HOME » NEWS » National-international » MEGA KUMBH MELA AT HARIDWAR WILL CONTINUE TILL APRIL 30 SESR

Kumbh Mela: ಕೋವಿಡ್​ ಆತಂಕ: ಕುಂಭಮೇಳವನ್ನು ನಿಲ್ಲಿಸುವ ಯಾವುದೇ ಯೋಜನೆ ಇಲ್ಲ; ಅಧಿಕಾರಿಗಳ ಸ್ಪಷ್ಟನೆ

ನಿಗದಿಯಂತೆ ಕುಂಭಮೇಳ ಮುಂದುವರೆಯಲಿದೆ. ಏ. 30ರವರೆಗೆ ಕುಂಭ ಮೇಳೆ ನಡೆಯಲಿದ್ದು, ಎರಡು ವಾರ ಮುಂಚೆಯೇ ಮುಗಿಸುವ ಯಾವುದೇ ಪ್ರಸ್ತಾವನೆ ಇಲ್ಲ

news18-kannada
Updated:April 14, 2021, 9:55 PM IST
Kumbh Mela: ಕೋವಿಡ್​ ಆತಂಕ: ಕುಂಭಮೇಳವನ್ನು ನಿಲ್ಲಿಸುವ ಯಾವುದೇ ಯೋಜನೆ ಇಲ್ಲ; ಅಧಿಕಾರಿಗಳ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
  • Share this:
ಸೋಂಕಿನ ಪ್ರಕರಣ ಹೆಚ್ಚಳದ ಹಿನ್ನಲೆ ಹರಿದ್ವಾರ ಕುಂಭಮೇಳದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆ ಇನ್ನೆರಡು ದಿನಗಳಲ್ಲಿ ಕುಂಭಮೇಳವನ್ನು ಮುಕ್ತಾಯಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎನ್ನಲಾಗಿತ್ತು. ಆದರೆ, ಇವುಗಳನ್ನು ಅಲ್ಲಗಳೆದಿರುವ ಅಧಿಕಾರಿಗಳು, ನಿಗದಿಯಂತೆ ಕುಂಭಮೇಳ ಮುಂದುವರೆಯಲಿದೆ. ಏ. 30ರವರೆಗೆ ಕುಂಭ ಮೇಳೆ ನಡೆಯಲಿದ್ದು, ಎರಡು ವಾರ ಮುಂಚೆಯೇ ಮುಗಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಕುಂಭ ಮೇಳ ಉಸ್ತುವಾರಿ ಹೊತ್ತಿರುವ ಹರಿದ್ವಾರ ಡಿಸ್ಟ್ರಿಕ್​ ಮ್ಯಾಜಿಸ್ಟ್ರೇಟರ್​ ದೀಪಕ್​ ರಾವತ್​, ಸಾಮಾನ್ಯವಾಗಿ ಜನವರಿಯಲ್ಲಿ ಆರಂಭವಾಗುತ್ತಿದ್ದ ಕುಂಭ ಮೇಳವನ್ನು ಕೊರೋನಾ ಸೋಂಕಿನ ಪರಿಸ್ಥಿತಿ ಗಮನಿಸಿ ಈ ಬಾರಿ ಏಪ್ರಿಲ್​ನಲ್ಲಿ ನಿಗದಿಸಲಾಗಿದೆ. ಕೋವಿಡ್​ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆ ಈ ಅವಧಿಯನ್ನು ಕಡಿಮೆಗೊಳಿಸುವ ಕುರಿತು ಕೇಂದ್ರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು

ಕೋವಿಡ್​ ಪ್ರಕರಣಗಳು ಹೆಚ್ಚಾದ ಹಿನ್ನಲೆ ಕುಂಭ ಮೇಳ ರದ್ದುಗೊಳಿಸುವ ಕುರಿತು ಉತ್ತರಾ ಖಂಡ ಸರ್ಕಾರ ಮತ್ತು ಧಾರ್ಮಿಕ ಮುಖಂಡರ ನಡುವೆ ಚರ್ಚೆ ನಡೆದಿದ್ದು, ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ ಎನ್ನಲಾಗಿದೆ. ಆದರೆ. ಈ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಕುಂಭ ಮೇಳ ಯಾವುದೇ ಅಡ್ಡಿಯಿಲ್ಲದೇ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಗಾ ನದಿಯ ತಟದಲ್ಲಿನ ಪವಿತ್ರಸ್ನಾನಕ್ಕಾಗಿ ಸಾವಿರಾರು ಭಕ್ತರು ಒಟ್ಟು ಸೇರಿದ್ದಾರೆ. ಕೋವಿಡ್​ ಏರಿಕೆಯ ಪ್ರಕರಣಗಳ ಈ ನಡುವೆ ಹೆಚ್ಚುತ್ತಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಇದನ್ನು ಓದಿ: ಕುಂಭಮೇಳದಿಂದ 1,086 ಕೋವಿಡ್ ಕೇಸ್​​ ದಾಖಲು; ತಬ್ಲಿಘಿ ಪ್ರಕರಣಕ್ಕೆ ಹೋಲಿಕೆ ಬೇಡ ಎಂದ ಉತ್ತರಾಖಂಡ್ ಸಿಎಂ!

ಇಂದು ಅಸಂಖ್ಯಾತ ಸಾಧುಗಳು ಮತ್ತು ಭಕ್ತರು ಮೂರನೇ ದಿನದ ಪವಿತ್ರ ಸ್ನಾನವನ್ನು ಹರ್​ಕಿ ಪೌರಿ ಘಾಟ್​ನಲ್ಲಿ ನಡೆಸಿದರು. ಮಧ್ಯಾಹ್ನದ ವರೆಗೆ ಅಂದರೆ 2 ಗಂಟೆವರೆಗೆ ಸುಮಾರು 9,43,452 ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.

ಭಕ್ತರು ಈ ವೇಳೆ ಯಾವುದೇ ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ. ಘಾಟ್​ಗಳು ಜನಸಂದಣಿಯಿಂದ ತುಂಬಿದ್ದವು ಎಂಬ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಮತ್ತೊಂದು ಪವಿತ್ರ ದಿನ ಏಪ್ರಿಲ್​ 27ರಂದು  ಅತಿ ಹೆಚ್ಚಿನ ಸಾಧು, ಭಕ್ತರು ಪವಿತ್ರ ಸ್ನಾನ ನಡೆಸುವ ಸಾಧ್ಯತೆ ಇದೆ.

ಈ ಕುಂಭಮೇಳವನ್ನು ಸಮಯಕ್ಕೂ ಮೊದಲೇ ಮುಕ್ತಾಯಗೊಳಿಸುವ ಬಗ್ಗೆ ಕೇಂದ್ರ ಇನ್ನು ಯಾವುದೇ ಯೋಜನೆ ರೂಪಿಸಿಲ್ಲ. ಸರ್ಕಾರ ಸೋಂಕು ಹರಡುವಿಕೆಯನ್ನು ತಡೆಯಲು ಯಾವ ಮಾರ್ಗಸೂಚಿ ಕೈಗೊಳ್ಳಬಹುದು ಎಂಬ ಕುರಿತ ಆಲೋಚನೆಗಳೊಂದಿಗೆ ಬರುವಂತೆ ಅಧಿಕಾರಿಗಳಿಗೆ ತಿಳಿಸಿದೆ.
Published by: Seema R
First published: April 14, 2021, 9:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories