Spider Monkey: ಬ್ರೆವರ್ಡ್ ಪ್ರಾಣಿ ಸಂಗ್ರಹಾಲಯಕ್ಕೆ ಹೊಸ ಸದಸ್ಯನ ಆಗಮನ, ಅಳಿವಿನಂಚಿನಲ್ಲಿವೆ ಈ ಸ್ಪೈಡರ್ ಕೋತಿಗಳು

ಅಮೆರಿಕದ ಫ್ಲೋರಿಡಾದಲ್ಲಿರುವ ಬ್ರೆವರ್ಡ್ ಪ್ರಾಣಿಸಂಗ್ರಹಾಲಯದ ಸಿಬ್ಬಂದಿ ವರ್ಗ ಹಾಗೂ ಅಲ್ಲಿರುವ ವಿಶಿಷ್ಟಮಯವಾದ ಕಪ್ಪು ಕೈಗಳ ಸ್ಪೈಡರ್ ಜಾತಿಯ ಕೋತಿಗಳ ಕುಟುಂಬಕ್ಕೆ ಮರೆಯಲಾರದ ಕ್ಷಣ ಹಾಗೂ ಸಂಭ್ರಮದ ವಾತಾವರಣ. ಕಾರಣ ಆ ಕೋತಿಗಳ ಕುಟುಂಬಕ್ಕೆ ಹೊಸ ಸದಸ್ಯನೊಬ್ಬನ ಆಗಮನವಾಗಿತ್ತು.

ಸ್ಪೈಡರ್ ಜಾತಿಯ ಕೋತಿ

ಸ್ಪೈಡರ್ ಜಾತಿಯ ಕೋತಿ

  • Share this:
ಕಳೆದ ಶುಕ್ರವಾರದಂದು ಅಮೆರಿಕದ (America) ಫ್ಲೋರಿಡಾದಲ್ಲಿರುವ ಬ್ರೆವರ್ಡ್ ಪ್ರಾಣಿಸಂಗ್ರಹಾಲಯದ ಸಿಬ್ಬಂದಿ ವರ್ಗ ಹಾಗೂ ಅಲ್ಲಿರುವ ವಿಶಿಷ್ಟಮಯವಾದ ಕಪ್ಪು ಕೈಗಳ ಸ್ಪೈಡರ್ ಜಾತಿಯ ಕೋತಿಗಳ (Spider Monkey) ಕುಟುಂಬಕ್ಕೆ ಮರೆಯಲಾರದ ಕ್ಷಣ ಹಾಗೂ ಸಂಭ್ರಮದ ವಾತಾವರಣ. ಕಾರಣ ಆ ಕೋತಿಗಳ (Monkey) ಕುಟುಂಬಕ್ಕೆ ಹೊಸ ಸದಸ್ಯನೊಬ್ಬನ ಆಗಮನವಾಗಿತ್ತು. ಬ್ರೆವರ್ಡ್ ಜ಼ೂನಲ್ಲಿ (Zoo) ಶುಕ್ರವಾರ ಬೆಳಗ್ಗೆಯ ಸಮಯದಂದು ಅಲ್ಲಿನ ಸ್ಪೈಡರ್ ಕೋತಿಗಳ ಪೈಕಿ 31 ವರ್ಷ ಪ್ರಾಯದ ಹೆಣ್ಣು ಕೋತಿ 'ಶೆಲ್ಲಿ' (Shelli) ತನ್ನ ಇನ್ನೊಂದು ಮರಿ ಕೋತಿಗೆ ಜನ್ಮ ನೀಡಿತು. ತದನಂತರ ಆ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ವರ್ಗ ಶೆಲ್ಲಿ ಹಾಗೂ ಅದರ ಹೊಸ ಸಂತಾನದ ಬಗ್ಗೆ ನಿಗಾವಹಿಸಿದ್ದರು. ಈ ಮೂಲಕ ಅಲ್ಲಿನ ಸಿಬ್ಬಂದಿ ಹೇಳಿರುವ ವಿಷಯವೆಂದರೆ ಸದ್ಯ ಶೆಲ್ಲಿ ಹೊಸ ಮಗುವಿಗೆ ಜನ್ಮ ನೀಡಿ ಸುಧಾರಿಸಿಕೊಳ್ಳುತ್ತಿದೆ ಹಾಗೂ ಈಗ ತಾನೇ ಹುಟ್ಟಿರುವ ಮರಿ ಕೋತಿಯು ಆರೋಗ್ಯಕರವಾಗಿದೆ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಶೆಲ್ಲಿಗೆ ಹುಟ್ಟಿರುವ ಈ ಸಂತಾನ ಗಂಡು ಅಥವಾ ಹೆಣ್ಣು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

ಹೊಸ ಅಥಿತಿಯ ಆಗಮನ:

ಈಗಾಗಲೇ ಈ ಪ್ರಾಣಿ ಸಂಗ್ರಹಾಲಯದಲ್ಲಿ ಕಪ್ಪು ಕೈಗಳ ಸ್ಪೈಡರ್ ಜಾತಿಯ ಕೋತಿಗಳ ಕುಟುಂಬವಿದ್ದು ಅದರಲ್ಲಿ ಆಲಿವ್, ಪ್ರಿಮ್, ಡೈಸಿ ಮತ್ತು ಬ್ಲ್ಯೂ ಸ್ಟೀಲ್ ಎಂಬ ಕೋತಿಗಳು ವಾಸಿಸುತ್ತಿವೆ. ಇದೀಗ ಆ ಕುಟುಂಬದಲ್ಲಿ ನೂತನ ಸಸಸ್ಯನೊಬ್ಬನ ಎಂಟ್ರಿಯಾಗಿದ್ದು ಕುಟುಂಬ ಮತ್ತಷ್ಟು ಸಂತಸಗೊಂಡಿದೆ ಎಂದು ಹೇಳಬಹುದು, ಏಕೆಂದರೆ ಅಲ್ಲಿನ ಸಿಬ್ಬಂದಿ ವರ್ಗದ ಪ್ರಕಾರ, ಹಲವು ಹಿರಿಯ ಹಾಗೂ ವಯಸ್ಕ ಕೋತಿಗಳು ಹೊಸ ಸದಸ್ಯನ ಕಂಡು ಕುತೂಹಲಗೊಂಡಿದ್ದು ಆಗಾಗ ಶೆಲ್ಲಿ ಮತ್ತು ಹೊಸ ಮರಿ ಕೋತಿಯನ್ನು ನೋಡಲು ಬರುತ್ತಿವೆ ಎಂದಿದ್ದಾರೆ.



ಈ ಕುಟುಂಬದಲ್ಲಿರುವ 25 ವರ್ಷದ ಪುರುಷ ಶೂಟರ್ ಕೋತಿಯು ಶೆಲ್ಲಿಯ ಈ ಹೊಸ ಮಗುವಿನ ತಂದೆ. ಹಾಗೆ ನೋಡಿದರೆ ಈ ಹಿಂದೆಯೂ ಶೂಟರ್ ಪುರುಷ ಕೋತಿಯು ಹಲವು ಸಂತಾನಗಳನ್ನು ನೀಡಿದೆ. ಅಲ್ಲದೆ, ಶೆಲ್ಲಿ ಸಹ ಈ ಹಿಂದೆ ಕೆಲ ಸಂತಾನಗಳನ್ನು ಪಡೆದಿದ್ದು ತಾಯಿಯಾದ ಅನುಭವ ಹೊಂದಿದೆ ಎಂದು ಜ಼ೂನ ಸಿಬ್ಬಂದಿ ವರ್ಗ ತಿಳಿಸುತ್ತಾರೆ. ಪ್ರಿಮ್ ಮತ್ತು ಆಲಿವ್, ಶೆಲ್ಲಿಯ ಈ ಹಿಂದಿನ ಸಂತಾನಗಳಾಗಿದ್ದು ಆ ಎರಡೂ ಕೋತಿಗಳು ಸದ್ಯ ಕ್ರಮವಾಗಿ ಏಳು ಮತ್ತು ಎರಡು ವರ್ಷದ ಪ್ರಾಯ ಹೊಂದಿವೆ ಹಾಗೂ ಟಿಕಾ ಎಂಬ ಶೆಲ್ಲಿಯ ಇನ್ನೊಂದು ಹೆಣ್ಣು ಸಂತಾನ ಸದ್ಯ 19 ವರ್ಷ ಪ್ರಾಯ ಹೊಂದಿದ್ದು ಅದೂ ಸಹ ಇಷ್ಟರಲ್ಲೇ ತಾಯಿಯಾಗಲಿದೆ ಎಂದು ಹೇಳಲಾಗಿದೆ.

ವಿಶಿಷ್ಟ ಪ್ರಬೇಧದ ಕೋತಿಗಳ ರಕ್ಷಣೆ:

ಇನ್ನು, ಈ ಸಂಗ್ರಹಾಲಯದ ನಿರ್ದೇಶಕರಾದ ಲೌರೆನ್ ಹಿನ್ಸನ್ ಅವರು, "ಶೆಲ್ಲಿ ತುಂಬಾ ಅದ್ಭುತವಾದ ತಾಯಿ, ಅದಕ್ಕೆ ಮಕ್ಕಳ ಜವಾಬ್ದಾರಿ ಹಾಗೂ ಆರೈಕೆ ಹೇಗೆ ಮಾಡಬೇಕೆಂಬುದು ಸರಿಯಾಗಿ ತಿಳಿದಿದ್ದು ಸದ್ಯ ಹೊಸ ಸಂತಾನದ ಬಗ್ಗೆ ಅತೀವ ಕಾಳಜಿವಹಿಸಿದೆ" ಎಂದು ಹೇಳಿದ್ದಾರೆ. ಅಲ್ಲದೆ ಶೆಲ್ಲಿ ಕುಟುಂಬ ಇತರೆ ಸದಸ್ಯರು ಹೊಸ ಸದಸ್ಯನ ಬಳಿ ಆಸಕ್ತಿ ತೋರಿಸುತ್ತಿರುವುದಾಗಿ ಲೌರೆನ್ ನುಡಿಯುತ್ತಾರೆ. ನೈಸರ್ಗಿಕ ಹಾಗೂ ಸಹಜ ವಾಸಸ್ಥಳದಲ್ಲಿ ಈ ರೀತಿಯ ವಿಶಿಷ್ಟ ಜಾತಿಯ ಕೋತಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ವಿರುದ್ಧವಾಗಿ ಈ ಜ಼ೂ ಅವುಗಳ ಸಂರಕ್ಷಣಾ ತಾಣವಾಗಿದೆ.

ಇದನ್ನೂ ಓದಿ: Heat Wave: ಈ ಐದು ರಾಜ್ಯಗಳಲ್ಲಿ ಸುಡುವ ಬಿಸಿಲಿನಿಂದ ತತ್ತರಿಸಲಿದ್ದಾರೆ ಜನ; ಹವಾಮಾನ ಇಲಾಖೆ ಎಚ್ಚರಿಕೆ

ಕಪ್ಪು ಕೈಗಳ ಸ್ಪೈಡರ್ ಕೋತಿ:

ಇದೊಂದು ವಿಶಿಷ್ಟ ಬಗೆಯ ಕೋತಿ ಪ್ರಬೇಧವಾಗಿದ್ದು ಅಳಿವಿನಂಚಿನಲ್ಲಿರುವ ಕೋತಿ ಜಾತಿಗಳಲ್ಲಿ ಪರಿಗಣಿಸಲ್ಪಟ್ಟಿವೆ. ಇವು ಸಾಮಾನ್ಯವಾಗಿ ಮಧ್ಯ ಹಾಗೂ ದಕ್ಷಿಣ ಅಮೆರಿಕದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಕೋತಿಗಳ ವಿಶೇಷತೆ ಎಂದರೆ ಇವುಗಳ ಕೈಗಳು ಕಾಲುಗಳಿಗಿಂತಲೂ ಉದ್ದವಾಗಿರುತ್ತವೆ ಹಾಗೂ ಇವುಗಳ ಬಾಲ ಎಷ್ಟು ಶಕ್ತಿಯುತವಾಗಿರುತ್ತದೆ ಎಂದರೆ ಆ ಕೋತಿಯ ಪೂರ್ಣ ಶರೀರದ ಭಾರವನ್ನು ನಿರಾಯಾಸವಾಗಿ ತಡೆಯಬಲ್ಲುದು. ಹಾಗಾಗಿ ಈ ಕೋತಿಯನ್ನು ದೂರದಿಂದ ನೋಡಿದರೆ ಇದು ತನ್ನ ಉದ್ದವಾದ ಕೈಕಾಲುಗಳು ಹಾಗೂ ಬಾಲದಿಂದಾಗಿ ಜೇಡರ ಹುಳುವಿನಂತೆ ಕಂಡುಬರುತ್ತದೆ. ಹಾಗಾಗಿ ಇದನ್ನು ಸ್ಪೈಡರ್ ಕೋತಿ ಎಂದು ಕರೆಯಲಾಗುತ್ತದೆ.

ಇವು ಸಾಮಾನ್ಯವಾಗಿ ಹಣ್ಣುಗಳನ್ನು ತಿಂದು ಬದುಕುತ್ತವೆ. ದುರಾದೃಷ್ಟವಾಗಿ ಈ ಕೋತಿಗಳನ್ನು ಪೆಟ್ ಮಾಡಿಟ್ಟುಕೊಳ್ಳಲು ಹಲವರು ಇಷ್ಪಡುತ್ತಾರೆ. ಹಾಗೂ, ಕಳೆದ ಹಲವು ಸಮಯದಿಂದ ಈ ಕೋತಿಗಳ ಬೇಟೆ ಮಾಡಲಾಗುತ್ತಿದ್ದು ಸದ್ಯ ಅವುಗಳ ಸಂತತಿ ಅಳಿವಿನಂಚಿನಲ್ಲಿದೆ ಎಂದು ಐಯುಸಿಎನ್ ಹೇಳಿದೆ.

ಇದನ್ನೂ ಓದಿ: Omicron Symptoms: ದೇಶದಲ್ಲಿ ಮತ್ತೆ ಕರೋನಾ ಹೊಸ ರೂಪಾಂತರಗಳ ಅಬ್ಬರ, ರೋಗ ಲಕ್ಷಣಗಳ ಬಗ್ಗೆ ತಜ್ಞರ ಅಭಿಪ್ರಾಯವೇನು?

ಬ್ರೆವರ್ಡ್ ಪ್ರಾಣಿ ಸಂಗ್ರಹಾಲಯವು ಸರ್ಕಾರೇತರ ಪ್ರಾಣಿಪರ ಸಂಸ್ಥೆಯಾಗಿದ್ದು ದಾನಿಗಳ ಸಹಾಯದ ಮೂಲಕ ಪ್ರಾಣಿ ಸಂಗ್ರಹಾಲಯ ನಡೆಸುತ್ತಿದೆ.
Published by:shrikrishna bhat
First published: