• Home
  • »
  • News
  • »
  • national-international
  • »
  • Chiranjeevi: ಮೆಗಾ ಬ್ರದರ್ಸ್​​ಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ; ರೋಜಾ ಹೇಳಿಕೆ ಚಿರಂಜೀವಿ ಕೌಂಟರ್!

Chiranjeevi: ಮೆಗಾ ಬ್ರದರ್ಸ್​​ಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ; ರೋಜಾ ಹೇಳಿಕೆ ಚಿರಂಜೀವಿ ಕೌಂಟರ್!

ಕೆಲವು ದಿನಗಳ ಹಿಂದೆ ರೋಜಾ ಅವರು, ಮೆಗಾ ಫ್ಯಾಮಿಲಿಯ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು. ಈ ಮೂವರನ್ನು ಜನ ಅವರದೇ ಜಿಲ್ಲೆಯಲ್ಲಿ ಸೋಲಿಸಿದ್ದಾರೆ. ಇದರ ಅರ್ಥ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದರ್ಥ ಎಂದು 
ರೋಜಾ ಆರೋಪಿಸಿದ್ದರು.

ಕೆಲವು ದಿನಗಳ ಹಿಂದೆ ರೋಜಾ ಅವರು, ಮೆಗಾ ಫ್ಯಾಮಿಲಿಯ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು. ಈ ಮೂವರನ್ನು ಜನ ಅವರದೇ ಜಿಲ್ಲೆಯಲ್ಲಿ ಸೋಲಿಸಿದ್ದಾರೆ. ಇದರ ಅರ್ಥ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದರ್ಥ ಎಂದು ರೋಜಾ ಆರೋಪಿಸಿದ್ದರು.

ಕೆಲವು ದಿನಗಳ ಹಿಂದೆ ರೋಜಾ ಅವರು, ಮೆಗಾ ಫ್ಯಾಮಿಲಿಯ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು. ಈ ಮೂವರನ್ನು ಜನ ಅವರದೇ ಜಿಲ್ಲೆಯಲ್ಲಿ ಸೋಲಿಸಿದ್ದಾರೆ. ಇದರ ಅರ್ಥ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದರ್ಥ ಎಂದು ರೋಜಾ ಆರೋಪಿಸಿದ್ದರು.

ಮುಂದೆ ಓದಿ ...
  • Share this:

ಹೈದರಾಬಾದ್: ಕೆಲ ದಿನಗಳ ಹಿಂದೆಯಷ್ಟೇ ರಾಜಕೀಯದಲ್ಲಿ ಮೆಗಾ ಬ್ರದರ್ಸ್ (Megha Brothers) ‌ಅನ್ನು ಜನ ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ (Chief Minister Jagan Mohan Reddy) ನೇತೃತ್ವದಲ್ಲಿ ಸಚಿವೆಯಾಗಿರುವ ರೋಜಾ (Roja) ಹೇಳಿದ್ದರು. ಇದೀಗ ರೋಜಾಗೆ ಮೆಗಾಸ್ಟಾರ್ ಚಿರಂಜೀವಿ (Megha Star Chiranjeevi) ತಮ್ಮದೇ ಶೈಲಿಯಲ್ಲಿ ಕೌಂಟರ್ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾ ವಾಲ್ತೇರು ವೀರಯ್ಯ (Waltair Veerayya Movie Promotion) ಪ್ರಚಾರದ ವೇಳೆ ರೋಜಾ ಅವರ ಹೇಳಿಕೆಗೆ ಚಿರಂಜೀವಿ ಪ್ರತಿಕ್ರಿಯಿಸಿದ್ದಾರೆ. ರೋಜಾ ಅವರೊಂದಿಗೆ ನಮಗೆ ಯಾವುದೇ ಪೈಪೋಟಿ ಇಲ್ಲ ಎಂದು ಹೇಳಿದ್ದಾರೆ. ಅವರು ಆಂಧ್ರಪ್ರದೇಶದಲ್ಲಿ (Andra Pradesh) ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮನೆಗೆ ಕೂಡ ಬಂದು ಒಟ್ಟಿಗೆ ಮಾತನಾಡಿ ಹೋಗಿದ್ದರು. ಅದು ಎಲ್ಲರಿಗೂ ಗೊತ್ತಿದೆ. ಆದರೆ ಅವರು ಯಾಕೆ ಈ ರೀತಿ ಮಾತನಾಡಿದವರು ಎಂದು ಅವರನ್ನೇ ಕೇಳಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ಚಿರಂಜೀವಿ, ನಾಗಬಾಬು, ಪವನ್ ಟಾರ್ಗೆಟ್ ಮಾಡಿ ಮಾತನಾಡಿದ್ದ ರೋಜಾ


ಕೆಲವು ದಿನಗಳ ಹಿಂದೆ ರೋಜಾ ಅವರು, ಮೆಗಾ ಫ್ಯಾಮಿಲಿಯ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು. ಈ ಮೂವರನ್ನು ಜನ ಅವರದೇ ಜಿಲ್ಲೆಯಲ್ಲಿ ಸೋಲಿಸಿದ್ದಾರೆ. ಇದರ ಅರ್ಥ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದರ್ಥ ಎಂದು ಆರೋಪಿಸಿದ್ದರು. ಸಾಮಾನ್ಯವಾಗಿ ಸಿನಿಮಾ ಕಲಾವಿದರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಮತ್ತು ಎಲ್ಲರಿಗೂ ಸಹಾಯ ಮಾಡುತ್ತಾರೆ ಆದರೆ ಅವರಲ್ಲಿಯೂ ವಿಭಿನ್ನರಾಗಿರುತ್ತಾರೆ. ಹಾಗಾಗಿ ರಾಜಕೀಯದಲ್ಲಿ ಕಲಾವಿದರಿಗೆ ಜನರು  ಬೆಂಬಲ ನೀಡುತ್ತಿಲ್ಲ ಎಂದು ದೂರಿದ್ದರು.


minister roja sensational comments on chiranjeevi pawan kalyan and nagababu
ರೋಜಾ


ಚಂದ್ರಬಾಬುಗೆ ಪವನ್ ನಿಷ್ಠೆ ತೋರುತ್ತಿದ್ದಾರೆ


ಚಂದ್ರಬಾಬು ತಪ್ಪು ಮಾಡಿದಾಗ ಪವನ್ ಕಲ್ಯಾಣ್​ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುತ್ತಾರೆ, ಪವನ್​ ಕಲ್ಯಾಣ್​ ತಪ್ಪು ಮಾಡಿದಾಗ ಚಂದ್ರಬಾಬು ನಾಯ್ಡು ಸರ್ಕಾರವನ್ನು ಟೀಕಿಸುತ್ತಾರೆ. ಚಂದ್ರಬಾಬುಗೆ ಪವನ್ ಕಲ್ಯಾಣ್ ಎಷ್ಟು ನಿಷ್ಠೆ ತೋರಿಸುತ್ತಿದ್ದಾರೆ ಎಂಬುವುದು ಇದರಿಂದಲೇ ತಿಳಿಯುತ್ತದೆ ಎಂದು ಕಿಡಿಕಾರಿದ್ದರು.


ಚಿರಂಜೀವಿ, ನಾಗಬಾಬು ಜೊತೆಗೆ ಸ್ನೇಹ ಹೊಂದಿರೋ ರೋಜಾ


ಇತ್ತೀಚೆಗಷ್ಟೇ ಕಂದುಕೂರಿನಲ್ಲಿ ಸತ್ತವರಿಗೆ ಪವನ್ ಕಲ್ಯಾಣ್ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಆದರೆ ಜೀವದ ವಿಚಾರ ಬಂದಾಗ ಪವನ್ ಕಲ್ಯಾಣ್ ಕತ್ತು ಹಿಸುಕುವುದರಲ್ಲಿ ನಂಬರ್ 1  ಆಗಿದ್ದಾರೆ  ಎಂದು ವಾಗ್ದಾಳಿ ನಡೆಸಿದ್ದರು.


minister roja sensational comments on chiranjeevi pawan kalyan and nagababu
ರೋಜಾ


ಚಿರಂಜೀವಿ, ನಾಗಬಾಬು ಜೊತೆಗೆ ಸ್ನೇಹ ಹೊಂದಿರೋ ರೋಜಾ


ರೋಜಾ ಅವರು ಪವನ್ ಕಲ್ಯಾಣ್ ಅವರನ್ನು ಟೀಕಿಸುವುದು  ಹೊಸದಲ್ಲ. ಹೀಗಿದ್ದರೂ ಈ ಬಾರಿ ಒಗ್ಗಟ್ಟಾಗಿರುವ ಚಿರಂಜೀವಿ, ನಾಗಬಾಬು ಅವರನ್ನು ಸೇರಿಸಿಕೊಂಡು ಮಾತನಾಡಿರುವುದು ಬಹಳ ಮುಖ್ಯಾಂಶವಾಗಿತ್ತು. ಪವನ್ ಕಲ್ಯಾಣ್ ಜೊತೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ರೋಜಾ ಚಿರಂಜೀವಿ ಮತ್ತು ನಾಗಬಾಬು ಅವರೊಂದಿಗೆ ಸ್ನೇಹದಿಂದ ಇದ್ದಾರೆ.
ನಾಗಬಾಬು ಜೊತೆಗೆ ಜಬರ್ದಸ್ತ್ ಶೋನಲ್ಲಿ ಜಡ್ಜ್​ ಆಗಿದ್ದ ರೋಜಾ


ಜಬರ್ದಸ್ತ್ ನಂತಹ ಹಾಸ್ಯ ಕಾರ್ಯಕ್ರಮಗಳಲ್ಲಿ ನಾಗಬಾಬು ಜೊತೆಗೆ ರೋಜಾ ಅವರು ನೂರಾರು ಸಂಚಿಕೆಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಹಾಗಾಗಿಯೇ ರೋಜಾ ಅವರು ಪವನ್ ಕಲ್ಯಾಣ್ ಅವರನ್ನು ಟೀಕಿಸಿದರೂ ಚಿರಂಜೀವಿ ಅಥವಾ ನಾಗಬಾಬು ಅವರನ್ನು ಎಂದಿಗೂ ಟೀಕಿಸುತ್ತಿರಲಿಲ್ಲ. ಆದರೆ ಇತ್ತೀಚಿಗೆ ರೋಜಾ ಅವರು, ಮೂವರು ಮೆಗಾ ಬ್ರದರ್ಸ್ ಅನ್ನು ಒಟ್ಟಿಗೆ ಟಾರ್ಗೆಟ್ ಮಾಡಿ ಮಾತನಾಡಿದ್ದು ಸಖತ್​ ಇಂಟ್ರಸ್ಟಿಂಗ್​ ವಿಚಾರವಾಗಿತ್ತು.

Published by:Monika N
First published: