ಹೈದ್ರಾಬಾದ್​ನಲ್ಲಿ ಜನಿಸಿತು ದಕ್ಷಿಣ ಏಷ್ಯಾದ ಅತಿ ಚಿಕ್ಕ ಮಗು ಚೆರಿ!: ತೂಕ ಹಾಗೂ ಎತ್ತರವೆಷ್ಟು ಗೊತ್ತಾ?


Updated:July 21, 2018, 5:40 PM IST
ಹೈದ್ರಾಬಾದ್​ನಲ್ಲಿ ಜನಿಸಿತು ದಕ್ಷಿಣ ಏಷ್ಯಾದ ಅತಿ ಚಿಕ್ಕ ಮಗು ಚೆರಿ!: ತೂಕ ಹಾಗೂ ಎತ್ತರವೆಷ್ಟು ಗೊತ್ತಾ?

Updated: July 21, 2018, 5:40 PM IST
ನ್ಯೂಸ್​ 18 ಕನ್ನಡ

ಹೈದ್ರಾಬಾದ್​(ಜು.21): ಈ ಜಗತ್ತಿನಲ್ಲಿ ಮಗುವೊಂದಕ್ಕೆ ಜನ್ಮ ನೀಡುವ ಇಡೀ ಪ್ರಕ್ರಿಯೆಯೇ ಅತ್ಯಂತ ಕಠಿಣವಾಗಿದೆ. ಅಲ್ಲದೇ ಹಲವಾರು ಬಾರಿ ಇದು ಅಪಾಯಕಾರಿಯಾಗುತ್ತದೆ. ಯಅವ ಸಂದರ್ಭದಲ್ಲಿ ಮಗುವೊಂದು ತಾಯಿಯ ಗರ್ಭದಲ್ಲಿ ಬೆಳೆಯಲಾರಂಭಿಸುತ್ತದೋ ಅಂದಿನಿಂದ ಜನಿಸುವವರೆಗೂ ಏನಾದರೂ ಆಗುವ ಸಾಧ್ಯತೆಗಳಿವಚೆ. ಒಂಭತ್ತು ತಿಂಗಳ ಈ ಪಯಣ ಹೀಗೇ ಮುಂದುವರೆಯುತ್ತದೆ, ಕೆಲವೊಂದು ಬಾರಿ ಎಲ್ಲವೂ ಸರಿ ಇದೆ ಅಂತನಿಸಿದರೆ ಮರುಕ್ಷಣವೇ ಏನೂ ಸರಿಯಿಲ್ಲ ಅಂತನಿಸಲಾರಂಭಿಸುತ್ತದೆ. ಆದರೆ ಕೆಲ ಪ್ರಕರಣಗಳ;ಲ್ಲಿ ಆರಂಭದಿಂದಲೂ ಅದೆಷ್ಟು ಸಮಸ್ಯೆಗಳಿರುತ್ತವೆ ಎಂದರೆ ಬೆಸ್ಟ್​ ವೈದ್ಯರು ಕೂಡಾ ಕೈಚೆಲ್ಲುತ್ತಾರೆ. ಕೆಲವೊಂದು ಬಾರಿ ಮಗು ಒಂಭತ್ತು ತಿಂಗಳಿಗಿಂತಲೂ ಮೊದಲೇ ಜನಿಸುತ್ತದೆ. ಇಂತಹ ಮಕ್ಕಳನ್ನು ರಕ್ಷಿಸುವುದು ಬಹಳ ಕಷ್ಟ. ಇಂತಹುದೇ ಪ್ರಕರಣವೊಂದು ಹೈದರಾಬಾದ್​ನಲ್ಲಿ ನಡೆದಿದ್ದು, ಉತ್ತಮ ವೈದ್ಯರ ತಂಡದ ಪರಿಶ್ರಮ ಹಾಗೂ ಸೂಕ್ತ ಕಾಳಜಿಯಿಂದ ವಿಭಿನ್ನ ಮಗುವೊಂದು ಜನಿಸಿದೆ.


ಹೌದು ಹೈದರಾಬಾದ್​ನ ರೇಂಬೋ ಆಸ್ಪತ್ರೆಯು ಇತ್ತೀಚೆಗಷ್ಟೇ ದಂಪತಿಯೊಂದು ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಮಗುವಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾರೆ.
Loading...ಈ ಪುಟ್ಟ ಮಗುವಿನ ಹೆಸರು ಚೆರಿ ಹಾಗೂ ಈ ಮಗು ರೇಂಬೋ ಹಾಸ್ಪಟಲ್​ನಲ್ಲಿ ಜನಬಿಸಿದಾಗ ಇದರ ತೂಕ ಕೇವಲ 375 ಗ್ರಾಂ ಇತ್ತು. ಮಗುವನ್ನು ಕೇವಲ 25 ವಾರಗಳಲ್ಲಿ ಡೆಲಿವರಿ ಮಾಡಿಸಿ ಹೊರತೆಗೆಯಲಾಗಿತ್ತು. ಜನಿಸಿದಾಗ ಈ ಮಗುವಿನ ಉದ್ದ ಕೇವಲ 20 ಸೆಂ. ಮಿಟರ್​ ಇತ್ತಂತೆ. ಅಂದರೆ ಇದು ಓರ್ವ ವ್ಯಕ್ತಿಯ ಅಂಗೈಯಷ್ಟು ಉದ್ದವಿತ್ತು ಎನ್ನಬಹುದು. ಸಾಮಾನ್ಯವಾಗಿ ಮಕ್ಕಳು 36 ಅಥವಾ 40 ತಿಂಗಳಲ್ಲಿ ಜನಿಸುತ್ತವೆ, ಇದಕ್ಕೂ ಮೊದಲು ಜನಿಸಿದ ಮಕ್ಕಳನ್ನು ಪ್ರೀ ಮೆಚ್ಯೂರ್​ ಮಗು ಎನ್ನಲಾಗುತ್ತದೆ. ಅವಧಿಗೂ ಮೊದಲು ಜನಿಸಿದ ಮಕ್ಕಳ ದೇಹದ ಬೆಳವಣಿಗೆ ಸರಿಯಾಗಿ ಆಗಿರುವುದಿಲ್ಲ, ಹೀಗಾಗಿ ಮಗು ಬದುಕುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಇನ್ನು ಚೆರಿ ನಾಲ್ಕು ತಿಂಗಳ ಹಿಂದಷ್ಟೇ ಜನಿಸಿದ್ದು, ಸದ್ಯ ಎರಡೂವರೆ ಕೆಜಿ ಇದೆ ಎನ್ನಲಾಗಿದೆ.
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...