3 ದಶಕಗಳಿಂದ ರಾಮಮಂದಿರ ಚಳವಳಿಯಲ್ಲಿ ತೊಡಗಿಸಿಕೊಂಡ ಶರದ್ ಶರ್ಮಾ ಆಯೋಧ್ಯೆ ವಿವಾದದ ಮಾಹಿತಿ ಕಣಜ

1998ರಲ್ಲಿ ಶರ್ಮಾ ವಿಎಚ್​ಪಿ ವಕ್ತಾರರಾಗಿ ನೇಮಕಗೊಂಡರು ಮತ್ತು ಕರಸೇವಕ್ ಪುರಂ ಅವರ ಕಾಯಂ ವಿಳಾಸವಾಯಿತು. ಅಲ್ಲಿಂದ ನಿಮ್ಮ ಪಾತ್ರವೇನು? ಎಂಬ ಪ್ರಶ್ನೆಗೆ ಶರ್ಮಾ ಅವರು, ಪ್ರಮುಖ ಸಾಧು-ಸಂತರಿಗೆ ಸಂದೇಶ ರವಾನಿಸುವ ಬಹುದೊಡ್ಡ ಅವಕಾಶವನ್ನು ನಾನು ಪಡೆದುಕೊಂಡೆ ಎಂದು ಹೇಳುತ್ತಾರೆ. 

news18-kannada
Updated:November 9, 2019, 3:47 PM IST
3 ದಶಕಗಳಿಂದ ರಾಮಮಂದಿರ ಚಳವಳಿಯಲ್ಲಿ ತೊಡಗಿಸಿಕೊಂಡ ಶರದ್ ಶರ್ಮಾ ಆಯೋಧ್ಯೆ ವಿವಾದದ ಮಾಹಿತಿ ಕಣಜ
ಶದರ್ ಶರ್ಮಾ
  • Share this:
ಲಕ್ನೋ: 1980ರ ದಶಕದ ಮಧ್ಯಭಾಗದಲ್ಲಿ ರಾಮಮಂದಿರ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಘಟ್ಟದಲ್ಲಿ ಅಯೋಧ್ಯೆಯ ಶರದ್ ಶರ್ಮಾ ಎಂಬ ಉತ್ಸಾಹಿ ಯುವಕನೊಬ್ಬ ಅಭಿಯಾನದ ಮುಂಚೂಯಲ್ಲಿದ್ದ ಕೇಸರಿ ಬ್ರಿಗೇಡ್​ನತ್ತ ಸೆಳೆಯಲ್ಪಟ್ಟ.

ಶರದ್ ಶರ್ಮಾ ಎಂಬ ಹದಿಹರಿಯದ ವಯಸ್ಸಿನಲ್ಲಿಯೇ ಚಳವಳಿಯಲ್ಲಿ ಇತರರಿಗಿಂತ ವಿಭಿನ್ನ ಮನೋಭಾವ ಹೊಂದಿದ್ದವರು. ಆಂದೋಲನದಲ್ಲಿ ನೇರವಾಗಿ ಭಾಗವಹಿಸುವುದಕ್ಕಿಂತ ಹಿಂಭಾಗದಲ್ಲಿ ನಿಂತು ಇತರೆ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ರಾಮಮಂದಿರ ಹೋರಾಟದಲ್ಲಿ ಮೂರು ದಶಕಗಳನ್ನು ಕಳೆದವರು.

ಶರದ್ ಶರ್ಮಾ, ಕ್ರಮೇಣ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಅಯೋಧ್ಯೆಯ ಸಾಧು-ಸಂತರಿಗೆ ಮಾತ್ರವಲ್ಲದೆ ದೇಶದ ಇತರೆ ಭಾಗದ ಪತ್ರಕರ್ತರಿಗೂ ಮಾಹಿತಿ ಮತ್ತು ಸಮನ್ವಯ ವ್ಯಕ್ತಿಯಾಗಿರುವವರು. 40 ವರ್ಷದ ಶರ್ಮಾ, ತನ್ನ ಜೀವನದ ಮೂರು ದಶಕಗಳನ್ನು ರಾಮ ಮಂದಿರಕ್ಕಾಗಿ ಮೀಸಲಿರಿಸಿ, ಆಯೋಧ್ಯೆಯಲ್ಲಿ ಉಳಿದವರು. ಪ್ರಸ್ತುತ ವಿಎಚ್‌ಪಿಯ ವಕ್ತಾರರಾಗಿ ಹಲವು ಜಬಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.

ಆಯೋಧ್ಯೆ, ರಾಮ ಜನ್ಮಭೂಮಿ, ಬಾಬ್ರಿ ಮಸೀದಿ ವಿವಾದದ ಸುತ್ತ ಸುದ್ದಿ ಮಾಡುವ ಯಾವುದೇ ಪತ್ರಕರ್ತರು ದೇಗುಲದ ನಾಡಿನಲ್ಲಿ ಮೊದಲು ಸಂಪರ್ಕಿಸುವುದೇ ಶರದ್ ಶರ್ಮಾ ಅವರನ್ನು. 1980ರ ದಶಕದ ಮಧ್ಯಭಾಗದಲ್ಲಿ, ಅಯೋಧ್ಯೆಯವರೇ ಆದ ಶರ್ಮಾ ವಿಎಚ್‌ಪಿ ಮತ್ತು ಮಂದಿರ ಚಳವಳಿಯತ್ತ ಆಕರ್ಷಿತರಾದರು.

ಸಾವಿರಾರು ಜನರೊಂದಿಗೆ ನನ್ನ ಪಾಲ್ಗೊಳ್ಳುವಿಕೆ ಆರಂಭವಾಯಿತು. ಕ್ರಮೇಣ ಅದು ಅಧಿಕವಾಯಿತು. ನಾನು ಸ್ಥಳೀಯನಾದ್ದರಿಂದ ನನಗೆ ಹೆಚ್ಚು ಅನುಕೂಲವೇ ಆಯಿತು. ನನಗೆ ಆಯೋಧ್ಯೆ ಭೌಗೋಳಿಕತೆ, ಮಂದಿರ, ಸಾಧು-ಸಂತರು ಎಲ್ಲವುದರ ಬಗ್ಗೆ ತಿಳಿದಿತ್ತು ಎಂದು ಶರದ್ ಶರ್ಮಾ ಹೇಳುತ್ತಾರೆ.

1992ರಲ್ಲಿ ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಶರ್ಮಾ ಭಜರಂಗದಳದ ಜೊತೆಗೆ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಮಾತನಾಡುವ ಶರ್ಮಾ, 1992ರ ಡಿಸೆಂಬರ್ 6ರಂದು ಕೆಡವಿದ ದಿನದಂದು ನಾನು ಆ ಸ್ಥಳದಲ್ಲಿ ಇರಲಿಲ್ಲ. ಏಕೆಂದರೆ ಅಂದು ನಾನು ಕರಸೇವಕ್​ಪುರಂನಲ್ಲಿ ಕಚೇರಿಯ ಕೆಲಸಗಳಲ್ಲಿ ನಿರತನಾಗಿದ್ದೆ. ಆ ದಿನದ ಸಂಜೆ ಕೆಡವಿದ ಸ್ಥಳಕ್ಕೆ ಹೋಗಲು ನನಗೆ ಅವಕಾಶ ಸಿಕ್ಕಿತು ಎಂದು ಹೇಳುತ್ತಾರೆ.

1998ರಲ್ಲಿ ಶರ್ಮಾ ವಿಎಚ್​ಪಿ ವಕ್ತಾರರಾಗಿ ನೇಮಕಗೊಂಡರು ಮತ್ತು ಕರಸೇವಕ್ ಪುರಂ ಅವರ ಕಾಯಂ ವಿಳಾಸವಾಯಿತು. ಅಲ್ಲಿಂದ ನಿಮ್ಮ ಪಾತ್ರವೇನು? ಎಂಬ ಪ್ರಶ್ನೆಗೆ ಶರ್ಮಾ ಅವರು, ಪ್ರಮುಖ ಸಾಧು-ಸಂತರಿಗೆ ಸಂದೇಶ ರವಾನಿಸುವ ಬಹುದೊಡ್ಡ ಅವಕಾಶವನ್ನು ನಾನು ಪಡೆದುಕೊಂಡೆ ಎಂದು ಹೇಳುತ್ತಾರೆ.ಇದನ್ನು ಓದಿ: Ayodhya Verdict: 93ರ ವಯಸ್ಸಿನಲ್ಲಿ ಹಿಂದುಗಳ ಪರ ವಾದ ಮಂಡಿಸಿದ ಪರಾಸರನ್​ ಮತ್ತವರ ಅಗಾಧ ಜ್ಞಾಪಕ ಶಕ್ತಿ

ದೇಶಾದ್ಯಂತ ನಡೆಯುವ ಪ್ರಮುಖ ಸಭೆಗಳಿಗೆ ರಾಮಮಂದಿರ ಚಳವಳಿಯ ನಿರ್ಣಾಯಕ ವ್ಯಕ್ತಿಯಾಗಿದ್ದ ರಾಮ ಜನ್ಮಭೂಮಿ ನ್ಯಾಯಾಸ್ ಅಧ್ಯಕ್ಷ ಮಹಂತ್ ರಾಮಚಂದ್ರ ಪರಮಹನ್ಸ್ ದಾಸ್ ಜೀ ಅವರೊಂದಿಗೆ ಪ್ರಯಾಣ ಮಾಡುತ್ತಿದ್ದೆ. ಮಹಂತ್ ಅವರು ಗೋವಾ, ಗುಜರಾತ್, ದೆಹಲಿ ಹೀಗೆ ಅವರು ಎಲ್ಲಿಗೆ ಭೇಟಿ ನೀಡಲಿ ಅವರೊಂದಿಗೆ ಶರ್ಮಾ ಇರುತ್ತಿದ್ದರು. ಮಹಂತ್ ರಾಮಚಂದ್ರ ದಾಸ್​ ಜೀ ಅವರ ನಿಧನರಾದ ನಂತರ, ಇದೇ ಕರ್ತವ್ಯವನ್ನು ಮಹಂತ್ ಗೋಪಾಲ್ ದಾಸ್ ಅವರೊಂದಿಗೆ ಮುಂದುವರೆಸಿದರು.

ದೇಶದ ಮತ್ತು ವಿದೇಶದ ಪತ್ರಕರ್ತರಿಗೂ ಸಹ ವಿಎಚ್​ಪಿ ಮತ್ತು ಮಂದಿರ ಚಳವಳಿಯ ತಳಸ್ಪರ್ಶಿಯ ಮಾಹಿತಿ ಪಡೆಯಲು ಅವರಿಗೆ ಶರ್ಮಾ ಅವರೇ ಪ್ರಮುಖ ವ್ಯಕ್ತಿಯಾಗಿದ್ದಾರೆ. ಇದೀಗ ಮಂದಿರ ನಿರ್ಮಾಣ ಸಂಬಂಧ ಸುಪ್ರೀಂಕೋರ್ಟ್​ನಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ತೀರ್ಪಿನ ಬಗ್ಗೆ ಶರದ್ ಶರ್ಮಾ ಅವರು, ಸಮಾಜದಲ್ಲಿ ಸೌಹಾರ್ದತೆ ಸ್ಥಾಪಿಸುವತ್ತ ನಾವು ನಮ್ಮ ಗಮನ ಹರಿಸಬೇಕು. ಮತ್ತು ಪ್ರತಿಯೊಬ್ಬರು ತೀರ್ಪನ್ನು ಸ್ವಾಗತಿಸಬೇಕು.  ಮುಂದೆ ಏನು ಎಂಬುದು ಭವಿಷ್ಯದ ಭಾಗವಾಗಿದೆ, ಆದ್ದರಿಂದ ಇದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading