ ಇದ್ದು, ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಬಹುಮತ ಇರಲಿಲ್ಲ. ಬಳಿಕ ಎನ್ಪಿಪಿ ನಾಯಕರಾದ ಸಿಎಂ ಕೊನ್ರಾಡ್ ಸಂಗ್ಮಾ ಅವರು ಫಲಿತಾಂಶ ದಿನವೇ ರಾಜ್ಯಪಾಲ ಗಂಗಾ ಪ್ರಸಾದ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ತಮಗೆ ಬಿಜೆಪಿ, ಯುನೈಟೆಡ್ ಡೆಮೋಕ್ರಟಿಕ್ ಪಕ್ಷ ಮತ್ತು ಪಲ್ಸ್ ಡೆಮೋಕ್ರಟಿಕ್ಸ್ ಪಕ್ಷದ ಶಾಸಕರು ಬೆಂಬಲ ನೀಡಿದ್ದು, ಸರ್ಕಾರ ರಚನೆಗೆ ಬೇಕಾದ 31 ಶಾಸಕರ ಬೆಂಬಲವಿದೆ ಎಂದು ಸರ್ಕಾರ ರಚನೆ ಹಕ್ಕು ಮಂಡಿಸಿದ್ದರು. ಅದರಂತೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದ್ದರು. ಇದೀಗ ಸಂಗ್ಮಾ ಅವರು ಮೇಘಾಲಯದ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ