HOME » NEWS » National-international » MEET THE HINDU PRIEST OFFICIATING LGBTQ WEDDINGS STG MAK

LGBTQ| ಸಲಿಂಗ ವಿವಾಹ ನಡೆಸಿಕೊಡುವ ಮಹಿಳಾ ಪುರೋಹಿತೆ..!

ಕೆನಡಾದಲ್ಲಿ ಹುಟ್ಟಿ ಬೆಳೆದಿರುವ ಸುಷ್ಮಾ ಈಗ ತಮ್ಮ ಪತಿ ಹಾಗೂ ಇಬ್ಬರು ಪುಟಾಣಿ ಮಕ್ಕಳೊಂದಿಗೆ ಹಾರ್ಲೆಮ್‌ನಲ್ಲಿ ವಾಸವಾಗಿದ್ದಾರೆ. ಡೈಲಿ ಹಾರ್ವೆಸ್ಟ್ ಎಂಬ ಸಬ್‌ಸ್ಕ್ರಿಪ್ಶನ್ ಆಧಾರಿತ ಫುಡ್ ಕಂಪೆನಿಯ ವೈಸ್ ಪ್ರೆಸಿಡೆಂಟ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

Trending Desk
Updated:June 25, 2021, 2:16 PM IST
LGBTQ| ಸಲಿಂಗ ವಿವಾಹ ನಡೆಸಿಕೊಡುವ ಮಹಿಳಾ ಪುರೋಹಿತೆ..!
ಸುಷ್ಮಾ.
  • Share this:

ಅನಾದಿ ಕಾಲದಿಂದಲೂ ಪುರಾಣಗಳಲ್ಲಿ ವೇದ ಶಾಸ್ತ್ರಗಳಲ್ಲಿ ನಮ್ಮ ಹಿಂದೂ ಧರ್ಮದ ಬಗ್ಗೆ ಅನೇಕ ಮಹತ್ವದ ವಿಚಾರಗಳನ್ನು ಕೇಳಿದ್ದೇವೆ ಮತ್ತು ನಮ್ಮ ಶಾಸ್ತ್ರಗಳ ಬಗ್ಗೆ ಅರಿತುಕೊಂಡಿದ್ದೇವೆ. ಶಾಸ್ತ್ರ ಮತ್ತು ಪುರಾಣಗಳಲ್ಲಿ ಹೇಳಿರುವ ಮಾತು ಸಮಾನತೆ ಮತ್ತು ಐಕ್ಯತೆಯ ಕುರಿತಾಗಿದೆ. ಯಾವುದೇ ವೃತ್ತಿ ಇರಲಿ ಅಧಿಕಾರವಿರಲಿ, ಅಲ್ಲಿ ಸ್ತ್ರೀ ಹಾಗೂ ಪುರುಷರಿಗೆ ಸಮಾನ ಅವಕಾಶವಿದೆ ಎಂದೇ ಉಲ್ಲೇಖಿಸಲಾಗಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ದೇವಾಲಯಗಳಲ್ಲಿ ಪುರುಷ ಅರ್ಚಕರು ಇರುವಂತೆ ಸ್ತ್ರೀಯರು ಕೂಡ ದೇವತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜ ಅಂಗೀಕರಿಸಿದರೂ ಅಂಗೀಕರಿಸದೇ ಇದ್ದರೂ ಕೆಲವೊಂದು ಸ್ಥಳಗಳಲ್ಲಿ ಈ ರೀತಿಯ ನೀತಿ ಜಾರಿಗೆ ಬಂದಿದೆ.


ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿ ಕೂಡ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶವಿದೆ. ಇಂದಿನ ಸುದ್ದಿಯಲ್ಲಿ ಲೆಸ್ಬಿಯನ್, ಮಂಗಳಮುಖಿಯರ ವಿವಾಹವನ್ನು ನಡೆಸಿಕೊಡುವ ಒಬ್ಬ ಸ್ತ್ರೀ ಅರ್ಚಕರ ವಿವರಗಳನ್ನು ತಿಳಿದುಕೊಳ್ಳೋಣ. ಈ ಸುದ್ದಿ ಆಶ್ಚರ್ಯವನ್ನುಂಟು ಮಾಡುತ್ತಿದ್ದರೂ ಸತ್ಯವಾಗಿದೆ. ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ಸುಷ್ಮಾ ದ್ವಿವೇದಿ ಈ ಅಪರೂಪದ ವಿವಾಹ ಕಾರ್ಯಗಳನ್ನು ನಡೆಸಿಕೊಡುವ ಅರ್ಚಕರಾಗಿದ್ದಾರೆ.ವಿದೇಶಗಳಲ್ಲಿ ಮಹಿಳಾ ಅರ್ಚಕರು ತುಂಬಾ ವಿರಳ ಎಂದೇ ಮಾತಿಗೆ ತೊಡಗುವ ಸುಷ್ಮಾ ತಾವು ಮಾಡುತ್ತಿರುವ ವೃತ್ತಿಯಲ್ಲಿ ಸಂತಸವನ್ನು ಕಂಡುಕೊಂಡವರು. ಈ ಸಮುದಾಯದವರ ಯಾವುದೇ ಸಮಾರಂಭವನ್ನು ಅರ್ಚಕರು ನೆರವೇರಿಸಿಕೊಡದೇ ಇರುವ ಕಾರಣ ಇಂತಹ ಸಾಹಸಕ್ಕೆ ಸುಷ್ಮಾ ಕೈಹಾಕಿದ್ದು ಅದರಲ್ಲಿ ಪೂರ್ಣ ಪ್ರಮಾಣದ ಯಶಸ್ಸನ್ನು ಕಂಡುಕೊಂಡಿದ್ದಾರೆ.


2016 ರಲ್ಲಿ ಸುಷ್ಮಾ ಪರ್ಪಲ್ ಪಂಡಿತ್ ಪ್ರಾಜೆಕ್ಟ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು ಇದು ಅನೇಕ ಸಮಾರಂಭಗಳನ್ನು ನಡೆಸಿಕೊಡುತ್ತದೆ. ಅದರಲ್ಲೂ ಇದು ಲೆಸ್ಬಿಯನ್ ಸಮುದಾಯದವರಿಗೆ ಸ್ನೇಹಪರವಾಗಿದೆ. ನಾಮಕರಣ, ಗೃಹಪ್ರವೇಶ, ಮಹಿಳಾ ಅರ್ಚಕರೇ ಬೇಕೆನ್ನುವ ಕೆಲವೊಂದು ವಿವಾಹ ಸಮಾರಂಭಗಳನ್ನು ನಡೆಸಿಕೊಡುವುದಾಗಿದೆ. ಸುಷ್ಮಾ ಅವರು ಇದುವರೆಗೆ 33 ವಿವಾಹಗಳನ್ನು ನಡೆಸಿಕೊಟ್ಟಿದ್ದಾರೆ.


ಅದರಲ್ಲಿ ಅರ್ಧದಷ್ಟು ಸಲಿಂಗಿಗಳ ವಿವಾಹವಾಗಿದೆ. ಕೆನಡಾದಲ್ಲಿ ಹುಟ್ಟಿ ಬೆಳೆದಿರುವ ಸುಷ್ಮಾ ಈಗ ತಮ್ಮ ಪತಿ ಹಾಗೂ ಇಬ್ಬರು ಪುಟಾಣಿ ಮಕ್ಕಳೊಂದಿಗೆ ಹಾರ್ಲೆಮ್‌ನಲ್ಲಿ ವಾಸವಾಗಿದ್ದಾರೆ. ಡೈಲಿ ಹಾರ್ವೆಸ್ಟ್ ಎಂಬ ಸಬ್‌ಸ್ಕ್ರಿಪ್ಶನ್ ಆಧಾರಿತ ಫುಡ್ ಕಂಪೆನಿಯ ವೈಸ್ ಪ್ರೆಸಿಡೆಂಟ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.


ಸುಷ್ಮಾ ಅರ್ಚಕರಾಗಲು ಕಾರಣ ಅವರ ಪತಿಯ ಸಹೋದರ ಮಂಗಳ ಮುಖಿಯಾಗಿದ್ದ ರಿಂದ ಅವರ ವಿವಾಹಕ್ಕೆ ಯಾವ ಅರ್ಚಕರು ಸಮ್ಮತಿಸುತ್ತಾರೆ ಎಂದಾಗಿತ್ತು. ಈ ವಿಷಯ ಅವರನ್ನು ಕೊರೆಯುತ್ತಿತ್ತು. ನನ್ನ ಮನೆಯಲ್ಲಿಯೇ ಈ ರೀತಿ ಇದ್ದುಕೊಂಡು ಇದಕ್ಕೆ ನಾನೇನಾದರೂ ಮಾಡಬೇಕೆಂದು ಸುಷ್ಮಾ ಬಯಸಿದರು. ಆದರೆ ಸರಿಯಾದ ಸಮಯ ಒದಗಿಬಂದಿರಲಿಲ್ಲ.


ಇದನ್ನೂ ಓದಿ: Emergency Black Day| ಜನರ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್​ ದೇಶದ ಜನರ ಕ್ಷಮೆ ಕೇಳಬೇಕು; ಬಿ.ಎಸ್. ಯಡಿಯೂರಪ್ಪ

ಇನ್ನು ಸುಷ್ಮಾ ತಮ್ಮ ಮೊದಲ ಮಗುವಿಗೆ ಜನ್ಮನೀಡುತ್ತಿದ್ದ ಸಮಯದಲ್ಲಿ ಅವರದೇ ವಾರ್ಡ್‌ನಲ್ಲಿದ್ದ ಸತಿಪತಿಗಳು ವಿವಾಹವಾಗು ವುದಕ್ಕೆ ಬಯಸಿದ್ದರು. ಆದರೆ ಈ ಸಮಯದಲ್ಲಿ ಪತ್ನಿ ಗರ್ಭವತಿಯಾಗಿದ್ದಳು ಮತ್ತು ಮಗು ಜನಿಸುವ ಮೊದಲೇ ಅವರು ಸತಿಪತಿಗಳಾಗಬೇಕೆಂದು ಬಯಸಿದ್ದರು.ಈ ಸಮಯದಲ್ಲಿ ಪಾದ್ರಿಗಳು ಎಲ್ಲಿಂದ ದೊರೆಯಬೇಕು?


ಇದನ್ನೂ ಓದಿ: CoronaVirus Live Update| ದೇಶದಲ್ಲಿ ತಗ್ಗುತ್ತಿರುವ ಕೊರೋನಾ ಸೋಂಕು, ಚೇತರಿಕೆ ಪ್ರಮಾಣದಲ್ಲೂ ಏರಿಕೆ!

ಆಗ ಸುಷ್ಮಾ ಅವರ ಒಪ್ಪಿಗೆಯ ಮೇರೆಗೆ ಅವರುಗಳ ವಿವಾಹವನ್ನು ನಡೆಸಿಕೊಟ್ಟರು. ಸುಷ್ಮಾರ ಪತಿ ಈ ವಿವಾಹ ಸಂದರ್ಭವನ್ನು ಸೆರೆಹಿಡಿದಿದ್ದಾರೆ ಎಂದು ಸುಷ್ಮಾ ತಿಳಿಸಿದರು. ಅಲ್ಲಿಂದ ನಂತರ ಸುಷ್ಮಾಗೆ ವಿವಾಹ ನಡೆಸಲು ಧೈರ್ಯ ಬಂದಿತು.Youtube Video

ಇನ್ನು ಸುಷ್ಮಾ ಹಿಂದೂ ಪದ್ಧತಿಯ ಪ್ರಕಾರ ಬಹಳಷ್ಟು ಸಮಯಗಳನ್ನು ವಿವಾಹ ಇಲ್ಲವೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲು ಬರೇ 35 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಗಣಪತಿಗೆ ವಂದಿಸಿ ಪ್ರಾರ್ಥನೆ ಮಾಡಿ ನಂತರ ವಿವಾಹ ಕಾರ್ಯಗಳನ್ನು ಸಂಪೂರ್ಣಗೊಳಿಸುತ್ತಾರೆ. ಸುಷ್ಮಾ ಅವರ ಕೆಲಸವನ್ನು ಮೊದಲಿಗೆ ಯಾರೂ ಒಪ್ಪಿಕೊಂಡಿರಲಿಲ್ಲವಂತೆ. ಅವರು ಕೂಡ ಮೊದಲಿಗೆ ಕಷ್ಟಗಳನ್ನು ಎದುರಿಸಿದ್ದರು. ಆದರೆ ಕಾಲಕ್ರಮೇಣ ಅದೆಲ್ಲಾ ತಿಳಿಯಾಯಿತು ಮತ್ತು ನಾನು ಲೆಸ್ಬಿಯನ್ ವಿವಾಹಗಳನ್ನು ನಡೆಸುವುದರಲ್ಲಿ ಮುತುವರ್ಜಿ ವಹಿಸಿದೆ ಎನ್ನುತ್ತಾರೆ.

First published: June 25, 2021, 2:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories