ಕ್ಯಾಲಿಫೋರ್ನಿಯಾ ಗವರ್ನರ್ ರೇಸ್​ನಲ್ಲಿ 22 ವರ್ಷದ ಇಂಡೋ-ಅಮೆರಿಕನ್


Updated:June 2, 2018, 1:33 PM IST
ಕ್ಯಾಲಿಫೋರ್ನಿಯಾ ಗವರ್ನರ್ ರೇಸ್​ನಲ್ಲಿ 22 ವರ್ಷದ ಇಂಡೋ-ಅಮೆರಿಕನ್

Updated: June 2, 2018, 1:33 PM IST
-ನ್ಯೂಸ್ 18

ಕ್ಯಾಲಿಫೋರ್ನಿಯಾ(ಜೂ.02); ಅನಿವಾಸಿ ಭಾರತೀಯರು ಅಮೆರಿಕದಲ್ಲಿ ಅತ್ಯುನ್ನತ ಹುದ್ದೆಗೇರುವುದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದೆ. ಶುಭಂ ಗೋಯಲ್ ಎಂಬ 22 ವೆರ್ಷದ ಇಂಡೋ-ಅಮೆರಿಕನ್ ಯುವಕ ಕ್ಯಾಲಿಫೋರ್ನಿಯಾದ  ಗವರ್ನರ್ ರೇಸ್​ನಲ್ಲಿದ್ದಾನೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಕಾನಾಮಿಕ್ಸ್ ಮತ್ತು ಸಿನಿಮಾದಲ್ಲಿ ಪದವಿ ಪಡೆದಿರುವ ಶುಭಂ ಗೋಯಲ್ ವರ್ಚುಯಲ್ ರಿಯಾಲಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಗವರ್ನರ್ ಹುದ್ದೆಗೆ ಸ್ಪರ್ಧೆ ಮಾಡಿರುವ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕಳೆದ ವಾರ ಸಂತಾ ಮೋನಿಕಾ ಪೈಯರ್​ನಲ್ಲಿ ಮೈಕ್ ಹಿಡಿದು ಪ್ರಚಾರ ಮಾಡುತ್ತಿದ್ದಾಗ ಪತ್ರಕರ್ತರ ಕಣ್ಣಿಗೆ ಬಿದ್ದಿದ್ದಾನೆ. ಪಾರದರ್ಶಕತೆ ಮತ್ತು ಅಧಿಕಾರಿಗಳ ಪ್ರೊಫೈಲನ್ನ ಡಿಜಿಟಲೀಕರಣಗೊಳಿಸುವುದು ನನ್ನ ಆಡಳಿತದ ಸೂತ್ರ. ಇದು ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗ ಎಂದು ಹೇಳಿದ್ದಾರೆ.

ಸದ್ಯ, ಶುಭಂ ಗೋಯಲ್ ಉತ್ತರಪ್ರದೇಶದ ಡ್ಯಾನ್ ವಿಲ್ಲೆಯಲ್ಲಿ ವಾಸವಿದ್ದು,ಇವರ ತಂದೆ ವಿಪುಲ್ ಗೋಯಲ್ ಲಖನೌದಲ್ಲಿ ಸಾಫ್ಟ್​ವೇರ್ ಕಂಪನಿ ಹೊಂದಿದ್ದಾರೆ.

ಕ್ಯಾಲಿಫೋರ್ನಿಯಾದ ಹಾಲಿ ಗವರ್ನರ್ ಜೆರ್ರಿ ಬ್ರೌನ್ ಉತ್ತರಾಧಿಕಾರಿಯಾಗಲು ನಾನು ಸೂಕ್ತ ವ್ಯಕ್ತಿ ಎಂದು ಶುಭಂ ಗೋಯಲ್ ನಂಬಿಕೆಯಾಗಿದ್ದು, ತಮ್ಮ ನೈಪುಣ್ಯತೆಯನ್ನ ಜನರ ಮುಂದಿಡಲು ಪ್ರಯತ್ನ ನಡೆಸುತ್ತಿದ್ದಾರೆ. ವರ್ಚುಯಲ್ ರಿಯಾಲಿಟಿ ಟೆಕ್ನಾಲಜಿ ಕ್ಯಾಲಿಫೋರ್ನಿಯಾದಲ್ಲಿ ಹೊಸ ಬದಲಾವನೆ ತರಲಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ ಎನ್ನುತ್ತಾರೆ ಶುಭಂ ಗೋಯಲ್.
First published:June 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...