Ali Sabry: ಶ್ರೀಲಂಕಾ ಭಾರ ಅಲಿ ಸಬ್ರಿ ಹೆಗಲಿಗೆ, ಹಣಕಾಸು ತಜ್ಞ ಅಲ್ಲದಿದ್ದರೂ ಹಣಕಾಸು ಸಚಿವರಾಗಿದ್ದು ಏಕೆ?

ಈ ಹಿಂದೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಮುಸ್ಲಿಮರನ್ನು ಹೂಳಲು ಅನುಮತಿ ನೀಡದ ಶ್ರೀಲಂಕಾ ಸರ್ಕಾರದ ನಿರ್ಧಾರವನ್ನು ಅವರು ತಮ್ಮ ಧಾರ್ಮಿಕ ನಂಬಿಕೆಯಿಂದಾಚೆ ಬಂದು ರಾಷ್ಟ್ರೀಯ ಕರ್ತವ್ಯ ಮುಖ್ಯ ಎಂಬ ನೈತಿಕತೆಯಡಿಯಲ್ಲಿ ಸಮರ್ಥಿಸಿಕೊಂಡಿದ್ದರು.

ಅಲಿ ಸಬ್ರಿ

ಅಲಿ ಸಬ್ರಿ

  • Share this:
ಪ್ರಸಕ್ತ ರಷ್ಯಾ-ಉಕ್ರೇನ್ ಬಿಕ್ಕಟ್ಟು,  (Russia Ukraine War Effect)ಭ್ರಷ್ಟ ರಾಜಕಾರಣ ಹಾಗೂ ಅದಕ್ಕಿಂತ ಮುಂಚೆ ಕೋವಿಡ್ ತಂದೊಡ್ಡಿದ್ದ ಆರ್ಥಿಕ ನಷ್ಟಗಳ ತೀವ್ರ ಹೊಡೆತದಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾದ ಆರ್ಥಿಕತೆ (Sri Lanka Economic Crisis) ಅಕ್ಷರಶಃ ಕುಸಿದು ಬಿದ್ದಿದ್ದು, ಸದ್ಯ ಈ ರಾಷ್ಟ್ರಕ್ಕೆ ಒಬ್ಬ ದಿಟ್ಟ ಹಾಗೂ ಸಮರ್ಥ ಹಣಕಾಸು ಮಂತ್ರಿಯ ತಕ್ಷಣ ಅಗತ್ಯವಿದೆ. ಆ ಮೂಲಕ ಈ ರಾಷ್ಟ್ರವು ಮತ್ತೆ ಚೇತರಿಸಿಕೊಳ್ಳಬೇಕಾಗಿದೆ. ಶ್ರೀಲಂಕಾದ ಸರ್ಕಾರವು ಈಗ ತನ್ನ ಹಣಕಾಸು ಮಂತ್ರಿಯ ಸ್ಥಾನಕ್ಕೆ ಅಲಿ ಸಬ್ರಿ ಅವರನ್ನು (Finance Minister Ali Sabry) ನೇಮಕ ಮಾಡಿದೆ.

ಅಲಿ ಸಬ್ರಿ ಅವರು ವಕೀಲರಾಗಿದ್ದು ಈ ಹಿಂದೆ ಶ್ರೀಲಂಕಾದ ನ್ಯಾಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ದಿಟ್ಟತನ ಹೇಗಿತ್ತೆಂದರೆ, ಈ ಹಿಂದೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಮುಸ್ಲಿಮರನ್ನು ಹೂಳಲು ಅನುಮತಿ ನೀಡದ ಶ್ರೀಲಂಕಾ ಸರ್ಕಾರದ ನಿರ್ಧಾರವನ್ನು ಅವರು ತಮ್ಮ ಧಾರ್ಮಿಕ ನಂಬಿಕೆಯಿಂದಾಚೆ ಬಂದು ರಾಷ್ಟ್ರೀಯ ಕರ್ತವ್ಯ ಮುಖ್ಯ ಎಂಬ ನೈತಿಕತೆಯಡಿಯಲ್ಲಿ ಸಮರ್ಥಿಸಿಕೊಂಡಿದ್ದರು.

ಈ ಹಿಂದೆ ಹಣಕಾಸು ಮಂತ್ರಿ ಯಾರಾಗಿದ್ದರು?
ಈ ಹಿಂದೆ ಬಸಿಲ್ ರಾಜಪಕ್ಸ ಅವರು ಶ್ರೀಲಂಕಾದ ಹಣಕಾಸು ಸಚಿವರಾಗಿದ್ದರು. ಸದ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅಲಿ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ತಿಳಿದುಬಂದಿದೆ. ಕುಟುಂಬ ರಾಜಕೀಯದಿಂದಾಗಿ ಶ್ರೀಲಂಕಾದಲ್ಲಿ ಜನರ ಆಕ್ರೋಶ ಮಿತಿ ಮೀರಿತ್ತು. ಹಾಗಾಗಿ ಪ್ರಧಾನಿ ಮಹಿಂದ್ರಾ ರಾಜಪಕ್ಸ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ಕ್ಯಾಬಿನೆಟ್ ಸರ್ಜರಿ ನಡೆಸಿ ತಮ್ಮ ಮನೆತನದವರನ್ನು ಮಂತ್ರಿ ಸ್ಥಾನಗಳಿಂದ ಕೆಳಗಿಳಿಯುವಂತೆ ಕ್ರಮ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಬಸಿಲ್ ರಾಜಪಕ್ಸ ಅವರು ಹಣಕಾಸು ಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜೀನಾಮೆ ನೀಡಿ ವಾಪಸ್
ತದನಂತರ ಅಲಿ ಅವರನ್ನು ಹಣಕಾಸು ಮಂತ್ರಿ ಸ್ಥಾನಕ್ಕೆ ನೇಮಿಸಲಾಗಿದೆ. ಅಷ್ಟಕ್ಕೂ ಅಲಿ ಅವರಿಗೆ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನುಭವ ಇಲ್ಲದ ಕಾರಣ ಅವರು ಮಂತ್ರಿ ಸ್ಥಾನಕ್ಕೆ ನೇಮಕವಾಗುತ್ತಿದ್ದಂತೆಯೇ ರಾಜೀನಾಮೆ ಸಹ ನೀಡಿದ್ದರು. ಅವರು ಹೇಳುವಂತೆ ಅವರ ಮನೆಯವರೂ ಸಹ ಅಲಿ ಹಣಕಾಸು ಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದನ್ನು ಆಕ್ಷೇಪಿಸಿದ್ದರಂತೆ.

ಆದರೂ, ಅವರು ರಾಜಿನಾಮೆ ನೀಡಿ 4-5 ದಿನಗಳಷ್ಟು ಕಾಯ್ದ ಬಳಿಕವೂ ಅವರ ರಾಜೀನಾಮೆ ಅಂಗೀಕೃತವಾಗಿರಲಿಲ್ಲ. ಕೊನೆಯದಾಗಿ ಅಲಿ ಅವರು ಇದು ತಮ್ಮ ಪಾಲಿನ ರಾಷ್ಟ್ರೀಯ ಕರ್ತವ್ಯವಾಗಿದ್ದು, ಇದನ್ನು ನಿಭಾಯಿಸಲು ನಿರ್ಧರಿಸಿ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದರೆಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅನುಭವ ಇಲ್ಲದಿದ್ದರೂ ಹೇಗೆ ಸಾಧ್ಯ?
"ನಾನು ಹಣಕಾಸು ತಜ್ಞನಲ್ಲ, ನನಗೆ ಈ ಕ್ಷೇತ್ರದಲ್ಲಿ ಅನುಭವವಿಲ್ಲ, ಹಾಗಾಗಿ ಈ ಸ್ಥಾನವನ್ನು ಯಾರಾದರೂ ಅರ್ಹ ವ್ಯಕ್ತಿ ಪಡೆಯಬೇಕೆಂದು ಅನಿಸಿತು. ಅದಕ್ಕಾಗಿ ಹಲವು ಜನರನ್ನು ಈ ಸ್ಥಾನ ತುಂಬುವಂತೆ ಆಹ್ವಾನಿಸಿದೆ, ಆದರೆ ಯಾರೊಬ್ಬರೂ ಮುಂದೆ ಬರಲಿಲ್ಲ. ಆಗ ನನಗೆ ಅನಿಸಿದ್ದು ದೇಶದಲ್ಲಿ ಪ್ರಸ್ತುತ ಹಲವು ಕಠಿಣಕರ ಪರಿಸ್ಥಿತಿಗಳು ರಾರಾಜಿಸುತ್ತಿವೆ, ಐಎಂಎಫ್ ಜೊತೆ ಮಾತನಾಡಲು ದೇಶವನ್ನು ಪ್ರತಿನಿಧಿಸುವ ಯಾರಾದರು ಬೇಕು, ಸಹಾಯ ಸಂಬಂಧ ಭಾರತ ಸರ್ಕಾರದೊಡನೆ ಮಾತನಾಡಲೂ ಸಹ ದೇಶದ ಒಬ್ಬ ಪ್ರತಿನಿಧಿ ಬೇಕು. ಹಾಗಾಗಿ ಬಲವಂತದ ಮನಸ್ಸಿನಿಂದ ನಾನೇ ಈ ಕರ್ತವ್ಯ ನಿರ್ವಹಿಸಲು ನಿರ್ಧರಿಸಿ ನನ್ನ ರಾಜೀನಾಮೆಯನ್ನು ಹಿಂಪಡೆದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Banks Customers Alert: ಈ ಸೇವೆಗಳನ್ನು ಇನ್ನೂ ಒಂದು ಗಂಟೆ ಹೆಚ್ಚು ಪಡೆಯಿರಿ! ಬ್ಯಾಂಕ್ ಗ್ರಾಹಕರೇ ಗಮನಿಸಿ

ಅಲಿ ಹೇಳುವಂತೆ, ಶ್ರೀಲಂಕಾ ಸ್ವಾತಂತ್ರ್ಯದ ನಂತರ ಪ್ರಥಮ ಬಾರಿಗೆ ಇಂತಹ ಹೀನಾಯ ಆರ್ಥಿಕ ಸ್ಥಿತಿ ತಲುಪಿದೆಯಂತೆ. ಈ ಬಗ್ಗೆ ಅವರು, "ಮೊದಲು ನಾವು ಈಗ ದಿನೇ ದಿನೇ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯನ್ನು ಆದ್ಯತೆಯ ಮೇರೆಗೆ ಇನ್ನಷ್ಟು ನೆಲ ಕಚ್ಚದಂತೆ ತಡೆ ಹಿಡಿಯಬೇಕಾಗಿದೆ. 50 ಬಿಲಿಯನ್‌ ಡಾಲರ್‌ಗಿಂತಲೂ ಅಧಿಕ ಸಾಲ ಶ್ರೀಲಂಕಾದ ಮೇಲಿದ್ದು, ಕೆಲ ಸಮಯದ ಹಿಂದೆಯೇ ನಾವು ತಾತ್ಕಾಲಿಕವಾಗಿ ಸಾಲ ಮರು ಪಾವತಿ ನಿಲ್ಲಿಸಿದ್ದೇವೆ ಹಾಗೂ ಅನಿವಾಸಿ ಶ್ರೀಲಂಕನ್ನರಿಗೆ ದೇಶಕ್ಕಾಗಿ ನೆರವಾಗಲು ರೆಮಿಟೆನ್ಸ್ ಕಳುಹಿಸಲು ಕೋರಿದ್ದೇವೆ.

ಸುಲಭವಿಲ್ಲ ಪರಿಸ್ಥಿತಿ ನಿರ್ವಹಣೆ
ಸದ್ಯ ನಾಗರಿಕರಿಗೆ ಅವಶ್ಯಕವಾಗಿ ಬೇಕಾದ ಸಾಮಗ್ರಿಗಳನ್ನೂ ಸಹ ಆಮದು ಮಾಡಿಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ಆರೇಳು ತಿಂಗಳು ಈ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ದೇಶಕ್ಕೆ ಏನಿಲ್ಲವೆಂದರೂ 3-4 ಬಿಲಿಯನ್ ಡಾಲರ್ ಅವಶ್ಯಕತೆಯಿದೆ. ಈಗಾಗಲೇ ಭಾರತ ಸಾಕಷ್ಟು ಸಹಾಯ ಮಾಡಿದ್ದು ಮತ್ತೆ ಸಹಾಯದ ಧನಾತ್ಮಕ ಸಂಕೇತ ಸಿಕ್ಕಿದೆ, ನಿಜಕ್ಕೂ ಭಾರತವು ನಿಜವಾದ ಸ್ನೇಹಿತನಂತೆ ಕಾರ್ಯ ನಿರ್ವಹಿಸಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Libya Oil: ತೈಲ ಉತ್ಪಾದನೆ ಬಂದ್, ತೈಲ ಬೆಲೆ ಏರಿಕೆ ಸಾಧ್ಯತೆ; ಲಿಬಿಯಾದಲ್ಲಿ ಜೋರಾಗುತ್ತಿದೆ ಗಲಾಟೆ

ಮುಂದಿನ ದಿನಮಾನಗಳಲ್ಲಿ ಅಲಿ ಅವರ ಪಾತ್ರ ಮತ್ತಷ್ಟು ಮಹತ್ವಪೂರ್ಣವಾಗಲಿದ್ದು, ಶ್ರೀಲಂಕಾದ ಆರ್ಥಿಕ ನಾವೆ ಮುಳುಗದಂತೆ ಜೋಪಾನವಾಗಿ ಮುನ್ನಡೆಸಿಕೊಂಡು ಹೋಗಬೇಕಾದ ಅವಶ್ಯಕತೆಯಿದೆ. ಅದಕ್ಕಾಗಿ ಅಲಿ ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಅಧ್ಯಕ್ಷ ರಾಜಪಕ್ಸ ಅವರು ಅನುಷ್ಠಾನಗೊಳಿಸಿರುವ ಹಲವು ತೆರಿಗೆಗಳ ಬಗ್ಗೆ ಮಾತನಾಡುತ್ತ ನಾವು ವಾಸ್ತವ ಅಂಶವನ್ನು ಅರಿತುಕೊಂಡು ದೀರ್ಘಾವಧಿಯಲ್ಲಿ ನಮ್ಮ ದೇಶ ಮತ್ತೆ ಆರ್ಥಿಕತೆಯ ಸುಗಮ ದಾರಿ ಹಿಡಿಯುವಂತೆ ಸಹಕರಿಸಬೇಕಾಗಿದೆ ಎಂದು ಹೇಳಿದ್ದಾರೆ.
Published by:guruganesh bhat
First published: